ಥರ್ಡ್ ಪಾರ್ಟಿ ಟ್ರಾಫಿಕ್‌ ಆ್ಯಟ್ರಿಬ್ಯೂಶನ್ ಅನ್ನು ಅನುಮತಿಸಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ಕೆಲವು ಉದ್ಯಮಗಳು ಹಾಗೂ ಪ್ರದೇಶಗಳು ಕಂಟೆಂಟ್ ಮತ್ತು ಜಾಹೀರಾತುಗಳ ವೀಕ್ಷಕರ ರೀಚ್ ಕುರಿತು ವರದಿ ಮಾಡುವ ಸಂಸ್ಥೆಗಳನ್ನು ಹೊಂದಿವೆ. ಈ ಥರ್ಡ್ ಪಾರ್ಟಿ ಏಜೆನ್ಸಿಗಳ ವರದಿಗಳು ಇತರ ಮಾಧ್ಯಮ ಘಟಕಗಳಿಗೆ ನಿಮ್ಮ ಮೌಲ್ಯವನ್ನು ಪ್ರದರ್ಶಿಸಿ, ಜಾಹೀರಾತುದಾರರಿಗೆ ಸೂಕ್ತ ಬಜೆಟ್‌ಗಳನ್ನು ನಿಗದಿಪಡಿಸಲು ಸಹಾಯ ಮಾಡಬಲ್ಲವು.

ಆ್ಯಟ್ರಿಬ್ಯೂಶನ್ ನಿಯಮಗಳನ್ನು ಸೆಟ್ ಮಾಡಿ

  1. Studio ಕಂಟೆಂಟ್ ಮ್ಯಾನೇಜರ್ಗೆ ಸೈನ್‌ ಇನ್‌ ಮಾಡಿ.
  2. ಎಡಭಾಗದ ಮೆನುವಿನಿಂದ, ಸೆಟ್ಟಿಂಗ್‌ಗಳು ಅನ್ನು ಆಯ್ಕೆ ಮಾಡಿ.
  3. ಸಮಗ್ರ ನೋಟ ವಿಭಾಗದಲ್ಲಿ, ಥರ್ಡ್ ಪಾರ್ಟಿ ಆ್ಯಟ್ರಿಬ್ಯೂಶನ್ ಎಂಬಲ್ಲಿಗೆ ಸ್ಕ್ರಾಲ್ ಮಾಡಿ.
  4. ವೀಡಿಯೊ ವೀಕ್ಷಣೆ ಆ್ಯಟ್ರಿಬ್ಯೂಶನ್ ಪಕ್ಕದಲ್ಲಿ, ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಸಂಬಂಧಿಸಿದ ವೀಡಿಯೊಗಳ ವೀಕ್ಷಣೆಗಳು ಥರ್ಡ್ ಪಾರ್ಟಿ ಏಜೆನ್ಸಿಗಳಿಗೆ ವರದಿಯಾಗಬೇಕೇ ಬೇಡವೇ ಎಂದು ಆಯ್ಕೆ ಮಾಡಿ:
    • ಸಕ್ರಿಯಗೊಳಿಸಿ: (ಡೀಫಾಲ್ಟ್ ಆಯ್ಕೆ) ವೀಡಿಯೊ ವೀಕ್ಷಣೆಗಳು ಥರ್ಡ್ ಪಾರ್ಟಿ ಮಾಪನ ವರದಿಗಳಲ್ಲಿ ಕಂಡುಬರುವುದನ್ನು ಅನುಮತಿಸುತ್ತದೆ. ವರದಿಗಳಲ್ಲಿ ಪ್ರದರ್ಶಿಸಬೇಕಾದ ಹೆಸರನ್ನು ಆ್ಯಟ್ರಿಬ್ಯೂಶನ್ ಡಿಸ್‌ಪ್ಲೇ ಹೆಸರು ಬಾಕ್ಸ್‌ನಲ್ಲಿ ನಿರ್ದಿಷ್ಟಪಡಿಸಿ.
    • ನಿಷ್ಕ್ರಿಯಗೊಳಿಸಿ: ವೀಡಿಯೊ ವೀಕ್ಷಣೆಗಳು ಥರ್ಡ್ ಪಾರ್ಟಿ ಮಾಪನ ವರದಿಗಳಲ್ಲಿ ಕಂಡುಬರುವುದನ್ನು ಅನುಮತಿಸುವುದಿಲ್ಲ.
  5. ನೀವು ವೀಡಿಯೊ ವೀಕ್ಷಣೆ ಆ್ಯಟ್ರಿಬ್ಯೂಶನ್ ಅನ್ನು ಸಕ್ರಿಯಗೊಳಿಸಿ ಎಂಬುದನ್ನು ಆಯ್ಕೆ ಮಾಡಿದರೆ, ಅದರ ಕೆಳಗಿನ ಚಾನಲ್‌ ಮಟ್ಟದ ಆ್ಯಟ್ರಿಬ್ಯೂಶನ್‌ಗೆ ಹೋಗಿ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿ:
    • ಸಕ್ರಿಯಗೊಳಿಸಿ: ಪ್ರತ್ಯೇಕ ಚಾನಲ್‌ಗಳ ಪ್ರಕಾರ ಟ್ರಾಫಿಕ್ ಅನ್ನು ‌ಬೇರ್ಪಡಿಸಲು ಅನುಮತಿಸುತ್ತದೆ.
    • ನಿಷ್ಕ್ರಿಯಗೊಳಿಸಿ: (ಡೀಫಾಲ್ಟ್ ಆಯ್ಕೆ) ಪ್ರತ್ಯೇಕ ಚಾನಲ್‌ಗಳ ಪ್ರಕಾರ ಟ್ರಾಫಿಕ್ ಅನ್ನು ಬೇರ್ಪಡಿಸಲು ಅನುಮತಿಸುವುದಿಲ್ಲ.
  1. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5882023497781660442
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false