YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವಕ್ಕಾಗಿ ಪೋಷಕ ನಿಯಂತ್ರಣಗಳು ಮತ್ತು ಸೆಟ್ಟಿಂಗ್‌ಗಳು

ತಮ್ಮ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು (ಅಥವಾ ತಮ್ಮ ದೇಶ ಅಥವಾ ಪ್ರದೇಶದಲ್ಲಿರುವ ಸೂಕ್ತ ವಯಸ್ಸು) YouTube ಅನ್ನು ಎಕ್ಸ್‌ಪ್ಲೋರ್ ಮಾಡಲು ಸಿದ್ಧರಾಗಿದ್ದಾರೆ ಎಂದು ನಿರ್ಧರಿಸುವ ಪೋಷಕರು ಮೇಲ್ವಿಚಾರಣೆ ಮಾಡಿದ ಖಾತೆಯನ್ನು ಸೆಟಪ್ ಮಾಡಬಹುದು. ಮೇಲ್ವಿಚಾರಣೆ ಮಾಡಿದ ಅನುಭವದ ಮೂಲಕ ನಿಮ್ಮ ಮಗುವಿನ ವೀಕ್ಷಣೆಯ ಪ್ರಯಾಣಕ್ಕೆ ಮಾರ್ಗದರ್ಶನ ನೀಡಲು ನಿಮಗೆ ಹಲವಾರು ನಿಯಂತ್ರಣಗಳು ಮತ್ತು ಸೆಟ್ಟಿಂಗ್‌ಗಳು ಲಭ್ಯವಿವೆ.

ಗಮನಿಸಿ: YouTube Kids ಗೆ ಸಂಬಂಧಿಸಿದ ಪೋಷಕ ನಿಯಂತ್ರಣಗಳು ಮತ್ತು ಸೆಟ್ಟಿಂಗ್‌ಗಳ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ನಮ್ಮ ಸಹಾಯ ಕೇಂದ್ರದಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ. 

ಪೋಷಕ ನಿಯಂತ್ರಣಗಳು ಮತ್ತು ಸೆಟ್ಟಿಂಗ್‌ಗಳನ್ನು ನಿರ್ವಹಿಸಿ

ನಿಮ್ಮ ಮಗುವಿಗೆ ನೀವು Google ಖಾತೆಯನ್ನು ಸೆಟಪ್ ಮಾಡಿದಾಗ, ಮೇಲ್ವಿಚಾರಣೆ ಮಾಡಿದ YouTube ಅನುಭವಕ್ಕಾಗಿ ನೀವು ಇದರ ಮೂಲಕ ಪೋಷಕ ನಿಯಂತ್ರಣಗಳನ್ನು ಸೆಟಪ್ ಮಾಡಬಹುದು:

  • YouTube: ನಿಮ್ಮ ಲಿಂಕ್ ಮಾಡಲಾದ ಪೋಷಕರ ಖಾತೆಯ YouTube ಸೆಟ್ಟಿಂಗ್‌ಗಳಲ್ಲಿ ಪೋಷಕ ಸೆಟ್ಟಿಂಗ್‌ಗಳ ಅಡಿಯಲ್ಲಿ ಮಾಡಬಹುದು
  • Family Link: Family Link ಆ್ಯಪ್‌ನಲ್ಲಿನ “YouTube ಸೆಟ್ಟಿಂಗ್‌ಗಳು” ಎಂಬುದರ ಅಡಿಯಲ್ಲಿ ಮಾಡಬಹುದು

ನಿಮ್ಮ ಲಿಂಕ್ ಮಾಡಲಾದ ಪೋಷಕರ ಖಾತೆಯ YouTube ಸೆಟ್ಟಿಂಗ್‌ಗಳನ್ನು ಬಳಸಿ

ನಿಮ್ಮ YouTube ಸೆಟ್ಟಿಂಗ್‌ಗಳಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವಗಳಿಗೆ ಸಂಬಂಧಿಸಿದ ಪೋಷಕ ನಿಯಂತ್ರಣಗಳು ಮತ್ತು ಸೆಟ್ಟಿಂಗ್‌ಗಳನ್ನು ವೀಕ್ಷಿಸಲು:

  1. ನಿಮ್ಮ ಲಿಂಕ್ ಮಾಡಲಾದ ಪೋಷಕರ ಖಾತೆಯ ಮೂಲಕ YouTube ಗೆ ಸೈನ್ ಇನ್ ಮಾಡಿ.
  2. ನಿಮ್ಮ ಪ್ರೊಫೈಲ್ ಚಿತ್ರಕ್ಕೆ ಹೋಗಿ.
  3. ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆ ಮಾಡಿ.
  4. ಪೋಷಕ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆಮಾಡಿ.
    1. ನೀವು ಕಂಪ್ಯೂಟರ್ ಅನ್ನು ಬಳಸುತ್ತಿದ್ದರೆ, “ಪೋಷಕ ಸೆಟ್ಟಿಂಗ್‌ಗಳು” ಎಂಬುದರ ಪಕ್ಕದಲ್ಲಿರುವ ನಿಮ್ಮ ಮಕ್ಕಳಿಗೆ ಸಂಬಂಧಿಸಿದ ಸೆಟ್ಟಿಂಗ್‌ಗಳನ್ನು ನಿರ್ವಹಿಸಿ, ಎಂಬುದನ್ನು ಆಯ್ಕೆಮಾಡಿ.

Family Link ಆ್ಯಪ್ ಬಳಸಿ

Family Link ನಿಂದ YouTube Kids ಪ್ರೊಫೈಲ್‌ಗಳು ಅಥವಾ ಮೇಲ್ವಿಚಾರಣೆ ಮಾಡಿದ YouTube ಅನುಭವಗಳಿಗಾಗಿ ಪೋಷಕ ನಿಯಂತ್ರಣಗಳು ಮತ್ತು ಸೆಟ್ಟಿಂಗ್‌ಗಳನ್ನು ವೀಕ್ಷಿಸಲು:

  1. ನಿಮ್ಮ ಸಾಧನದಲ್ಲಿ, Family Link ಆ್ಯಪ್ Family Link ಅನ್ನು ತೆರೆಯಿರಿ.
  2. ನಿಮ್ಮ ಮಗುವನ್ನು ಆಯ್ಕೆಮಾಡಿ.
  3. ನಿಯಂತ್ರಣಗಳು ನಂತರ ಕಂಟೆಂಟ್ ನಿರ್ಬಂಧಗಳು ನಂತರ YouTube ಎಂಬುದನ್ನು ಟ್ಯಾಪ್ ಮಾಡಿ.
  4. "YouTube ಸೆಟ್ಟಿಂಗ್‌ಗಳು" ಎಂಬುದರ ಅಡಿಯಲ್ಲಿ, YouTube ಸೆಟ್ಟಿಂಗ್‌ಗಳಲ್ಲಿ ನಿಮ್ಮ ಮಗುವಿನ ಮೇಲ್ವಿಚಾರಣೆ ಮಾಡಿದ ಅನುಭವವನ್ನು ಬದಲಾಯಿಸಿ.

ನಿರ್ದಿಷ್ಟ ಪೋಷಕ ನಿಯಂತ್ರಣಗಳು ಮತ್ತು ಸೆಟ್ಟಿಂಗ್‌ಗಳನ್ನು ಬದಲಾಯಿಸಿ

ನಿರ್ದಿಷ್ಟ ಪೋಷಕ ನಿಯಂತ್ರಣಗಳು ಮತ್ತು ಸೆಟ್ಟಿಂಗ್‌ಗಳನ್ನು ಸರಿಹೊಂದಿಸುವ ಮೂಲಕ ಮೇಲ್ವಿಚಾರಣೆ ಮಾಡಿದ YouTube ಅನುಭವವನ್ನು ನಿಮ್ಮ ಮಗುವಿಗೆ ಸೂಕ್ತವಾಗುವಂತೆ ನೀವು ಸರಿಹೊಂದಿಸಬಹುದು. ಈ ನಿಯಂತ್ರಣಗಳು ಮತ್ತು ಸೆಟ್ಟಿಂಗ್‌ಗಳು ಈ ಕೆಳಗಿನವುಗಳನ್ನು ಮಾಡಲು ನಿಮಗೆ ಅನುಮತಿಸುತ್ತವೆ:

ಕಂಟೆಂಟ್ ನಿರ್ಬಂಧಿಸಿ

ನಿಮ್ಮ ಮಗು ವೀಕ್ಷಿಸುವುದು ಬೇಡ ಎಂದು ನೀವು ಬಯಸುವ ನಿರ್ದಿಷ್ಟ ಚಾನಲ್‌ಗಳನ್ನು ನಿರ್ಬಂಧಿಸಲು ನಿಮ್ಮ ಲಿಂಕ್ ಮಾಡಲಾದ ಪೋಷಕರ ಖಾತೆಯ ಮೂಲಕ ನೀವು YouTube ಗೆ ಸೈನ್ ಇನ್ ಮಾಡಬಹುದು.

ನಿಮ್ಮ ಮಗುವಿನ ಕಂಟೆಂಟ್ ಮಟ್ಟದ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು 
YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವಕ್ಕಾಗಿ ಕಂಟೆಂಟ್ ಅನ್ನು ಹೇಗೆ ಆಯ್ಕೆಮಾಡಲಾಗುತ್ತದೆ ಎಂಬುದನ್ನು ಪೋಷಕರು ಆಯ್ಕೆಮಾಡಬಹುದು.

YouTube ನಲ್ಲಿ ನಿಮ್ಮ ಮಗುವಿನ ಕಂಟೆಂಟ್ ಮಟ್ಟದ ಸೆಟ್ಟಿಂಗ್ ಅನ್ನು ಬದಲಾಯಿಸಿ:

  1. ನಿಮ್ಮ ಲಿಂಕ್ ಮಾಡಲಾದ ಪೋಷಕರ ಖಾತೆಯ ಮೂಲಕ YouTube ಗೆ ಸೈನ್ ಇನ್ ಮಾಡಿ.
  2. ನಿಮ್ಮ ಪ್ರೊಫೈಲ್ ಚಿತ್ರಕ್ಕೆ ಹೋಗಿ.
  3. ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆ ಮಾಡಿ.
  4. ಪೋಷಕ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆಮಾಡಿ.
  5. ನಿಮ್ಮ ಮಗುವಿನ ಪ್ರೊಫೈಲ್ ಅಥವಾ ಖಾತೆಯನ್ನು ಆಯ್ಕೆಮಾಡಿ.
  6. YouTube ನಲ್ಲಿ ಅವರ ಮೇಲ್ವಿಚಾರಣೆ ಮಾಡಿದ ಅನುಭವಕ್ಕಾಗಿ ನೀವು ಕಂಟೆಂಟ್ ಸೆಟ್ಟಿಂಗ್ ಅನ್ನು ಬದಲಾಯಿಸಲು ಬಯಸಿದರೆ:
    • YouTube ಸೆಟ್ಟಿಂಗ್‌ಗಳ ಅಡಿಯಲ್ಲಿ, “ಕಂಟೆಂಟ್ ಸೆಟ್ಟಿಂಗ್‌ಗಳು” ಪಕ್ಕದಲ್ಲಿರುವ ಎಡಿಟ್ ಎಂಬುದನ್ನು ಆಯ್ಕೆಮಾಡಿ.

Family Link ಮೂಲಕ ನಿಮ್ಮ ಮಗುವಿನ Google ಖಾತೆಯನ್ನು ನೀವು ನಿರ್ವಹಿಸಿದರೆ, Family Link ಆ್ಯಪ್‌ನಿಂದಲೂ ನೀವು ಅವರ ಕಂಟೆಂಟ್ ಮಟ್ಟದ ಸೆಟ್ಟಿಂಗ್ ಅನ್ನು ಬದಲಾಯಿಸಬಹುದು:

  1. ನಿಮ್ಮ ಸಾಧನದಲ್ಲಿ, Family Link ಆ್ಯಪ್ Family Link ಅನ್ನು ತೆರೆಯಿರಿ.
  2. ನಿಮ್ಮ ಮಗುವನ್ನು ಆಯ್ಕೆಮಾಡಿ.
  3. ನಿಯಂತ್ರಣಗಳು ನಂತರ ಕಂಟೆಂಟ್ ನಿರ್ಬಂಧಗಳು ನಂತರ YouTube ಎಂಬುದನ್ನು ಟ್ಯಾಪ್ ಮಾಡಿ.
  4. “YouTube ಸೆಟ್ಟಿಂಗ್‌ಗಳು” ಅಡಿಯಲ್ಲಿ, YouTube ನಲ್ಲಿ ನಿಮ್ಮ ಮಗುವಿನ ಮೇಲ್ವಿಚಾರಣೆ ಮಾಡಿದ ಅನುಭವಕ್ಕಾಗಿ ಅವರ ಕಂಟೆಂಟ್ ಮಟ್ಟದ ಸೆಟ್ಟಿಂಗ್ ಅನ್ನು ಬದಲಾಯಿಸಿ.
ಗಮನಿಸಿ: ನೀವು ಕಂಟೆಂಟ್ ಸೆಟ್ಟಿಂಗ್‌ನ ಹೆಸರನ್ನು ಕ್ಲಿಕ್ ಮಾಡಿದಾಗ ಅಥವಾ ಟ್ಯಾಪ್ ಮಾಡಿದಾಗ, ಪ್ರತಿಯೊಂದು ಕಂಟೆಂಟ್ ಸೆಟ್ಟಿಂಗ್‌ನಲ್ಲಿ ಲಭ್ಯವಿರುವ ಕಂಟೆಂಟ್‌ನ ಪ್ರಿವ್ಯೂ ನಿಮಗೆ ಕಾಣಿಸುತ್ತದೆ. ನೀವು ಈ ಸೆಟ್ಟಿಂಗ್‌ಗಳನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು.
ನಿಮ್ಮ ಮಗುವಿನ ವೀಕ್ಷಣೆ ಇತಿಹಾಸವನ್ನು ಪರಿಶೀಲಿಸುವುದು

ನಿಮ್ಮ ಮಗುವಿನ ಸಾಧನದಲ್ಲಿ ಅವರ ಮೇಲ್ವಿಚಾರಣೆ ಮಾಡಿದ ಖಾತೆಗೆ ಸಂಬಂಧಿಸಿದ ನಿಮ್ಮ ಮಗುವಿನ ವೀಕ್ಷಣೆ ಇತಿಹಾಸವನ್ನು ನೀವು ಪರಿಶೀಲಿಸಬಹುದು:

  1. ನನ್ನ ಚಟುವಟಿಕೆ ಪುಟಕ್ಕೆ ಹೋಗಿ.
  2. YouTube ಇತಿಹಾಸ ಎಂಬುದನ್ನು ಆಯ್ಕೆಮಾಡಿ.
  3. ಇತಿಹಾಸವನ್ನು ನಿರ್ವಹಿಸಿ ಎಂಬುದನ್ನು ಆಯ್ಕೆಮಾಡಿ.
  4. ವೀಕ್ಷಣೆ ಇತಿಹಾಸವನ್ನು ಪರಿಶೀಲಿಸಲು ಸ್ಕ್ರಾಲ್ ಮಾಡಿ.
ಇತಿಹಾಸ ತೆರವುಗೊಳಿಸಿ

YouTube ನಿಂದ ಅವರ ಲಿಂಕ್ ಮಾಡಲಾದ ಎಲ್ಲಾ ಸಾಧನಗಳಾದ್ಯಂತ ನಿಮ್ಮ ಮಗುವಿನ ಖಾತೆಗಾಗಿ ವೀಕ್ಷಣೆ ಮತ್ತು ಹುಡುಕಾಟ ಇತಿಹಾಸವನ್ನು ನೀವು ತೆರವುಗೊಳಿಸಬಹುದು:

  1. ನಿಮ್ಮ ಲಿಂಕ್ ಮಾಡಲಾದ ಪೋಷಕರ ಖಾತೆಯ ಮೂಲಕ YouTube ಗೆ ಸೈನ್ ಇನ್ ಮಾಡಿ.
  2. ನಿಮ್ಮ ಪ್ರೊಫೈಲ್ ಚಿತ್ರಕ್ಕೆ ಹೋಗಿ.
  3. ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆ ಮಾಡಿ.
  4. ಪೋಷಕ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆಮಾಡಿ.
  5. ನಿಮ್ಮ ಮಗುವಿನ ಪ್ರೊಫೈಲ್ ಅಥವಾ ಖಾತೆಯನ್ನು ಆಯ್ಕೆಮಾಡಿ.
  6. ಇತಿಹಾಸ ತೆರವುಗೊಳಿಸಿ ಆಯ್ಕೆಮಾಡಿ.
  7. ನಿಮ್ಮ ಬದಲಾವಣೆಗಳನ್ನು ಸೇವ್ ಮಾಡಲು, ತೆರವುಗೊಳಿಸಿ ಎಂಬುದನ್ನು ಆಯ್ಕೆಮಾಡಿ.
ಆಟೋಪ್ಲೇ ಅನ್ನು ನಿಷ್ಕ್ರಿಯಗೊಳಿಸಿ

ಆಟೋಪ್ಲೇ ಅನ್ನು ನಿಷ್ಕ್ರಿಯಗೊಳಿಸಿ ಎಂಬುದನ್ನು ಆಯ್ಕೆಮಾಡುವ ಮೂಲಕ ನಿಮ್ಮ ಮಗುವಿಗಾಗಿ ನೀವು ಆಟೋಪ್ಲೇ ಅನ್ನು ಆಫ್ ಮಾಡಬಹುದು. ಈ ಸೆಟ್ಟಿಂಗ್ ಆನ್ ಆಗಿದ್ದಾಗ, ಆಟೋಪ್ಲೇ ಅನ್ನು ಆನ್ ಮಾಡಲು ನಿಮ್ಮ ಮಗುವಿಗೆ ಸಾಧ್ಯವಾಗುವುದಿಲ್ಲ.

YouTube ನಲ್ಲಿ ನಿಮ್ಮ ಮಗುವಿಗಾಗಿ ಆಟೋಪ್ಲೇ ಅನ್ನು ನಿಷ್ಕ್ರಿಯಗೊಳಿಸಲು:

  1. ನಿಮ್ಮ ಲಿಂಕ್ ಮಾಡಲಾದ ಪೋಷಕರ ಖಾತೆಯ ಮೂಲಕ YouTube ಗೆ ಸೈನ್ ಇನ್ ಮಾಡಿ.
  2. ನಿಮ್ಮ ಪ್ರೊಫೈಲ್ ಚಿತ್ರಕ್ಕೆ ಹೋಗಿ.
  3. ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆ ಮಾಡಿ.
  4. ಪೋಷಕ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆಮಾಡಿ.
  5. ನಿಮ್ಮ ಮಗುವಿನ ಪ್ರೊಫೈಲ್ ಅಥವಾ ಖಾತೆಯನ್ನು ಆಯ್ಕೆಮಾಡಿ.
  6. ಆಟೋಪ್ಲೇ ಅನ್ನು ನಿಷ್ಕ್ರಿಯಗೊಳಿಸಿ ಎಂಬುದನ್ನು ಆನ್ ಎಂಬುದಕ್ಕೆ ಬದಲಿಸಿ.
ವೀಕ್ಷಣೆ ಇತಿಹಾಸ ವಿರಾಮಗೊಳಿಸಿ
ಇತರ ವೀಡಿಯೊಗಳನ್ನು ಶಿಫಾರಸು ಮಾಡಲು ಹೊಸ ವೀಡಿಯೊ ವೀಕ್ಷಣೆಗಳನ್ನು ಸಿಗ್ನಲ್‌ಗಳಾಗಿ ಬಳಸುವುದನ್ನು ನೀವು ನಿಲ್ಲಿಸಬಹುದು.

YouTube ನಲ್ಲಿ ನಿಮ್ಮ ಮಗುವಿನ ವೀಕ್ಷಣೆ ಇತಿಹಾಸವನ್ನು ವಿರಾಮಗೊಳಿಸಲು:

  1. ನಿಮ್ಮ ಲಿಂಕ್ ಮಾಡಲಾದ ಪೋಷಕರ ಖಾತೆಯ ಮೂಲಕ YouTube ಗೆ ಸೈನ್ ಇನ್ ಮಾಡಿ.
  2. ನಿಮ್ಮ ಪ್ರೊಫೈಲ್ ಚಿತ್ರಕ್ಕೆ ಹೋಗಿ.
  3. ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆ ಮಾಡಿ.
  4. ಪೋಷಕ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆಮಾಡಿ.
  5. ನಿಮ್ಮ ಮಗುವಿನ ಪ್ರೊಫೈಲ್ ಅಥವಾ ಖಾತೆಯನ್ನು ಆಯ್ಕೆಮಾಡಿ.
  6. ವೀಕ್ಷಣೆ ಇತಿಹಾಸವನ್ನು ವಿರಾಮಗೊಳಿಸಿ ಎಂಬುದನ್ನು ಆನ್ ಎಂಬುದಕ್ಕೆ ಬದಲಿಸಿ.
ಹುಡುಕಾಟದ ಇತಿಹಾಸವನ್ನು ವಿರಾಮಗೊಳಿಸಿ
ಇತರ ವೀಡಿಯೊಗಳನ್ನು ಶಿಫಾರಸು ಮಾಡಲು ಹೊಸ ಹುಡುಕಾಟ ಪದಗಳನ್ನು ಸಿಗ್ನಲ್‌ಗಳಾಗಿ ಬಳಸುವುದನ್ನು ನೀವು ನಿಲ್ಲಿಸಬಹುದು. 

YouTube ನಲ್ಲಿ ನಿಮ್ಮ ಮಗುವಿನ ಹುಡುಕಾಟದ ಇತಿಹಾಸವನ್ನು ವಿರಾಮಗೊಳಿಸಲು:

  1. ನಿಮ್ಮ ಲಿಂಕ್ ಮಾಡಲಾದ ಪೋಷಕರ ಖಾತೆಯ ಮೂಲಕ YouTube ಗೆ ಸೈನ್ ಇನ್ ಮಾಡಿ.
  2. ನಿಮ್ಮ ಪ್ರೊಫೈಲ್ ಚಿತ್ರಕ್ಕೆ ಹೋಗಿ.
  3. ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆ ಮಾಡಿ.
  4. ಪೋಷಕ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆಮಾಡಿ.
  5. ನಿಮ್ಮ ಮಗುವಿನ ಪ್ರೊಫೈಲ್ ಅಥವಾ ಖಾತೆಯನ್ನು ಆಯ್ಕೆಮಾಡಿ.
  6. ಹುಡುಕಾಟದ ಇತಿಹಾಸವನ್ನು ವಿರಾಮಗೊಳಿಸಿ ಎಂಬುದನ್ನು ಆನ್ ಎಂಬುದಕ್ಕೆ ಬದಲಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13790012624882544403
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false