ನಿಮ್ಮ ಚಾನಲ್‌ಗಾಗಿ ಸರ್ವನಾಮಗಳನ್ನು ಸೇರಿಸಿ ಅಥವಾ ಎಡಿಟ್ ಮಾಡಿ

ನಿಮ್ಮ ಚಾನಲ್‌ಗೆ ನಿಮ್ಮ ಸರ್ವನಾಮಗಳನ್ನು ನೀವು ಸೇರಿಸಬಹುದು, ಇದರಿಂದ ಅವುಗಳು ನಿಮ್ಮ ಚಾನಲ್‌ನ ಪುಟದಲ್ಲಿ ಗೋಚರಿಸುತ್ತವೆ. ನಿಮ್ಮ ಸರ್ವನಾಮಗಳನ್ನು ಎಲ್ಲರಿಗೂ ಪ್ರದರ್ಶಿಸಬೇಕೆ ಅಥವಾ ಅವುಗಳನ್ನು ನಿಮ್ಮ ಸಬ್‌ಸ್ಕ್ರೈಬರ್‌ಗಳಿಗೆ ಮಾತ್ರ ತೋರಿಸಬೇಕೆ ಎಂಬುದನ್ನು ನೀವು ಆಯ್ಕೆಮಾಡಬಹುದು.

ಸರ್ವನಾಮಗಳು, ವೈಯಕ್ತಿಕ ಗುರುತು ಮತ್ತು ಅಭಿವ್ಯಕ್ತಿಯ ನಿರ್ಣಾಯಕ ಭಾಗವಾಗಿವೆ. ಕೆಲವು ಅಧಿಕಾರ ಕ್ಷೇತ್ರಗಳು ಲಿಂಗ ಅಭಿವ್ಯಕ್ತಿಗೆ ಸಂಬಂಧಿಸಿದ ಕಾನೂನುಗಳನ್ನು ಹೊಂದಿವೆ. YouTube ನಲ್ಲಿ ಈ ಆಯ್ಕೆಯ ಸಾರ್ವಜನಿಕ ಫೀಚರ್ ಅನ್ನು ಬಳಸುವಾಗ ನಿಮ್ಮ ಸ್ಥಳೀಯ ಕಾನೂನುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.

ಸರ್ವನಾಮಗಳು ನಿಮ್ಮ ಚಾನಲ್ ಪುಟದಲ್ಲಿ ಲಭ್ಯವಿಲ್ಲದಿದ್ದರೆ, ಈ ಫೀಚರ್ ಅನ್ನು ಇನ್ನಷ್ಟು ದೇಶಗಳು/ಪ್ರದೇಶಗಳು ಮತ್ತು ಭಾಷೆಗಳಲ್ಲಿ ವಿಸ್ತರಿಸಲು ನಾವು ಕೆಲಸ ಮಾಡುತ್ತಿದ್ದೇವೆ.

ಗಮನಿಸಿ: ಸರ್ವನಾಮಗಳ ಫೀಚರ್, ಕಾರ್ಯಸ್ಥಳ ಅಥವಾ ಮೇಲ್ವಿಚಾರಣೆಯ ಖಾತೆಗಳಿಗಾಗಿ ಲಭ್ಯವಿಲ್ಲ.

ನಿಮ್ಮ ಸರ್ವನಾಮಗಳನ್ನು ಸೇರಿಸಲು ಅಥವಾ ಎಡಿಟ್ ಮಾಡಲು:

YouTube Android ಆ್ಯಪ್

  1. ನಿಮ್ಮ ಪ್ರೊಫೈಲ್ ಚಿತ್ರ  ನಂತರ ನಿಮ್ಮ ಚಾನಲ್  ಎಂಬುದನ್ನು ಟ್ಯಾಪ್ ಮಾಡಿ.
  2. ನಿಮ್ಮ ಚಾನಲ್ ವಿವರಣೆಯ ಅಡಿಯಲ್ಲಿ, ಎಡಿಟ್ ಮಾಡಿ ಎಡಿಟ್ ಸೆಟ್ಟಿಂಗ್, ಪೆನ್ಸಿಲ್ ಐಕಾನ್ ಎಂಬುದನ್ನು ಟ್ಯಾಪ್ ಮಾಡಿ.
  3. ಸರ್ವನಾಮಗಳ ಮುಂದೆ ಇರುವ, ಎಡಿಟ್ ಮಾಡಿ ಎಡಿಟ್ ಸೆಟ್ಟಿಂಗ್, ಪೆನ್ಸಿಲ್ ಐಕಾನ್ ನಂತರ ಸರ್ವನಾಮವನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.
  4. ನಿಮ್ಮ ಸರ್ವನಾಮಗಳನ್ನು ನಮೂದಿಸಲು ಪ್ರಾರಂಭಿಸಿ ಮತ್ತು ನಿಮಗೆ ಸೂಕ್ತವಾದವುಗಳನ್ನು ಆಯ್ಕೆಮಾಡಿ. ನೀವು ಗರಿಷ್ಠ ನಾಲ್ಕು ಸರ್ವನಾಮಗಳನ್ನು ಸೇರಿಸಬಹುದು.
    1. ನಿಮ್ಮ ಸರ್ವನಾಮಗಳಲ್ಲಿ ಒಂದನ್ನು ತೆಗೆದುಹಾಕಲು, ಅದರ ಪಕ್ಕದಲ್ಲಿರುವ ಅನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ಆಯ್ಕೆಗಳನ್ನು ನೀವು ಎಡಿಟ್ ಮಾಡಬಹುದು.
  5. ನಿಮ್ಮ ಸರ್ವನಾಮಗಳನ್ನು ಯಾರು ವೀಕ್ಷಿಸಬಹುದು ಎಂಬುದನ್ನು ಆಯ್ಕೆ ಮಾಡಿ: 
    1. YouTube ನಲ್ಲಿರುವ ಎಲ್ಲರೂ, ಅಥವಾ 
    2. ನನ್ನ ಸಬ್‌ಸ್ಕ್ರೈಬರ್‌ಗಳು ಮಾತ್ರ
  6. ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7408724472197839399
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false