NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವವನ್ನು ಪಡೆಯವುದು

YouTube ನಲ್ಲಿ NFL ಸಂಡೇ ಟಿಕೆಟ್, ನಿಮ್ಮ ಪ್ರದೇಶದ ಸ್ಥಳೀಯ ಪ್ರಸಾರಗಳಲ್ಲಿ ಒಳಗೊಂಡಿರದ ಸಂಡೇ ಆಫ್ಟರ್‌ನೂನ್ ನಿಯಮಿತ ಸೀಸನ್ ನ್ಯಾಶನಲ್ ಫುಟ್‍ಬಾಲ್ ಲೀಗ್ (NFL) ಗೇಮ್‍ಗಳನ್ನು ನಿಮಗೆ ಒದಗಿಸುತ್ತದೆ. ಗೇಮ್‍ಗಳು ಭಾನುವಾರ, ಸೆಪ್ಟೆಂಬರ್ 10 ರಂದು ಪ್ರಾರಂಭವಾಗುತ್ತವೆ.

ಅರ್ಹ ವಿದ್ಯಾರ್ಥಿಗಳು YouTube Primetime ಚಾನಲ್‌ಗಳಲ್ಲಿ NFL ಸಂಡೇ ಟಿಕೆಟ್ ಅನ್ನು $199 ದರದಲ್ಲಿ ಖರೀದಿಸಬಹುದು ಮತ್ತು ಹೆಚ್ಚುವರಿ $10 ದರಕ್ಕೆ ಅದನ್ನು NFL RedZone ಜೊತೆಗೆ ಬಂಡಲ್ ಮಾಡಬಹುದು. YouTube Primetime ಚಾನಲ್‍ಗಳಲ್ಲಿ ಮಾತ್ರವೇ NFL ಸಂಡೇ ಟಿಕೆಟ್‍ ವಿದ್ಯಾರ್ಥಿ ಸದಸ್ಯತ್ವವನ್ನು ಖರೀದಿಸಬಹುದು, ಒಮ್ಮೆ ಖರೀದಿಸಿದ ನಂತರ ನೀವು YouTube ಅಥವಾ YouTube TV ಯಲ್ಲಿ ವೀಕ್ಷಿಸಬಹುದು.

YouTube ನಲ್ಲಿ NFL ಸಂಡೇ ಟಿಕೆಟ್ ಜೊತೆಗೆ, ನೀವು ನಿಯಮಿತ ಸೀಸನ್ ಸಂಡೇ ಆಫ್ಟರ್‌ನೂನ್ ಔಟ್ ಆಫ್ ಮಾರ್ಕೆಟ್ NFL ಗೇಮ್‌ಗಳನ್ನು ವೀಕ್ಷಿಸಬಹುದು. ವಿದ್ಯಾರ್ಥಿ ಸದಸ್ಯತ್ವದ ಜೊತೆಗೆ ನಿಮಗೆ ಲಭಿಸುವ ಪ್ರಯೋಜನಗಳು: 

  • ನಿಮ್ಮ ಸ್ಥಳೀಯ ಪ್ರದೇಶದಲ್ಲಿ ಲಭ್ಯವಿಲ್ಲದ ಚಾನಲ್‌ಗಳಲ್ಲಿ CBS ಮತ್ತು FOX ನಲ್ಲಿ ನಡೆಸುವ ನಿಯಮಿತ ಸೀಸನ್ ಸಂಡೇ ಆಫ್ಟರ್‌ನೂನ್ ಗೇಮ್‍ಗಳನ್ನು ವೀಕ್ಷಿಸಿ. ನೀವು ಚಿಕಾಗೋದಲ್ಲಿ ನೆಲೆಸಿರುವ ನ್ಯೂ ಇಂಗ್ಲೆಂಡ್ ಪೇಟ್ರಿಯಾಟ್ಸ್ ಅಭಿಯಾನಿಯಾಗಿದ್ದರೆ, ನಿಮ್ಮ ಸ್ಥಳೀಯ ಮಾರ್ಕೆಟ್ ನೆಟ್‌ವರ್ಕ್‌ಗಳಲ್ಲಿ ತೋರಿಸದಿರುವ ಎಲ್ಲಾ ಸಂಡೇ "ಪ್ಯಾಟ್ಸ್" ಗೇಮ್‍ಗಳನ್ನು ನೀವು ವೀಕ್ಷಿಸಬಹುದು.
  • ಪ್ರೀ-ಸೀಸನ್ ಗೇಮ್‌ಗಳು, ಪೋಸ್ಟ್ ಸೀಸನ್ ಗೇಮ್‌ಗಳು, ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರವಾಗುವ ಗೇಮ್‌ಗಳನ್ನು NFL ಸಂಡೇ ಟಿಕೆಟ್‌ನಲ್ಲಿ ಸೇರಿಸಲಾಗಿಲ್ಲ.
  • ವಿದ್ಯಾರ್ಥಿ ಸದಸ್ಯತ್ವಗಳು ಕುಂಟುಂಬ ಹಂಚಿಕೆಯನ್ನು ಒಳಗೊಂಡಿಲ್ಲ ಮತ್ತು ಸೈನ್ ಇನ್ ಮಾಡಿದ ಸಾಧನ ಮತ್ತು ಒಂದು ಏಕಕಾಲೀನ ಸ್ಟ್ರೀಮ್‌ ಅನ್ನು ಒಳಗೊಂಡಿದೆ.

ಈ ಲೇಖನದಲ್ಲಿ, ನೀವು ಅರ್ಹತೆಯ ವಿವರಗಳು, ಹೇಗೆ ಖರೀದಿಸುವುದು ಮತ್ತು ಇನ್ನಷ್ಟು ಸಂಗತಿಗಳನ್ನು ಒಳಗೊಂಡಂತೆ, NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವದ ಕುರಿತು ಇನ್ನಷ್ಟು ತಿಳಿಯಬಹುದು.

NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವಕ್ಕಾಗಿ ಅರ್ಹತೆ

NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವಕ್ಕೆ ಸೈನ್ ಅಪ್ ಮಾಡಲು, ನೀವು:

  • 18 ವರ್ಷಗಳು ಅಥವಾ ಹೆಚ್ಚಿನ ವಯಸ್ಸಾಗಿರಬೇಕು.
  • ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿ ದಾಖಲಾಗಿರಬೇಕು.
  • SheerID ಪ್ರಕಾರ ವಿದ್ಯಾರ್ಥಿಯಾಗಿ ದೃಢೀಕರಣಗೊಂಡಿರಬೇಕು. ದೃಢೀಕರಣ ಪ್ರಕ್ರಿಯೆ ಕುರಿತಾದ ಸಹಾಯಕ್ಕಾಗಿ, SheerID ಸಂಪರ್ಕಿಸಿ ಅಥವಾ ಅವರ FAQ ಗಳನ್ನು ಪರಿಶೀಲಿಸಿ.

ಅರ್ಹತೆ ಪಡೆಯಲು ನೀವು ಯು.ಎಸ್. ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿರಬೇಕಾಗಿಲ್ಲವಾದರೂ, YouTube ನಲ್ಲಿ NFL ಸಂಡೇ ಟಿಕೆಟ್ ವೀಕ್ಷಿಸಲು ಮತ್ತು ಖರೀದಿಸಲು ನೀವು ಯು.ಎಸ್‍ನಲ್ಲಿ ವಾಸವಿರಬೇಕು.

ಮುಂದಿನ ಸೀಸನ್‍ಗಳಿಗಾಗಿ NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವವನ್ನು ಖರೀದಿಸುವ ಮೊದಲು ನಿಮ್ಮ ಅರ್ಹತೆಯನ್ನು ನೀವು ಪರಿಶೀಲಿಸಬೇಕಾಗುತ್ತದೆ.

NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವವನ್ನು ಖರೀದಿಸಿ

NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವವನ್ನು ಪಡೆಯಲು ಈ ಮುಂದಿನ ಹಂತಗಳನ್ನು ಅನುಸರಿಸಿ:

  1. ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಬ್ರೌಸರ್‌ನಲ್ಲಿ, youtube.com ಗೆ ಹೋಗಿ.
  2. NFL ಚಾನಲ್ ಪುಟಕ್ಕೆ ಹೋಗಿ ನಂತರ NFL ಸಂಡೇ ಟಿಕೆಟ್ ಆಯ್ಕೆಮಾಡಿ. ನಿಮ್ಮ Google ಖಾತೆಗೆ ಸೈನ್ ಇನ್ ಮಾಡಲು ನಿಮಗೆ ಕೇಳಬಹುದು.
    ಗಮನಿಸಿ: ನೀವು ಸೈನ್ ಇನ್‍ಗೆ ಬಳಸಿದ ಇಮೇಲ್ ವಿಳಾಸವನ್ನು ನೆನಪಿನಲ್ಲಿಟ್ಟುಕೊಳ್ಳಿ, ಏಕೆಂದರೆ ನಂತರದಲ್ಲಿ ನಿಮ್ಮ ವಿದ್ಯಾರ್ಥಿ ಸ್ಥಿತಿಯನ್ನು ದೃಢೀಕರಿಸಲು ನೀವು ಅದೇ ಇಮೇಲ್ ವಿಳಾಸವನ್ನು ಬಳಸಲು ಬಯಸುತ್ತೀರಿ. ಕೆಲವು ಡೊಮೇನ್ ನಿರ್ವಾಹಕರು .edu ಖಾತೆಗಳಿಗೆ ಕೆಲವು ನಿರ್ಬಂಧಗಳನ್ನು ಹಾಕುವುದರಿಂದ, @gmail.com ನಂತಹ ವೈಯಕ್ತಿಕ ಇಮೇಲ್ ವಿಳಾಸವನ್ನು ಬಳಸಲು ನಾವು ಶಿಫಾರಸು ಮಾಡುತ್ತೇವೆ. ನಿಮ್ಮ ವಿದ್ಯಾರ್ಥಿ ಸ್ಥಿತಿಯನ್ನು ಖಚಿತಪಡಿಸಲು .edu ಖಾತೆಯ ಅಗತ್ಯವಿಲ್ಲ.
  3. NFL ಸಂಡೇ ಟಿಕೆಟ್ ಪ್ಯಾಕೇಜ್ ಆಯ್ಕೆಗಳು ಕೆಳಗಿವೆ, ವಿದ್ಯಾರ್ಥಿ ಸದಸ್ಯತ್ವದ ಮೂಲಕ ಅರ್ಹ ವಿದ್ಯಾರ್ಥಿಗಳು ಉಳಿತಾಯ ಮಾಡಬಹುದು ಅನ್ನು ಆಯ್ಕೆಮಾಡಿ.
    1. ಈಗಾಗಲೇ SheerID ಜೊತೆಗೆ ತಮ್ಮ ವಿದ್ಯಾರ್ಥಿ ಸ್ಥಿತಿಯನ್ನು ಪರಿಶೀಲಿಸಿರುವ ಅರ್ಹ ವಿದ್ಯಾರ್ಥಿಗಳು NFL ಸಂಡೇ ಟಿಕೆಟ್ ಅನ್ನು ರಿಯಾಯಿತಿ ದರದಲ್ಲಿ ನೋಡುತ್ತಾರೆ. ನಿಮ್ಮ ಖರೀದಿಯನ್ನು ಪೂರ್ಣಗೊಳಿಸಲು NFL ಸಂಡೇ ಟಿಕೆಟ್ ಜೊತೆಗೆ ನಂತರ NFL RedZone ಸೇರಿಸಬೇಕೆ ಎಂದು ಆರಿಸಿ.
    2. ತಮ್ಮ ವಿದ್ಯಾರ್ಥಿ ಸ್ಥಿತಿಯನ್ನು ಎಂದಿಗೂ ಪರಿಶೀಲಿಸದ ವಿದ್ಯಾರ್ಥಿಗಳು ಮತ್ತು ಕಳೆದ 11 ತಿಂಗಳುಗಳಲ್ಲಿ ಪರಿಶೀಲಿಸದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಸ್ಥಿತಿಯನ್ನು ತಕ್ಷಣವೇ ಪರಿಶೀಲಿಸುವ ಅಗತ್ಯವಿದೆ. ಪರಿಶೀಲನೆ ಪ್ರಾರಂಭಿಸಲು:
      1. ಮುಂದುವರಿಸಿ ಆಯ್ಕೆಮಾಡಿ.
      2. ನಿಮ್ಮ ಸಂಸ್ಥೆ ಇರುವ ದೇಶ ಅಥವಾ ಪ್ರದೇಶ ಮತ್ತು ನಿಮ್ಮ ಸಂಸ್ಥೆಯ ಹೆಸರು ಸೇರಿದಂತೆ, ನಿಮ್ಮ ಪೂರ್ಣ ಹೆಸರು, ಇಮೇಲ್, ಜನ್ಮ ದಿನಾಂಕ ಮತ್ತು ವಿದ್ಯಾರ್ಥಿಯ ಮಾಹಿತಿಯನ್ನು ನಮೂದಿಸಿ, ನಂತರ ನನ್ನ ವಿದ್ಯಾರ್ಥಿ ಸ್ಥಿತಿಯನ್ನು ಪರಿಶೀಲಿಸಿ ಆಯ್ಕೆಮಾಡಿ.
    3. ತಕ್ಷಣ ಪರಿಶೀಲಿಸಿದ ವಿದ್ಯಾರ್ಥಿಗಳು:
      1. ನೀವು SheerID ಮೂಲಕ ತಕ್ಷಣವೇ ಪರಿಶೀಲಿಸಿದರೆ, ಚೆಕ್ ಔಟ್‌ಗೆ ಮುಂದುವರಿಯುವ ಮೊದಲು ನೀವು “ಯಶಸ್ವಿಯಾಗಿದೆ!” ಸಂದೇಶವೊಂದನ್ನು ಕಾಣುವಿರಿ.
      2. ನಿಮ್ಮ ಖರೀದಿಯನ್ನು ಪೂರ್ಣಗೊಳಿಸಲು NFL ಸಂಡೇ ಟಿಕೆಟ್ ಜೊತೆಗೆ NFL RedZone ಸೇರಿಸಬೇಕೆ ಎಂದು ಆರಿಸಿ.
    4. ನೋಂದಣಿ ಪುರಾವೆ ಅಗತ್ಯವಿರುವ ವಿದ್ಯಾರ್ಥಿಗಳು:
      1.  ತಕ್ಷಣವೇ SheerID ನಿಮ್ಮ ವಿದ್ಯಾರ್ಥಿ ಸ್ಥಿತಿಯನ್ನು ಪರಿಶೀಲಿಸಲು ಸಾಧ್ಯವಾಗದಿದ್ದರೆ, ಅವರು ನಿಮಗೆ ಶಾಲೆಯ ಮುಕ್ತಾಯ ದಿನಾಂಕ, ತರಗತಿಯ ವೇಳಾಪಟ್ಟಿ ಅಥವಾ ಬೋಧನಾ ಶುಲ್ಕದ ರಸೀದಿಯ ಜೊತೆಗೆ ಶಾಲೆಯ ID ರೀತಿಯ, ನೋಂದಣಿ ಪುರಾವೆಗಳನ್ನು ತೋರಿಸಲು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಲು ವಿನಂತಿಸುತ್ತಾರೆ.
      2. ನೀವು ನಿಮ್ಮ ನೋಂದಣಿ ಪುರಾವೆಯನ್ನು ಅಪ್‍ಲೋಡ್ ಮಾಡಿದ ನಂತರ, SheerID ನಿಮ್ಮ ಸಲ್ಲಿಕೆಯನ್ನು ಪರಿಶೀಲಿಸುತ್ತದೆ. ಯು.ಎಸ್ ವಿದ್ಯಾರ್ಥಿಗಳು ತಮ್ಮ ಅರ್ಹತೆ ಕುರಿತಾದ ತಿರ್ಮಾನವನ್ನು 20 ನಿಮಿಷಗಳ ಒಳಗೆ ಇಮೇಲ್ ಮೂಲಕ ನಿರೀಕ್ಷಿಸಬಹುದು. ಯು.ಎಸ್ ಅಲ್ಲದ ಸಂಸ್ಥೆಗಳಲ್ಲಿ ನೋಂದಣಿ ಪರಿಶೀಲಿಸುವ ವಿದ್ಯಾರ್ಥಿಗಳಿಗೆ, ಇಮೇಲ್ ನೋಟಿಫಿಕೇಶನ್ 48 ಗಂಟೆಗಳವರೆಗೆ ತೆಗೆದುಕೊಳ್ಳಬಹುದು.
        1. ನಿಮ್ಮ ವಿದ್ಯಾರ್ಥಿ ಸ್ಥಿತಿಯನ್ನು ಪರಿಶೀಲಿಸುವ ಇಮೇಲ್‍ನಿಂದ, youtube.com ಗೆ ಹಿಂತಿರುಗಲು ಮುಂದುವರಿಸಿ ಆಯ್ಕೆಮಾಡಿ. ನಿಮ್ಮ ಖರೀದಿಯನ್ನು ಪೂರ್ಣಗೊಳಿಸಲು NFL ಸಂಡೇ ಟಿಕೆಟ್ ಜೊತೆಯಲ್ಲಿ ನಂತರ NFL RedZone ಅನ್ನು ಸೇರಿಸಬೇಕೆ ಎಂದು ಆರಿಸಿ.
        2. ನಿಮ್ಮ ವಿದ್ಯಾರ್ಥಿ ಸ್ಥಿತಿಯನ್ನು ಪರಿಶೀಲಿಸಲು ಸಾಧ್ಯವಾಗದಿದ್ದರೆ, SheerID ನಿಮ್ಮನ್ನು ಸಂಪರ್ಕಿಸಬಹುದು.

NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವವನ್ನು ಪಡೆಯವುದು

ನಿಮ್ಮ ಖರೀದಿಯನ್ನು ನೀವು ಪೂರ್ಣಗೊಳಿಸಿದ ಬಳಿಕ, ನಾವು ನಿಮಗೊಂದು ಇಮೇಲ್ ಸ್ವೀಕೃತಿಯನ್ನು ಕಳುಹಿಸುತ್ತೇವೆ.

ನಿಮ್ಮ ಸದಸ್ಯತ್ವದ ಕುರಿತು ವಿವರಗಳನ್ನು ವೀಕ್ಷಿಸುವುದಕ್ಕಾಗಿ ಯಾವುದೇ ಸಮಯದಲ್ಲಿ youtube.com/purchases ಎಂಬಲ್ಲಿಗೆ ಹೋಗಿ.

NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವದ ಕುರಿತು ತಿಳಿದುಕೊಳ್ಳಿ

ನಾನು ಕೂಪನ್ ಮೂಲಕ NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವವನ್ನು ಖರೀದಿಸಬಹುದೇ?

ಇಲ್ಲ. ವಿದ್ಯಾರ್ಥಿ ಸದಸ್ಯತ್ವಗಳು ಯಾವುದೇ ರಿಯಾಯಿತಿಗಳಿಗೆ ಅರ್ಹವಲ್ಲ.

ಇತರ ಸಬ್‍ಸ್ಕ್ರಿಪ್ಶನ್‍ನಂತೆ ನಾನು ಮನೆ ಅಥವಾ ಕುಟುಂಬ ಹಂಚಿಕೆಯಲ್ಲಿ ಅನಿಯಮಿತ ಸ್ಟ್ರೀಮ್‌ಗಳನ್ನು ಏಕೆ ಪಡೆಯುವುದಿಲ್ಲ?

NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವವು ಪ್ರತ್ಯೇಕ ವಿದ್ಯಾರ್ಥಿಗಳಿಗೆಂದು ಉದ್ದೇಶಿಸಲಾಗಿದೆ. ಮನೆಯಲ್ಲಿ ಅನಿಯಮಿತ ಸ್ಟ್ರೀಮ್‌ಗಳಿಗಾಗಿ ಅಥವಾ ಅದನ್ನು ನಿಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳುವ ಆಯ್ಕೆಗಾಗಿ, ನಿಮಗೆ ಸ್ಟ್ಯಾಂಡರ್ಡ್ NFL ಸಂಡೇ ಟಿಕೆಟ್ ಸದಸ್ಯತ್ವದ ಅಗತ್ಯವಿದೆ.

YouTube ಆ್ಯಪ್ ಅಥವಾ ನನ್ನ ಸೇವಾ ಪೂರೈಕೆದಾರರ ಮೂಲಕ NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವವನ್ನು ಖರೀದಿಸಲು ಏಕೆ ಸಾಧ್ಯವಿಲ್ಲ?

ವಿದ್ಯಾರ್ಥಿ ಸದಸ್ಯತ್ವಗಳನ್ನು ಪ್ರಸ್ತುತ YouTube Primetime ಚಾನಲ್‍ಗಳ ಮೂಲಕ youtube.com ನಲ್ಲಿ ಮಾತ್ರ ಬೆಂಬಲಿತವಾಗಿವೆ. ನೀವು ಮೊಬೈಲ್ ಸಾಧನವನ್ನು ಬಳಸುತ್ತಿದ್ದರೆ, ವಿದ್ಯಾರ್ಥಿ ಸದಸ್ಯತ್ವವನ್ನು ಖರೀದಿಸಲು ನಿಮ್ಮ ಮೊಬೈಲ್ ಬ್ರೌಸರ್ ಅನ್ನು ಬಳಸಬಹುದು.

YouTube ಸದಸ್ಯತ್ವದಲ್ಲಿನ ನನ್ನ NFL ಸಂಡೇ ಟಿಕೆಟ್ ಭವಿಷ್ಯದ ಸೀಸನ್‌ಗಳಿಗಾಗಿ ನವೀಕರಿಸುತ್ತದೆಯೇ?

ಇಲ್ಲ. ನಿಮ್ಮ NFL ಸಂಡೇ ಟಿಕೆಟ್ ವಿದ್ಯಾರ್ಥಿ ಸದಸ್ಯತ್ವವು ಒಂದು-ಬಾರಿ ಖರೀದಿಯಾಗಿದೆ. ಮುಂದಿನ ಸೀಸನ್‌ಗಾಗಿ ನಿಮ್ಮ ಸದಸ್ಯತ್ವವು ಸ್ವಯಂಚಾಲಿತವಾಗಿ ನವೀಕರಣಗೊಳ್ಳುವುದಿಲ್ಲ.
ನಿಮ್ಮ ಸದಸ್ಯತ್ವದ ಕುರಿತಾದ ವಿವರಗಳನ್ನು ನೋಡಲು, youtube.com/purchases ಗೆ ಹೋಗಿ.

ನಾನು YouTube ನಲ್ಲಿ NFL ಸಂಡೇ ಟಿಕೆಟ್ ಅನ್ನು ರದ್ದುಗೊಳಿಸಬಹುದೇ ಅಥವಾ ಮರುಪಾವತಿ ಪಡೆಯಬಹುದೇ?

ಇಲ್ಲ. NFL ಸಂಡೇ ಟಿಕೆಟ್‌ಗೆ ನಾವು ರದ್ದುಗೊಳಿಸುವಿಕೆಗಳು ಅಥವಾ ಮರುಪಾವತಿಗಳನ್ನು ಒದಗಿಸುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11702864775496762321
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false