YouTube ನಲ್ಲಿ ಮಲ್ಟಿವ್ಯೂ ಜೊತೆಗೆ ಏಕಕಾಲಕ್ಕೆ ಸ್ಟ್ರೀಮಿಂಗ್‍ಗಳನ್ನು ವೀಕ್ಷಿಸುವುದು

ಮಲ್ಟಿವ್ಯೂ, Chromecast ಅಥವಾ Fire TV Stick ರೀತಿಯ ಸ್ಮಾರ್ಟ್ ಟಿವಿ ಅಥವಾ ಸ್ಟ್ರೀಮಿಂಗ್ ಸಾಧನದಲ್ಲಿ ಒಂದೇ ಸಮಯದಲ್ಲಿ, ಮೊದಲೇ ಆಯ್ಕೆಮಾಡಿದ ಗರಿಷ್ಠ ನಾಲ್ಕು ಲೈವ್ ಗೇಮ್ ಸ್ಟ್ರೀಮ್‍ಗಳನ್ನು ವೀಕ್ಷಿಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ.

YouTube ನಲ್ಲಿ NFL ಸಂಡೇ ಟಿಕೆಟ್ ಗೇಮ್‌ಗಳನ್ನು ವೀಕ್ಷಿಸಿ - ಯು.ಎಸ್‌ನಲ್ಲಿ ಮಾತ್ರ

ಈ ಲೇಖನದಲ್ಲಿ, ನೀವು ಮಲ್ಟಿವ್ಯೂಗಳನ್ನು ಎಲ್ಲಿ ಹುಡುಕುವುದು, ಅವುಗಳನ್ನು ಹೇಗೆ ನ್ಯಾವಿಗೇಟ್ ಮಾಡುವುದು ಹಾಗೂ ಇತ್ಯಾದಿಗಳ ಕುರಿತು ತಿಳಿದುಕೊಳ್ಳಬಹುದು.

ಮಲ್ಟಿವ್ಯೂಗಳನ್ನು ಹುಡುಕಿ

ಪ್ರೀ-ಸೆಟ್ ಮಲ್ಟಿವ್ಯೂಗಳು ಗರಿಷ್ಠ ನಾಲ್ಕು ಲೈವ್ ಗೇಮ್‍ಗಳ ಗುಂಪುಗಳಾಗಿದ್ದು, ಅವುಗಳನ್ನು ಒಂದೇ ಸ್ಟ್ರೀಮ್ ಆಗಿ ಒಟ್ಟಿಗೆ ಪ್ರದರ್ಶಿಸಲಾಗುತ್ತದೆ.

ಗೇಮ್‌ಗಳ ಆಯ್ದ ಸಂಯೋಜನೆಗಾಗಿ ಮಲ್ಟಿವ್ಯೂ ಅನ್ನು ಹುಡುಕಲು ಅತ್ಯಂತ ವೇಗದ ವಿಧಾನವೆಂದರೆ:

  1. ನೀವು ವೀಕ್ಷಿಸಲು ಬಯಸುವ ಗೇಮ್‍ಗಳಲ್ಲಿ ಒಂದನ್ನು ವೀಕ್ಷಿಸಲು ಪ್ರಾರಂಭಿಸಿ.
  2. ಮಲ್ಟಿವ್ಯೂ ಸಂಯೋಜನೆಗಳನ್ನು ನೋಡಲು ಡೌನ್ ಆ್ಯರೋ ಒತ್ತಿ.
  3. ಮೊದಲೇ ಆಯ್ಕೆಮಾಡಿದ ಆಯ್ಕೆಗಳಿಂದ ನಿಮ್ಮ ಆದ್ಯತೆಯ ಗೇಮ್‌ನ ಸಂಯೋಜನೆಯನ್ನು ಆಯ್ಕೆಮಾಡಿ.
ಸೂಚನೆ: ಕೆಲವು ಸಂದರ್ಭಗಳಲ್ಲಿ, ನೀವು ಹುಡುಕುತ್ತಿರುವ ಸಂಯೋಜನೆಯನ್ನು ಕಂಡುಕೊಳ್ಳುವುದಕ್ಕೆ ನೆರವಾಗಲು ನಿರ್ದಿಷ್ಟ ಗೇಮ್‌ಗಳನ್ನು ನೀವು ಆಯ್ಕೆಮಾಡಬಹುದು.

ನಿಮ್ಮ ಸ್ಟ್ರೀಮಿಂಗ್ ಸಾಧನ ಅಥವಾ ಸ್ಮಾರ್ಟ್ ಟಿವಿಯ YouTube ಆ್ಯಪ್‍ನಲ್ಲಿ ನೀವು ಲೈವ್ ಗೇಮ್‍ಗಳನ್ನು ವೀಕ್ಷಿಸುವಾಗ “ಶಿಫಾರಸು ಮಾಡಲಾದ ಮಲ್ಟಿವ್ಯೂಗಳು” ಅಡಿಯಲ್ಲಿರುವ ಹೋಮ್  ಟ್ಯಾಬ್‍ ಸೇರಿದಂತೆ ಮತ್ತು ಮುಂದಿನದನ್ನು ನೋಡಿ ಶಿಫಾರಸುಗಳಲ್ಲಿ ಮಲ್ಟಿವ್ಯೂಗಳು ಕಾಣಬಹುದು. ನೀವು NFL, NBA ಅಥವಾ WNBA ಚಾನಲ್‍ನಂತಹ, ಮಲ್ಟಿವ್ಯೂಗಳು ಲಭ್ಯವಿರುವ Primetime ಚಾನಲ್ ಹೋಮ್‍ಪೇಜ್‍ನಲ್ಲಿ ಸಹ ಅವುಗಳನ್ನು ಕಾಣಬಹುದು.

ಮಲ್ಟಿವ್ಯೂಗಳನ್ನು ವೀಕ್ಷಿಸುವುದು ಹಾಗೂ ನ್ಯಾವಿಗೇಟ್ ಮಾಡುವುದು

ವೀಕ್ಷಿಸಲು ಮಲ್ಟಿವ್ಯೂ ಅನ್ನು ಆರಿಸಿ, ಆಗ ಅದರಲ್ಲಿ ಒಳಗೊಂಡಿರುವ ಗೇಮ್‍ಗಳು ನಿಮ್ಮ ಸ್ಕ್ರೀನ್‍ನಲ್ಲಿ ತೆರೆದುಕೊಳ್ಳುತ್ತವೆ. ಡೀಫಾಲ್ಟ್ ಆಗಿ ಎಡಬದಿ ಅಥವಾ ಎಡಬದಿಯ ಮೇಲ್ಭಾಗದ ಸ್ಟ್ರೀಮ್ ಅನ್ನು ಹೈಲೈಟ್ ಮಾಡಲಾಗುತ್ತದೆ ಮತ್ತು ಆ ಸ್ಟ್ರೀಮ್‍ನ ಆಡಿಯೋವನ್ನು ಪ್ಲೇ ಮಾಡಲಾಗುತ್ತದೆ.

ಮಲ್ಟಿವ್ಯೂಗಳನ್ನು ನ್ಯಾವಿಗೇಟ್ ಮಾಡುವುದು ಹೇಗೆ ಎಂಬುದರ ಕುರಿತಾದ ಇನ್ನೂ ಕೆಲವು ಸಲಹೆಗಳು ಇಲ್ಲಿವೆ:

  • ಆಡಿಯೋವನ್ನು ಬದಲಾಯಿಸಲು, ಬೇರೆ ಸ್ಟ್ರೀಮ್ ಅನ್ನು ಹೈಲೈಟ್ ಮಾಡುವುದಕ್ಕಾಗಿ ನಿಮ್ಮ ರಿಮೋಟ್‌ನಲ್ಲಿ ಲಭ್ಯವಿರುವ ಡೈರೆಕ್ಷನಲ್ ಪ್ಯಾಡ್ ಅನ್ನು ಬಳಸಿ.
  • ನಿಮ್ಮ ಮಲ್ಟಿವ್ಯೂನಲ್ಲಿರುವ ಕ್ಯಾಪ್ಶನ್‌ಗಳು ಮತ್ತು ಆಡಿಯೊ ಟ್ರ್ಯಾಕ್ ಅನ್ನು ಆ್ಯಕ್ಸೆಸ್ ಮಾಡಲು, ಕ್ಯಾಪ್ಶನ್‌ಗಳು ಅಥವಾ ಆಡಿಯೊ ಟ್ರ್ಯಾಕ್ ಅನ್ನು ಟಾಗಲ್ ಮಾಡುವುದಕ್ಕಾಗಿ ಲಭ್ಯವಿರುವ ಪ್ಲೇಯರ್ ನಿಯಂತ್ರಣಗಳನ್ನು ನೀವು ತಲುಪುವವರೆಗೆ ಕೆಳಕ್ಕೆ ಒತ್ತಿರಿ.
  • ಆಯ್ಕೆಮಾಡಿದ ಸ್ಟ್ರೀಮ್ ಅನ್ನು ಪೂರ್ಣ ಸ್ಕ್ರೀನ್‍ನಲ್ಲಿ ವೀಕ್ಷಿಸಲು, ನಿಮ್ಮ ರಿಮೋಟ್‌ನಲ್ಲಿ ಆಯ್ಕೆಮಾಡಿ ಒತ್ತಿರಿ.
  • ಮಲ್ಟಿವ್ಯೂಗೆ ಹಿಂತಿರುಗಲು, ನಿಮ್ಮ ರಿಮೋಟ್‍ನಲ್ಲಿ ಹಿಂದೆ ಬಟನ್ ಒತ್ತಿರಿ.

ಮಲ್ಟಿವ್ಯೂ ಕುರಿತು ಇನ್ನಷ್ಟು ತಿಳಿಯಿರಿ

ಮಲ್ಟಿವ್ಯೂನಲ್ಲಿ ಯಾವ ಗೇಮ್‍ಗಳನ್ನು ವೀಕ್ಷಿಸಬಹುದು ಎಂದು ನಾನು ಆರಿಸಬಹುದೆ?

ಇಲ್ಲ. ಸದ್ಯಕ್ಕೆ ನಿಮ್ಮ ಮಲ್ಟಿವ್ಯೂ ಸ್ಟ್ರೀಮ್‍ಗಳನ್ನು ಕಸ್ಟಮೈಜ್ ಮಾಡಲು ಸಾಧ್ಯವಿಲ್ಲ, ಆದರೆ ನೀವು ಸ್ಟ್ರೀಮ್‌ಗಳ ವ್ಯಾಪಕ ವಿಂಗಡಣೆಯಿಂದ ಆಯ್ಕೆ ಮಾಡಬಹುದು, ಮತ್ತು ಕೆಲವು ಸಂದರ್ಭಗಳಲ್ಲಿ ನೀವು ಮೊದಲೇ-ಆಯ್ಕೆಮಾಡಿದ ಆಯ್ಕೆಗಳನ್ನು ಕಿರಿದಾಗಿಸಲು ನಿರ್ದಿಷ್ಟ ಗೇಮ್‌ಗಳನ್ನು ಆಯ್ಕೆ ಮಾಡಬಹುದು.
ಟೆಲಿವಿಷನ್‌ನ ಮೂಲಕ ಪ್ರತಿಯೊಬ್ಬರಿಗೂ ಮಲ್ಟಿವ್ಯೂ ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಬಹುತೇಕ ಸಾಧನಗಳು ಸ್ಥಳೀಯ ಮಲ್ಟಿವ್ಯೂ ಸಾಮರ್ಥ್ಯಗಳನ್ನು ಹೊಂದಿಲ್ಲದಿರುವ ಕಾರಣ, ನಾವು ನಮ್ಮ ಸರ್ವರ್‌ಗಳಲ್ಲಿ ವೀಡಿಯೊ ಫೀಡ್‌ಗಳ ಎಲ್ಲಾ ಪ್ರಕ್ರಿಯೆಗಳನ್ನು ಮಾಡಲು ಆಯ್ಕೆ ಮಾಡಿದ್ದೇವೆ. ಇದರರ್ಥ, ಮಲ್ಟಿವ್ಯೂನಲ್ಲಿ ವೀಕ್ಷಿಸಲಾದ ಪ್ರತಿಯೊಂದು ವಿಶಿಷ್ಟ ಸಂಯೋಜನೆಯು ಸೀಮಿತ ಡೇಟಾ ಕೇಂದ್ರ ಮತ್ತು ಕಂಪ್ಯೂಟೇಶನಲ್ ಮಾಹಿತಿಯ ಮೂಲಗಳನ್ನು ಬಳಸುತ್ತದೆ. ಏಕೆಂದರೆ ಪ್ರತಿಯೊಂದು ಪ್ರದೇಶವು ವಿಶಿಷ್ಟ, ಸ್ಥಳೀಯ ಕಂಟೆಂಟ್ ಅನ್ನು ಹೊಂದಿರುವ ಕಾರಣ, ಸ್ಥಳೀಯ ಫೀಡ್‌ಗಳನ್ನು ಒಳಗೊಂಡಂತೆ ನಾವು ರಚಿಸಬಹುದಾದ ಸಂಯೋಜನೆಗಳ ಸಂಖ್ಯೆಯನ್ನು ನಿರ್ಬಂಧಿಸುತ್ತೇವೆ. ನಿರೀಕ್ಷಿತ ಜನಪ್ರಿಯತೆಯ ಆಧಾರದ ಮೇಲೆ ನಾವು ಉತ್ತಮ ಸಂಯೋಜನೆಗಳನ್ನು ಆಯ್ಕೆಮಾಡಲು ಪ್ರಯತ್ನಿಸುತ್ತೇವೆ ಮತ್ತು ನಮ್ಮ ಪ್ರಕ್ರಿಯೆಗಳನ್ನು ನಾವು ಯಾವಾಗಲೂ ಸುಧಾರಿಸುತ್ತೇವೆ.

ಯಾವ ಮಲ್ಟಿವ್ಯೂ ಸಾಧನಗಳಲ್ಲಿ ಬೆಂಬಲಿತವಾಗಿದೆ?

Primetime ಚಾನಲ್‌ಗಳಿಗೆ ಬೆಂಬಲವಿರುವ ಸ್ಟ್ರೀಮಿಂಗ್ ಸಾಧನಗಳು ಮತ್ತು ಸ್ಮಾರ್ಟ್ ಟಿವಿಗಳಲ್ಲಿ ಮಲ್ಟಿವ್ಯೂ ಲಭ್ಯವಿದೆ. ಮಲ್ಟಿವ್ಯೂ, ಮೊಬೈಲ್‌ನಲ್ಲಿ YouTube ಹಾಗೂ ವೆಬ್‌ನಲ್ಲಿ ಇನ್ನೂ ಲಭ್ಯವಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11594547758102154314
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false