YouTube Music ನಲ್ಲಿ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಹುಡುಕಿ

YouTube Music ಮೂಲಕ, ನೀವು ಪ್ರೀತಿಸುವ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ನೀವು ಆಲಿಸಬಹುದು. YouTube Music ಆ್ಯಪ್‍ನಲ್ಲಿ ಸಂಗೀತ ಮತ್ತು ಪಾಡ್‍ಕಾಸ್ಟ್‌ಗಳನ್ನು ಬ್ರೌಸ್ ಮಾಡುವುದು ಮತ್ತು ಹುಡುಕುವುದು ಹೇಗೆ ಎಂದು ತಿಳಿಯಿರಿ.

How to use and navigate the YouTube Music App to customize your listening experience

ಗಮನಿಸಿ: ಆಯ್ದ ದೇಶಗಳು/ಪ್ರದೇಶಗಳಲ್ಲಿನ ಬಳಕೆದಾರಿಗೆ ವಿಭಿನ್ನ ಉತ್ಪನ್ನ ಅನುಭವಗಳು ಉಂಟಾಗಬಹುದು.

ಹೋಮ್ ಟ್ಯಾಬ್‌ನಲ್ಲಿ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಅನ್ವೇಷಿಸಿ

ನಿಮ್ಮ ಪ್ರಸ್ತುತ ಮೂಡ್, ಚಟುವಟಿಕೆ ಅಥವಾ ಕೇಳುವಿಕೆಯ ಇತಿಹಾಸವನ್ನು ಆಧರಿಸಿ ಕಸ್ಟಮೈಸ್ ಮಾಡಲಾದ ಸ್ಟೇಶನ್‌ಗಳು ಮತ್ತು ಶಿಫಾರಸುಗಳನ್ನು ನೋಡಿರಿ. ನಿಮ್ಮ Google ಖಾತೆಯ ಮೂಲಕ ನೀವು YouTube Music ಗೆ ಸೈನ್ ಇನ್ ಮಾಡಿದಾಗ, ನೀವು YouTube ನಲ್ಲಿ ಕೇಳಿರುವ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಆಧರಿಸಿದ ಶಿಫಾರಸುಗಳನ್ನು ಸಹ ನೀವು ನೋಡುತ್ತೀರಿ. 

ಹೊಸ ಶಿಫಾರಸುಗಳನ್ನು ಕಾಣಲು, ಹೋಮ್ ಟ್ಯಾಬ್‌ಗೆ ಹೋಗಿ. ನಿಮ್ಮ ಸಲಹೆಗಳನ್ನು ಫಿಲ್ಟರ್ ಮಾಡಲು, ನಿಮ್ಮ ಹೋಮ್ ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ವರ್ಗವೊಂದನ್ನು ಟ್ಯಾಪ್ ಮಾಡಿ.

ಹೊಸ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಅನ್ವೇಷಿಸಿ

ಎಕ್ಸ್‌ಪ್ಲೋರ್ ಟ್ಯಾಬ್ ನಿಮ್ಮ ಲೈಬ್ರರಿಯನ್ನು ವಿಸ್ತರಿಸುವುದಕ್ಕಾಗಿ ಹೊಸ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಹುಡುಕಲು ನಿಮಗೆ ಅನುವು ಮಾಡಿಕೊಡುತ್ತದೆ. ನಿಮ್ಮ ದೇಶ/ಪ್ರದೇಶದಲ್ಲಿನ ಜನಪ್ರಿಯ ಬಿಡುಗಡೆಗಳು, ಶೈಲಿಗಳು, ಪ್ಲೇಪಟ್ಟಿಗಳು, ಪಾಡ್‌ಕಾಸ್ಟ್‌ಗಳು, ಎಪಿಸೋಡ್‌ಗಳು ಮತ್ತು ಇತ್ಯಾದಿಗಳನ್ನು ವೀಕ್ಷಿಸಿ ಅಥವಾ ಅವುಗಳ ವರ್ಗದ ಪ್ರಕಾರ ಬ್ರೌಸ್ ಮಾಡಿ.

ನಿಮ್ಮ ಲೈಬ್ರರಿಯನ್ನು ನಿರ್ಮಿಸಿ

ನಿಮ್ಮ ಲೈಬ್ರರಿಯಲ್ಲಿ ನೀವು ಸೇವ್ ಮಾಡಿರುವ ಹಾಡುಗಳು, ಪ್ಲೇಪಟ್ಟಿಗಳು, ಆಲ್ಬಮ್‌ಗಳು ಮತ್ತು ಪಾಡ್‌ಕಾಸ್ಟ್‌ಗಳನ್ನು ವೀಕ್ಷಿಸಲು ಲೈಬ್ರರಿ ಎಂಬುದನ್ನು ಟ್ಯಾಪ್ ಮಾಡಿ. ಒಬ್ಬ YouTube Music Premium ಸದಸ್ಯರಾಗಿ, ನೀವು ಇತ್ತೀಚೆಗೆ ಪ್ಲೇ ಮಾಡಿದ ಹಾಡುಗಳು ಮತ್ತು ಪ್ಲೇಪಟ್ಟಿಗಳನ್ನು ಸಹ ನೀವು ಸ್ಕ್ಯಾನ್ ಮಾಡಬಹುದು ಹಾಗೂ ನೀವು ಡೌನ್‌ಲೋಡ್ ಮಾಡಿರುವ ಯಾವುದೇ ಕಂಟೆಂಟ್ ಅನ್ನು ನೋಡಬಹುದು.

ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಹುಡುಕಿ

YouTube Music ಆ್ಯಪ್‌ನಲ್ಲಿ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಹುಡುಕಲು ಸರ್ಚ್ ಬಾರ್‌ನಲ್ಲಿ ಎಂದು ಟೈಪ್ ಮಾಡಿ. ನಿಮ್ಮ ಫಲಿತಾಂಶಗಳನ್ನು ಫಿಲ್ಟರ್ ಮಾಡಲು ಪುಟದ ಮೇಲ್ಭಾಗದಲ್ಲಿರುವ ವರ್ಗಗಳನ್ನು ಬಳಸಿ.

ನಿಮ್ಮ ಮೆಚ್ಚಿನ ಕಲಾವಿದರೊಂದಿಗೆ ಕನೆಕ್ಟ್ ಆಗಿರಿ

ನೀವು ಫಾಲೋ ಮಾಡುವ ಕಲಾವಿದರ ಹೊಸ ಬಿಡುಗಡೆಗಳು, ನಿಮ್ಮ ಸ್ನೇಹಿತರು ರಚಿಸಿದ ಪ್ಲೇಪಟ್ಟಿಗಳು ಹಾಗೂ ಮುಂತಾದವುಗಳನ್ನು ಹುಡುಕಲು ಚಟುವಟಿಕೆ ಫೀಡ್ ಅನ್ನು ಬಳಸಿ. ವೀಡಿಯೊಗಳಿಗೆ ಸಂಬಂಧಿಸಿದ ಕಾಮೆಂಟ್‌ಗಳು ಮತ್ತು ಲೈಕ್‌ಗಳನ್ನು ಸಹ ನೀವು ವೀಕ್ಷಿಸಬಹುದು ಅಥವಾ ನಿಮ್ಮ ಸಬ್‌ಸ್ಕ್ರೈಬರ್‌ಗಳೊಂದಿಗೆ ಸಂವಹನ ನಡೆಸಬಹುದು. ನಿಮ್ಮ ಚಟುವಟಿಕೆ ಫೀಡ್ ಅನ್ನು ವೀಕ್ಷಿಸಲು, YouTube Music ಆ್ಯಪ್‌ಗೆ ಸೈನ್ ಇನ್ ಮಾಡಿ ಹಾಗೂ ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಅನ್ನು ಟ್ಯಾಪ್ ಮಾಡಿ.

ಕಲಾವಿದರು ಅಥವಾ ಚಾನಲ್‌ನ ಪುಟವನ್ನು ಬ್ರೌಸ್ ಮಾಡಿ

ಕಲಾವಿದರು ಮತ್ತು ಚಾನಲ್ ಪುಟಗಳು ನಿರ್ದಿಷ್ಟ ರಚನೆಕಾರರ ಇತರ ಕಂಟೆಂಟ್ ಅನ್ನು ಪ್ರದರ್ಶಿಸುತ್ತವೆ. ನೀವು ವಿವರಗಳನ್ನು ಬ್ರೌಸ್ ಮಾಡಬಹುದು, ನಿಮ್ಮ ಲೈಬ್ರರಿಗೆ ಸಂಗೀತ ಅಥವಾ ಪಾಡ್‌ಕಾಸ್ಟ್‌ಗಳನ್ನು ಸೇರಿಸಬಹುದು ಅಥವಾ ಕಲಾವಿದರು ಅಥವಾ ಚಾನಲ್‌ನ ಪುಟಗಳಿಂದ ಕಂಟೆಂಟ್ ಅನ್ನು ಡೌನ್‌ಲೋಡ್ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9337994919559780833
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false