ನಿಮ್ಮ ವೀಡಿಯೊಗಳಿಗೆ ಫಿಲ್ಟರ್‌ಗಳು, ಎಫೆಕ್ಟ್‌ಗಳು ಹಾಗೂ ಬಣ್ಣದ ತಿದ್ದುಪಡಿಯನ್ನು ಅನ್ವಯಿಸುವುದು

ನೀವು ಪ್ರಾಜೆಕ್ಟ್ ಅನ್ನು ರಚಿಸಿದ ನಂತರ, YouTube Create ನ ಎಡಿಟಿಂಗ್ ಟೂಲ್‍ಗಳನ್ನು ಬಳಸಿಕೊಂಡು ನಿಮ್ಮ ವೀಡಿಯೊಗಳನ್ನು ವರ್ಧಿಸಿ. ಬಣ್ಣ ಹೊಂದಾಣಿಕೆಗಳು, ಎಫೆಕ್ಟ್‌ಗಳು ಮತ್ತು ಫಿಲ್ಟರ್‌ಗಳ ನೆರವಿನಿಂದ ನಿಮ್ಮ ವೀಡಿಯೊದಲ್ಲಿನ ವಿಷುವಲ್ ಎಲಿಮೆಂಟ್‌ಗಳನ್ನು ವರ್ಧಿಸಿ.

YouTube Create ಕನಿಷ್ಠ 4G RAM ಹೊಂದಿರುವ Android ಫೋನ್‍ಗಳಲ್ಲಿ ಲಭ್ಯವಿದೆ. ಭವಿಷ್ಯದಲ್ಲಿ ಈ ಆ್ಯಪ್ ಇತರ ಸಾಧನಗಳಲ್ಲಿ ಲಭ್ಯವಾಗಬಹುದು.

ನಿಮ್ಮ ವೀಡಿಯೊಗಳಿಗೆ ಫಿಲ್ಟರ್‌ಗಳನ್ನು ಅನ್ವಯಿಸುವುದು

  1. ಪ್ರಾಜೆಕ್ಟ್ ಅನ್ನು ತೆರೆಯಿರಿ ಹಾಗೂ ನೀವು ಎಡಿಟ್ ಮಾಡಲು ಬಯಸುವ ವೀಡಿಯೊ ಕ್ಲಿಪ್ ಅನ್ನು ಆಯ್ಕೆಮಾಡಲು ಟ್ಯಾಪ್ ಮಾಡಿ.
  2. ಟೂಲ್‌ಬಾರ್‌ನಲ್ಲಿ, ಫಿಲ್ಟರ್‌ಗಳು ಎಂಬುದನ್ನು ಟ್ಯಾಪ್ ಮಾಡಿ.
  3. ಆಯ್ಕೆಗಳಿಂದ ಪ್ರಿಸೆಟ್ ಫಿಲ್ಟರ್ ಅನ್ನು ಬ್ರೌಸ್ ಮಾಡಿ, ಆಯ್ಕೆಮಾಡಿ. ಫಿಲ್ಟರ್ ತೀವ್ರತೆಯನ್ನು ಬದಲಾಯಿಸಲು ನೀವು ಸ್ಲೈಡರ್ ಅನ್ನು ಬಳಸಬಹುದು.
  4. ನಿಮ್ಮ ವೀಡಿಯೊಗೆ ಫಿಲ್ಟರ್ ಅನ್ನು ಅನ್ವಯಿಸಲು ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ನಿಮ್ಮ ವೀಡಿಯೊಗಳಿಗೆ ಎಫೆಕ್ಟ್‌ಗಳನ್ನು ಸೇರಿಸುವುದು

  1. ಪ್ರಾಜೆಕ್ಟ್ ಅನ್ನು ತೆರೆಯಿರಿ ಹಾಗೂ ನೀವು ಎಡಿಟ್ ಮಾಡಲು ಬಯಸುವ ವೀಡಿಯೊ ಕ್ಲಿಪ್ ಅನ್ನು ಆಯ್ಕೆಮಾಡಲು ಟ್ಯಾಪ್ ಮಾಡಿ.
  2. ಟೂಲ್‌ಬಾರ್‌ನಲ್ಲಿ, ಎಫೆಕ್ಟ್‌ಗಳು ಎಂಬುದನ್ನು ಟ್ಯಾಪ್ ಮಾಡಿ.
  3. ಆಯ್ಕೆಗಳಿಂದ ವೀಡಿಯೊ ಎಫೆಕ್ಟ್ ಅನ್ನು ಬ್ರೌಸ್ ಮಾಡಿ, ಆಯ್ಕೆಮಾಡಿ.
  4. ನಿಮ್ಮ ವೀಡಿಯೊಗೆ ಎಫೆಕ್ಟ್ ಅನ್ನು ಅನ್ವಯಿಸಲು ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ನಿಮ್ಮ ವೀಡಿಯೊಗಳಲ್ಲಿನ ಬಣ್ಣವನ್ನು ಅಡ್ಜಸ್ಟ್ ಮಾಡುವುದು

  1. ಪ್ರಾಜೆಕ್ಟ್ ಅನ್ನು ತೆರೆಯಿರಿ ಹಾಗೂ ನೀವು ಎಡಿಟ್ ಮಾಡಲು ಬಯಸುವ ವೀಡಿಯೊ ಕ್ಲಿಪ್ ಅನ್ನು ಆಯ್ಕೆಮಾಡಲು ಟ್ಯಾಪ್ ಮಾಡಿ.
  2. ಟೂಲ್‌ಬಾರ್‌ನಲ್ಲಿ, ಅಡ್ಜಸ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  3. ವೀಡಿಯೊ ಕಾಂಟ್ರಾಸ್ಟ್, ಸ್ಯಾಚುರೇಶನ್ ಮತ್ತು ಟಿಂಟ್‌ನಂತಹ ಫೀಚರ್‌ಗಳನ್ನು ಬದಲಾಯಿಸಲು ಬಣ್ಣದ ತಿದ್ದುಪಡಿ ಆಯ್ಕೆಗಳನ್ನು ಬಳಸಿ. ತೀವ್ರತೆಯನ್ನು ಬದಲಾಯಿಸಲು ನೀವು ಪ್ರತಿಯೊಂದು ಆಯ್ಕೆಗೆ ಸಂಬಂಧಿಸಿದ ಸ್ಲೈಡರ್ ಅನ್ನು ಬಳಸಬಹುದು.
  4. ನಿಮ್ಮ ವೀಡಿಯೊಗೆ ಅಡ್ಜಸ್ಟ್‌ಮೆಂಟ್‌ಗಳನ್ನು ಅನ್ವಯಿಸಲು ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15145489459708523109
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false