YouTube ನಲ್ಲಿ RSS ಫೀಡ್‌ನಲ್ಲಿನ ಎಪಿಸೋಡ್‌ಗಳನ್ನು ಪ್ರಕಟಿಸಿ ಅಥವಾ ಡಿಸ್‌ಕನೆಕ್ಟ್ ಮಾಡಿ

ನೀವು ಪಾಡ್‌ಕಾಸ್ಟ್ ರಚನೆಕಾರರಾಗಿದ್ದರೆ, RSS ಫೀಡ್ ಮೂಲಕ ನಿಮ್ಮ ಪಾಡ್‌ಕಾಸ್ಟ್‌ಗಳನ್ನು YouTube ಗೆ ಅಪ್‌ಲೋಡ್ ಮಾಡಲು ನೀವು YouTube Studio ಅನ್ನು ಬಳಸಬಹುದು. RSS ಫೀಡ್ ಅನ್ನು ಪ್ರಕಟಿಸಲು ಅಥವಾ ಡಿಸ್‌ಕನೆಕ್ಟ್ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಿ. ನೀವು RSS ಫೀಡ್‌ಗಳಿಂದ YouTube ಗೆ ಪಾಡ್‌ಕಾಸ್ಟ್‌ಗಳನ್ನು ಅಪ್‌ಲೋಡ್ ಮಾಡುವ ಕುರಿತು ಇನ್ನಷ್ಟು ಸಹ ತಿಳಿದುಕೊಳ್ಳಬಹುದು.

ಗಮನಿಸಿ: ಆಯ್ದ ದೇಶಗಳು/ಪ್ರದೇಶಗಳಲ್ಲಿ RSS ಇಂಜೆಷನ್ ಲಭ್ಯವಿದೆ.

RSS ಫೀಡ್‌ಗಳ ಮೂಲಕ YouTube ಗೆ ಆಡಿಯೊ-ಫಸ್ಟ್ ಪಾಡ್‌ಕಾಸ್ಟ್‌ಗಳನ್ನು ಅಪ್‌ಲೋಡ್ ಮಾಡುವುದು ಹೇಗೆ

YouTube ಗೆ ಪಾಡ್‌ಕಾಸ್ಟ್‌ಗಳನ್ನು ಅಪ್‌ಲೋಡ್ ಮಾಡಲು ನಿಮ್ಮ RSS ಫೀಡ್ ಅನ್ನು ಕನೆಕ್ಟ್ ಮಾಡಿ

ನೀವು ಪ್ರಾರಂಭಿಸುವ ಮುನ್ನ, YouTube Studio ಗೆ ಲಾಗಿನ್ ಮಾಡಿ. ನಂತರ, ನಿಮ್ಮ RSS ಫೀಡ್‌ನಿಂದ YouTube ಗೆ ಪಾಡ್‌ಕಾಸ್ಟ್ ಎಪಿಸೋಡ್‌ಗಳನ್ನು ಅಪ್‌ಲೋಡ್ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಿ.

YouTube ನಲ್ಲಿ RSS ಫೀಡ್ ಅನ್ನು ಸಲ್ಲಿಸಲಾಗುತ್ತಿದೆ

1. YouTube Studio ದಲ್ಲಿ, ರಚಿಸಿ  ಮತ್ತು ನಂತರ ಹೊಸ ಪಾಡ್‌ಕಾಸ್ಟ್ ಮತ್ತು ನಂತರ RSS ಫೀಡ್ ಅನ್ನು ಸಲ್ಲಿಸಿ  ಎಂಬುದನ್ನು ಕ್ಲಿಕ್ ಮಾಡಿ.

ಗಮನಿಸಿ: ನಿಮ್ಮ ಬಳಿ ಸುಧಾರಿತ ಫೀಚರ್‌ನ ಆ್ಯಕ್ಸೆಸ್ ಇಲ್ಲದಿದ್ದರೆ, ನಿಮ್ಮ ಗುರುತನ್ನು ನೀವು ದೃಢೀಕರಿಸಬೇಕಾಗುತ್ತದೆ.

2. RSS ಇಂಜೆಷನ್ ಟೂಲ್ ಸೇವಾ ನಿಯಮಗಳನ್ನು ಓದಿ ಮತ್ತು ಸಮ್ಮತಿಸಿ. 

3. ಸ್ಕ್ರೀನ್‌ನಲ್ಲಿರುವ ಸೂಚನೆಗಳನ್ನು ಓದಿ ಮತ್ತು ಮುಂದಿನದು ಎಂಬುದನ್ನು ಕ್ಲಿಕ್ ಮಾಡಿ.

4. ನಿಮ್ಮ RSS ಫೀಡ್ URL ನಮೂದಿಸಿ ಮತ್ತು ಮುಂದಿನದು ಎಂಬುದನ್ನು ಕ್ಲಿಕ್ ಮಾಡಿ.

5. ನಿಮ್ಮ ಖಾತೆಯನ್ನು ದೃಢೀಕರಿಸಲು ಕೋಡ್ ಕಳುಹಿಸಿ ಎಂಬುದನ್ನು ಕ್ಲಿಕ್ ಮಾಡಿ. 

6. ನಿಮ್ಮ RSS ಫೀಡ್‌ನಲ್ಲಿರುವ ಇಮೇಲ್ ವಿಳಾಸಕ್ಕೆ ಕಳುಹಿಸಿರುವ ಪರಿಶೀಲನೆ ಕೋಡ್ ಅನ್ನು ನಮೂದಿಸಿ ಮತ್ತು ಪರಿಶೀಲಿಸಿ ಕ್ಲಿಕ್ ಮಾಡಿ. ನಿಮ್ಮ RSS ಫೀಡ್‌ನಲ್ಲಿರುವ ಇಮೇಲ್ ನಿಮಗೆ ತಿಳಿದಿಲ್ಲದಿದ್ದರೆ, ನಿಮ್ಮ ಹೋಸ್ಟಿಂಗ್ ಒದಗಿಸುವವರನ್ನು ಸಂಪರ್ಕಿಸಿ.

7. YouTube ನಲ್ಲಿ ನಿಮ್ಮ ಪಾಡ್‌ಕಾಸ್ಟ್‌ಗೆ ನೀವು ಯಾವ ಎಪಿಸೋಡ್‌ಗಳನ್ನು ಅಪ್‌ಲೋಡ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ ಮತ್ತು ಮುಂದಿನದು ಎಂಬುದನ್ನು ಕ್ಲಿಕ್ ಮಾಡಿ. ನೀವು ಇವುಗಳನ್ನು ಅಪ್‌ಲೋಡ್ ಮಾಡಲು ಆಯ್ಕೆಮಾಡಬಹುದು:

  • ಅಸ್ತಿತ್ವದಲ್ಲಿರುವ ಎಲ್ಲಾ ಎಪಿಸೋಡ್‌ಗಳು
  • ನಿರ್ದಿಷ್ಟ ದಿನಾಂಕದಿಂದ ಪ್ರಕಟಗೊಂಡ ಎಪಿಸೋಡ್‌ಗಳು
  • ಕೇವಲ ಭವಿಷ್ಯದ ಎಪಿಸೋಡ್‌ಗಳು
ನಿಮ್ಮ ಎಪಿಸೋಡ್‌ಗಳಲ್ಲಿ ಪಾವತಿಸಿದ ಪ್ರಚಾರಗಳಿದ್ದರೆ, ನೀವು "RSS ಫೀಡ್‌ನಲ್ಲಿನ ಬಹುತೇಕ ಎಪಿಸೋಡ್‌ಗಳು ಪಾವತಿಸಿದ ಪ್ರಚಾರವನ್ನು ಒಳಗೊಂಡಿವೆ" ಎಂಬ ಆಯ್ಕೆಯನ್ನು ಸಹ ಆರಿಸಬೇಕು. YouTube ನಲ್ಲಿನ RSS ಫೀಡ್‌ಗಳಿಗಾಗಿ ಉತ್ತಮ ಅಭ್ಯಾಸಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

8. ಗೋಚರತೆಯ ವಿವರಗಳನ್ನು ಪರಿಶೀಲಿಸಿ ಮತ್ತು ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ನಿಮ್ಮ RSS ಫೀಡ್‌ನಿಂದ ಪಾಡ್‌ಕಾಸ್ಟ್‌ಗಳನ್ನು ಪ್ರಕಟಿಸಿ

ನಿಮ್ಮ ಫೀಡ್ ಅನ್ನು ನೀವು ಸೆಟಪ್ ಮಾಡಿದ ನಂತರ, ನಿಮ್ಮ ಎಪಿಸೋಡ್‌ಗಳನ್ನು ಅಪ್‌ಲೋಡ್ ಮಾಡಲು ಕೆಲವು ದಿನಗಳ ಸಮಯ ಬೇಕಾಗಬಹುದು. ನಿಮ್ಮ ಪಾಡ್‌ಕಾಸ್ಟ್ ಪ್ರಕಟವಾಗಲು ಸಿದ್ಧವಾದಾಗ ನೀವು ಇಮೇಲ್ ಒಂದನ್ನು ಪಡೆಯುತ್ತೀರಿ, ಆದರೆ, ನೀವು ಕೆಳಗಿನ ಹಂತಗಳನ್ನು ಅನುಸರಿಸುವವರೆಗೆ ನಿಮ್ಮ ಪಾಡ್‌ಕ್ಯಾಸ್ಟ್ ಅನ್ನು ಪ್ರಕಟಿಸಲಾಗುವುದಿಲ್ಲ. 

ಫೀಡ್ ಒಂದನ್ನು ಪ್ರಕಟಿಸಲು,

  1. YouTube Studio ದಲ್ಲಿ, ಕಂಟೆಂಟ್ ಮತ್ತು ನಂತರ ಪಾಡ್‌ಕಾಸ್ಟ್‌ಗಳು ಎಂಬಲ್ಲಿಗೆ ಹೋಗಿ.
  2. "ವೀಡಿಯೊ ಎಣಿಕೆಯ" ಅಡಿಯಲ್ಲಿ, ನಿಮ್ಮ ಪಾಡ್‌ಕ್ಯಾಸ್ಟ್ ಫೀಡ್‌ನ ಪಕ್ಕದಲ್ಲಿರುವ ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ. ನಿಮ್ಮ ಪಾಡ್‌ಕ್ಯಾಸ್ಟ್ ಎಪಿಸೋಡ್‌ಗಳು ಅಪ್‌ಲೋಡ್ ಆಗುವುದು ಪೂರ್ಣಗೊಂಡಾಗ ಮಾತ್ರ ಈ ಬಟನ್ ಗೋಚರಿಸುತ್ತದೆ. 

ನೀವು ಪ್ರಕಟಿಸಿದ ನಂತರ, ನಿಮ್ಮ ಪಾಡ್‌ಕಾಸ್ಟ್ ಮತ್ತು ಯಾವುದೇ ಹೊಸ ಎಪಿಸೋಡ್‌ಗಳು YouTube ನಲ್ಲಿ ಎಲ್ಲರಿಗೂ ಸಾರ್ವಜನಿಕವಾಗುತ್ತವೆ. ನೀವು ಈ ಸೆಟ್ಟಿಂಗ್‌ಗಳನ್ನು ಪಾಡ್‌ಕಾಸ್ಟ್ ವಿವರಗಳ ಪುಟದಲ್ಲಿ ಬದಲಾಯಿಸಬಹುದು. ಮುಂದಿನ ವಿಭಾಗದಲ್ಲಿ ನಿಮ್ಮ ಡೀಫಾಲ್ಟ್ ವೀಡಿಯೊ ಗೋಚರತೆಯನ್ನು ಎಡಿಟ್ ಮಾಡುವುದು ಹೇಗೆಂದು ತಿಳಿದುಕೊಳ್ಳಿ.

ಪಾಡ್‌ಕಾಸ್ಟ್ ವಿವರಗಳನ್ನು ಎಡಿಟ್ ಮಾಡಿ

ನಿಮ್ಮ RSS ಫೀಡ್‌ನಲ್ಲಿ ಡೆಲಿವರ್ ಮಾಡಲಾಗಿರುವ ಪಾಡ್‌ಕಾಸ್ಟ್ ವಿವರಗಳು ಬಿಟ್ಟುಹೋಗಿದ್ದರೆ ಅಥವಾ ತಪ್ಪಾಗಿದ್ದರೆ, ನೀವು ಅವುಗಳನ್ನು ಪಾಡ್‌ಕಾಸ್ಟ್ ವಿವರಗಳ ಪುಟದಲ್ಲಿ ಎಡಿಟ್ ಮಾಡಬಹುದು.

1. YouTube Studio ದಲ್ಲಿ, ಕಂಟೆಂಟ್ ಮತ್ತು ನಂತರ ಪಾಡ್‌ಕಾಸ್ಟ್‌ಗಳು ಎಂಬಲ್ಲಿಗೆ ಹೋಗಿ.
2. ನೀವು ಎಡಿಟ್ ಮಾಡಲು ಬಯಸುವ ಪಾಡ್‌ಕಾಸ್ಟ್ ಮೇಲೆ ಹೋವರ್ ಮಾಡಿ ಮತ್ತು ವಿವರಗಳು ಎಡಿಟ್ ಸೆಟ್ಟಿಂಗ್, ಪೆನ್ಸಿಲ್ ಐಕಾನ್ ಎಂಬುದನ್ನು ಆಯ್ಕೆಮಾಡಿ.
3. ಪಾಡ್‌ಕ್ಯಾಸ್ಟ್ ವಿವರಗಳ ಪುಟದಲ್ಲಿ, ಈ ಕೆಳಗಿನ ಸೆಟ್ಟಿಂಗ್‌ಗಳಲ್ಲಿ ಯಾವುದನ್ನಾದರೂ ಅಪ್‌ಡೇಟ್ ಮಾಡಿ:

  • ಶೀರ್ಷಿಕೆಗಳು
  • ವಿವರಣೆಗಳು
  • ವೀಡಿಯೊ ಗೋಚರತೆ
  • ಡೀಫಾಲ್ಟ್ ವೀಡಿಯೊ ಕ್ರಮ
  • RSS ಸೆಟ್ಟಿಂಗ್‌ಗಳು

4. ಪೂರ್ಣಗೊಂಡಾಗ ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಗಮನಿಸಿ: ಎಪಿಸೋಡ್ ವಿವರಗಳನ್ನು ನಿಮ್ಮ RSS ಫೀಡ್‌ನಿಂದ ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತವೆ. ನಿಮ್ಮ ಎಪಿಸೋಡ್ ವಿವರಗಳು ಬದಲಾದರೆ, ನೀವು ಅವುಗಳನ್ನು ನಿಮ್ಮ RSS ಫೀಡ್‌ನಲ್ಲಿ ಸಂಪಾದಿಸಬಹುದು. ನೀವು YouTube Studio ದಲ್ಲಿ ಎಪಿಸೋಡ್ ವಿವರಗಳನ್ನು ಬದಲಾಯಿಸಿದರೆ, ನಿಮ್ಮ RSS ಫೀಡ್‌ನಲ್ಲಿ ಭವಿಷ್ಯದ ಆ ಎಪಿಸೋಡ್‌ಗೆ ಮಾಡಿದ ಎಡಿಟ್‌ಗಳನ್ನು ನಾವು ನಿರ್ಬಂಧಿಸುತ್ತೇವೆ.

ನಿಮ್ಮ YouTube ಪಾಡ್‌ಕಾಸ್ಟ್‌ನಿಂದ RSS ಒಂದನ್ನು ಡಿಸ್‌ಕನೆಕ್ಟ್ ಮಾಡಿ

YouTube ನಲ್ಲಿನ ನಿಮ್ಮ ಪಾಡ್‌ಕಾಸ್ಟ್‌ನಿಂದ ನಿಮ್ಮ RSS ಫೀಡ್ ಅನ್ನು ಡಿಸ್‌ಕನೆಕ್ಟ್ ಮಾಡುವುದರಿಂದ ಹೊಸ ಎಪಿಸೋಡ್‌ಗಳು ಅಪ್‌ಲೋಡ್ ಆಗುವುದು ನಿಂತುಹೋಗುತ್ತದೆ. 

  1. YouTube Studio ದಲ್ಲಿ, ಕಂಟೆಂಟ್ ಮತ್ತು ನಂತರ ಪಾಡ್‌ಕಾಸ್ಟ್‌ಗಳು ಎಂಬಲ್ಲಿಗೆ ಹೋಗಿ.
  2. ನೀವು ಎಡಿಟ್ ಮಾಡಲು ಬಯಸುವ ಪಾಡ್‌ಕಾಸ್ಟ್ ಮೇಲೆ ಹೋವರ್ ಮಾಡಿ ಮತ್ತು ವಿವರಗಳು ಎಡಿಟ್ ಸೆಟ್ಟಿಂಗ್, ಪೆನ್ಸಿಲ್ ಐಕಾನ್ ಎಂಬುದನ್ನು ಆಯ್ಕೆಮಾಡಿ.
  3. ಪಾಡ್‌ಕಾಸ್ಟ್ ವಿವರಗಳ ಪುಟದಿಂದ, ನಿಮ್ಮ RSS ಫೀಡ್ ಲಿಂಕ್ ಅನ್ನು ಹುಡುಕಿ ಮತ್ತು ಡಿಸ್‌ಕನೆಕ್ಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  4. ನಿಮ್ಮ ಚಾನಲ್‌ನಿಂದ ನೀವು RSS ಫೀಡ್ ಅನ್ನು ಡಿಸ್‌ಕನೆಕ್ಟ್ ಮಾಡಲು ಬಯಸುತ್ತೀರಿ ಎಂಬುದನ್ನು ದೃಢೀಕರಿಸಿ.

ಎಪಿಸೋಡ್ ಒಂದನ್ನು ಮರು-ಅಪ್‌ಲೋಡ್ ಮಾಡಿ

ನಿಮ್ಮ RSS ಫೀಡ್ ಮೂಲಕ ನೀವು ಆಡಿಯೊ ಫೈಲ್ ಒಂದನ್ನು ಅಪ್‌ಡೇಟ್ ಮಾಡಲು ಬಯಸಿದರೆ, ನಿಮ್ಮ ವೀಡಿಯೊವನ್ನು ಮರು-ಅಪ್‌ಲೋಡ್ ಮಾಡಲು ಕೆಳಗಿನ ಹಂತಗಳನ್ನು ಅನುಸರಿಸಿ.

  1. YouTube Studio ದಲ್ಲಿ, ಕಂಟೆಂಟ್ ಮತ್ತು ನಂತರ ಪಾಡ್‌ಕಾಸ್ಟ್‌ಗಳು ಎಂಬಲ್ಲಿಗೆ ಹೋಗಿ.
  2. ನೀವು ಎಡಿಟ್ ಮಾಡಲು ಬಯಸುವ ಪಾಡ್‌ಕ್ಯಾಸ್ಟ್‌ನ ಮೇಲೆ ಹೋವರ್ ಮಾಡಿ ಮತ್ತು ವೀಡಿಯೊಗಳು ಎಂಬುದನ್ನು ಆಯ್ಕೆಮಾಡಿ.
  3. ನೀವು ಪುನಃ ಇಂಜೆಸ್ಟ್ ಮಾಡಲು ಬಯಸುವ ವೀಡಿಯೊದ ಮೇಲೆ ಹೋವರ್ ಮಾಡಿ ಮತ್ತು ಮೆನುವನ್ನು ಕ್ಲಿಕ್ ಮಾಡಿ.
  4. RSS ಫೀಡ್‌ನಿಂದ ಮರು ಅಪ್‌ಲೋಡ್ ಮಾಡಿ ಎಂಬುದನ್ನು ಆಯ್ಕೆಮಾಡಿ. 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12813040184971642453
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false