YouTube Create ಆ್ಯಪ್ ಮೂಲಕ ನಿಮ್ಮ ವೀಡಿಯೊಗಳನ್ನು ಎಡಿಟ್ ಮಾಡಿ🎬🎞️🙌
YouTube Create ಎಂಬುದು ಒಂದು ಆ್ಯಪ್ ಆಗಿದ್ದು, ಇದು ನಿಮ್ಮ ವೀಡಿಯೊಗಳನ್ನು ಎಡಿಟ್ ಮಾಡಲು ಸಹಾಯಕವಾಗಿದೆ, ಬಳಸಲು ಸುಲಭವಾಗಿರುವ ಪ್ರೊಡಕ್ಷನ್ ಟೂಲ್ಗಳನ್ನು ಒಳಗೊಂಡಿದೆ. ದೀರ್ಘಾವಧಿ ವೀಡಿಯೊಗಳು ಮತ್ತು Shorts ಅನ್ನು ಎಡಿಟ್ ಮಾಡಲು YouTube Create ಬಳಸಿ - ಯಾವುದೇ ಶುಲ್ಕವಿಲ್ಲ ಹಾಗೂ ಜಾಹೀರಾತು-ಮುಕ್ತ.
ಕೆಳಗಡೆ YouTube Create ಆ್ಯಪ್ ಅನ್ನು ಹೇಗೆ ಡೌನ್ಲೋಡ್ ಮಾಡಬೇಕು ಅಥವಾ ಹೊಸ ಪ್ರಾಜೆಕ್ಟ್ ಹೇಗೆ ರಚಿಸಬೇಕೆಂದು ತಿಳಿಯಿರಿ .
YouTube Create ಅರ್ಹತೆ
YouTube Create ಆಯ್ದ ಮಾರುಕಟ್ಟೆಗಳಲ್ಲಿ ರಚನೆಕಾರರಿಗೆ ಲಭ್ಯವಿದೆ. YouTube Create ಡೌನ್ಲೋಡ್ ಮಾಡಲು, ನೀವು:
- Google ಗೆ ಸೈನ್ ಇನ್ ಆಗಿರಬೇಕು
- YouTube Create ಲಭ್ಯವಿರುವ ದೇಶ/ಪ್ರದೇಶದಲ್ಲಿ ವಾಸವಿರಬೇಕು
- Android ಫೋನ್ ಬಳಸುತ್ತಿರಬೇಕು (ಹೆಚ್ಚಿನ ಮಾಡೆಲ್ಗಳು ಬೆಂಬಲಿಸುತ್ತವೆ)