YouTube Shorts ಅನ್ನು ಅಪ್‌ಲೋಡ್ ಮಾಡಿ

YouTube Shorts ಎಂಬುದು, ಯಾರೂ ಸಹ ಒಂದು ಪರಿಕಲ್ಪನೆಯನ್ನು ವಿಶ್ವದ ಯಾವುದೇ ಭಾಗದಲ್ಲಿರುವ ಹೊಸ ಪ್ರೇಕ್ಷಕರ ಜೊತೆ ಸಂಪರ್ಕದಲ್ಲಿರುವುದಕ್ಕೆ ಒಂದು ಅವಕಾಶವನ್ನಾಗಿ ಬದಲಾಯಿಸುವ ವಿಧಾನವಾಗಿದೆ. YouTube ನ Shorts ತಯಾರಿಸುವ ಟೂಲ್‌ಗಳನ್ನು ಬಳಸಿಕೊಂಡು, ನೀವು ಶಾರ್ಟ್-ಫಾರ್ಮ್ ವರ್ಟಿಕಲ್ ವೀಡಿಯೊವನ್ನು Short ಆಗಿ ಅಪ್‌ಲೋಡ್ ಮಾಡಬಹುದು.

YouTube Shorts

Shorts ಅನ್ನು ಅಪ್‌ಲೋಡ್ ಮಾಡಿ

YouTube ಆ್ಯಪ್

ನಿಮ್ಮ ಸಾಧನದಿಂದ Short ಅನ್ನು ಅಪ್‌ಲೋಡ್ ಮಾಡಲು:

  1. ರಚಿಸಿ ನಂತರ ವೀಡಿಯೊವನ್ನು ಅಪ್‌ಲೋಡ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  2. ಚೌಕ ಅಥವಾ ವರ್ಟಿಕಲ್ ದೃಶ್ಯಾನುಪಾತವನ್ನು ಹೊಂದಿರುವ ವೀಡಿಯೊವನ್ನು ಆಯ್ಕೆ ಮಾಡಿ:
    • 60 ಸೆಕೆಂಡ್‌ಗಳವರೆಗಿನ ವೀಡಿಯೊಗಳು ಟ್ರಿಮ್ ಎಡಿಟರ್ ಅನ್ನು ತೋರಿಸುತ್ತವೆ. ವೀಡಿಯೊದ ಪ್ರಾರಂಭ ಸಮಯ ಮತ್ತು ಮುಕ್ತಾಯ ಸಮಯವನ್ನು ಬದಲಾಯಿಸಲು ಪಟ್ಟಿಯ ಬದಿಗಳನ್ನು ಡ್ರ್ಯಾಗ್ ಮಾಡಿ. ಬಾಕ್ಸ್‌ನ ಒಳಗೆ ಇಲ್ಲದ ಭಾಗವು Short ನಲ್ಲಿ ಕಾಣಿಸುವುದಿಲ್ಲ.
    • 60 ಸೆಕೆಂಡ್‌ಗಳಿಗಿಂತ ದೀರ್ಘವಾದ ವೀಡಿಯೊಗಳಿಗಾಗಿ, ನಿಮ್ಮ ವೀಡಿಯೊವನ್ನು 60 ಸೆಕೆಂಡ್‌ಗಳು ಅಥವಾ ಕಡಿಮೆ ಸಮಯಕ್ಕೆ ಟ್ರಿಮ್ ಮಾಡಲು, Short ಆಗಿ ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  3. ನಿಮ್ಮ Short ನಲ್ಲಿ ಪಠ್ಯ, ಫಿಲ್ಟರ್‌ಗಳು, ಸಂಗೀತ ಅಥವಾ ಇತರ ಆಡಿಯೋವನ್ನು ಸೇರಿಸಬಹುದಾದ ಎಡಿಟರ್ ಸ್ಕ್ರೀನ್‌ಗೆ ಹೋಗಲು ಮುಂದೆ ಎಂಬುದನ್ನು ಟ್ಯಾಪ್ ಮಾಡಿ.
    ಗಮನಿಸಿ: ನಮ್ಮ ಲೈಬ್ರರಿಯಿಂದ ಆರಿಸಿದ ಆಡಿಯೋ, 15-ಸೆಕೆಂಡ್‌ನ ಕ್ಲಿಪ್‌ಗಳಿಗೆ ಸೀಮಿತವಾಗಿರುತ್ತದೆ.
  4. ಶೀರ್ಷಿಕೆ (ಗರಿಷ್ಠ 100 ಕ್ಯಾರೆಕ್ಟರ್‌ಗಳು) ಮತ್ತು ಗೌಪ್ಯತೆ ಸೆಟ್ಟಿಂಗ್‌ಗಳಂತಹ ವಿವರಗಳನ್ನು ನಿಮ್ಮ ವೀಡಿಯೊದಲ್ಲಿ ಸೇರಿಸುವುದಕ್ಕಾಗಿ ಮುಂದೆ ಎಂಬುದನ್ನು ಟ್ಯಾಪ್ ಮಾಡಿ.
    ಗಮನಿಸಿ: 13–17 ವರ್ಷ ವಯಸ್ಸಿನ ರಚನೆಕಾರರಿಗೆ ಡೀಫಾಲ್ಟ್ ವೀಡಿಯೊ ಗೌಪ್ಯತೆ ಸೆಟ್ಟಿಂಗ್ ಖಾಸಗಿ ಆಗಿರುತ್ತದೆ. ನಿಮಗೆ 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ, ನಿಮ್ಮ ಡೀಫಾಲ್ಟ್ ವೀಡಿಯೊ ಗೌಪ್ಯತೆ ಸೆಟ್ಟಿಂಗ್ ಅನ್ನು ಸಾರ್ವಜನಿಕ ಎಂಬುದಾಗಿ ಸೆಟ್ ಮಾಡಲಾಗುತ್ತದೆ. ಪ್ರತಿಯೊಬ್ಬರೂ ಈ ಸೆಟ್ಟಿಂಗ್‌ಗಳುನ್ನು ಸಾರ್ವಜನಿಕ, ಖಾಸಗಿ, ಅಥವಾ ಪಟ್ಟಿ ಮಾಡದಿರುವುದುಎಂದು ಬದಲಾಯಿಸಿಕೊಳ್ಳಬಹುದು.
  5. ನಿಮ್ಮ ಪ್ರೇಕ್ಷಕರನ್ನು ಆಯ್ಕೆ ಮಾಡಲು,ಪ್ರೇಕ್ಷಕರನ್ನು ಆಯ್ಕೆ ಮಾಡಿ ನಂತರ “ಹೌದು, ಇದನ್ನು ಮಕ್ಕಳಿಗಾಗಿ ರಚಿಸಲಾಗಿದೆ" ಅಥವಾ "ಇಲ್ಲ, ಇದನ್ನು ಮಕ್ಕಳಿಗಾಗಿ ರಚಿಸಿಲ್ಲ" ಎಂಬುದನ್ನು ಟ್ಯಾಪ್ ಮಾಡಿ. ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
  6. ನಿಮ್ಮ Short ಅನ್ನು ಪ್ರಕಟಿಸಲು ಅಪ್‌ಲೋಡ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

YouTube Studio ಆ್ಯಪ್

  1. YouTube Studio ಆ್ಯಪ್ ತೆರೆಯಿರಿ.
  2. ಮೇಲ್ಭಾಗದಲ್ಲಿ, ರಚಿಸಿ  ನಂತರವೀಡಿಯೊವನ್ನು ಅಪ್‌ಲೋಡ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  3. ನೀವು ಅಪ್‌ಲೋಡ್ ಮಾಡಲು ಬಯಸುವ ಫೈಲ್ ಅನ್ನು ಆಯ್ಕೆಮಾಡಿ
  4. ಶೀರ್ಷಿಕೆ (ಗರಿಷ್ಠ 100 ಅಕ್ಷರಗಳು), ಗೌಪ್ಯತೆ ಸೆಟ್ಟಿಂಗ್‌ಗಳು ಮತ್ತು ನಿಮ್ಮ ಪ್ರೇಕ್ಷಕರಂತಹ ವಿವರಗಳನ್ನು ನಿಮ್ಮ ವೀಡಿಯೊದಲ್ಲಿ ಸೇರಿಸಿ. ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
  5. ನಿಮ್ಮ Short ಅನ್ನು ಪ್ರಕಟಿಸಲು SHORT ಅನ್ನು ಅಪ್‌ಲೋಡ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ನಿಮ್ಮ ಮೊದಲ Short ಅನ್ನು ಅಪ್‌ಲೋಡ್ ಮಾಡುವ ಮೊದಲು ಪಾಯಿಂಟರ್‌ಗಳನ್ನು ಹುಡುಕುತ್ತಿದ್ದೀರಾ? Shorts ಅಪ್‌ಲೋಡ್ ಸಲಹೆಗಳನ್ನು ನೋಡಿ.

ನೀವು ಬೇರೆಲ್ಲಿಯಾದರೂ ರಚಿಸಿದ Short ವೀಡಿಯೊವನ್ನು ಅಪ್‌ಲೋಡ್ ಮಾಡಿದರೆ, ನೀವು ಬಳಸಿದ ಯಾವುದೇ ಕೃತಿಸ್ವಾಮ್ಯ-ಸಂರಕ್ಷಿತ ಸಾಮಗ್ರಿಯು YouTube ನಲ್ಲಿ ನೀವು ಬಳಸುವುದಕ್ಕಾಗಿ ಅನುಮೋದಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕೃತಿಸ್ವಾಮ್ಯ-ಸಂರಕ್ಷಿತ ಕಂಟೆಂಟ್ ಅನ್ನು ನೀವು ಬಳಸಿದರೆ, Content ID ಕ್ಲ್ಲೈಮ್ ಪಡೆಯಲು ಅದು ಕಾರಣವಾಗಬಹುದು. ಮಾತ್ರವಲ್ಲದೆ, ನಿಮ್ಮ Short ವೀಡಿಯೊದ ವಿರುದ್ಧ ಹಕ್ಕುಸ್ವಾಮ್ಯದ ಮಾಲೀಕರು, ಕಲಾವಿದರ ಲೇಬಲ್ ಅಥವಾ ವಿತರಕರು ನಮಗೆ ಮಾನ್ಯವಾದ ಮತ್ತು ಪೂರ್ಣವಾದ ಕೃತಿಸ್ವಾಮ್ಯ ತೆಗೆದುಹಾಕುವಿಕೆ ಸೂಚನೆಯನ್ನು ಕಳುಹಿಸಿದರೆ, ಅದನ್ನು ತೆಗೆದುಹಾಕಲಾಗುತ್ತದೆ ಮತ್ತು ನೀವು ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಪಡೆಯಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6503075617996841366
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false