YouTube Create ಮೂಲಕ ಪ್ರಾಜೆಕ್ಟ್ ಅನ್ನು ಪ್ರಾರಂಭಿಸುವುದು ಅಥವಾ ನಿರ್ವಹಿಸುವುದು

YouTube Create ಮೂಲಕ ದೀರ್ಘಾವಧಿಯ ವೀಡಿಯೊಗಳು ಮತ್ತು Shorts ರಚಿಸುವುದು ಸುಲಭ. ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ ಹಾಗೂ ಹೊಸ ಪ್ರಾಜೆಕ್ಟ್ ಅನ್ನು ರಚಿಸುವುದು ಹೇಗೆಂದು ತಿಳಿಯಿರಿ.

NEW: YouTube Create App

YouTube Create ಕನಿಷ್ಠ 4G RAM ಹೊಂದಿರುವ Android ಫೋನ್‍ಗಳಲ್ಲಿ ಲಭ್ಯವಿದೆ. ಭವಿಷ್ಯದಲ್ಲಿ ಈ ಆ್ಯಪ್ ಇತರ ಸಾಧನಗಳಲ್ಲಿ ಲಭ್ಯವಾಗಬಹುದು.

ಹೊಸ ಪ್ರಾಜೆಕ್ಟ್ ಅನ್ನು ರಚಿಸುವುದು

  1. YouTube Create ಆ್ಯಪ್ ಅನ್ನು ತೆರೆಯಿರಿ ಮತ್ತು ನಿಮ್ಮ YouTube ಖಾತೆಗೆ ಸೈನ್ ಇನ್ ಮಾಡಿ.
  2. ಹೋಮ್ ಸ್ಕ್ರೀನ್‌ನಲ್ಲಿ, ಹೊಸ ಪ್ರಾಜೆಕ್ಟ್ ಅನ್ನು ಪ್ರಾರಂಭಿಸಲು ಪ್ಲಸ್  ಎಂಬುದನ್ನು ಟ್ಯಾಪ್ ಮಾಡಿ.
  3. ಗ್ಯಾಲರಿಯಿಂದ, ನಿಮ್ಮ ಪ್ರಾಜೆಕ್ಟ್‌ಗೆ ಸೇರಿಸಲು ಫೋಟೋಗಳು, ವೀಡಿಯೊಗಳು ಅಥವಾ ಈ ಹಿಂದೆ ಇಂಪೋರ್ಟ್ ಮಾಡಿಕೊಂಡ ಮಾಧ್ಯಮವನ್ನು ಆಯ್ಕೆಮಾಡಿ.
    • ಗಮನಿಸಿ: ನಿಮ್ಮ ಸಾಧನದಲ್ಲಿರುವ ಇತರ ಆ್ಯಪ್‌ಗಳಿಂದ ಮಾಧ್ಯಮವನ್ನು ಇಂಪೋರ್ಟ್ ಮಾಡಿಕೊಳ್ಳಲು, ಸ್ಕ್ರೀನ್‌ನ ಮೇಲ್ಭಾಗದಲ್ಲಿ ಗ್ಯಾಲರಿಯ ಪಕ್ಕದಲ್ಲಿರುವ ಬಾಣದ ಗುರುತನ್ನು ಟ್ಯಾಪ್ ಮಾಡಿ. ನೀವು ಒಂದೇ ಪ್ರಾಜೆಕ್ಟ್‌ಗೆ ಹಲವು ಚಿತ್ರಗಳು ಅಥವಾ ವೀಡಿಯೊಗಳನ್ನು ಸೇರಿಸಬಹುದು.
  4. ನಿಮ್ಮ ಪ್ರಾಜೆಕ್ಟ್‌ಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಸೇರಿಸಲು ಇಂಪೋರ್ಟ್ ಮಾಡಿಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ.

ನೀವು ನಿಮ್ಮ ಪ್ರಾಜೆಕ್ಟ್ ಅನ್ನು ರಚಿಸಿದ ನಂತರ, ನಿಮ್ಮ ವೀಡಿಯೊವನ್ನು ವರ್ಧಿಸಲು ಎಡಿಟಿಂಗ್ ಟೂಲ್‌ಗಳನ್ನು ಬಳಸಿ.

ಅಸ್ತಿತ್ವದಲ್ಲಿರುವ ಪ್ರಾಜೆಕ್ಟ್ ಅನ್ನು ಹುಡುಕುವುದು, ನಿರ್ವಹಿಸುವುದು ಅಥವಾ ಅಳಿಸುವುದು

  1. YouTube Create ಆ್ಯಪ್ ಅನ್ನು ತೆರೆಯಿರಿ ಮತ್ತು ನಿಮ್ಮ ಖಾತೆಗೆ ಸೈನ್ ಇನ್ ಮಾಡಿ.
  2. ನಿಮ್ಮ ಇತ್ತೀಚಿನ ಪ್ರಾಜೆಕ್ಟ್‌ಗಳು ಎಂಬ ಪುಟದಲ್ಲಿ, ನೀವು ನಿರ್ವಹಿಸಲು ಬಯಸುವ ಪ್ರಾಜೆಕ್ಟ್‌ನ ಪಕ್ಕದಲ್ಲಿರುವ ಮೆನುವನ್ನು ಟ್ಯಾಪ್ ಮಾಡಿ. ಪಟ್ಟಿಯಲ್ಲಿ ನಿಮಗೆ ಪ್ರಾಜೆಕ್ಟ್ ಕಾಣಿಸದಿದ್ದರೆ, ಬೇರೆ ಖಾತೆಯ ಮೂಲಕ ಸೈನ್ ಇನ್ ಮಾಡಿ.
  3. ಆಯ್ಕೆಗಳಿಂದ ಒಂದು ಕ್ರಿಯೆಯನ್ನು ಆಯ್ಕೆಮಾಡಿ:
    • ಮರುಹೆಸರಿಸಿ: ನಿಮ್ಮ ಪ್ರಾಜೆಕ್ಟ್‌ಗೆ ಹೊಸ ಶೀರ್ಷಿಕೆಯನ್ನು ನೀಡಿ
    • ನಕಲು ಮಾಡಿ: ನಿಮ್ಮ ಪ್ರಾಜೆಕ್ಟ್‌ನ ಒಂದು ಪ್ರತಿಯನ್ನು ರಚಿಸಿ
    • ಅಳಿಸಿ: ಪ್ರಾಜೆಕ್ಟ್ ಅನ್ನು ಅಳಿಸಿ
  4. ಪ್ರಾಂಪ್ಟ್ ಮಾಡಿದಾಗ ಬದಲಾವಣೆಗಳನ್ನು ದೃಢೀಕರಿಸಿ.
ಹೊಸ ಪ್ರಾಜೆಕ್ಟ್ ಅನ್ನು ರಚಿಸಲು, ನಿಮ್ಮ ಪ್ರಾಜೆಕ್ಟ್ ಪಟ್ಟಿಯಿಂದ ನೀವು ಪ್ಲಸ್  ಎಂಬುದನ್ನು ಸಹ ಟ್ಯಾಪ್ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10925978490646903283
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false