YouTube ನಲ್ಲಿ, ನೀವು 5.1 ಸರೌಂಡ್ ಸೌಂಡ್ ಆಡಿಯೊವನ್ನು ಕೇಳಬಹುದು.

ತಮ್ಮ ಟಿವಿಯಲ್ಲಿ YouTube ವೀಕ್ಷಿಸುವ YouTube ವೀಕ್ಷಕರಿಗೆ ನೀವು 5.1 ಸರೌಂಡ್ ಸೌಂಡ್ ಆಡಿಯೊವನ್ನು ಲೈವ್ ಸ್ಟ್ರೀಮ್ ಮಾಡಬಹುದು. 5.1 ಸರೌಂಡ್ ಸೌಂಡ್ ಐದು ಪೂರ್ಣ ಬ್ಯಾಂಡ್‌ವಿಡ್ತ್ ಚಾನಲ್‌ಗಳನ್ನು ಬಳಸಿಕೊಳ್ಳುತ್ತದೆ, ಅವುಗಳು ಈ ಕೆಳಗಿನಂತಿವೆ:

  • ಮುಂಭಾಗದ ಎಡಗಡೆ
  • ಮಧ್ಯಕ್ಕೆ
  • ಮುಂಭಾಗದ ಬಲಗಡೆ
  • ಎಡ ಬದಿ
  • ಬಲ ಬದಿ

ಈ ಐದು ಚಾನಲ್‌ಗಳ ಜೊತೆಗೆ, ಸಬ್ ವೂಫರ್‌ಗಾಗಿ ಒಂದು ಕಡಿಮೆ ಫ್ರಿಕ್ವೆನ್ಸಿ ಎಫೆಕ್ಟ್‌ಗಳಿರುವ ಚಾನಲ್ ಅನ್ನು ವಿನ್ಯಾಸಗೊಳಿಸಲಾಗಿದೆ.

YouTube ಲೈವ್‌ಗೆ 5.1 ಸರೌಂಡ್ ಸೌಂಡ್ ಆಡಿಯೊವನ್ನು ಸ್ಟ್ರೀಮ್ ಮಾಡಲು ನೀವು ಸೂಕ್ತವಾದ 5.1 ಸರೌಂಡ್ ಸೌಂಡ್ ಆಡಿಯೊ ಕಂಟೆಂಟ್ ಅನ್ನು ರಚಿಸಬೇಕು ಮತ್ತು ಹೊಂದಾಣಿಕೆಯ ಎನ್‌ಕೋಡರ್ ಅನ್ನು ಬಳಸಬೇಕು.

7.1 ಸರೌಂಡ್ ಸೌಂಡ್ ಇನ್ನೂ ಬೆಂಬಲಿತವಾಗಿಲ್ಲ ಎಂಬುದನ್ನು ನೆನಪಿನಲ್ಲಿಡಿ.

YouTube ಲೈವ್ ನಿಯಂತ್ರಣ ಕೊಠಡಿಯಲ್ಲಿ 5.1 ಸರೌಂಡ್ ಸೌಂಡ್ ಸ್ಟ್ರೀಮ್ ಅನ್ನು ಸೆಟಪ್ ಮಾಡಿ.

ನೀವು 5.1 ಆಡಿಯೊ ಸ್ಟ್ರೀಮ್‌ಗಳನ್ನು RTMP ಮತ್ತು HLS ಇಂಜೆಷನ್ ಪ್ರೋಟೋಕಾಲ್‌ಗಳನ್ನು ಬಳಸಿಕೊಂಡು ಕಳುಹಿಸಬಹುದು. ಸಿಸ್ಟಮ್ ಸ್ವಯಂಚಾಲಿತವಾಗಿ 5.1 ಸರೌಂಡ್ ಸೌಂಡ್ ಇನ್‌ಪುಟ್ ಅನ್ನು ಗುರುತಿಸಲು ಮತ್ತು 5.1 ಸರೌಂಡ್ ಸೌಂಡ್ ಅನ್ನು ಉತ್ಪಾದಿಸಲು, ನೀವು ಲೈವ್ ನಿಯಂತ್ರಣ ಕೊಠಡಿಯಲ್ಲಿ"ಮ್ಯಾನ್ಯುವಲ್ ರೆಸಲ್ಯೂಶನ್ ಆನ್ ಮಾಡಿ" ಸೆಟ್ಟಿಂಗ್ ಅನ್ನು ಅನ್‍ಚೆಕ್ ಮಾಡುವ ಮೂಲಕ ಸ್ಟ್ರೀಮ್ ಕೀಗಳನ್ನು ರಚಿಸಬೇಕು.

  1. YouTube Studio ಗೆ ಹೋಗುವ ಮೂಲಕ, ಲೈವ್ ನಿಯಂತ್ರಣ ಕೊಠಡಿಗೆ ಹೋಗಿ, ನಂತರ ರಚಿಸಿ ನಂತರ ಲೈವ್‍ಗೆ ಹೋಗಿ ಎಂಬುದನ್ನು ಕ್ಲಿಕ್ ಮಾಡಿ.
  2. ಸ್ಟ್ರೀಮ್ ಕೀ ಅಡಿಯಲ್ಲಿ ಡ್ರಾಪ್-ಡೌನ್ ಮೆನು ಕ್ಲಿಕ್ ಮಾಡಿ ಮತ್ತು ಹೊಸ ಸ್ಟ್ರೀಮ್ ಕೀ ರಚಿಸಿ ಅನ್ನು ಆಯ್ಕೆಮಾಡಿ.
  3. ಸ್ಟ್ರೀಮ್ ಕೀ ಮತ್ತು ಸ್ಟ್ರೀಮಿಂಗ್ ಪ್ರೊಟೊಕಾಲ್‍ಗೆ ಹೆಸರನ್ನು ನಮೂದಿಸಿ ಮತ್ತು ಸ್ಟ್ರೀಮ್ ರೆಸಲ್ಯೂಶನ್ ಅಡಿಯಲ್ಲಿರುವ “ಮ್ಯಾನುವಲ್ ಸೆಟ್ಟಿಂಗ್‍ಗಳನ್ನು ಆನ್ ಮಾಡಿ” ಬಾಕ್ಸ್ ಅನ್ನು ಅನ್‍ಚೆಕ್ ಮಾಡಿ.
  4. ಸೇವ್ ಮಾಡಲು ರಚಿಸಿ ಅನ್ನು ಕ್ಲಿಕ್ ಮಾಡಿ.

ಎನ್‌ಕೋಡರ್ ಸೆಟ್ಟಿಂಗ್‌ಗಳು

ಸಾಮಾನ್ಯ ಎನ್‍ಕೋಡರ್ ಸೆಟ್ಟಿಂಗ್‍ಗಳಿಗೆ ಮಾರ್ಗಸೂಚಿಗಳನ್ನು ಅನುಸರಿಸಿ. ಕೆಲವು 5.1 ಸರೌಂಡ್ ಸೌಂಡ್‍ನ ನಿರ್ದಿಷ್ಟ ಸೆಟ್ಟಿಂಗ್‍ಗಳು ಹೀಗಿವೆ:

  • ಆಡಿಯೋ ಕೋಡೆಕ್ 5.1 ಸರೌಂಡ್ ಸೌಂಡ್ ಆಡಿಯೊವು RTMP ಇಂಜೆಷನ್ ಪ್ರೊಟೊಕಾಲ್‍ನಲ್ಲಿ AAC ಗೆ ಮಾತ್ರ ಬೆಂಬಲಿಸುತ್ತದೆ; HLS ಇಂಜೆಷನ್‍ಗಾಗಿ, AAC, AC3 ಮತ್ತು EAC3 , 5.1 ಸರೌಂಡ್ ಸೌಂಡ್ ಬೆಂಬಲಿತವಾಗಿದೆ.
  • ಆಡಿಯೊ ಸ್ಯಾಂಪಲ್ ದರ: 5.1 ಸರೌಂಡ್ ಸೌಂಡ್‍ಗೆ 48 KHz.
  • ಆಡಿಯೊ ಬಿಟ್‍ರೇಟ್: 5.1 ಸರೌಂಡ್ ಸೌಂಡ್‍ಗೆ 384 Kbps.

ಹೊಂದಾಣಿಕೆಯಾಗುವ ಎನ್‍ಕೋಡರ್‌ಗಳು

ಈ ಮುಂದಿನ ಎನ್‌ಕೋಡರ್‌ಗಳು 5.1 ಸರೌಂಡ್ ಸೌಂಡ್ ಅನ್ನು ಸ್ಟ್ರೀಮ್ ಮಾಡಲು YouTube ಲೈವ್‌ನೊಂದಿಗೆ ಹೊಂದಾಣಿಕೆಯಾಗುತ್ತವೆ. ಅವುಗಳನ್ನು ಪರೀಕ್ಷಿಸಿದಂತೆ ಹೆಚ್ಚಿನ ಎನ್‌ಕೋಡರ್‌ಗಳನ್ನು ಸೇರಿಸಲಾಗುತ್ತದೆ.

ಸಾಫ್ಟ್‌ವೇರ್ ಎನ್‌ಕೋಡರ್‌ಗಳು

ಹಾರ್ಡ್‌ವೇರ್ ಎನ್‌ಕೋಡರ್‌ಗಳು

5.1 ಸರೌಂಡ್ ಸೌಂಡ್‌ನಲ್ಲಿ ಲೈವ್ ಸ್ಟ್ರೀಮ್‍ಗಳನ್ನು ವೀಕ್ಷಿಸುವುದು

ವೀಕ್ಷಕರು ತಮ್ಮ ಟಿವಿಯಲ್ಲಿ YouTube ವೀಡಿಯೊಗಳನ್ನು ವೀಕ್ಷಿಸುತ್ತಿರುವಾಗ 5.1 ಸರೌಂಡ್ ಸೌಂಡ್ ಅನ್ನು ಹೇಗೆ ಆನಂದಿಸಬಹುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15891828623113484318
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false