YouTube ಕಂಟೆಂಟ್ ರೇಟಿಂಗ್

ನೀವು ಪಾವತಿಸಿದ ಕಂಟೆಂಟ್ಗೆ ಮಾತ್ರ YouTube ಕಂಟೆಂಟ್ ರೇಟಿಂಗ್‌ಗಳನ್ನು ಅನ್ವಯಿಸಬಹುದು. ವಯಸ್ಕರರಿಗೆ ಸಂಬಂಧಿಸಿದ ಕಂಟೆಂಟ್ ಹೊಂದಿರುವ ಇತರ ವೀಡಿಯೊಗಳನ್ನು ನಿರ್ಬಂಧಿಸಲು, ವಯಸ್ಸಿನ ನಿರ್ಬಂಧ ಫೀಚರ್ ಅನ್ನು ಬಳಸಿ.

YouTube ಕಂಟೆಂಟ್ ರೇಟಿಂಗ್ ಹಲವಾರು ವರ್ಗಗಳಲ್ಲಿ ವೀಡಿಯೊದಲ್ಲಿರುವ ವಯಸ್ಕರಿಗೆ ಸಂಬಂಧಿಸಿದ ಕಂಟೆಂಟ್ ಅನ್ನು ಲೇಬಲ್ ಮಾಡುತ್ತವೆ. ಪ್ರತಿ ವರ್ಗವು ಮೂರು ಆಯ್ಕೆಗಳನ್ನು ಹೊಂದಿದ್ದು ಅದು ವಯಸ್ಕರರಿಗೆ ಸಂಬಂಧಿಸಿದ ಕಂಟೆಂಟ್‌ನ ಮಟ್ಟವನ್ನು ಸೂಚಿಸುತ್ತದೆ:

  • ಮೊದಲ ಆಯ್ಕೆಯು (ಅದು ಡೀಫಾಲ್ಟ್ ಕೂಡ ಆಗಿರುತ್ತದೆ) ವರ್ಗದಲ್ಲಿ ಯಾವುದೇ ವಯಸ್ಕರರಿಗೆ ಸಂಬಂಧಿಸಿದ ಕಂಟೆಂಟ್ ಇಲ್ಲ ಎಂಬುದನ್ನು ಸೂಚಿಸುತ್ತದೆ
  • ಮಧ್ಯದ ಆಯ್ಕೆಯು ಸೌಮ್ಯ ಪ್ರಮಾಣದ ವಯಸ್ಕರರಿಗೆ ಸಂಬಂಧಿಸಿದ ಕಂಟೆಂಟ್ ಅನ್ನು ಸೂಚಿಸುತ್ತದೆ
  • ಮೂರನೇ ಆಯ್ಕೆಯು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವೀಕ್ಷಕರಿಗೆ ನಿರ್ಬಂಧಿಸಬೇಕಾದ ವಯಸ್ಕರರಿಗೆ ಸಂಬಂಧಿಸಿದ ಕಂಟೆಂಟ್ ಅನ್ನು ಸೂಚಿಸುತ್ತದೆ
ದೃಢವಾದ ಭಾಷೆ (L)
  • ಯಾವುದು ಇಲ್ಲ: ಯಾವುದೇ ದೃಢವಾದ, ಒರಟಾದ ಅಥವಾ ಇತರ ಸಂಭಾವ್ಯವಾಗಿ ಆಕ್ಷೇಪಾರ್ಹ ಭಾಷೆಯಿಂದ ಮುಕ್ತ. ಸೌಮ್ಯವಾಗಿ ದೂಷಿಸುವಂತಹ "ಅನಿಷ್ಟ" ಮತ್ತು "ಕೆಟ್ಟವ" ಎಂಬಂತಹ ಅಥವಾ ಅಸಂಸ್ಕೃತವಾಗಿರುವ ಪದಗಳನ್ನು ಸಹ ದೃಢವಾದ ಭಾಷೆ ಎಂಬುದಾಗಿ ರೇಟ್ ಮಾಡಬೇಕು.
  • ಬಲವಾದ ಭಾಷೆ: ಕೆಲವು ಬೈಗುಳಗಳು ಮತ್ತು ಪಾಷಂಡ ಭಾಷೆಯನ್ನು ಒಳಗೊಂಡಿದ್ದು; ಅಂತಹ ಪದಗಳು ವಿರಳವಾಗಿರುತ್ತವೆ ಮತ್ತು ಲೈಂಗಿಕ ಸಂದರ್ಭಗಳಲ್ಲಿ ಬಳಸಲಾಗುವುದಿಲ್ಲ. ಈ ಮಟ್ಟವು ಬೈಗುಳಗಳು ಮತ್ತು ಪಾಷಂಡವಾದ ಅಸಂಸ್ಕೃತ ಭಾಷೆಯನ್ನು ಹೊಂದಿರುವ ಕಂಟೆಂಟ್‌ಗಾಗಿ ಸಹ ಸೂಕ್ತವಾಗಿರುತ್ತದೆ. ಇದು ಅಶ್ಲೀಲ ಸಂಭಾಷಣೆ, ಲೈಂಗಿಕ ಒಳನೋಟ, ವಯಸ್ಕ ಥೀಮ್‌ಗಳ ಚರ್ಚೆ ಮತ್ತು ವೀಕ್ಷಕರು ಆಕ್ಷೇಪಾರ್ಹ, ಅಗೌರವ ಅಥವಾ ವಿವಾದಾತ್ಮಕ ಎಂಬುದಾಗಿ ಕಂಡುಕೊಳ್ಳುವ ಸಾಧ್ಯತೆಯಿರುವ ಬಲವಾದ ನೋಟಗಳು ಮತ್ತು ಅಭಿಪ್ರಾಯಗಳ ಅಭಿವ್ಯಕ್ತಿಗೆ ಸಹ ಸೂಕ್ತವಾಗಿರುತ್ತದೆ.
  • ಅಶ್ಲೀಲ ಭಾಷೆ: ಬೈಗುಳಗಳು ಮತ್ತು ಪಾಷಂಡ ಭಾಷೆಯ ನಿರಂತರ ಬಳಕೆಯನ್ನು ಒಳಗೊಂಡಿರುತ್ತದೆ. ಇದು ಲೈಂಗಿಕವಾಗಿ ಅಶ್ಲೀಲವಾಗಿರುವ ಒರಟಾದ ಮತ್ತು ಅಸಭ್ಯ ಸಂಭಾಷಣೆಯನ್ನು ಸಹ ಒಳಗೊಂಡಿರಬಹುದು.
ಅಶ್ಲೀಲ (N)
  • ಯಾವುದೂ ಇಲ್ಲ: ಅಶ್ಲೀಲ ಅಥವಾ ಯಾವುದೇ ಪ್ರಕಾರದ ಭಾಗಶಃ ಅಶ್ಲೀಲ.
  • ಕನಿಷ್ಠ ಒಳಗೊಳ್ಳುವಿಕೆ: ಕನಿಷ್ಠ ಪ್ರಮಾಣದ ಬಟ್ಟೆಯನ್ನು (ಲೋ ಕಟ್ ಟಾಪ್‌ಗಳು, ಅಂಡರ್‌ವೇರ್ ಅಥವಾ ಅಂಗಾಂಗವನ್ನು ಪ್ರದರ್ಶಿಸುವ ಸ್ನಾನದ ಬಟ್ಟೆಗಳು) ಧರಿಸಿರುವ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ. ಕ್ಷಣಿಕವಾದ ಅಥವಾ ದೀರ್ಘಕಾಲದ ಅಶ್ಲೀಲವನ್ನು (ಉದಾಹರಣೆಗೆ ಪೃಷ್ಠಗಳು, ಜನನಾಂಗಗಳು ಅಥವಾ ಮೊಲೆಯ ಸುತ್ತಲಿನ ಪ್ರದೇಶಗಳು ಕಾಣಿಸುವಿಕೆ) ಒಳಗೊಂಡಿರದಿರುವಿಕೆ.
  • ಸ್ವಲ್ಪ ಮಟ್ಟಿನ ಅಶ್ಲೀಲ: ಹೊರಗೆ ಕಾಣಿಸುವ ಪೃಷ್ಠಗಳು ಅಥವಾ ಭಾಗಶಃ ನಗ್ನವಾಗಿರುವ ಸ್ತನಗಳನ್ನು ಒಳಗೊಂಡಿರುವ ಕಂಟೆಂಟ್ ಒಳಗೊಂಡಿರುತ್ತದೆ. ಶೈಕ್ಷಣಿಕ, ಡಾಕ್ಯುಮೆಂಟರಿ ಅಥವಾ ಕಲಾತ್ಮಕವಾಗಿ ಸಂದರ್ಭವು ಸೂಕ್ತವಾಗಿರುವಲ್ಲಿ ಸಂಪೂರ್ಣ ಅಶ್ಲೀಲವನ್ನು ಸಹ ಕಂಟೆಂಟ್ ಒಳಗೊಂಡಿರಬಹುದು.
ಲೈಂಗಿಕ ಸನ್ನಿವೇಶಗಳು (S)
  • ಯಾವುದೂ ಇಲ್ಲ: ಯಾವುದೇ ಲೈಂಗಿಕ ನಡವಳಿಕೆ ಅಥವಾ ಥೀಮ್‌ಗಳಿಂದ ಮುಕ್ತ. ಮುತ್ತು ಅಥವಾ ಆಲಿಂಗನವನ್ನು ನಿರೀಕ್ಷಿಸಿರುವಂತಹ ಪ್ರೀತಿಯ ಕ್ಷಣಿಕ ಪ್ರದರ್ಶನಗಳು.
  • ಸೌಮ್ಯ ಲೈಂಗಿಕ ಸನ್ನಿವೇಶಗಳು: ನೇರವಾಗಿ ವ್ಯಕ್ತಪಡಿಸದೇ ಸೂಚಿಸುವ ಲೈಂಗಿಕ ಕ್ರಿಯೆಗಳು, ತಿಳಿಯಾದ ಅಥವಾ ಹಾಸ್ಯದ ಲೈಂಗಿಕ ಪ್ರಚೋದನೆಯ ಉಲ್ಲೇಖಗಳು ಅಥವಾ ನಡವಳಿಕೆ ಅಥವಾ ಸೌಮ್ಯ ಲೈಂಗಿಕ ಸನ್ನಿವೇಶಗಳು ಅಥವಾ ಚರ್ಚೆಯಂತಹ ಸೌಮ್ಯ ಲೈಂಗಿಕ ಚಟುವಟಿಕೆ ಅಥವಾ ಥೀಮ್‌ಗಳನ್ನು ಒಳಗೊಂಡಿರುತ್ತದೆ.
  • ಸ್ವಷ್ಟ ಲೈಂಗಿಕ ಸನ್ನಿವೇಶಗಳು: ನಾಟಕೀಯ ಲೈಂಗಿಕ ಕ್ರಿಯೆಗಳು, ಸ್ಪಷ್ಟ ಲೈಂಗಿಕ ಸನ್ನಿವೇಶಗಳು ಅಥವಾ ಚರ್ಚೆಯಂತಹ ಸ್ಪಷ್ಟ ಲೈಂಗಿಕ ಕಂಟೆಂಟ್ ಒಳಗೊಂಡಿದೆ.
ಹಿಂಸೆ/ಮನಸ್ಸನ್ನು ಕಲಕುವ (V)
  • ಯಾವುದೂ ಇಲ್ಲ: ರಕ್ತಸಿಕ್ತವಾದ, ಮನಸ್ಸನ್ನು ಕಲಕುವ ಅಥವಾ ಸೂಕ್ಷ್ಮ ಮನಸ್ಸಿನ ವೀಕ್ಷಕರಿಗೆ ಜಿಗುಪ್ಸೆ ತರುವುದೆಂದು ಪರಿಗಣಿಸಲಾದ ಹಿಂಸೆ, ಗಾಯ, ಅಥವಾ ಇತರ ಚಿತ್ರಣಗಳಿಂದ ಮುಕ್ತವಾಗಿರುವುದು.
  • ಸೌಮ್ಯವಾಗಿ ಹಿಂಸಾತ್ಮಕ ಅಥವಾ ಮನಸ್ಸನ್ನು ಕಲಕುವುದು: ಸೌಮ್ಯ ಪ್ರಮಾಣದ, ಹಾಸ್ಯಮಯ ಹಿಂಸೆ, ಫ್ಯಾಂಟಸಿ ಹಿಂಸೆ ಅಥವಾ ನೈಜ ಹಿಂಸೆಯ ಅಪರೂಪದ ಘಟನೆಗಳನ್ನು ಒಳಗೊಂಡಿರುವುದು. ಆದರೆ, ನಿರೂಪಿಸಲಾದ ಯಾವುದೇ ಹಿಂಸೆಯು ರಕ್ತಸಿಕ್ತ, ಅಥವಾ ವ್ಯಾಪಕವಾದ ಸ್ವರೂಪವಾಗಿರಬಾರದು. ಅದೇ ರೀತಿಯಾಗಿ, ಸೌಮ್ಯ ಪ್ರಮಾಣದಲ್ಲಿರುವ ಹಿಂಸೆ ಅಥವಾ ಮನಸ್ಸನ್ನು ಕಲಕುವ ಕಂಟೆಂಟ್ ವೀಕ್ಷಕರ ಮನಸ್ಸನ್ನು ಕಲಕುವ ಅಥವಾ ಅವರಲ್ಲಿ ಜಿಗುಪ್ಸೆ ಮೂಡಿಸುವ ಸ್ವಲ್ಪ ಪ್ರಮಾಣದ ಇತರ ಚಿತ್ರಣ ಅಥವಾ ಸನ್ನಿವೇಶಗಳನ್ನು ಒಳಗೊಂಡಿರಬಹುದು. ಉದಾಹರಣೆಗಳಲ್ಲಿ ನೈಜ ಅಥವಾ ನಾಟಕೀಯ ವೈದ್ಯಕೀಯ ತುಣುಕು, ಅಥವಾ ಭಯಾನಕ ಅಥವಾ ಫ್ಯಾಂಟಸಿ ಪ್ರಸಂಗದಲ್ಲಿ ಅಸಹ್ಯಕರ ಅಥವಾ ಭಯ ಹುಟ್ಟಿಸುವ ಕಂಟೆಂಟ್‌ನ ಚಿತ್ರಣಗಳು ಒಳಗೊಂಡಿರಬಹುದು.
  • ಬಲವಾದ ಹಿಂಸೆ ಅಥವಾ ಮನಸ್ಸನ್ನು ಕಲಕುವಿಕೆ: ನಿರಂತರವಾಗಿರುವ, ತೀವ್ರವಾದ ಮತ್ತು ಗ್ರಾಫಿಕ್ ಆಗಿರುವ ಹಿಂಸೆಯನ್ನು ಒಳಗೊಂಡಿರುತ್ತದೆ. ಇದು ಸರಾಸರಿ ವೀಕ್ಷಕರಿಗೆ ಮನಸ್ಸನ್ನು ಕಲಕುವ ಅಥವಾ ಜಿಗುಪ್ಸೆಯನ್ನು ಉಂಟುಮಾಡುವ. ವ್ಯಾಪಕವಾದ ಚಿತ್ರಣ ಅಥವಾ ಸನ್ನಿವೇಶಗಳನ್ನು ಸಹ ಒಳಗೊಂಡಿರಬಹುದು. ಉದಾಹರಣೆಗೆ ಒಂದು ವೇಳೆ ತೀವ್ರತರದ ಹಿಂಸೆ ಅಥವಾ ಇತರ ಮನಸ್ಸನ್ನು ಕಲಕುವ ಅಥವಾ ಜಿಗುಪ್ಸೆ ಮೂಡಿಸುವ ಚಿತ್ರಣದ ನೈಜ ನಿರೂಪಣೆಗಳನ್ನು ಹೊಂದಿದ್ದರೆ ಅನಿಮೇಟ್ ಮಾಡಲಾದ ಕಂಟೆಂಟ್.
ಮಾದಕ ಪದಾರ್ಥದ ಬಳಕೆ (D)
  • ಯಾವುದೂ ಇಲ್ಲ: ಯಾವುದೇ ಡ್ರಗ್ ದುರ್ಬಳಕೆಯಿಂದ ಮುಕ್ತ. ವಯಸ್ಕರಿಂದ ಆಲ್ಕೋಹಾಲ್ ಅಥವಾ ತಂಬಾಕು ಪದಾರ್ಥದ ಅಲ್ಪಾವಧಿಯ ಮತ್ತು ಮಧ್ಯಮ ಪ್ರಮಾಣದ ಬಳಕೆ ಮತ್ತು ಜವಾಬ್ದಾರಿಯುತವಾಗಿ ಔಷಧಗಳ ಬಳಕೆ ಸ್ವೀಕಾರಾರ್ಹವಾಗಿದೆ.
  • ಸೌಮ್ಯ ಮಾದಕ ಡ್ರಗ್ ಬಳಕೆ: ಆಲ್ಕೋಹಾಲ್ ಅಥವಾ ತಂಬಾಕಿನ ಅಧಿಕ ಅಥವಾ ನಿರಂತರ ಬಳಕೆಯನ್ನು ಒಳಗೊಂಡಂತೆ ಸೌಮ್ಯ ಪ್ರಮಾಣದ ಡ್ರಗ್ ಬಳಕೆಯನ್ನು ಒಳಗೊಂಡಿರುತ್ತದೆ. ಮರಿಜುವಾನಾ, ಸ್ಯಾಟಿವಾ, ಹ್ಯಾಲುಸಿನೋಜೆನ್ಸ್ ಅಥವಾ ಸೂಚಿತ ಫಾರ್ಮಾಸ್ಯೂಟಿಕಲ್ಸ್ ಮತ್ತು ಹೆರೋಯಿನ್‌ನಂತಹ ಸೂಚಿಸಿದ, ಗ್ರಾಫಿಕ್ ಅಲ್ಲದ ಬಳಕೆಯಂತಹ ಡ್ರಗ್‌ಗಳ ಪ್ರಾಸಂಗಿಕ ಅಥವಾ ಹಾಸ್ಯಮಯ ಬಳಕೆಯನ್ನು ಸಹ ಇದು ಒಳಗೊಂಡಿರಬಹುದು.
  • ಡ್ರಗ್ ಬಳಕೆ: ಡ್ರಗ್ ದುರ್ಬಳಕೆಯ ಗ್ರಾಫಿಕ್, ಕಾಲ್ಪನಿಕ ಚಿತ್ರಣಗಳು ಮತ್ತು ಡ್ರಗ್ ಪಾರಾಫೆರ್ನಾಲಿಯಾದ ಪ್ರದರ್ಶನವನ್ನು ಒಳಗೊಂಡಿರುತ್ತದೆ. ಪ್ರಸಂಗವು ಸೂಕ್ತವಾಗಿ ಶೈಕ್ಷಣಿಕ, ಡಾಕ್ಯುಮೆಂಟರಿ ಅಥವಾ ವೈಜ್ಞಾನಿಕವಾಗಿರುವಲ್ಲಿ ಡ್ರಗ್ ದುರ್ಬಳಕೆಯ ನೈಜ ಚಿತ್ರಣಗಳನ್ನು ಸಹ ಅದು ಒಳಗೊಂಡಿರಬಹುದು.
ಮಿಂಚಿನಂತೆ ಹೊಳೆಯುವ ಬೆಳಕುಗಳು (F)
  • ಯಾವುದೂ ಇಲ್ಲ: ಫೋಟೋಸೆನ್ಸಿಟಿವ್ ಎಪಿಲೆಪ್ಸಿಯನ್ನು ಹೊಂದಿರುವ ವ್ಯಕ್ತಿಗಳಿಗೆ ಪರಿಣಾಮ ಬೀರಬಹುದಾದ ಯಾವುದೇ ಮಿಂಚಿನಂತೆ ಹೊಳೆಯುವ ಬೆಳಕುಗಳು ಅಥವಾ ಇತರ ತೀವ್ರತೆಯ ಕಂಟೆಂಟ್ ಇಲ್ಲದಿರುವಿಕೆ.
  • ಮಿಂಚಿನಂತೆ ಹೊಳೆಯುವ ಅಥವಾ ತೀವ್ರತರದ ಬೆಳಕು: ಫೋಟೋಸೆನ್ಸಿಟಿವ್ ಎಪಿಲೆಪ್ಸಿಯನ್ನು ಹೊಂದಿರುವ ವ್ಯಕ್ತಿಗಳಿಗೆ ಪರಿಣಾಮ ಬೀರಬಹುದಾದ ಮಿಂಚಿನಂತೆ ಹೊಳೆಯುವ ಬೆಳಕು ಅಥವಾ ಇತರ ತೀವ್ರತೆಯ ಕಂಟೆಂಟ್ ಹೊಂದಿರುವುದು.

YouTube ಕಂಟೆಂಟ್ ರೇಟಿಂಗ್ ಹೊಂದಿರುವ ವೀಡಿಯೊವನ್ನು ವೀಕ್ಷಕರು ನೋಡಿದಾಗ, ಪುಟವು ಶೂನ್ಯಕ್ಕಿಂತ ಬೇರೆಯದಾದ ಮೌಲ್ಯವನ್ನು ಹೊಂದಿರುವ ಪ್ರತಿ ರೇಟಿಂಗ್ ವರ್ಗಕ್ಕಾಗಿ ಅಕ್ಷರದ ಕೋಡ್ ಅನ್ನು ಪುಟವನ್ನು ಪ್ರದರ್ಶಿಸುತ್ತದೆ. ಮೂರನೇ ಆಯ್ಕೆಯನ್ನು ನೀವು ಆರಿಸಿಕೊಂಡಿರುವ ವರ್ಗಗಳಿಗೆ ಅಕ್ಷರದ ಕೋಡ್ ನಂತರ ಪ್ಲಸ್ ಸಂಕೇತ ಕಂಡುಬರುತ್ತದೆ. ಉದಾಹರಣೆಗೆ, ಅಶ್ಲೀಲ ಭಾಷೆ, ಸೌಮ್ಯ ಪ್ರಮಾಣದ ಹಿಂಸೆ, ಸೌಮ್ಯ ಪ್ರಮಾಣದ ಡ್ರಗ್ ಬಳಕೆ ಮತ್ತು ಯಾವುದೇ ಅಶ್ಲೀಲ ಅಥವಾ ಲೈಂಗಿಕ ಸನ್ನಿವೇಶಗಳನ್ನು ಹೊಂದಿರುವ ವೀಡಿಯೊಗಾಗಿ YouTube ಕಂಟೆಂಟ್ ರೇಟಿಂಗ್ L+ V D ಎಂಬುದಾಗಿ ಕಂಡುಬರುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16015048796319458600
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false