YouTube ಪಾಡ್‌ಕಾಸ್ಟ್ ಬ್ಯಾಡ್ಜ್‌ಗಳನ್ನು ಬಳಸಿ

YouTube ನಲ್ಲಿ ನಿಮ್ಮ ಪಾಡ್‌ಕಾಸ್ಟ್‌ಗಳನ್ನು ಹುಡುಕಲು ನಿಮ್ಮ ಪ್ರೇಕ್ಷಕರಿಗೆ ಸಹಾಯ ಮಾಡುವುದಕ್ಕಾಗಿ ನಿಮ್ಮ ವೆಬ್‌ಸೈಟ್, ಸಾಮಾಜಿಕ ಮಾಧ್ಯಮಗಳು ಅಥವಾ ಪ್ರಿಂಟ್ ಮೀಡಿಯಾದಲ್ಲಿ ಪಾಡ್‌ಕಾಸ್ಟ್ ಬ್ಯಾಡ್ಜ್ ಅನ್ನು ಸೇರಿಸಿ. ನಿಮ್ಮ ಶೋ ಅನ್ನು ಪ್ರಚಾರ ಮಾಡಲು ಮತ್ತು ಹೊಸ ಎಪಿಸೋಡ್‌ಗಳನ್ನು ಹುಡುಕಲು ನಿಮ್ಮ ಪ್ರೇಕ್ಷಕರಿಗೆ ಸಹಾಯ ಮಾಡುವುದಕ್ಕಾಗಿ ಈ ಕೆಳಗಿನ ಆಯ್ಕೆಗಳಿಂದ ಆರಿಸಿ.

ನಿಮ್ಮ ಪಾಡ್‌ಕಾಸ್ಟ್ ಬ್ಯಾಡ್ಜ್ ಅನ್ನು ಆಯ್ಕೆ ಮಾಡಿ ಮತ್ತು ಡೌನ್‌ಲೋಡ್ ಮಾಡಿ

YouTube ಪಾಡ್‌ಕಾಸ್ಟ್ ಬ್ಯಾಡ್ಜ್ ಅನ್ನು ಪಡೆಯಲು, ನಿಮ್ಮ ಮಾರ್ಕೆಟಿಂಗ್ ಅವಶ್ಯಕತೆಗಳಿಗೆ ಅತ್ಯಂತ ಸೂಕ್ತವಾದ ಆಯ್ಕೆಯನ್ನು ಆರಿಸಿ. ಕೆಳಗಿನ ಲಿಂಕ್‌ಗಳನ್ನು ಬಳಸಿಕೊಂಡು ನಿಮ್ಮ ಬ್ಯಾಡ್ಜ್ ಅನ್ನು ಡೌನ್‌ಲೋಡ್ ಮಾಡಿ.

Download now Download now Download now

ಬ್ಯಾಡ್ಜ್ ಅವಶ್ಯಕತೆಗಳು

ನೀವು YouTube ಪಾಡ್‌ಕಾಸ್ಟ್ ಬ್ಯಾಡ್ಜ್ ಅನ್ನು ಬಳಸಿದಾಗ, YouTube ಒದಗಿಸಿದ ವಿನ್ಯಾಸವನ್ನು ಮಾತ್ರ ಬಳಸಿ. ನೀವು ಆರ್ಟ್‌ವರ್ಕ್ಅನ್ನು ಯಾವ ರೀತಿಯಲ್ಲಾದರೂ ಬದಲಾಯಿಸಲು ಬಯಸುತ್ತೀರಿ ಎಂದಾದರೆ, ಈ ಬ್ರ್ಯಾಂಡ್ ವಿನಂತಿ ಫಾರ್ಮ್ ಅನ್ನು ಭರ್ತಿ ಮಾಡಿ.

ದೋಷಗಳನ್ನು ಕಡಿಮೆಗೊಳಿಸಲು, ಈ ಉತ್ತಮ ಅಭ್ಯಾಸಗಳನ್ನು ನೋಡಿ:

  • ಈ ಮೇಲಿನ ಫೈಲ್‌ಗಳನ್ನು ಮಾತ್ರ ಬಳಸಿ. ಸ್ಟ್ಯಾಂಡ್-ಅಲೋನ್ YouTube ಲೋಗೋದ ಹಾಗೆ, YouTube ನಿಂದ ಇತರ ಗ್ರಾಫಿಕ್‌ಗಳನ್ನು ಬಳಸುವುದನ್ನು ತಪ್ಪಿಸಿ.
  • ನಿಮ್ಮ ಬ್ಯಾಡ್ಜ್ ಅನ್ನು ಪ್ರಕಟಿಸುವಾಗ ಬೂದುಬಣ್ಣದ ಬಾರ್ಡರ್ ಅನ್ನು ಸೇರಿಸಿಕೊಳ್ಳಿ.
  • ಬ್ಯಾಡ್ಜ್‌ನ ಆರ್ಟ್‌ವರ್ಕ್‌ನಲ್ಲಿ ಕೊಳ್ಳಲು ಕರೆ ನೀಡುವ ಸಂದೇಶಗಳಿರುವಂತೆ ನೋಡಿಕೊಳ್ಳಿ. ಕೊಳ್ಳಲು ಕರೆ ನೀಡುವ ಸಂದೇಶಗಳಲ್ಲಿ “ಇದರಲ್ಲಿ ಲಭ್ಯವಿದೆ,” “ಇದರಲ್ಲಿ ನೋಡಿ,” ಅಥವಾ “ಇದರಲ್ಲಿ ಕೇಳಿ” ಒಳಗೊಂಡಿವೆ.
  • ಬ್ಯಾಡ್ಜ್ ಅನ್ನು ಮಾರ್ಪಡಿಸಬೇಡಿ, ಓರೆಯಾಗಿಸಬೇಡಿ, ಆ್ಯನಿಮೇಟ್ ಮಾಡಬೇಡಿ, ತಿರುಗಿಸಬೇಡಿ, ಬಾಗಿಸಬೇಡಿ ಅಥವಾ ವಿಶೇಷ ಎಫೆಕ್ಟ್‌ಗಳನ್ನು ಅನ್ವಯಿಸಬೇಡಿ.

ಗಾತ್ರದ ಕುರಿತು ಮಾರ್ಗಸೂಚಿಗಳು

ನೀವು ಬ್ಯಾಡ್ಜ್ ಅನ್ನು ಎಲ್ಲಿ ಬಳಸಲು ಯೋಜಿಸುತ್ತಿದ್ದೀರಿ ಎಂಬುದನ್ನು ಆಧರಿಸಿ ಅದರ ಗಾತ್ರ ಬದಲಾಗುತ್ತದೆ.
  • ಡಿಜಿಟಲ್ ಮೀಡಿಯಾಕ್ಕಾಗಿ ಚಿತ್ರದ ಎತ್ತರವು ಕನಿಷ್ಠ ಪಕ್ಷ 20 dp (20 ಪಿಕ್ಸೆಲ್‌ಗಳು) ಆಗಿರಬೇಕು.
  • ಪ್ರಿಂಟ್‍‌ಗಾಗಿ, ಚಿತ್ರದ ಎತ್ತರವು ಕನಿಷ್ಠ ಪಕ್ಷ 0.125 ಇಂಚು (3.1 ಮಿ.ಮೀ) ಇರಬೇಕು.
ಬ್ಯಾಡ್ಜ್, ಡೌನ್‌ಲೋಡ್ ಮಾಡಿದ ಚಿತ್ರದ ಗರಿಷ್ಠ ಗಾತ್ರವನ್ನು ಮೀರದಂತೆ ನೋಡಿಕೊಳ್ಳಿ.

ಖಾಲಿ ಜಾಗ

ನಿಮ್ಮ ಬ್ಯಾಡ್ಜ್‌ನ ಸುತ್ತಲಿನ ಖಾಲಿ ಜಾಗವು ಕನಿಷ್ಠ ಪಕ್ಷ ಬ್ಯಾಡ್ಜ್‌ನ ಎತ್ತರದ ಹತ್ತನೇ ಒಂದು ಪಾಲಿನಷ್ಟು ಇರಬೇಕು. ಸಾಧ್ಯವಿದ್ದರೆ, ನೀವು ಹೆಚ್ಚು ಸ್ಥಳಾವಕಾಶ ಒದಗಿಸಬೇಕು.

ಖಾಲಿ ಜಾಗದಲ್ಲಿ ಫೋಟೋಗಳು, ಟೈಪೋಗ್ರಫಿ ಅಥವಾ ಇತರ ಗ್ರಾಫಿಕ್ ಎಲಿಮೆಂಟ್‌ಗಳನ್ನು ಇರಿಸಬೇಡಿ.

ಹಿನ್ನೆಲೆಗಳು

ನಿಮ್ಮ ಮೀಡಿಯಾದಲ್ಲಿ ನೀವು ಬ್ಯಾಡ್ಜ್ ಅನ್ನು ಸೇರಿಸಿದಾಗ, ನಿಮ್ಮ ಪ್ರೇಕ್ಷಕರು ಬ್ಯಾಡ್ಜ್ ಅನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುವ ಹಾಗೆ ಹಿನ್ನೆಲೆಯ ಕುರಿತು ಎಚ್ಚರಿಕೆ ವಹಿಸಿ. ನಿಮ್ಮ ಮೀಡಿಯಾದಲ್ಲಿ ಬ್ಯಾಡ್ಜ್ ಅನ್ನು ಸೇರಿಸುವಾಗ ಈ ಕೆಳಗಿನ ಹಿನ್ನೆಲೆಗಳಿಂದ ಆಯ್ಕೆ ಮಾಡಿ:
  • ಕಪ್ಪು, ಬಿಳಿ ಅಥವಾ ಬೇರೆ ಗಾಢ ಬಣ್ಣ
  • ಓದುವ ಸಾಮರ್ಥ್ಯದ ಮೇಲೆ ಪ್ರಭಾವ ಬೀರದ ಚಿತ್ರ
ಗಮನಿಸಿ: ನಿಮ್ಮ ಬ್ಯಾಡ್ಜ್‌ನ ಸುತ್ತ ಇರುವ ಬೂದುಬಣ್ಣದ ಬಾರ್ಡರ್ ಬ್ಯಾಡ್ಜ್ ಆರ್ಟ್‌ವರ್ಕ್‌ನ ಭಾಗವಾಗಿದೆ ಮತ್ತು ಪ್ರಕಟಿಸಿದ ಬಳಿಕವೂ ಇದು ಬ್ಯಾಡ್ಜ್‌ನಲ್ಲಿ ಒಳಗೊಂಡಿರಬೇಕು.

ನಿಮ್ಮ ಮೀಡಿಯಾದಲ್ಲಿ ಬ್ಯಾಡ್ಜ್ ಅನ್ನು ಸೇರಿಸಿ

ಬ್ಯಾಡ್ಜ್‌ಗಳನ್ನು ನಿಮ್ಮ ವೆಬ್‌ಸೈಟ್, ಸಾಮಾಜಿಕ ಮಾಧ್ಯಮ ಖಾತೆಗಳು ಅಥವಾ ಪ್ರಿಂಟ್ ಮೀಡಿಯಾದಲ್ಲಿ ಮಾತ್ರ ಬಳಸಬೇಕು. ಬ್ಯಾಡ್ಜ್ ಅನ್ನು ನಿಮ್ಮ ಪ್ರಚಾರದ ಕಂಟೆಂಟ್‌ನ ಕೆಳಗೆ ಅಥವಾ ಬಲಬದಿಯಲ್ಲಿ ಇರಿಸಿ. ನಿಮ್ಮ ಬ್ಯಾಡ್ಜ್, ಪುಟದಲ್ಲಿರುವ ಇತರ ಚಿತ್ರಗಳಿಗಿಂತ ಸಣ್ಣದಾಗಿರಬೇಕು.

ಬ್ಯಾಡ್ಜ್ ಅನ್ನು ಸೇರಿಸಲು, ಚಿತ್ರವನ್ನು ಈ ರೀತಿ ಫಾರ್ಮ್ಯಾಟ್ ಮಾಡಿ:

  • ಡಿಜಿಟಲ್ ಸ್ವತ್ತುಗಳು, ಸಮರ್ಥಿಸಬಹುದಾದ ವೆಕ್ಟರ್ ಫಾರ್ಮ್ಯಾಟ್ ಅಥವಾ SVG ಅನ್ನು ಬಳಸುತ್ತವೆ.
  • ಪ್ರಿಂಟ್ ಮಾಡಿದ ಸ್ವತ್ತುಗಳು ಆರ್ಟ್‌ವರ್ಕ್ ಅನ್ನು EPS ಫಾರ್ಮ್ಯಾಟ್‌ನಲ್ಲಿ ಬಳಸುತ್ತವೆ ಮತ್ತು ಬಣ್ಣದ ಪ್ರೊಫೈಲ್ ಅನ್ನು ನಿಮ್ಮ ಪ್ರಿಂಟರ್‌ನ ಅವಶ್ಯಕತೆಗಳಿಗೆ ತಕ್ಕಂತೆ ಹೊಂದಿಸುತ್ತವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14820091576668468898
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false