ಶೀರ್ಷಿಕೆಗಳನ್ನು ಬಳಸಿ ನಿಮ್ಮ ವೀಡಿಯೊಗಳನ್ನು ವರ್ಧಿಸಿ

ನಿಮ್ಮ ವೀಡಿಯೊವನ್ನು ಎಡಿಟ್ ಮಾಡಿದ ಬಳಿಕ, ಶೀರ್ಷಿಕೆಗಳನ್ನು ಸೇರಿಸುವ ಮೂಲಕ ನಿಮ್ಮ ವೀಡಿಯೊಗಳನ್ನು ವರ್ಧಿಸಿ. ಶೀರ್ಷಿಕೆಗಳ ಟೂಲ್‌ನ ಮೂಲಕ, ನಿಮ್ಮ ವೀಡಿಯೊಗಳು ನಿಮ್ಮ ವೀಕ್ಷಕರಿಗೆ ಹೆಚ್ಚು ತಲುಪುವ ಹಾಗೆ ಮಾಡಿ. ನಿಮ್ಮ ವೀಡಿಯೊಗಾಗಿ ಶೀರ್ಷಿಕೆಗಳನ್ನು ಸ್ವಯಂಚಾಲಿತವಾಗಿ ಟ್ರಾನ್ಸ್‌ಕ್ರೈಬ್ ಮಾಡುವುದು ಅಥವಾ ಎಡಿಟ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

ಗಮನಿಸಿ: YouTube Create, 60 ಸೆಕೆಂಡ್‌ಗಳಿಗಿಂತ ದೀರ್ಘವಾದ ಕ್ಲಿಪ್‌ಗಳಿಗಾಗಿ ಶೀರ್ಷಿಕೆಗಳನ್ನು ಜನರೇಟ್ ಮಾಡಲು ಸಾಧ್ಯವಿಲ್ಲ.
 
YouTube Create ಕನಿಷ್ಠ 4G RAM ಹೊಂದಿರುವ Android ಫೋನ್‍ಗಳಲ್ಲಿ ಲಭ್ಯವಿದೆ. ಭವಿಷ್ಯದಲ್ಲಿ ಈ ಆ್ಯಪ್ ಇತರ ಸಾಧನಗಳಲ್ಲಿ ಲಭ್ಯವಾಗಬಹುದು.

ನಿಮ್ಮ ವೀಡಿಯೊಗಳಲ್ಲಿ ಶೀರ್ಷಿಕೆಗಳನ್ನು ಸೇರಿಸಿ

ಒಂದು ಬಟನ್ ಅನ್ನು ಟ್ಯಾಪ್ ಮಾಡಿದಾಗ, YouTube Create ಶೀರ್ಷಿಕೆಗಳನ್ನು ಜನರೇಟ್ ಮಾಡಬಲ್ಲದು. ಒಂದು ವೀಡಿಯೊದಲ್ಲಿ ಶೀರ್ಷಿಕೆಗಳನ್ನು ಸೇರಿಸಲು,

  1. ಒಂದು ಪ್ರಾಜೆಕ್ಟ್ ಅನ್ನು ತೆರೆಯಿರಿ, ಮತ್ತು ಟೂಲ್‌ಬಾರ್‌ನ ಒಳಗೆ ಶೀರ್ಷಿಕೆಗಳು  ಎಂಬುದನ್ನು ಟ್ಯಾಪ್ ಮಾಡಿ.
  2. ನೀವು ಏನನ್ನು ಟ್ರಾನ್ಸ್‌ಕ್ರೈಬ್ ಮಾಡಲು ಬಯಸುತ್ತೀರಿ ಎಂಬುದನ್ನು ಟೂಲ್‌ಬಾರ್‌ನಿಂದ ಆಯ್ಕೆ ಮಾಡಿ:
  • ಎಲ್ಲಾ ವೀಡಿಯೊಗಳು ಎಂಬುದು ಮೂಲ ವೀಡಿಯೊ ರೆಕಾರ್ಡಿಂಗ್‌ನಲ್ಲಿ ಪತ್ತೆಯಾದ ಯಾವುದೇ ಮಾತಿಗೆ ಶೀರ್ಷಿಕೆಗಳನ್ನು ಸೇರಿಸುತ್ತದೆ
  • ವಾಯ್ಸ್‌ಓವರ್ ಎಂಬುದು ಆ್ಯಪ್‌ನಲ್ಲಿ ರೆಕಾರ್ಡ್ ಮಾಡಲಾದ ವಾಯ್ಸ್‌ಓವರ್‌ಗಳಿಗೆ ಮಾತ್ರ ಶೀರ್ಷಿಕೆಗಳನ್ನು ಸೇರಿಸುತ್ತದೆ
  1. "ಭಾಷೆ" ಮೆನುವಿನಲ್ಲಿ, ನಿಮ್ಮ ವಾಯ್ಸ್‌ಓವರ್‌ನಲ್ಲಿ ಬಳಸಿದ ಭಾಷೆಯನ್ನು ಆಯ್ಕೆ ಮಾಡಿ.
  2. ಜನರೇಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಶೀರ್ಷಿಕೆಗಳನ್ನು ಎಡಿಟ್ ಮಾಡಿ

ಶೀರ್ಷಿಕೆಯ ಟ್ರಾನ್ಸ್‌ಕ್ರಿಪ್ಶನ್‌ಗಳು ತಪ್ಪಾಗಿದ್ದರೆ, ನಿಮ್ಮ ವೀಕ್ಷಕರಿಗೆ ತೋರಿಸಲಾಗುವ ಶೀರ್ಷಿಕೆಗಳನ್ನು ಅಪ್‌ಡೇಟ್ ಮಾಡುವುದಕ್ಕಾಗಿ ಎಡಿಟಿಂಗ್ ಟೂಲ್ ಅನ್ನು ಬಳಸಿ. ಎಡಿಟಿಂಗ್ ಟೂಲ್‌ನಲ್ಲಿ ತೆರೆದಿರುವ ಪ್ರಾಜೆಕ್ಟ್‌ನಿಂದ,

  1. ನಿಮ್ಮ ವೀಡಿಯೊಗಾಗಿ ಜನರೇಟ್ ಮಾಡಲಾದ ಶೀರ್ಷಿಕೆಯ ಲೇಯರ್ ಅನ್ನು ಆಯ್ಕೆ ಮಾಡಿ.
  2. ಎಡಿಟ್ ಮಾಡಿ  ಎಂಬುದನ್ನು ಟ್ಯಾಪ್ ಮಾಡಿ.
  3. ಟ್ರಾನ್ಸ್‌ಕ್ರಿಪ್ಟ್‌ನಲ್ಲಿ ತಪ್ಪು ಪದವನ್ನು ಟ್ಯಾಪ್ ಮಾಡಿ.
  4. ಪಠ್ಯವನ್ನು ಅಪ್‍ಡೇಟ್ ಮಾಡಲು, ಟೈಪ್ ಮಾಡಿ.

ಶೀರ್ಷಿಕೆಗಳನ್ನು ಫಾರ್ಮ್ಯಾಟ್ ಮಾಡಿ

ಶೀರ್ಷಿಕೆಯ ಪಠ್ಯವನ್ನು ಫಾರ್ಮ್ಯಾಟ್ ಮಾಡುವ ಮೂಲಕ, ನಿಮ್ಮ ಶೀರ್ಷಿಕೆಗಳು ನಿಮ್ಮ ವೀಡಿಯೊದ ಥೀಮ್‌ಗೆ ಹೊಂದಾಣಿಕೆಯಾಗುವಂತೆ ನೀವು ಮಾಡಬಹುದು. ಎಡಿಟಿಂಗ್ ಟೂಲ್‌ನಲ್ಲಿ ತೆರೆದಿರುವ ಪ್ರಾಜೆಕ್ಟ್‌ನಿಂದ,

  1. ನಿಮ್ಮ ವೀಡಿಯೊದಲ್ಲಿರುವ ಶೀರ್ಷಿಕೆಯ ಲೇಯರ್ ಅನ್ನು ಆಯ್ಕೆ ಮಾಡಿ.
  2. ಶೈಲಿ  ಎಂಬುದನ್ನು ಟ್ಯಾಪ್ ಮಾಡಿ.
  3. ಗಾತ್ರ, ಫಾಂಟ್, ಬಣ್ಣ, ಹಿನ್ನೆಲೆ, ಫಾರ್ಮ್ಯಾಟ್, ಔಟ್‌ಲೈನ್ ಅಥವಾ ನೆರಳನ್ನು ಬದಲಾಯಿಸಲು ಟ್ಯಾಬ್‌ಗಳನ್ನು ಬ್ರೌಸ್ ಮಾಡಿ.
  4. ಬದಲಾವಣೆಗಳನ್ನು ಸೇವ್ ಮಾಡಲು ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14690405965454272667
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false