ಅಮಾನ್ಯ ಟ್ರಾಫಿಕ್‌ನಿಂದಾಗಿ ನನ್ನ YouTube ಗಾಗಿ AdSense ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ

ಟ್ರಾಫಿಕ್ ಮಾನ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ನಮ್ಮ ಸಿಸ್ಟಂಗಳು ನಿಯಮಿತವಾಗಿ ವೀಡಿಯೊಗಳಿಗೆ ಸಂಬಂಧಿಸಿದ ಟ್ರಾಫಿಕ್ ಅನ್ನು ಪರಿಶೀಲಿಸುತ್ತವೆ. ಅಮಾನ್ಯ ಟ್ರಾಫಿಕ್ ಎಂಬುದು ನಿಮ್ಮ ಚಾನಲ್‌ನಲ್ಲಿನ ಯಾವುದಾದರೂ ಚಟುವಟಿಕೆಯಾಗಿದ್ದು, ಅದು ನೈಜ ಬಳಕೆದಾರರು ಅಥವಾ ನಿಜವಾದ ಆಸಕ್ತಿಯನ್ನು ಹೊಂದಿರುವ ಬಳಕೆದಾರರಿಂದ ಬಂದಿರುವುದಿಲ್ಲ. ಇದು ವೀಡಿಯೊಗಳಿಗೆ ಸಂಬಂಧಿಸಿದ ಆ್ಯಡ್ ಆದಾಯವನ್ನು ಹೆಚ್ಚಿಸಲು ವಂಚನೆಯ, ಕೃತಕ ಅಥವಾ ಉದ್ದೇಶಪೂರ್ವಕವಲ್ಲದ ಮಾರ್ಗಗಳನ್ನು ಒಳಗೊಂಡಿರಬಹುದು, ಆದರೆ ಇವುಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ನೀವು ಉದ್ದೇಶಪೂರ್ವಕವಾಗಿ ಅಮಾನ್ಯ ಟ್ರಾಫಿಕ್ ಉಂಟುಮಾಡದಿದ್ದರೂ ಸಹ, ಅದು ನಿಮ್ಮ ಚಾನಲ್ ಮೇಲೆ ಪರಿಣಾಮ ಬೀರಬಹುದು. 

ನಿಮ್ಮ YouTube ಗಾಗಿ AdSense ಖಾತೆಯು ಅಮಾನ್ಯ ಟ್ರಾಫಿಕ್‌ನೊಂದಿಗೆ ಸಂಯೋಜಿತವಾಗಿದೆ ಎಂದು ನಮಗೆ ಕಂಡುಬಂದರೆ, ನಾವು ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು. ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸುವುದರಿಂದ ರಚನೆಕಾರರು, ಜಾಹೀರಾತುದಾರರು ಮತ್ತು ವೀಕ್ಷಕರಿಗಾಗಿ ನಮ್ಮ ಪ್ಲ್ಯಾಟ್‌ಫಾರ್ಮ್ ಅನ್ನು ರಕ್ಷಿಸುತ್ತದೆ. ಅಮಾನ್ಯ ಟ್ರಾಫಿಕ್‌ನಿಂದ ನಮ್ಮ ಜಾಹೀರಾತು ಸಿಸ್ಟಂಗಳನ್ನು ರಕ್ಷಿಸುವ ಮೂಲಕ, ಜಾಹೀರಾತುದಾರರು YouTube ನಲ್ಲಿ ಹೂಡಿಕೆ ಮಾಡುವ ವಿಶ್ವಾಸವನ್ನು ಹೊಂದಬಹುದು, ಇದು ನಿಮ್ಮಂತಹ ರಚನೆಕಾರರಿಗೆ ನಿಮ್ಮ ಕಂಟೆಂಟ್‌ನಿಂದ ಮಾನಿಟೈಸ್ ಮಾಡಲು ಸಹಾಯ ಮಾಡುತ್ತದೆ. 

ನನ್ನ ಖಾತೆಯನ್ನು ಅಮಾನ್ಯ ಟ್ರಾಫಿಕ್‌ನಿಂದಾಗಿ ನಿಷ್ಕ್ರಿಯಗೊಳಿಸಿದ ನಂತರವೂ ಅದನ್ನು ಮರುಸ್ಥಾಪಿಸಬಹುದೇ?

ಹೆಚ್ಚಿನ ಸಂದರ್ಭಗಳಲ್ಲಿ, ನಮ್ಮ ಸಿಸ್ಟಂಗಳು ಅಮಾನ್ಯ ಟ್ರಾಫಿಕ್‌ಗೆ ಸಂಬಂಧಿಸಿದಂತೆ ನಿಖರವಾದ ನಿರ್ಣಯಗಳನ್ನು ಮಾಡುತ್ತವೆ. ಆದರೆ, ಈ ನಿರ್ಧಾರವನ್ನು ತಪ್ಪಾಗಿ ಮಾಡಲಾಗಿದೆ ಎಂದು ನೀವು ಭಾವಿಸಿದರೆ, ನೀವು ಅಮಾನ್ಯ ಚಟುವಟಿಕೆಯ ಮೇಲ್ಮನವಿಯನ್ನು ಸಲ್ಲಿಸಬಹುದು. ನೀವು ಅಥವಾ ನೀವು ಜವಾಬ್ದಾರಿ ಹೊಂದಿರುವ ಯಾರಾದರೂ ನೇರವಾಗಿ ಅಥವಾ ಪರೋಕ್ಷವಾಗಿ ಅಮಾನ್ಯ ಟ್ರಾಫಿಕ್ ಅನ್ನು ಸೃಷ್ಟಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. 

ನಿಮ್ಮ ಮೇಲ್ಮನವಿಯನ್ನು ನಾವು ಸ್ವೀಕರಿಸಿದ ನಂತರ, ನಾವು ಸ್ವೀಕರಿಸಿದ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತೇವೆ ಮತ್ತು ಅಂತಿಮ ನಿರ್ಧಾರವನ್ನು ನಿಮಗೆ ಒದಗಿಸುತ್ತೇವೆ. ನಿಮ್ಮ ಖಾತೆಯನ್ನು ಮರುಸ್ಥಾಪಿಸಲಾಗುವುದರ ಕುರಿತು ಯಾವುದೇ ಗ್ಯಾರಂಟಿ ಇಲ್ಲ ಎಂಬುದನ್ನು ಗಮನಿಸಿ. ನಿಮ್ಮ ಮೇಲ್ಮನವಿಯ ಕುರಿತು ನಾವು ಒಂದು ನಿರ್ಧಾರಕ್ಕೆ ಬಂದ ಬಳಿಕ, ನಂತರದ ಮೇಲ್ಮನವಿಗಳನ್ನು ಪರಿಗಣಿಸದೇ ಇರಬಹುದು.

ಅಮಾನ್ಯ ಟ್ರಾಫಿಕ್ ಕುರಿತಾಗಿ ಸರಿಯಾದ ಮೇಲ್ಮನವಿಯನ್ನು ಬರೆಯುವುದು ಹೇಗೆ? 

  • ಅಮಾನ್ಯ ಟ್ರಾಫಿಕ್‌ನ ಉದಾಹರಣೆಗಳನ್ನು ಪರಿಶೀಲಿಸಿ. ಈ ಕಾರಣಗಳಲ್ಲಿ ಯಾವುದಾದರೂ ಕಾರಣವು ನಿಮಗೆ ಅಥವಾ ನಿಮ್ಮ ಕಂಟೆಂಟ್‌ಗೆ ಅನ್ವಯವಾಗುತ್ತದೆಯೇ? ಯಾರಾದರೂ ನಿಮ್ಮ ಆ್ಯಡ್‌ಗಳನ್ನು ಹಲವಾರು ಬಾರಿ ಕ್ಲಿಕ್ ಮಾಡಿದ್ದಾರೆಯೇ? ಅಮಾನ್ಯ ಟ್ರಾಫಿಕ್ ಉಂಟಾಗುವುದಕ್ಕೆ ಕಾರಣವಾದ ಟ್ರಾಫಿಕ್ ಅನ್ನು ನೀವು ಖರೀದಿಸಿದ್ದೀರಾ? ಅಮಾನ್ಯ ಟ್ರಾಫಿಕ್ ಮತ್ತೆ ಉಂಟಾಗದಂತೆ ತಡೆಯಲು, ಕಂಟೆಂಟ್ ಅಥವಾ ವರ್ತನೆಯ ಬದಲಾವಣೆಗಳನ್ನು ನೀವು ಮಾಡಬಹುದೇ?
  • ಅಮಾನ್ಯ ಚಟುವಟಿಕೆಯ ಮೇಲ್ಮನವಿ ಫಾರ್ಮ್‌ನಲ್ಲಿ, ನಿಮ್ಮ ನಿಷ್ಕ್ರಿಯಗೊಳಿಸಲಾದ YouTube ಗಾಗಿ AdSense ಖಾತೆಯೊಂದಿಗೆ ಸಂಯೋಜಿತವಾಗಿರುವ ಇಮೇಲ್ ವಿಳಾಸವನ್ನು ಹಂಚಿಕೊಳ್ಳಿ. ಫಾರ್ಮ್‌ನಲ್ಲಿ ಇಮೇಲ್ ವಿಳಾಸವನ್ನು ಹಂಚಿಕೊಳ್ಳುವುದರಿಂದ, ನಿಮ್ಮ ಖಾತೆಯನ್ನು ಪತ್ತೆಹಚ್ಚಲು ಮತ್ತು ನಿಮ್ಮ ಮೇಲ್ಮನವಿ ಪ್ರಕ್ರಿಯೆಯನ್ನು ವೇಗಗೊಳಿಸಲು ನಮಗೆ ಸಹಾಯ ಮಾಡುತ್ತದೆ.
  • ನಿಮ್ಮ ವೀಡಿಯೊಗಳಲ್ಲಿನ ಅಮಾನ್ಯ ಟ್ರಾಫಿಕ್‌ಗೆ ಸಂಬಂಧಿಸಿದ ಯಾವುದೇ ಸಂಭವನೀಯ ಕಾರಣಗಳನ್ನು ಗುರುತಿಸಿ. ಅಮಾನ್ಯ ಟ್ರಾಫಿಕ್ ಮತ್ತೆ ಸಂಭವಿಸುವುದಿಲ್ಲ ಎಂದು ನೀವು ಹೇಗೆ ಖಚಿತಪಡಿಸಿಕೊಳ್ಳುತ್ತೀರಿ ಎಂಬುದನ್ನು ಸಹ ಹಂಚಿಕೊಳ್ಳಿ. ನಿಮ್ಮ ಪ್ರಕರಣವನ್ನು ವಿವರಿಸಲು ಸಾಧ್ಯವಾದಷ್ಟು ಮಾಹಿತಿಯನ್ನು ಒದಗಿಸಿ.
    • ಉದಾಹರಣೆಗೆ, ನಿಮ್ಮ ಪ್ರೇಕ್ಷಕರನ್ನು ಹೆಚ್ಚಿಸಲು ನೀವು ಥರ್ಡ್ ಪಾರ್ಟಿಯಿಂದ ಟ್ರಾಫಿಕ್ ಖರೀದಿಸಿದ್ದರೆ ನಮಗೆ ತಿಳಿಸಿ. ನೀವು ಈ ಥರ್ಡ್ ಪಾರ್ಟಿಯೊಂದಿಗೆ ಕೆಲಸ ಮಾಡುವುದನ್ನು ಹೇಗೆ ನಿಲ್ಲಿಸಿದ್ದೀರಿ ಮತ್ತು ಭವಿಷ್ಯದಲ್ಲಿ ನಿಮ್ಮ ಚಾನಲ್ ಅನ್ನು ಪ್ರೊಮೋಷನ್ ಮಾಡಲು ಥರ್ಡ್ ಪಾರ್ಟಿಗಳೊಂದಿಗೆ ಕೆಲಸ ಮಾಡುವುದಿಲ್ಲ ಎಂಬುದನ್ನು ಹಂಚಿಕೊಳ್ಳಿ.  

ನನ್ನ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಮತ್ತು ನನ್ನ ಮೇಲ್ಮನವಿಯನ್ನು ನಿರಾಕರಿಸಲಾಗಿದೆ. ನಾನು ಪ್ರೋಗ್ರಾಂಗೆ ಪುನಃ ಸೇರಿಕೊಳ್ಳಬಹುದೇ ಅಥವಾ ಹೊಸ ಖಾತೆಯನ್ನು ತೆರೆಯಬಹುದೇ?

ನಿಮ್ಮ ಖಾತೆಯ ವಿರುದ್ಧ ತೆಗೆದುಕೊಂಡ ಕ್ರಮಗಳ ಕುರಿತಾದ ನಿಮ್ಮ ಕಾಳಜಿಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಜಾಹೀರಾತುದಾರರು, ರಚನೆಕಾರರು ಮತ್ತು ವೀಕ್ಷಕರ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಂಡು, ನಮ್ಮ ತಜ್ಞರ ತಂಡವು ಎಚ್ಚರಿಕೆಯಿಂದ ನಡೆಸಿದ ತನಿಖೆಯ ಫಲಿತಾಂಶವೇ ನಮ್ಮ ಕ್ರಮಗಳು. 

ಅಮಾನ್ಯ ಟ್ರಾಫಿಕ್‌ನಿಂದಾಗಿ ನಿಷ್ಕ್ರಿಯಗೊಳಿಸಿದ ರಚನೆಕಾರರನ್ನು AdSense ನಲ್ಲಿನ ಯಾವುದೇ ಹೆಚ್ಚಿನ ಭಾಗವಹಿಸುವಿಕೆಗೆ ಅನುಮತಿಸಲಾಗುವುದಿಲ್ಲ. ಈ ಕಾರಣಕ್ಕಾಗಿ, ಈ ರಚನೆಕಾರರಿಗೆ ಹೊಸ ಖಾತೆಗಳನ್ನು ತೆರೆಯಲು ಆಗದಿರಬಹುದು.

ಯಾವುದೇ ಮೂಲದ ಅಮಾನ್ಯ ಟ್ರಾಫಿಕ್ ಸೇರಿದಂತೆ, ಯಾವುದೇ ಕಾರಣಕ್ಕಾಗಿ ಖಾತೆಯನ್ನು ನಿಷ್ಕ್ರಿಯಗೊಳಿಸುವ ಹಕ್ಕನ್ನು Google ಕಾಯ್ದಿರಿಸಿಕೊಂಡಿದೆ.

ಮತ್ತೊಂದು ನಿಷ್ಕ್ರಿಯಗೊಳಿಸಿದ ಖಾತೆಯ ಜೊತೆಗೆ ಸಂಬಂಧ ಹೊಂದಿರುವ ಕಾರಣ ನನ್ನ ಖಾತೆಯನ್ನು ಏಕೆ ನಿಷ್ಕ್ರಿಯಗೊಳಿಸಲಾಗಿದೆ?

ಸಂಬಂಧಿತ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರೆ, ನಿಮ್ಮ ಖಾತೆಯು ನಮ್ಮ ರಚನೆಕಾರರು, ವೀಕ್ಷಕರು ಮತ್ತು ಜಾಹೀರಾತುದಾರರಿಗೆ ಅಪಾಯವನ್ನು ಉಂಟುಮಾಡುತ್ತದೆ ಎಂಬುದನ್ನು ತಜ್ಞರು ಕಂಡುಕೊಂಡಿದ್ದಾರೆ.

ನನ್ನ YouTube ಗಾಗಿ AdSense ನ ಗಳಿಕೆಗಳನ್ನು ನನಗೆ ಈಗಲೂ ಪಾವತಿಸಲಾಗುತ್ತದೆಯೇ?

ಅಮಾನ್ಯ ಟ್ರಾಫಿಕ್ ಅಥವಾ ನಮ್ಮ ನೀತಿಗಳ ಉಲ್ಲಂಘನೆಯ ಕಾರಣದಿಂದ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರೆ, ಅಮಾನ್ಯ ಗಳಿಕೆ ಎಂದು ಗುರುತಿಸಿರದ ಆದಾಯದ ಭಾಗವನ್ನು ಅಂತಿಮ ಪಾವತಿಯ ರೂಪದಲ್ಲಿ ಸ್ವೀಕರಿಸಲು ನೀವು ಅರ್ಹರಾಗಬಹುದು. ಖಾತೆಯನ್ನು ನಿಷ್ಕ್ರಿಯಗೊಳಿಸಿದ ನಂತರ, 30-ದಿನದ ಪಾವತಿ ತಡೆಹಿಡಿಯುವಿಕೆಯನ್ನು ಜಾರಿಗೊಳಿಸಲಾಗುತ್ತದೆ ಇದರಿಂದ ನಾವು ಅಂತಿಮ ಪಾವತಿಯನ್ನು (ಯಾವುದಾದರೂ ಇದ್ದರೆ) ಲೆಕ್ಕ ಹಾಕಬಹುದು. ಈ 30-ದಿನದ ಅವಧಿಯ ನಂತರ, ನಿಮ್ಮ ಉಳಿದ ಅರ್ಹ ಬ್ಯಾಲೆನ್ಸ್ ಅನ್ನು ವೀಕ್ಷಿಸಲು (ಯಾವುದಾದರೂ ಇದ್ದರೆ) ಮತ್ತು ಪಾವತಿಯನ್ನು ಸ್ವೀಕರಿಸಲು YouTube ಗಾಗಿ AdSense ಗೆ ಸೈನ್ ಇನ್ ಮಾಡಿ. ಅಮಾನ್ಯ ಟ್ರಾಫಿಕ್ ಮತ್ತು ರಚನೆಕಾರರ ನೀತಿ ಉಲ್ಲಂಘನೆಗಳಿಗಾಗಿ ನಿಮ್ಮ ಅಂತಿಮ ಬ್ಯಾಲೆನ್ಸ್‌ನಿಂದ ಮಾಡಿದ ಕಡಿತಗಳನ್ನು ಪ್ರಭಾವಿತ ಜಾಹೀರಾತುದಾರರಿಗೆ ಮರುಪಾವತಿಸಲಾಗುತ್ತದೆ (ಸೂಕ್ತವಾಗಿದ್ದರೆ ಮತ್ತು ಸಾಧ್ಯವಾದರೆ).

ಸ್ವೀಕರಿಸಿದ ಪಾವತಿಗಳಿಗಾಗಿ ನಾನು ಈಗಲೂ ತೆರಿಗೆ ಫಾರ್ಮ್‌ಗಳನ್ನು ಸ್ವೀಕರಿಸುತ್ತೇನೆಯೇ?

ನಿಮಗೆ ಈ ಕೆಳಗಿನ ಸಂದರ್ಭಗಳು ಅನ್ವಯಿಸಿದರೆ, ನೀವು ಈಗಲೂ ನಮ್ಮಿಂದ ತೆರಿಗೆ ಫಾರ್ಮ್ ಅನ್ನು ಪಡೆಯಬಹುದು: 

  • ಈ ಹಿಂದೆ ನಮ್ಮಿಂದ ಪಾವತಿಯನ್ನು ಸ್ವೀಕರಿಸಿದ್ದರೆ, ಅಥವಾ 
  • ನಿಮ್ಮ ಖಾತೆಯಲ್ಲಿ ಪಾವತಿಸಬೇಕಾದ ಬ್ಯಾಲೆನ್ಸ್ ಉಳಿದಿದ್ದರೆ

ನಿಮ್ಮ YouTube ಗಾಗಿ AdSense ಗಳಿಕೆಗಳಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿಸುವುದರ ಕುರಿತು ಇನ್ನಷ್ಟು ತಿಳಿಯಿರಿ.

ನನ್ನ ಖಾತೆಯನ್ನು ಮರುಸ್ಥಾಪಿಸಲಾಗಿದೆ. ನನ್ನ ಸೈಟ್‌ಗಳು, ಆ್ಯಪ್‌ಗಳು ಅಥವಾ ವೀಡಿಯೊಗಳಲ್ಲಿ ಆ್ಯಡ್‌ಗಳು ಏಕೆ ಕಾಣಿಸುತ್ತಿಲ್ಲ?

ನಿಮ್ಮ ಖಾತೆಯನ್ನು ಮರುಸ್ಥಾಪಿಸಿದ ನಂತರ, ಆ್ಯಡ್‌ಗಳು ಸೇವೆಯನ್ನು ಪುನರಾರಂಭಿಸಲು 48 ಗಂಟೆಗಳವರೆಗೆ ಸಮಯವನ್ನು ತೆಗೆದುಕೊಳ್ಳಬಹುದು. 

ಗಮನಿಸಿ: ನಿಮ್ಮ YouTube ಚಾನಲ್ ಅನ್ನು ನಿಮ್ಮ YouTube ಗಾಗಿ AdSense ಖಾತೆಯೊಂದಿಗೆ ಮರು-ಸಂಯೋಜಿಸಬೇಕಾಗಬಹುದು. YouTube ಗಾಗಿ AdSense ಖಾತೆಯನ್ನು ಪಾವತಿಗಳಿಗಾಗಿ ಸೆಟಪ್ ಮಾಡುವುದು ಹೇಗೆ ಎಂದು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15745856257338084108
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false