ವಯಸ್ಸಿನ ಟಾರ್ಗೆಟಿಂಗ್ ಮತ್ತು ಜಾಹೀರಾತುಗಳು

YouTube ವಯಸ್ಸಿನ ಸ್ಕ್ರೀನಿಂಗ್:

ವೀಡಿಯೊಗಳು ಅಥವಾ ಬ್ರ್ಯಾಂಡ್ ಚಾನಲ್‌ಗಳ ಸಂದರ್ಭದಲ್ಲಿ ಜಾಹೀರಾತುದಾರರ ಆಯ್ಕೆಯ ಮೂಲಕ ಅಥವಾ ಒಂದು ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಯ ನಂತರ ವಯಸ್ಸಿನ ಸ್ಕ್ರೀನಿಂಗ್ ಮಾಡಲಾಗುತ್ತದೆ. ಕೇವಲ “ಸೂಕ್ತ ವಯಸ್ಸನ್ನು ದಾಟಿರುವ” ವೀಕ್ಷಕರು YouTube ಗೆ ಸೈನ್ ಇನ್ ಮಾಡಿ ಈ ಕಂಟೆಂಟ್ ಅನ್ನು ವೀಕ್ಷಿಸಲು ಸಾಧ್ಯ. ಕೆಲವೊಮ್ಮೆ, ಒಂದು ವೀಡಿಯೊವನ್ನು ಜಾಹೀರಾತುದಾರರು ಜಾಹೀರಾತಿನಲ್ಲಿ ಬಳಸುವ ಮೊದಲು ಅದರ ವಯಸ್ಸಿನ ಸ್ಕ್ರೀನಿಂಗ್ ಮಾಡಬೇಕಾಗುತ್ತದೆ (ಉದಾಹರಣೆಗೆ ಮದ್ಯದ ಅಭಿಯಾನಕ್ಕೆ ರಚಿಸಲಾದ ಒಂದು ಪ್ರಚಾರ ವೀಡಿಯೊ ಜಾಹೀರಾತು). YouTube ವಯಸ್ಸಿನ ಸ್ಕ್ರೀನಿಂಗ್, ವೀಡಿಯೊ ವೀಕ್ಷಣಾ ಪುಟದಲ್ಲಿ ವಯಸ್ಸಿನ ಸ್ಕ್ರೀನಿಂಗ್ ವಿನಂತಿಗಳಿಗೆ ಲಭ್ಯವಿರುವ ಏಕೈಕ ಆಯ್ಕೆಯಾಗಿದೆ.

ಜಾಹೀರಾತುಗಳಿಗಾಗಿ ವಯಸ್ಸು ಆಧಾರಿತ ಡೆಮೋಗ್ರಾಫಿಕ್ ಟಾರ್ಗೆಟಿಂಗ್:

ಕೆಲವೊಮ್ಮೆ ನಮ್ಮ ಕಾರ್ಯನೀತಿಗಳು ಅಥವಾ ಜಾಹೀರಾತುದಾರರಿಗೆ ತಕ್ಕಂತೆ ಜಾಹೀರಾತನ್ನು ಒಂದು ನಿರ್ದಿಷ್ಟ ವಯಸ್ಸಿನ ಡೆಮೋಗ್ರಾಫಿಕ್‌ಗೆ ಟಾರ್ಗೆಟ್ ಮಾಡಬೇಕಾಗುತ್ತದೆ. ನಮ್ಮ ಜಾಹೀರಾತು ಸರ್ವ್ ಮಾಡುವ ತಂತ್ರಜ್ಞಾನವು ಸೈನ್-ಇನ್ ಮಾಡಿರುವ YouTube ಬಳಕೆದಾರರ ಜನ್ಮ ದಿನಾಂಕಗಳ ಆಧಾರದ ಮೇಲೆ ಇಂತಹ ಜಾಹೀರಾತುಗಳನ್ನು ಟಾರ್ಗೆಟ್ ಮಾಡಬಲ್ಲದು. ಉದಾಹರಣೆಗೆ, ನಮ್ಮ ಕಾರ್ಯನೀತಿಗಳ ಪ್ರಕಾರ ಒಂದು ಜಾಹೀರಾತು ಸಾಮಾನ್ಯ ಪ್ರೇಕ್ಷಕರಿಗೆ ಸೂಕ್ತವಲ್ಲದಿದ್ದರೆ, ಆ ಜಾಹೀರಾತನ್ನು 18 ವರ್ಷ ಮೇಲ್ಪಟ್ಟ ವೀಕ್ಷಕರಿಗೆ ಡೆಮೋ-ಟಾರ್ಗೆಟ್ ಮಾಡಬೇಕಾಗುತ್ತದೆ. ಇದರರ್ಥ ಕನಿಷ್ಠ 18 ವರ್ಷ ವಯಸ್ಸಿನ ಸೈನ್-ಇನ್ ಆಗಿರುವ ವೀಕ್ಷಕರು ಮಾತ್ರ ನಮ್ಮ ಸೈಟ್‌ನಲ್ಲಿ ಈ ಜಾಹೀರಾತನ್ನು ಪಡೆಯುತ್ತಾರೆ. ಸೈನ್ ಔಟ್ ಆಗಿರುವ ವೀಕ್ಷಕರು ಬೇರೆ ಜಾಹೀರಾತನ್ನು ಪಡೆಯುತ್ತಾರೆ.

ಕಸ್ಟಮ್ ನಿರ್ಮಿತ ವಯಸ್ಸಿನ ಸ್ಕ್ರೀನಿಂಗ್‌ಗಳು:

ಮದ್ಯ, ಗೇಮಿಂಗ್ ಮತ್ತು ಚಲನಚಿತ್ರ ಜಾಹೀರಾತುದಾರರು ಹೋಮ್ ಪೇಜ್ ಜಾಹೀರಾತುಗಳಿಗಾಗಿ ಕಸ್ಟಮ್ ವಯಸ್ಸಿನ ಸ್ಕ್ರೀನಿಂಗ್‌ಗಳನ್ನು ನಿರ್ಮಿಸಬಹುದು. ನಾವಿದನ್ನು ಅನುಮತಿಸಲು ಕಾರಣ, ಇವುಗಳು ಅತಿ ಹೆಚ್ಚು ರೆಗ್ಯುಲೇಟ್ ಮಾಡಲಾದ ಉದ್ಯಮಗಳಾಗಿದ್ದು, YouTube ನ ವಯಸ್ಸಿನ ಸ್ಕ್ರೀನಿಂಗ್ ಉದ್ಯಮದ ರೆಗ್ಯುಲೇಶನ್‌ಗಳನ್ನು ಪೂರೈಸದೇ ಇರಬಹುದು. ಉದಾಹರಣೆಗೆ, ವೀಡಿಯೊ ಗೇಮ್ ಜಾಹೀರಾತುದಾರರು ಒಂದು ಮೆಚ್ಯೂರ್ ರೇಟೆಡ್ ಗೇಮ್‌ನಲ್ಲಿ ESRB ಮಾರ್ಗಸೂಚಿಗಳನ್ನು ಪೂರೈಸಬೇಕಾಗಬಹುದು. ಕಸ್ಟಮ್ ವಯಸ್ಸಿನ ಸ್ಕ್ರೀನಿಂಗ್‌ಗಳಿಗಾಗಿ ಈ ಜಾಹೀರಾತುದಾರರ ವಿನಂತಿಗಳನ್ನು, ಮುಂಗಡ ಅನುಮೋದನೆಗಾಗಿ YouTube ಜಾಹೀರಾತುಗಳು ಕಾರ್ಯನೀತಿ ತಂಡಕ್ಕೆ ಸಲ್ಲಿಸಬೇಕು. ಇತರ ಎಲ್ಲಾ ವರ್ಟಿಕಲ್‌ಗಳ ಜಾಹೀರಾತುದಾರರು ಬ್ರ್ಯಾಂಡ್ ಚಾನಲ್‌ಗಳು ಮತ್ತು ವೀಡಿಯೊ ವೀಕ್ಷಣಾ ಪುಟಗಳಲ್ಲಿ ಲಭ್ಯವಿರುವ ಪ್ರಮಾಣಿತ YouTube ವಯಸ್ಸಿನ ಸ್ಕ್ರೀನಿಂಗ್ ಫೀಚರ್‌ಗಳನ್ನು ಬಳಸಬೇಕಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1460633902621661
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false