ಎಲಿಮೆಂಟ್‌ಗಳನ್ನು ಅನ್ವಯಿಸುವುದು ಹಾಗೂ ಆ್ಯನಿಮೇಟ್ ಮಾಡುವುದು

ನೀವು ಪ್ರಾಜೆಕ್ಟ್ ಅನ್ನು ರಚಿಸಿದ ನಂತರ, YouTube Create ನ ಎಡಿಟಿಂಗ್ ಟೂಲ್‍ಗಳನ್ನು ಬಳಸಿಕೊಂಡು ನಿಮ್ಮ ವೀಡಿಯೊಗಳನ್ನು ವರ್ಧಿಸಿ. YouTube Create ನ ಸ್ಟಿಕ್ಕರ್‌ಗಳು, GIF ಗಳು ಮತ್ತು ಎಮೋಜಿಗಳ ಲೈಬ್ರರಿಯ ನೆರವಿನಿಂದ ನಿಮ್ಮ ಸ್ಟೋರಿಗಳಿಗೆ ಜೀವ ತುಂಬಿ.

YouTube Create ಕನಿಷ್ಠ 4G RAM ಹೊಂದಿರುವ Android ಫೋನ್‍ಗಳಲ್ಲಿ ಲಭ್ಯವಿದೆ. ಭವಿಷ್ಯದಲ್ಲಿ ಈ ಆ್ಯಪ್ ಇತರ ಸಾಧನಗಳಲ್ಲಿ ಲಭ್ಯವಾಗಬಹುದು.

ಸ್ಟಿಕ್ಕರ್‌ಗಳು, GIF ಗಳು ಮತ್ತು ಎಮೋಜಿಗಳನ್ನು ಸೇರಿಸುವುದು

  1. ತೆರೆದಿರುವ ಪ್ರಾಜೆಕ್ಟ್‌ನ ಟೂಲ್‌ಬಾರ್‌ನಲ್ಲಿರುವ ಸ್ಟಿಕ್ಕರ್  ಎಂಬುದನ್ನು ಟ್ಯಾಪ್ ಮಾಡಿ.
  2. ಎಲಿಮೆಂಟ್‌ಗಳನ್ನು ಹುಡುಕಲು ಅಥವಾ ಬ್ರೌಸ್ ಮಾಡಲು ಸ್ಟಿಕ್ಕರ್‌ಗಳು, GIF ಗಳು ಮತ್ತು ಎಮೋಜಿ ಟ್ಯಾಬ್‌ಗಳನ್ನು ಬಳಸಿ.
  3. ನಿಮ್ಮ ವೀಡಿಯೊಗೆ ಸೇರಿಸಲು ಗ್ರಾಫಿಕ್ ಅನ್ನು ಆಯ್ಕೆಮಾಡಿ.
ಗಾತ್ರವನ್ನು ಬದಲಾಯಿಸಲು ನೀವು ಚಿತ್ರ ಅಥವಾ .gif ಮೇಲೆ ಪಿಂಚ್ ಮಾಡಬಹುದು ಅಥವಾ ಝೂಮ್ ಇನ್ ಮಾಡಬಹುದು. ಚಿತ್ರ ಅಥವಾ .gif ಅನ್ನು ಫ್ರೇಮ್ ಒಳಗಿನ ನಿಮ್ಮಿಷ್ಟದ ಸ್ಥಳಕ್ಕೆ ಸರಿಸಲು ಅದನ್ನು ಟ್ಯಾಪ್ ಮಾಡಿ, ಡ್ರ್ಯಾಗ್ ಮಾಡಿ.

ಕೃತಿಸ್ವಾಮ್ಯ ಸಮಸ್ಯೆಗಳನ್ನು ವರದಿ ಮಾಡುವುದು

YouTube Create .gif ಲೈಬ್ರರಿಯಲ್ಲಿ ಕಂಡುಬರುವ .gif ಗಳನ್ನು ನಿಮ್ಮ ಹುಡುಕಾಟಗಳಿಂದ ಅಥವಾ Tenor ನಲ್ಲಿ ಫೀಚರ್ ಮಾಡಲಾಗುವ ಪೋಸ್ಟ್‌ಗಳಿಂದ ಪಡೆದುಕೊಳ್ಳಲಾಗುತ್ತದೆ.

YouTube Create, ಕೆಲವು .gif ಗಳನ್ನು Tenor ಮೀಡಿಯಾ ಲೈಬ್ರರಿಯಿಂದ ಪಡೆದುಕೊಳ್ಳುತ್ತದೆ. YouTube Create .gif ಲೈಬ್ರರಿಯಲ್ಲಿ ನೀವು ಮಾಲೀಕತ್ವ ಹೊಂದಿರುವ ಕೃತಿಸ್ವಾಮ್ಯಕ್ಕೊಳಪಟ್ಟ ವಿಷಯ ನಿಮಗೆ ಕಂಡುಬಂದರೆ, dmca@tenor.com ಗೆ ಇಮೇಲ್ ಅನ್ನು ಕಳುಹಿಸುವ ಮೂಲಕ ನೀವು ಅದನ್ನು ವರದಿ ಮಾಡಬಹುದು.

ಟ್ರಾನ್ಸಿಶನ್‌ಗಳನ್ನು ಸೇರಿಸುವುದು

ನಿಮ್ಮ ವೀಡಿಯೊ, ವೀಡಿಯೊ ಓವರ್‌ಲೇಗಳು, ಎಲಿಮೆಂಟ್‌ಗಳು ಅಥವಾ ಪಠ್ಯದಂತಹ ಹಲವಾರು ಎಲಿಮೆಂಟ್‌ಗಳನ್ನು ಹೊಂದಿದ್ದರೆ, ನಿಮ್ಮ ವೀಡಿಯೊ ನಿಮ್ಮ ವೀಕ್ಷಕರಿಗೆ ಆಕರ್ಷಕವಾಗಿ ಕಾಣಿಸಲು ನೀವು ಪ್ರತಿಯೊಂದರ ನಡುವೆ ಟ್ರಾನ್ಸಿಶನ್‌ಗಳನ್ನು ಸೇರಿಸಬಹುದು.

ವೀಡಿಯೊ ಎಲಿಮೆಂಟ್‌ಗಳನ್ನು ಆ್ಯನಿಮೇಟ್ ಮಾಡಲು,

  1. ರೆಕಾರ್ಡಿಂಗ್‌ನಲ್ಲಿ ವೀಡಿಯೊ ಓವರ್‌ಲೇ, ಗ್ರಾಫಿಕ್ ಅಥವಾ ಪಠ್ಯದ ಲೇಯರ್ ಅನ್ನು ಆಯ್ಕೆಮಾಡಲು ಟ್ಯಾಪ್ ಮಾಡಿ.
  2. ಟೂಲ್‌ಬಾರ್‌ನಲ್ಲಿರುವ ಆ್ಯನಿಮೇಶನ್  ಎಂಬುದನ್ನು ಟ್ಯಾಪ್ ಮಾಡಿ.
  3. ಟ್ರಾನ್ಸಿಶನ್ ಆಯ್ಕೆಗಳನ್ನು ಬ್ರೌಸ್ ಮಾಡಿ ಹಾಗೂ ಆ್ಯನಿಮೇಶನ್ ಅನ್ನು ಪೂರ್ವವೀಕ್ಷಿಸಲು ಟ್ಯಾಪ್ ಮಾಡಿ.
  4. ನಿಮ್ಮ ಆ್ಯನಿಮೇಶನ್‌ನ ಅವಧಿಯನ್ನು ಸೆಟ್ ಮಾಡಲು ಸ್ಲೈಡರ್ ಅನ್ನು ಬಳಸಿ.
    • ಗಮನಿಸಿ: ನೀವು ಪ್ರತಿಯೊಂದು ಗ್ರಾಫಿಕ್‌ನ ಪ್ರಾರಂಭ ಹಾಗೂ ಅಂತ್ಯವನ್ನು ಆ್ಯನಿಮೇಟ್ ಮಾಡಬಹುದು. ನಿಮ್ಮ ಗ್ರಾಫಿಕ್‌ನ ಅಂತ್ಯಕ್ಕೆ ಆ್ಯನಿಮೇಶನ್ ಅನ್ನು ಸೇರಿಸಲು ಪೂರ್ಣಗೊಳಿಸಿ ಎಂಬ ಟ್ಯಾಬ್ ಅನ್ನು ಬಳಸಿ.
  5. ಬದಲಾವಣೆಗಳನ್ನು ಸೇವ್ ಮಾಡಲು ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ಟ್ರಾನ್ಸಿಶನ್‌ಗಳನ್ನು ತೆಗೆದುಹಾಕುವುದು

  1. ಸೀಕ್ವೆನ್ಸರ್‌ನಿಂದ, ನೀವು ಅಳಿಸಲು ಬಯಸುವ ಟ್ರಾನ್ಸಿಶನ್ ಅನ್ನು ಆಯ್ಕೆಮಾಡಲು  ಟ್ಯಾಪ್ ಮಾಡಿ.
  2. ಟ್ರಾನ್ಸಿಶನ್ ಅನ್ನು ತೆಗೆದುಹಾಕಲು, ರೀಸೆಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6359358222729991246
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false