ನಿಮ್ಮ ಚಾನಲ್ಗೆ ನಿಮ್ಮ ಸರ್ವನಾಮಗಳನ್ನು ನೀವು ಸೇರಿಸಬಹುದು, ಇದರಿಂದ ಅವುಗಳು ನಿಮ್ಮ ಚಾನಲ್ನ ಪುಟದಲ್ಲಿ ಗೋಚರಿಸುತ್ತವೆ. ನಿಮ್ಮ ಸರ್ವನಾಮಗಳನ್ನು ಎಲ್ಲರಿಗೂ ಪ್ರದರ್ಶಿಸಬೇಕೆ ಅಥವಾ ಅವುಗಳನ್ನು ನಿಮ್ಮ ಸಬ್ಸ್ಕ್ರೈಬರ್ಗಳಿಗೆ ಮಾತ್ರ ತೋರಿಸಬೇಕೆ ಎಂಬುದನ್ನು ನೀವು ಆಯ್ಕೆಮಾಡಬಹುದು.
ಸರ್ವನಾಮಗಳು, ವೈಯಕ್ತಿಕ ಗುರುತು ಮತ್ತು ಅಭಿವ್ಯಕ್ತಿಯ ನಿರ್ಣಾಯಕ ಭಾಗವಾಗಿವೆ. ಕೆಲವು ಅಧಿಕಾರ ಕ್ಷೇತ್ರಗಳು ಲಿಂಗ ಅಭಿವ್ಯಕ್ತಿಗೆ ಸಂಬಂಧಿಸಿದ ಕಾನೂನುಗಳನ್ನು ಹೊಂದಿವೆ. YouTube ನಲ್ಲಿ ಈ ಆಯ್ಕೆಯ ಸಾರ್ವಜನಿಕ ಫೀಚರ್ ಅನ್ನು ಬಳಸುವಾಗ ನಿಮ್ಮ ಸ್ಥಳೀಯ ಕಾನೂನುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
ಸರ್ವನಾಮಗಳು ನಿಮ್ಮ ಚಾನಲ್ ಪುಟದಲ್ಲಿ ಲಭ್ಯವಿಲ್ಲದಿದ್ದರೆ, ಈ ಫೀಚರ್ ಅನ್ನು ಇನ್ನಷ್ಟು ದೇಶಗಳು/ಪ್ರದೇಶಗಳು ಮತ್ತು ಭಾಷೆಗಳಲ್ಲಿ ವಿಸ್ತರಿಸಲು ನಾವು ಕೆಲಸ ಮಾಡುತ್ತಿದ್ದೇವೆ.
ಗಮನಿಸಿ: ಸರ್ವನಾಮಗಳ ಫೀಚರ್, ಕಾರ್ಯಸ್ಥಳ ಅಥವಾ ಮೇಲ್ವಿಚಾರಣೆಯ ಖಾತೆಗಳಿಗಾಗಿ ಲಭ್ಯವಿಲ್ಲ.
ನಿಮ್ಮ ಸರ್ವನಾಮಗಳನ್ನು ಸೇರಿಸಲು ಅಥವಾ ಎಡಿಟ್ ಮಾಡಲು:
- YouTube Studio ಗೆ ಸೈನ್-ಇನ್ ಮಾಡಿ.
- ಎಡಭಾಗದ ಮೆನುವಿನಿಂದ, ಕಸ್ಟಮೈಸೇಶನ್
ಸಾಮಾನ್ಯ ಮಾಹಿತಿ
ಸರ್ವನಾಮಗಳನ್ನು ಸೇರಿಸಿ
ಎಂಬುದನ್ನು ಕ್ಲಿಕ್ ಮಾಡಿ.
- ನಿಮ್ಮ ಸರ್ವನಾಮಗಳನ್ನು ನಮೂದಿಸಲು ಪ್ರಾರಂಭಿಸಿ ಮತ್ತು ನಿಮಗೆ ಸೂಕ್ತವಾದವುಗಳನ್ನು ಆಯ್ಕೆಮಾಡಿ. ನೀವು ಗರಿಷ್ಠ ನಾಲ್ಕು ಸರ್ವನಾಮಗಳನ್ನು ಸೇರಿಸಬಹುದು.
- ನಿಮ್ಮ ಸರ್ವನಾಮಗಳಲ್ಲಿ ಒಂದನ್ನು ತೆಗೆದುಹಾಕಲು, ಅದರ ಪಕ್ಕದಲ್ಲಿರುವ
ಅನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಆಯ್ಕೆಗಳನ್ನು ನೀವು ಎಡಿಟ್ ಮಾಡಬಹುದು.
- ನಿಮ್ಮ ಸರ್ವನಾಮಗಳಲ್ಲಿ ಒಂದನ್ನು ತೆಗೆದುಹಾಕಲು, ಅದರ ಪಕ್ಕದಲ್ಲಿರುವ
- ನಿಮ್ಮ ಸರ್ವನಾಮಗಳನ್ನು ಯಾರು ವೀಕ್ಷಿಸಬಹುದು ಎಂಬುದನ್ನು ಆಯ್ಕೆ ಮಾಡಿ:
- ಎಲ್ಲರಿಗೂ ಗೋಚರಿಸಲಿ, ಅಥವಾ
- ನನ್ನ ಸಬ್ಸ್ಕ್ರೈಬರ್ಗಳಿಗೆ ಮಾತ್ರ ಗೋಚರಿಸಲಿ
- ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.