ಮಾರ್ಪಡಿಸಿದ ಅಥವಾ ಸಿಂಥೆಟಿಕ್ ಕಂಟೆಂಟ್‌ನ ಬಳಕೆಯನ್ನು ಪ್ರಕಟಿಸುವುದು

ಕಂಟೆಂಟ್ ಎಡಿಟ್ ಮಾಡುವಿಕೆ ಅಥವಾ ಜನರೇಶನ್ ಟೂಲ್‌ಗಳನ್ನು ರಚನೆಕಾರರು ನಾವೀನ್ಯತೆಯಿಂದ ಮತ್ತು ಜವಾಬ್ದಾರಿಯುತವಾಗಿ ಬಳಸುವುದನ್ನು ನಾವು ಪ್ರೋತ್ಸಾಹಿಸುತ್ತೇವೆ. ಜೊತೆಗೆ, ತಾವು ವೀಕ್ಷಿಸುತ್ತಿರುವ ಅಥವಾ ಆಲಿಸುತ್ತಿರುವ ವಿಷಯವು ನೈಜವೇ ಎಂಬುದನ್ನು ವೀಕ್ಷಕರು ತಿಳಿದುಕೊಳ್ಳಲು ಬಯಸುತ್ತಾರೆ ಎಂಬುದನ್ನು ಸಹ ನಾವು ಅರ್ಥಮಾಡಿಕೊಂಡಿದ್ದೇವೆ.

ತಾವು ವೀಕ್ಷಿಸುತ್ತಿರುವ ಕಂಟೆಂಟ್‌ನ ಕುರಿತು ವೀಕ್ಷಕರಿಗೆ ಮಾಹಿತಿ ನೀಡಲು ಸಹಾಯ ಮಾಡುವುದಕ್ಕಾಗಿ, ಕಂಟೆಂಟ್ ನೈಜವೆಂದು ತೋರುವಂತಹ ಸಂದರ್ಭಗಳಲ್ಲಿ, ಅರ್ಥಪೂರ್ಣವಾಗಿ ಮಾರ್ಪಡಿಸಿರುವ ಅಥವಾ ಸಿಂಥೆಟಿಕ್ ಆಗಿ ಜನರೇಟ್ ಮಾಡಲಾಗಿರುವ ಕಂಟೆಂಟ್‌ನ ಕುರಿತು ರಚನೆಕಾರರು ಪ್ರಕಟಿಸುವ ಅಗತ್ಯವಿದೆ.

ಈ ರೀತಿಯ ಕಂಟೆಂಟ್‌ನ ಕುರಿತು ರಚನೆಕಾರರು ಪ್ರಕಟಿಸಬೇಕು:

  • ನೈಜ ವ್ಯಕ್ತಿಯೊಬ್ಬರು ಹೇಳಿರದ ಅಥವಾ ಮಾಡಿರದ ಯಾವುದೋ ಒಂದು ಸಂಗತಿಯನ್ನು ಅವರು ಹೇಳಿರುವ ಹಾಗೆ ಅಥವಾ ಮಾಡಿರುವ ಹಾಗೆ ಬಿಂಬಿಸುವುದು
  • ನೈಜ ಘಟನೆ ಅಥವಾ ಸ್ಥಳದ ಫೂಟೇಜ್ ಅನ್ನು ಮಾರ್ಪಡಿಸುವುದು
  • ವಾಸ್ತವವಾಗಿ ಘಟನೆಯು ಸಂಭವಿಸಿರದಿದ್ದರೂ, ಅದು ಸಂಭವಿಸಿದೆ ಎಂಬ ಹಾಗೆ ತೋರುವ, ನೈಜವಾಗಿ ಕಾಣುವ ದೃಶ್ಯವನ್ನು ರಚಿಸುವುದು

ಆಡಿಯೋ, ವೀಡಿಯೊ ಅಥವಾ ಚಿತ್ರ ರಚನೆ ಅಥವಾ ಎಡಿಟಿಂಗ್ ಟೂಲ್‌ಗಳನ್ನು ಬಳಸಿಕೊಂಡು ಸಂಪೂರ್ಣವಾಗಿ ಅಥವಾ ಆಂಶಿಕವಾಗಿ ಮಾರ್ಪಡಿಸಿದ ಅಥವಾ ರಚಿಸಿದ ಕಂಟೆಂಟ್ ಇದರಲ್ಲಿ ಒಳಗೊಂಡಿರಬಹುದು.

YouTube Studio ದಲ್ಲಿ ‘ಮಾರ್ಪಡಿಸಿದ ಕಂಟೆಂಟ್’ ಸೆಟ್ಟಿಂಗ್ ಅನ್ನು ಬಳಸಿಕೊಂಡು ಪ್ರಕಟಿಸಿ

ಅರ್ಥಪೂರ್ಣವಾಗಿ ಮಾರ್ಪಡಿಸಿದ ಅಥವಾ ಸಿಂಥೆಟಿಕ್ ಆಗಿ ಜನರೇಟ್ ಮಾಡಿದ ಕಂಟೆಂಟ್‌ನ ಕುರಿತು ಪ್ರಕಟಿಸಲು, ಕಂಪ್ಯೂಟರ್‌ನಲ್ಲಿ YouTube Studio ಅನ್ನು ಬಳಸುತ್ತಿರುವ ರಚನೆಕಾರರಿಗೆ ‘ಮಾರ್ಪಡಿಸಿದ ಕಂಟೆಂಟ್’ ಸೆಟ್ಟಿಂಗ್ ಲಭ್ಯವಿದೆ. ಭವಿಷ್ಯದಲ್ಲಿ ಈ ಸೆಟ್ಟಿಂಗ್ ಅನ್ನು ನಾವು ಇತರ ಸಾಧನಗಳು ಹಾಗೂ YouTube ಆ್ಯಪ್‌ಗಳಿಗೆ ವಿಸ್ತರಿಸುತ್ತೇವೆ.

ರಚನೆಕಾರರು ಈ ಫೀಲ್ಡ್ ಅನ್ನು ಆಯ್ಕೆಮಾಡಿದ ನಂತರ ಮತ್ತು ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಿದ ನಂತರ, ಅವರ ವೀಡಿಯೊದ ವಿಸ್ತರಿತ ವಿವರಣೆಯಲ್ಲಿ ಒಂದು ಲೇಬಲ್ ಕಾಣಿಸಿಕೊಳ್ಳುತ್ತದೆ. ಸದ್ಯಕ್ಕೆ, YouTube ಆ್ಯಪ್ ಅನ್ನು ಫೋನ್, ಟ್ಯಾಬ್ಲೆಟ್ ಅಥವಾ TV ಯಲ್ಲಿ ಬಳಸುತ್ತಿರುವ ವೀಕ್ಷಕರಿಗೆ ಈ ಲೇಬಲ್ ಗೋಚರಿಸುತ್ತದೆ, ಆದರೆ ಭವಿಷ್ಯದಲ್ಲಿ ಇತರ ಸಾಧನಗಳಲ್ಲೂ ಕಾಣಿಸಿಕೊಳ್ಳುತ್ತದೆ.

YouTube ನ ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಟೂಲ್‌ಗಳಾದ ಡ್ರೀಮ್ ಟ್ರ್ಯಾಕ್ ಅಥವಾ ಡ್ರೀಮ್ ಸ್ಕ್ರೀನ್ ಅನ್ನು ಬಳಸಿಕೊಂಡು YouTube Short ಮಾಡುವ ರಚನೆಕಾರರು, ಪ್ರಕಟಪಡಿಸಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ರಚನೆಕಾರರ ಪರವಾಗಿ ಟೂಲ್ ಸ್ವಯಂಚಾಲಿತವಾಗಿ AI ಬಳಕೆಯನ್ನು ಪ್ರಕಟಿಸುತ್ತದೆ. ಇತರ AI ಟೂಲ್‌ಗಳಿಗಾಗಿ, ರಚನೆಕಾರರು ಅಪ್‌ಲೋಡ್ ಫ್ಲೋ ಅವಧಿಯಲ್ಲಿ ಅವರ ಬಳಕೆಯನ್ನು ಪ್ರಕಟಿಸಬೇಕು.

ಮಾರ್ಪಡಿಸಿದ ಅಥವಾ ಸಿಂಥೆಟಿಕ್ ಕಂಟೆಂಟ್‌ನ ಉದಾಹರಣೆಗಳು

ಈ ಕೆಳಗಿನ ಪಟ್ಟಿಯು ಮಾರ್ಪಡಿಸಿದ ಅಥವಾ ಸಿಂಥೆಟಿಕ್ ಕಂಟೆಂಟ್‌ನ ಉದಾಹರಣೆಗಳನ್ನು ಒಳಗೊಂಡಿದೆ. ಮಾರ್ಪಡಿಸಿದ ಅಥವಾ ಸಿಂಥೆಟಿಕ್ ಕಂಟೆಂಟ್‌ನಲ್ಲಿ ಯಾವುದೇ ಆಡಿಯೋ, ವೀಡಿಯೊ, ಚಿತ್ರ ರಚನೆ ಅಥವಾ ಎಡಿಟಿಂಗ್ ಟೂಲ್‌ಗಳನ್ನು ಬಳಸಿ ಸಂಪೂರ್ಣವಾಗಿ ಅಥವಾ ಆಂಶಿಕವಾಗಿ ಮಾರ್ಪಡಿಸಿದ ಅಥವಾ ರಚಿಸಿದ ಕಂಟೆಂಟ್ ಒಳಗೊಂಡಿರಬಹುದು. ನೈಜವೆಂಬಂತೆ ತೋರುವ ಮತ್ತು ಅರ್ಥಪೂರ್ಣವಾದ ಬದಲಾವಣೆಗಳ ಕುರಿತು ಪ್ರಕಟಿಸುವುದು ಅಗತ್ಯವಾಗಿದೆ, ಆದರೆ ಅವಾಸ್ತವಿಕವಾದ ಅಥವಾ ಸಣ್ಣ-ಪುಟ್ಟ ಎಡಿಟ್‌ಗಳ ಕುರಿತು ಪ್ರಕಟಿಸುವ ಅಗತ್ಯವಿಲ್ಲ. ನೆನಪಿಡಿ, ಇದು ಸಂಪೂರ್ಣ ಪಟ್ಟಿಯಲ್ಲ.

ರಚನೆಕಾರರು ಪ್ರಕಟಿಸುವ ಅಗತ್ಯವಿಲ್ಲದಿರುವ ವಿಷಯಗಳು ರಚನೆಕಾರರು ಪ್ರಕಟಿಸುವ ಅಗತ್ಯವಿರುವ ವಿಷಯಗಳು
  • ಸೌಂದರ್ಯದ ಫಿಲ್ಟರ್‌ಗಳನ್ನು ಅನ್ವಯಿಸುವುದು
  • ಒಬ್ಬ ವ್ಯಕ್ತಿಯ ಮುಖದ ಜಾಗದಲ್ಲಿ ಮತ್ತೊಬ್ಬ ವ್ಯಕ್ತಿಯ ಮುಖವನ್ನು ಇರಿಸಲು ಕಂಟೆಂಟ್ ಅನ್ನು ಡಿಜಿಟಲ್ ಆಗಿ ಜನರೇಟ್ ಮಾಡುವುದು ಅಥವಾ ಮಾರ್ಪಡಿಸುವುದು
  • ಚಲಿಸುತ್ತಿರುವ ಕಾರ್ ಅನ್ನು ಸಿಮ್ಯುಲೇಟ್ ಮಾಡುವುದಕ್ಕಾಗಿ ಬ್ಯಾಕ್‌ಡ್ರಾಪ್‌ ಅನ್ನು ಸಿಂಥೆಟಿಕ್ ಆಗಿ ಜನರೇಟ್ ಮಾಡುವುದು ಅಥವಾ ವಿಸ್ತರಿಸುವುದು
  • ಮೂಲ ಚಲನಚಿತ್ರದಲ್ಲಿರದ ಸೆಲೆಬ್ರಿಟಿಯನ್ನು ಒಳಗೊಳ್ಳುವ ಹಾಗೆ, ಒಂದು ಪ್ರಖ್ಯಾತ ಕಾರ್ ಚೇಸ್ ಸೀನ್ ಅನ್ನು ಡಿಜಿಟಲ್ ಆಗಿ ಮಾರ್ಪಡಿಸುವುದು
  • ಈ ಹಿಂದೆ ರೆಕಾರ್ಡ್ ಮಾಡಲಾದ ಆಡಿಯೋವನ್ನು ವರ್ಧಿಸುವುದಕ್ಕಾಗಿ ಎಫೆಕ್ಟ್‌ಗಳನ್ನು ಬಳಸುವುದು
  • ವೈದ್ಯಕೀಯ ವೃತ್ತಿಪರರೊಬ್ಬರು ಸಲಹೆ ನೀಡಿರದಿದ್ದರೂ, ಆ ಸಲಹೆಯನ್ನು ಅವರೇ ನೀಡಿದ್ದಾರೆ ಎಂಬಂತೆ ಬಿಂಬಿಸಲು, ಆಡಿಯೋವನ್ನು ಸಿಮ್ಯುಲೇಟ್ ಮಾಡುವುದು
  • ಒಂದು ವೀಡಿಯೊದಲ್ಲಿ AI-ಜನರೇಟ್ ಮಾಡಿದ ಕ್ಷಿಪಣಿಯ ಆ್ಯನಿಮೇಶನ್ ಅನ್ನು ಬಳಸುವುದು
  • ನೈಜ ನಗರವೊಂದರತ್ತ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ ಎಂಬ ಹಾಗೆ, ನೈಜವೆಂಬಂತೆ ತೋರುವ ಚಿತ್ರಣವನ್ನು ತೋರಿಸುವುದು

 

ಕಂಟೆಂಟ್ ರಚನೆಕಾರರ ಉದಾಹರಣೆಗಳನ್ನು ಪ್ರಕಟಿಸಬೇಕಾಗಿಲ್ಲ
ಮಾರ್ಪಡಿಸಿದ ಅಥವಾ ಸಿಂಥೆಟಿಕ್ ಆಗಿರುವ ಅವಾಸ್ತವಿಕ ಕಂಟೆಂಟ್ ಅನ್ನು ಅಥವಾ ನೈಜವೆಂಬಂತೆ ತೋರುವ ಕಂಟೆಂಟ್‌ನಲ್ಲಿ ಮಾಡಿರುವ ಸಣ್ಣ-ಪುಟ್ಟ ಎಡಿಟ್‌ಗಳನ್ನು ರಚನೆಕಾರರು ಪ್ರಕಟಿಸುವ ಅಗತ್ಯವಿಲ್ಲ. ಸಣ್ಣ-ಪುಟ್ಟ ಎಡಿಟ್‌ಗಳೆಂದರೆ ಮೂಲತಃ ಅಂದಕ್ಕೆ ಸಂಬಂಧಪಟ್ಟವು ಮತ್ತು ವಾಸ್ತವವಾಗಿ ಏನು ನಡೆದಿದೆ ಎಂಬುದರ ಕುರಿತು ವೀಕ್ಷಕರ ದಾರಿ ತಪ್ಪಿಸುವ ರೀತಿಯಲ್ಲಿ ಕಂಟೆಂಟ್ ಅನ್ನು ಮಾರ್ಪಡಿಸದ ಎಡಿಟ್‌ಗಳು.
ರಚನೆಕಾರರು ಪ್ರಕಟಿಸುವ ಅಗತ್ಯವಿಲ್ಲದ ಕಂಟೆಂಟ್, ಎಡಿಟ್‌ಗಳು ಅಥವಾ ವೀಡಿಯೊ ಸಹಾಯದ ಉದಾಹರಣೆಗಳು:
  • ಅವಾಸ್ತವಿಕವಾದವುಗಳು
    • ಕಾಲ್ಪನಿಕ ಪ್ರಪಂಚವೊಂದರಲ್ಲಿ ವ್ಯಕ್ತಿಯೊಬ್ಬರು ಯೂನಿಕಾರ್ನ್ ಸವಾರಿ ಮಾಡುತ್ತಿರುವುದು
    • ವ್ಯಕ್ತಿಯೊಬ್ಬರು ಬಾಹ್ಯಾಕಾಶದಲ್ಲಿ ಹಾರಾಡುತ್ತಿರುವುದನ್ನು ತೋರಿಸಲು ಗ್ರೀನ್ ಸ್ಕ್ರೀನ್‌ನ ಬಳಕೆ
  • ಸಣ್ಣದು
    • ಬಣ್ಣದ ಹೊಂದಾಣಿಕೆ ಅಥವಾ ಲೈಟಿಂಗ್‌ನ ಫಿಲ್ಟರ್‌ಗಳು
    • ಹಿನ್ನೆಲೆಯನ್ನು ಬ್ಲರ್ ಮಾಡುವುದು ಅಥವಾ ವಿಂಟೇಜ್ ಎಫೆಕ್ಟ್‌ಗಳನ್ನು ಸೇರಿಸುವಂತಹ ವಿಶೇಷ ಎಫೆಕ್ಟ್‌ಗಳ ಫಿಲ್ಟರ್‌ಗಳು
    • ವೀಡಿಯೊ ಔಟ್‌ಲೈನ್, ಸ್ಕ್ರಿಪ್ಟ್, ಥಂಬ್‌ನೇಲ್, ಶೀರ್ಷಿಕೆ ಅಥವಾ ಇನ್ಫೋಗ್ರಾಫಿಕ್ ಅನ್ನು ರಚಿಸಲು ಅಥವಾ ಸುಧಾರಿಸಲು ಜನರೇಟಿವ್ AI ಟೂಲ್‌ಗಳನ್ನು ಬಳಸುವಂತಹ ಪ್ರೊಡಕ್ಷನ್ ಸಹಾಯ
    • ಕ್ಯಾಪ್ಶನ್ ರಚನೆ
    • ವೀಡಿಯೊ ತೀಕ್ಷ್ಣಗೊಳಿಸುವಿಕೆ, ಅಪ್‌ಸ್ಕೇಲ್ ಮಾಡುವಿಕೆ ಅಥವಾ ರಿಪೇರಿ ಮತ್ತು ಧ್ವನಿ ಅಥವಾ ಆಡಿಯೋ ರಿಪೇರಿ
    • ಐಡಿಯಾ ಜನರೇಶನ್

ಈ ಪಟ್ಟಿಯು ಸಂಪೂರ್ಣವಾಗಿಲ್ಲ ಎಂಬುದನ್ನು ನೆನಪಿಡಿ.

ಕಂಟೆಂಟ್ ರಚನೆಕಾರರ ಉದಾಹರಣೆಗಳನ್ನು ಪ್ರಕಟಿಸಬೇಕಾಗಿದೆ
ವೀಕ್ಷಕರು ವೀಕ್ಷಿಸುತ್ತಿರುವ ಕಂಟೆಂಟ್‌ನ ಕುರಿತು ಅವರಿಗೆ ಮಾಹಿತಿ ನೀಡಲು, ಕಂಟೆಂಟ್ ನೈಜವಾಗಿರುವ ಹಾಗೆ ಅಥವಾ ಅರ್ಥಪೂರ್ಣವಾಗಿರುವಂತೆ ತೋರುವಂತಹ ಸಂದರ್ಭಗಳಲ್ಲಿ, ಮಾರ್ಪಡಿಸಿದ ಅಥವಾ ಸಿಂಥೆಟಿಕ್ ಕಂಟೆಂಟ್‌ನ ಕುರಿತು ರಚನೆಕಾರರು ಪ್ರಕಟಿಸುವ ಅಗತ್ಯವಿದೆ.
ರಚನೆಕಾರರು ಪ್ರಕಟಿಸುವ ಅಗತ್ಯವಿರುವ ಕಂಟೆಂಟ್, ಎಡಿಟ್‌ಗಳು ಅಥವಾ ವೀಡಿಯೊ ಸಹಾಯದ ಉದಾಹರಣೆಗಳು:
  • ಸಂಗೀತವನ್ನು ಸಿಂಥೆಟಿಕ್ ಆಗಿ ಜನರೇಟ್ ಮಾಡುವುದು (Creator Music ಬಳಸಿಕೊಂಡು ಜನರೇಟ್ ಮಾಡಿದ ಕಂಟೆಂಟ್ ಒಳಗೊಂಡ ಹಾಗೆ)
  • ವಾಯ್ಸ್‌ಓವರ್‌ಗಾಗಿ ಬಳಸುವುದಕ್ಕಾಗಿ ಬೇರೊಬ್ಬರ ಧ್ವನಿಯನ್ನು ವಾಯ್ಸ್ ಕ್ಲೋನ್ ಮಾಡುವುದು
  • ಪ್ರಚಾರಾತ್ಮಕ ಪ್ರಯಾಣ ವೀಡಿಯೊಗಾಗಿ, ನೈಜ ಸ್ಥಳವೊಂದರ ಹೆಚ್ಚುವರಿ ಫೂಟೇಜ್ ಅನ್ನು ಸಿಂಥೆಟಿಕ್ ಆಗಿ ಜನರೇಟ್ ಮಾಡುವುದು, ಉದಾಹರಣೆಗೆ ಮಾವೀಯಲ್ಲಿ ಸರ್ಫರ್ ಒಬ್ಬರ ವೀಡಿಯೊ
  • ಇಬ್ಬರು ನೈಜ ವೃತ್ತಿಪರ ಟೆನ್ನಿಸ್ ಆಟಗಾರರ ನಡುವೆ ನಡೆದ ನೈಜ ಪಂದ್ಯವೆಂಬ ಹಾಗೆ ತೋರುವ, ಸಿಂಥೆಟಿಕ್ ಆಗಿ ಜನರೇಟ್ ಮಾಡಿದ ವೀಡಿಯೊ
  • ವ್ಯಕ್ತಿಯೊಬ್ಬರು ನೀಡಿರದ ಸಲಹೆಯನ್ನು ಅವರೇ ನೀಡಿರುವ ಹಾಗೆ ಬಿಂಬಿಸುವುದು
  • ಜನಪ್ರಿಯ ಹಾಡುಗಾರರೊಬ್ಬರು ತಮ್ಮ ಲೈವ್ ಪ್ರದರ್ಶನದಲ್ಲಿ ಒಂದು ಸ್ವರವನ್ನು ತಪ್ಪಾಗಿ ಹಾಡಿದ್ದಾರೆ ಎಂಬ ಹಾಗೆ ಧ್ವನಿಸುವಂತೆ ಮಾಡಲು ಆಡಿಯೋವನ್ನು ಡಿಜಿಟಲ್ ಆಗಿ ಮಾರ್ಪಡಿಸುವುದು
  • ಒಂದು ಚಂಡಮಾರುತ ಅಥವಾ ಇತರ ಹವಾಮಾನ ವಿದ್ಯಮಾನಗಳು ನೈಜ ನಗರವೊಂದರತ್ತ ಚಲಿಸುತ್ತಿರದಿದ್ದರೂ, ಆ ರೀತಿ ನಡೆದಿದೆ ಎಂದು ತೋರುವ, ನೈಜವೆನಿಸುವ ಚಿತ್ರಣವನ್ನು ತೋರಿಸುವುದು
  • ಆಸ್ಪತ್ರೆಯ ಕೆಲಸಗಾರರು ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಗಾಯಗೊಂಡ ರೋಗಿಗಳನ್ನು ವಾಪಾಸು ಕಳುಹಿಸುತ್ತಿರುವ ಹಾಗೆ ಬಿಂಬಿಸುವುದು
  • ಸಾರ್ವಜನಿಕ ವ್ಯಕ್ತಿಯೊಬ್ಬರು ವಸ್ತುವೊಂದನ್ನು ಕಳವು ಮಾಡಿರದಿದ್ದರೂ ಅವರೇ ಅದನ್ನು ಕಳವು ಮಾಡಿರುವ ಹಾಗೆ ತೋರಿಸುವುದು ಅಥವಾ ಅವರು ಕಳವು ಮಾಡಿರುವುದನ್ನು ಒಪ್ಪಿಕೊಂಡಿರದಿದ್ದರೂ, ಅವರು ಒಪ್ಪಿಕೊಂಡಿದ್ದಾರೆ ಎಂಬ ಹಾಗೆ ತೋರಿಸುವುದು
  • ನೈಜ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಅಥವಾ ಜೈಲಿಗೆ ಹಾಕಲಾಗಿದೆ ಎಂಬ ಹಾಗೆ ಬಿಂಬಿಸುವುದು

ಈ ಪಟ್ಟಿಯು ಸಂಪೂರ್ಣವಾಗಿಲ್ಲ ಎಂಬುದನ್ನು ನೆನಪಿಡಿ.

ಮಾರ್ಪಡಿಸಿದ ಅಥವಾ ಸಿಂಥೆಟಿಕ್ ಕಂಟೆಂಟ್ ಅನ್ನು ಪ್ರಕಟಿಸಿ

ನೈಜವೆಂಬಂತೆ ತೋರುವ, ಅರ್ಥಪೂರ್ಣವಾಗಿ ಮಾರ್ಪಡಿಸಿರುವ ಅಥವಾ ಸಿಂಥೆಟಿಕ್ ಆಗಿ ಜನರೇಟ್ ಮಾಡಲಾಗಿರುವ ಕಂಟೆಂಟ್ ಅನ್ನು ರಚನೆಕಾರರು ಪ್ರಕಟಿಸುವ ಅಗತ್ಯವಿದೆ. ಅಪ್‌ಲೋಡ್ ಪ್ರಕ್ರಿಯೆಯ ಸಂದರ್ಭದಲ್ಲಿ ರಚನೆಕಾರರು ಇದನ್ನು ಪ್ರಕಟಿಸಬಹುದು.

ಕಂಪ್ಯೂಟರ್‌ನಲ್ಲಿ YouTube Studio

  1. YouTube Studio ಗೆ ಹೋಗಿ.
  2. ಕಂಟೆಂಟ್ ಅಪ್‌ಲೋಡ್ ಮಾಡಲು ಹಂತಗಳನ್ನು ಅನುಸರಿಸಿ.
  3. ವಿವರಗಳ ವಿಭಾಗದಲ್ಲಿ, “ಮಾರ್ಪಡಿಸಿದ ಕಂಟೆಂಟ್” ಎಂಬುದರ ಅಡಿಯಲ್ಲಿ, ಪ್ರಟಣೆಯ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಲು ಹೌದು ಎಂಬುದನ್ನು ಆಯ್ಕೆ ಮಾಡಿ.
  4. ಇತರ ವೀಡಿಯೊ ವಿವರಗಳನ್ನು ಆಯ್ಕೆ ಮಾಡಲು ಮುಂದುವರೆಯಿರಿ.

YouTube ನ ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಎಫೆಕ್ಟ್‌ಗಳಲ್ಲೊಂದನ್ನು (ಉದಾಹರಣೆಗೆ, YouTube ನ ಡ್ರೀಮ್ ಟ್ರ್ಯಾಕ್ ಅಥವಾ ಡ್ರೀಮ್ ಸ್ಕ್ರೀನ್) ಬಳಸಿಕೊಂಡು ರಚನೆಕಾರರು YouTube Short ಅನ್ನು ರಚಿಸಿದರೆ, ಪ್ರಕಟಿಸುವುದಕ್ಕಾಗಿ ಪ್ರಸ್ತುತ ಯಾವುದೇ ಹೆಚ್ಚುವರಿ ಹಂತಗಳ ಅಗತ್ಯವಿಲ್ಲ. ರಚನೆಕಾರರ ಪರವಾಗಿ ಟೂಲ್ ಸ್ವಯಂಚಾಲಿತವಾಗಿ AI ಬಳಕೆಯನ್ನು ಪ್ರಕಟಿಸುತ್ತದೆ.

ರಚನೆಕಾರರು ತಮ್ಮ ವೀಡಿಯೊದ ಶೀರ್ಷಿಕೆ ಅಥವಾ ವಿವರಣೆಯಲ್ಲಿ ಮಾರ್ಪಡಿಸಿದ ಅಥವಾ ಸಿಂಥೆಟಿಕ್ ಕಂಟೆಂಟ್‌ನ ಬಳಕೆಯನ್ನು ಪ್ರಕಟಿಸಿದರೆ, ಅವರಿಗೆ ಸಹಾಯ ಮಾಡುವುದಕ್ಕಾಗಿ ಅವರ ಪರವಾಗಿ ನಾವೇ ಪ್ರಕಟಣೆಯ ಆಯ್ಕೆಯನ್ನು ಮಾಡಬಹುದು.

ರಚನೆಕಾರರು ಪ್ರಕಟಿಸಿದ ನಂತರ ಏನಾಗುತ್ತದೆ

ತಮ್ಮ ಕಂಟೆಂಟ್ ಅನ್ನು ಮಾರ್ಪಡಿಸಲಾಗಿದೆ ಅಥವಾ ಅದು ಸಿಂಥೆಟಿಕ್ ಆಗಿದೆ ಎಂಬುದನ್ನು ಸೂಚಿಸಲು ರಚನೆಕಾರರು “ಹೌದು” ಎಂಬುದನ್ನು ಆಯ್ಕೆ ಮಾಡಿದರೆ, ಅವರ ವೀಡಿಯೊದ ವಿವರಣೆ ಫೀಲ್ಡ್‌ನಲ್ಲಿ ನಾವು ಒಂದು ಲೇಬಲ್ ಅನ್ನು ಸೇರಿಸುತ್ತೇವೆ. ಸದ್ಯಕ್ಕೆ, YouTube ವೀಡಿಯೊಗಳನ್ನು ಮೊಬೈಲ್ ಸಾಧನದಲ್ಲಿ ಅಥವಾ ಟ್ಯಾಬ್ಲೆಟ್‌ನಲ್ಲಿ ವೀಕ್ಷಿಸುತ್ತಿರುವ ವೀಕ್ಷಕರಿಗೆ ಈ ಲೇಬಲ್‌ಗಳು ಕಾಣಿಸುತ್ತವೆ.

ವಿಸ್ತರಿತ ವಿವರಣೆ ಫೀಲ್ಡ್‌ನಲ್ಲಿ ಲೇಬಲ್

ಸೆನ್ಸಿಟಿವ್ ಕಂಟೆಂಟ್‌ಗಾಗಿ ಹೆಚ್ಚುವರಿ ಲೇಬಲ್

ಚುನಾವಣೆಗಳು, ನಡೆಯುತ್ತಿರುವ ಸಂಘರ್ಷಗಳು, ಪ್ರಾಕೃತಿಕ ವಿಪತ್ತುಗಳು, ಹಣಕಾಸು ಅಥವಾ ಆರೋಗ್ಯದ ಕುರಿತು ಉನ್ನತ ಗುಣಮಟ್ಟದ ಮತ್ತು ಸಕಾಲಿಕ ಮಾಹಿತಿಯು ಬಹಳ ಮುಖ್ಯವಾಗಿದೆ. ಈ ರೀತಿಯ ಮಾಹಿತಿಯು ಜನರು ಮತ್ತು ಸಮುದಾಯಗಳ ಯೋಗಕ್ಷೇಮ, ಆರ್ಥಿಕ ಭದ್ರತೆ ಅಥವಾ ಸುರಕ್ಷತೆಯ ಮೇಲೆ ಗಾಢವಾದ ಪ್ರಭಾವ ಬೀರಬಹುದು. ಇಂತಹ ಸೂಕ್ಷ್ಮವಾದ ವಿಷಯಗಳ ಕುರಿತಾದ ಕಂಟೆಂಟ್‌ಗಾಗಿ, ಹೆಚ್ಚುವರಿ ಪಾರದರ್ಶಕತೆಗಾಗಿ ವೀಡಿಯೊ ಪ್ಲೇಯರ್‌ನಲ್ಲಿ ಹೆಚ್ಚು ಎದ್ದುಕಾಣುವ ಲೇಬಲ್ ಸಹ ಗೋಚರಿಸಬಹುದು.

ಪ್ರಕಟಿಸುವುದರ ಇತರ ಪರಿಣಾಮಗಳು

ಕಂಟೆಂಟ್ ಅನ್ನು ಮಾರ್ಪಡಿಸಲಾಗಿದೆ ಅಥವಾ ಅದು ಸಿಂಥೆಟಿಕ್ ಆಗಿದೆ ಎಂದು ಪ್ರಕಟಿಸುವುದು, ವೀಡಿಯೊದ ಪ್ರೇಕ್ಷಕರನ್ನು ಸೀಮಿತಗೊಳಿಸುವುದಿಲ್ಲ ಅಥವಾ ಹಣ ಗಳಿಸುವ ಅದರ ಸಾಮರ್ಥ್ಯದ ಮೇಲೆ ಪ್ರಭಾವ ಬೀರುವುದಿಲ್ಲ.

ಪ್ರಕಟಿಸದಿರುವುದರ ಅಪಾಯಗಳು

ಒಂದು ವೀಡಿಯೊವನ್ನು ವಾಸ್ತವದಲ್ಲಿ, ಅರ್ಥಪೂರ್ಣವಾಗಿ ಮಾರ್ಪಡಿಸಿದ್ದಾಗ ಅಥವಾ ನೈಜವೆಂಬ ಹಾಗೆ ತೋರಿಸಲು ಸಿಂಥೆಟಿಕ್ ಆಗಿ ಜನರೇಟ್ ಮಾಡಿರುವಾಗ, ವೀಕ್ಷಕರು ಆ ವೀಡಿಯೊವನ್ನು ನೈಜವೆಂದು ಭಾವಿಸಿದರೆ, ಅದು ದಾರಿ ತಪ್ಪಿಸುವ ಸಾಧ್ಯತೆಯಿದೆ.

ಕಂಟೆಂಟ್‌ನ ಕುರಿತು ಪ್ರಕಟಿಸದಿದ್ದರೆ, ಕೆಲವೊಂದು ಸಂದರ್ಭಗಳಲ್ಲಿ, ವೀಕ್ಷಕರಿಗೆ ಹಾನಿಯುಂಟಾಗುವ ಅಪಾಯವನ್ನು ಕಡಿಮೆ ಮಾಡಲು YouTube ತಾನಾಗಿ ಕ್ರಮ ಕೈಗೊಳ್ಳಬಹುದು ಮತ್ತು ರಚನೆಕಾರರಿಗೆ ತೆಗೆದುಹಾಕುವ ಆಯ್ಕೆಯನ್ನು ಒದಗಿಸದ ಒಂದು ಲೇಬಲ್ ಅನ್ನು ಅನ್ವಯಿಸಬಹುದು. ಇದಲ್ಲದೆ, ಈ ಮಾಹಿತಿಯನ್ನು ಪ್ರಕಟಿಸದಿರಲು ಸತತವಾಗಿ ಆಯ್ಕೆ ಮಾಡುವ ರಚನೆಕಾರರಿಗೆ, ಕಂಟೆಂಟ್ ತೆಗೆದುಹಾಕುವಿಕೆ ಅಥವಾ YouTube ಪಾಲುದಾರ ಕಾರ್ಯಕ್ರಮದಿಂದ ಅಮಾನತುಗೊಳಿಸುವುದೂ ಸೇರಿದಂತಹ ದಂಡಗಳನ್ನು YouTube ವಿಧಿಸಬಹುದು.

ನೆನಪಿಡಿ, ಕಂಟೆಂಟ್ ಅನ್ನು ಮಾರ್ಪಡಿಸಲಾಗಿದೆಯೇ ಅಥವಾ ಅದು ಸಿಂಥೆಟಿಕ್ ಆಗಿದೆಯೇ ಎಂಬುದನ್ನು ಲೆಕ್ಕಿಸದೆ, YouTube ನಲ್ಲಿ ಇರುವ ಎಲ್ಲಾ ಕಂಟೆಂಟ್‌ನ ಮೇಲೆ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ನಾವು ಅನ್ವಯಿಸುತ್ತೇವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11267219399046690578
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false