ಟಿವಿಯಲ್ಲಿ ಸ್ಥಳ ಹಂಚಿಕೆ ಮತ್ತು ಪ್ಲೇಬ್ಯಾಕ್ ಪ್ರದೇಶ

YouTube Primetime ಚಾನಲ್‌‌ಗಳಲ್ಲಿ ನಿರ್ದಿಷ್ಟ ಕ್ರೀಡೆಗಳು, ಶೋಗಳು ಮತ್ತು ಇತರ ಕಂಟೆಂಟ್ ಅನ್ನು ವೀಕ್ಷಿಸಲು, ನೀವು ಸ್ಥಳ ಹಂಚಿಕೆಯನ್ನು ಆನ್ ಮಾಡಬೇಕು ಮತ್ತು ನಿಮ್ಮ ಪ್ಲೇಬ್ಯಾಕ್ ಪ್ರದೇಶವನ್ನು ಸೆಟ್ ಮಾಡಬೇಕು. ನಿಮ್ಮ ಸ್ಥಳವನ್ನು ದೃಢೀಕರಿಸುವುದು ಅಗತ್ಯವಾಗಿದೆ, ಏಕೆಂದರೆ ಕೆಲವೊಮ್ಮೆ ನೀವು ನೋಡುವ ಕಂಟೆಂಟ್ ನಿಮ್ಮ ಸ್ಥಳವನ್ನು ಆಧರಿಸಿರಬಹುದು.

ನೀವು ಈಗಾಗಲೇ ಸ್ಥಳ ಹಂಚಿಕೆಯನ್ನು ಸಕ್ರಿಯಗೊಳಿಸಿದ್ದರೆ ಮತ್ತು ಕೇವಲ ನಿಮ್ಮ ಪ್ಲೇಬ್ಯಾಕ್ ಪ್ರದೇಶವನ್ನು ಅಪ್‌ಡೇಟ್ ಮಾಡಬೇಕಿದೆ ಎಂದಾದರೆ, ಈ ಹಂತಗಳನ್ನು ಅನುಸರಿಸಿ. ನಿಮಗೆ ಯಾವುದೇ ದೋಷ ಸಂದೇಶಗಳು ಕಂಡುಬಂದರೆ, ಈ ಹಂತಗಳು ಸಹಾಯ ಮಾಡಬಹುದು.

NFL ಸಂಡೇ ಟಿಕೆಟ್‌ನಲ್ಲಿ ಲೈವ್ ಅಥವಾ ಮುಂಬರುವ ಗೇಮ್‌ನ ಹಾಗೆ, ಸ್ಥಳ ದೃಢೀಕರಣದ ಅಗತ್ಯವಿರುವ ಪ್ರೋಗ್ರಾಂ ಅನ್ನು ವೀಕ್ಷಿಸಲು ನೀವು ಆಯ್ಕೆ ಮಾಡಿಕೊಂಡಾಗ, ನಿಮ್ಮ ಸ್ಥಳವನ್ನು ದೃಢೀಕರಿಸುವುದಕ್ಕಾಗಿ ಮೊಬೈಲ್ ಸಾಧನದಲ್ಲಿ ಸ್ಥಳ ಹಂಚಿಕೆಯನ್ನು ಬಳಸಲು ಸೂಚಿಸುವ ಒಂದು ಪ್ರಾಂಪ್ಟ್ ನಿಮಗೆ ಕಾಣಿಸುತ್ತದೆ. ಪೂರ್ಣಗೊಳಿಸಿದ ಬಳಿಕ, ಇದು ನಿಮ್ಮ “ಪ್ಲೇಬ್ಯಾಕ್ ಪ್ರದೇಶವನ್ನು” ಸೆಟ್ ಮಾಡುತ್ತದೆ.

ನಿಮ್ಮ ಟಿವಿಯಲ್ಲಿ Primetime ಚಾನಲ್‌ಗಳನ್ನು ವೀಕ್ಷಿಸಲು ಸ್ಥಳ ಹಂಚಿಕೆಯನ್ನು ಆನ್ ಮಾಡುವುದು ಹೇಗೆ

ನಿಮ್ಮ ಟಿವಿಯಲ್ಲಿ ನೀವು YouTube ಆ್ಯಪ್ ಅನ್ನು ಬಳಸುತ್ತಿದ್ದರೆ, ನಿಮ್ಮ ಸ್ಥಳವನ್ನು ದೃಢೀಕರಿಸಲು ಮತ್ತು ನಿಮ್ಮ ಪ್ಲೇಬ್ಯಾಕ್ ಪ್ರದೇಶವನ್ನು ಸೆಟ್ ಮಾಡಲು ನಿಮ್ಮ ಟಿವಿ ಹಾಗೂ ನಿಮ್ಮ ಮೊಬೈಲ್ ಸಾಧನ - ಇವೆರಡರ ಅಗತ್ಯವೂ ಇರುತ್ತದೆ. ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ನಿಮ್ಮ ಮೊಬೈಲ್ ವೆಬ್ ಬ್ರೌಸರ್‌ಗಾಗಿ ನೀವು ಸ್ಥಳ ಹಂಚಿಕೆಯನ್ನು ಆನ್ ಮಾಡಬೇಕಾಗುತ್ತದೆ. ನಿಮ್ಮ ಟಿವಿಯಲ್ಲಿನ YouTube ಆ್ಯಪ್ ನಿಮ್ಮ ಸ್ಥಳವನ್ನು ದೃಢೀಕರಿಸಲು, ಇದು ಅವಕಾಶ ನೀಡುತ್ತದೆ.

ಸ್ಥಳ ಹಂಚಿಕೆಯನ್ನು ಆನ್ ಮಾಡಿ

ನಿಮ್ಮ ಸ್ಮಾರ್ಟ್ ಟಿವಿ ಅಥವಾ ಇತರ ಸ್ಟ್ರೀಮಿಂಗ್ ಸಾಧನದಲ್ಲಿ, NFL ಸಂಡೇ ಟಿಕೆಟ್ ಸೇರಿದಂತೆ Primetime ಚಾನಲ್‌ಗಳನ್ನು ವೀಕ್ಷಿಸಲು ಅಥವಾ ಬಿತ್ತರಿಸಲು, ನೀವು ಸ್ಥಳ ಹಂಚಿಕೆಯನ್ನು ಆನ್ ಮಾಡಬೇಕು ಮತ್ತು ನಿಮ್ಮ ಪ್ಲೇಬ್ಯಾಕ್ ಪ್ರದೇಶವನ್ನು ದೃಢೀಕರಿಸಬೇಕು.

ಸಲಹೆ: ಕೆಳಗಿನ ಹಂತಗಳನ್ನು ಪೂರ್ಣಗೊಳಿಸುವ ಮೊದಲು ನಿಮ್ಮ ಮೊಬೈಲ್ ಸಾಧನ ಹಾಗೂ ನಿಮ್ಮ ಟಿವಿಯಲ್ಲಿ YouTube ಆ್ಯಪ್‌ನ ಆವೃತ್ತಿಗಳು ಅಪ್‌ ಟು ಡೇಟ್‌‌ ಆಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಆವೃತ್ತಿಗಳು ಅಪ್‌ಡೇಟ್ ಆಗಿವೆಯೇ ಎಂಬುದನ್ನು ನೀವು ಆ್ಯಪ್ ಸೆಟ್ಟಿಂಗ್‌ಗಳಲ್ಲಿ ಪರಿಶೀಲಿಸಬಹುದು.

Safari ಯಲ್ಲಿ ಸ್ಥಳ ಹಂಚಿಕೆಯನ್ನು ಆನ್ ಮಾಡಿ:

  1. ನಿಮ್ಮ ಸಾಧನದ ಸೆಟ್ಟಿಂಗ್‌ಗಳಿಗೆ Settings ಹೋಗಿ.
  2. ಗೌಪ್ಯತೆ ಮತ್ತು ಭದ್ರತೆ ಅನ್ನು ಟ್ಯಾಪ್ ಮಾಡಿ ನಂತರಸ್ಥಳ ಸೇವೆಗಳು ಎಂಬುದನ್ನು ಟ್ಯಾಪ್ ಮಾಡಿ.
  3. ನಿಮ್ಮ ಸ್ಕ್ರೀನ್‌ನ ಮೇಲ್ಭಾಗದಲ್ಲಿ "ಸ್ಥಳ ಸೇವೆಗಳು" ಎಂಬುದನ್ನು ಆನ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಬಟನ್ ಹಸಿರು ಬಣ್ಣಕ್ಕೆ ತಿರುಗುತ್ತದೆ.
  4. Safari ವೆಬ್‌ಸೈಟ್‌ಗಳು ಎಂಬುದನ್ನು ಹುಡುಕಲು ಸ್ಕ್ರಾಲ್ ಮಾಡಿ ಮತ್ತು ಟ್ಯಾಪ್ ಮಾಡಿ ನಂತರ ಸ್ಥಳ ಎಂಬುದನ್ನು ಟ್ಯಾಪ್ ಮಾಡಿ.
  5. “ಮುಂದಿನ ಬಾರಿ ಅಥವಾ ನಾನು ಹಂಚಿಕೊಳ್ಳುವಾಗ ಕೇಳಿ” ಅಥವಾ “ಆ್ಯಪ್ ಅನ್ನು ಬಳಸುವಾಗ” ಎಂಬುದನ್ನು ಆಯ್ಕೆಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
  6. Safari ನಿಮ್ಮ ಡೀಫಾಲ್ಟ್ ಬ್ರೌಸರ್ ಆಗಿದ್ದರೆ, ನಿಮ್ಮ ಸಾಧನದ ಡೀಫಾಲ್ಟ್ ಸ್ಥಳ ಹಂಚಿಕೆ ಸೆಟ್ಟಿಂಗ್‌ಗಳನ್ನು ಸಹ ನೀವು ಸೆಟ್ ಮಾಡಬಹುದು. ಸೆಟ್ಟಿಂಗ್‌ಗಳಿಗೆ Settings ಹಿಂದಿರುಗಿ.
  7. Safari ಅನ್ನು ಹುಡುಕಲು ಸ್ಕ್ರಾಲ್ ಮಾಡಿ ಮತ್ತು ಟ್ಯಾಪ್ ಮಾಡಿ ನಂತರ ಸ್ಥಳ ಎಂಬುದನ್ನು ಟ್ಯಾಪ್ ಮಾಡಿ.
  8. “ಕೇಳಿ” ಅಥವಾ “ಅನುಮತಿಸಿ” ಎಂಬುದನ್ನು ಆಯ್ಕೆ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ನಿಮ್ಮ iPhone ಅಥವಾ iPad ನಲ್ಲಿ, Chrome ನಂತಹ ಬೇರೊಂದು ಮೊಬೈಲ್ ವೆಬ್ ಬ್ರೌಸರ್‌ಗಾಗಿ ಸ್ಥಳ ಹಂಚಿಕೆಯನ್ನು ಆನ್ ಮಾಡಲು:

  1. ಸೆಟ್ಟಿಂಗ್‌ಗಳು Settings ಎಂಬಲ್ಲಿಗೆ ಹೋಗಿ.
  2. ನಿಮ್ಮ ಮೊಬೈಲ್ ವೆಬ್ ಬ್ರೌಸರ್ ಐಕಾನ್ ಅನ್ನು ಹುಡುಕಲು ಸ್ಕ್ರಾಲ್ ಮಾಡಿ ಮತ್ತು ಟ್ಯಾಪ್ ಮಾಡಿ ನಂತರ ಸ್ಥಳ ಎಂಬುದನ್ನು ಟ್ಯಾಪ್ ಮಾಡಿ.
  3. “ಮುಂದಿನ ಬಾರಿ ಅಥವಾ ನಾನು ಹಂಚಿಕೊಳ್ಳುವಾಗ ಕೇಳಿ” ಅಥವಾ “ಆ್ಯಪ್ ಅನ್ನು ಬಳಸುವಾಗ” ಎಂಬುದನ್ನು ಆಯ್ಕೆಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

YouTube ಆ್ಯಪ್‌ಗಾಗಿ ಸ್ಥಳ ಹಂಚಿಕೆಯನ್ನು ಆನ್ ಮಾಡಿ:

  1. ನಿಮ್ಮ ಸಾಧನದ ಸೆಟ್ಟಿಂಗ್‌ಗಳಿಗೆ Settings ಹೋಗಿ.
  2. ಗೌಪ್ಯತೆ ಮತ್ತು ಭದ್ರತೆ ಅನ್ನು ಟ್ಯಾಪ್ ಮಾಡಿ ನಂತರಸ್ಥಳ ಸೇವೆಗಳು ಎಂಬುದನ್ನು ಟ್ಯಾಪ್ ಮಾಡಿ.
  3. ನಿಮ್ಮ ಸ್ಕ್ರೀನ್‌ನ ಮೇಲ್ಭಾಗದಲ್ಲಿ "ಸ್ಥಳ ಸೇವೆಗಳು" ಎಂಬುದನ್ನು ಆನ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಬಟನ್ ಹಸಿರು ಬಣ್ಣಕ್ಕೆ ತಿರುಗುತ್ತದೆ.
  4. YouTube  ಅನ್ನು ಹುಡುಕಲು ಸ್ಕ್ರಾಲ್ ಮಾಡಿ ಮತ್ತು ಟ್ಯಾಪ್ ಮಾಡಿ.
  5. “ಮುಂದಿನ ಬಾರಿ ಅಥವಾ ನಾನು ಹಂಚಿಕೊಳ್ಳುವಾಗ ಕೇಳಿ” ಅಥವಾ “ಆ್ಯಪ್ ಅನ್ನು ಬಳಸುವಾಗ” ಎಂಬುದನ್ನು ಆಯ್ಕೆಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ನಿಮ್ಮ ಟಿವಿಯಲ್ಲಿ ನಿಮ್ಮ ಪ್ಲೇಬ್ಯಾಕ್ ಪ್ರದೇಶವನ್ನು ದೃಢೀಕರಿಸಿ ಅಥವಾ ಬದಲಾಯಿಸಿ

ನಿಮ್ಮ ಮೊಬೈಲ್ ಬ್ರೌಸರ್‌ಗಾಗಿ ಸ್ಥಳ ಹಂಚಿಕೆಯನ್ನು ಆನ್ ಮಾಡಿದ ನಂತರ, ನಿಮ್ಮ ಟಿವಿಯಲ್ಲಿ ವೀಕ್ಷಿಸುವುದಕ್ಕಾಗಿ ಕಂಟೆಂಟ್ ಅನ್ನು ಆಯ್ಕೆ ಮಾಡಿ. ‘ನಿಮ್ಮ ಪ್ರಸ್ತುತ ಪ್ಲೇಬ್ಯಾಕ್ ಪ್ರದೇಶವನ್ನು ದೃಢೀಕರಿಸಿ’ ಎಂಬ ಸಂದೇಶವನ್ನು ನೀವು ಸ್ವೀಕರಿಸಿದರೆ, ಈ ಹಂತಗಳನ್ನು ಅನುಸರಿಸಿ:

  1. ಮೊಬೈಲ್ ಬ್ರೌಸರ್‌ನಿಂದ ನಂತರ youtube.com/locate ಗೆ ಹೋಗಿ, ನಿಮ್ಮ ಟಿವಿ ಅಥವಾ ಸ್ಟ್ರೀಮಿಂಗ್ ಸಾಧನದಲ್ಲಿ ನೀವು ಸೈನ್ ಇನ್ ಮಾಡಿರುವ ಅದೇ Google ಖಾತೆಗೆ ಸೈನ್ ಇನ್ ಮಾಡಿ. 
    • ಸಲಹೆ: ನಿಮ್ಮ ಖಾತೆಯ ಇಮೇಲ್ ವಿಳಾಸವನ್ನು ನಿಮ್ಮ ಟಿವಿ ಸ್ಕ್ರೀನ್‌ನಲ್ಲಿ ಸೆಟ್ಟಿಂಗ್‌ಗಳುನಂತರ ಖರೀದಿಗಳು ಮತ್ತು ಸದಸ್ಯತ್ವಗಳು ಎಂಬುದರ ಅಡಿಯಲ್ಲಿ ತೋರಿಸಲಾಗುತ್ತದೆ.
  2. ಸೈನ್ ಇನ್ ಮಾಡಿದ ನಂತರ, ನಿಮ್ಮ ಬ್ರೌಸರ್‌ಗಾಗಿ ಸ್ಥಳ ಹಂಚಿಕೆಯನ್ನು ಆನ್ ಮಾಡಲು ಒಂದು ಪಾಪ್ಅಪ್‌ ಕಾಣಿಸುತ್ತದೆ. ಮುಂದಿನದು ನಂತರ ಅನುಮತಿಸಿ ಎಂಬುದನ್ನು ಟ್ಯಾಪ್ ಮಾಡಿ.
  3. ನಿಮ್ಮ ಮೊಬೈಲ್ ಸಾಧನದಲ್ಲಿ youtube.com/locate ಪುಟವನ್ನು ರಿಫ್ರೆಶ್ ಮಾಡಿ ನಂತರ ತೊರೆಯಿರಿ ಮತ್ತು ನಿಮ್ಮ ಟಿವಿಯಲ್ಲಿ ಆ್ಯಪ್ ಅನ್ನು ಮತ್ತೊಮ್ಮೆ ತೆರೆಯಿರಿ.

ನಿಮ್ಮ ಟಿವಿಯಲ್ಲಿ ಅಪ್‌ಡೇಟ್ ಆಗುತ್ತಿರುವುದು ಕಾಣಿಸದಿದ್ದರೆ, ನಿಮ್ಮ ಮೊಬೈಲ್ ಬ್ರೌಸರ್ ಹಾಗೂ ಟಿವಿ - ಎರಡರಲ್ಲೂ ನೀವು ಸರಿಯಾದ ಖಾತೆಗೆ ಸೈನ್ ಇನ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ನಂತರ, ತೊರೆಯಲು ಮತ್ತು ನಿಮ್ಮ ಟಿವಿಯಲ್ಲಿ ಆ್ಯಪ್ ಅನ್ನು ಮತ್ತೊಮ್ಮೆ ತೆರೆಯಲು ಪ್ರಯತ್ನಿಸಿ. ಇದು ಸಹ ಕೆಲಸ ಮಾಡದಿದ್ದರೆ, ನಿಮ್ಮ ಕ್ಯಾಷ್ ಹಾಗೂ ಕುಕೀಗಳನ್ನು ತೆರವುಗೊಳಿಸಿ ನೋಡಿ ಮತ್ತು ಪುನಃ ಪ್ರಯತ್ನಿಸಿ.

‘ಪ್ರದೇಶದ ಅಪ್‌ಡೇಟ್ ಲಭ್ಯವಿಲ್ಲ' ಎಂಬಂತಹ ದೋಷ ಸಂದೇಶಗಳನ್ನು ಟ್ರಬಲ್‌ಶೂಟ್ ಮಾಡಿ
“ಬ್ರೌಸರ್ ಸ್ಥಳದ ಅನುಮತಿಗಳನ್ನು ಆನ್ ಮಾಡಿ” ಅಥವಾ “ಪ್ರದೇಶದ ಅಪ್‌ಡೇಟ್ ಲಭ್ಯವಿಲ್ಲ” ಎಂಬ ದೋಷ ಸಂದೇಶ ನಿಮಗೆ ಕಾಣಿಸಿದರೆ ಈ ಹಂತಗಳನ್ನು ಪ್ರಯತ್ನಿಸಿ:
  1. ಮೇಲೆ ಹೇಳಿದ ಹಂತಗಳನ್ನು ಅನುಸರಿಸಿ, ನಿಮ್ಮ ಮೊಬೈಲ್ ಸಾಧನ ಮತ್ತು ಮೊಬೈಲ್ ಬ್ರೌಸರ್‌ಗಾಗಿ ಸ್ಥಳ ಹಂಚಿಕೆಯನ್ನು ಆನ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  2. youtube.com/locate ನಲ್ಲಿ ಇರುವ ಹಂತಗಳನ್ನು ಅನುಸರಿಸುವುದಕ್ಕಾಗಿ ನೀವು ಮೊಬೈಲ್ ಸಾಧನವನ್ನು ಬಳಸುತ್ತಿರುವಿರೇ ಹೊರತು ಕಂಪ್ಯೂಟರ್ ಅನ್ನು ಬಳಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
  3. ತೊರೆಯಿರಿ ಮತ್ತು YouTube ಆ್ಯಪ್ ಅನ್ನು ನಿಮ್ಮ ಟಿವಿಯಲ್ಲಿ ಮತ್ತೊಮ್ಮೆ ತೆರೆಯಿರಿ ಮತ್ತು ಪುನಃ ಪ್ರಯತ್ನಿಸಿ.
  4. ನಿಮ್ಮ ಸೆಟ್ಟಿಂಗ್‌ಗಳಲ್ಲಿ ಆವೃತ್ತಿಯನ್ನು ಪರಿಶೀಲಿಸುವ ಮೂಲಕ, ನಿಮ್ಮ ಮೊಬೈಲ್ ಹಾಗೂ ಟಿವಿ ಸಾಧನಗಳು ಅಪ್‌ ಟು ಡೇಟ್‌‌ ಆಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  5. ನಿಮ್ಮ ಮೊಬೈಲ್ ಸಾಧನದಲ್ಲಿ ಕ್ಯಾಷ್ ಮತ್ತು ಕುಕೀಗಳನ್ನು ತೆರವುಗೊಳಿಸಿ ಮತ್ತು ಪುನಃ ಪ್ರಯತ್ನಿಸಿ.

ಬಿತ್ತರಿಸುವಿಕೆಗೆ ಸಂಬಂಧಿಸಿದಂತೆ ಟ್ರಬಲ್‌ಶೂಟ್ ಮಾಡಿ

ಬಿತ್ತರಿಸುವಾಗ ನಿಮ್ಮ ಸ್ಥಳವನ್ನು ದೃಢೀಕರಿಸಲು ನಿಮಗೆ ಸಮಸ್ಯೆಯಾದರೆ, ಇವುಗಳನ್ನು ಪ್ರಯತ್ನಿಸಿ ನೋಡಿ:

  • ಮತ್ತೊಮ್ಮೆ ಬಿತ್ತರಿಸುವುದು ಮತ್ತು ಈ ಮೇಲಿನ ಹಂತಗಳನ್ನು ಅನುಸರಿಸುವುದು.
  • ನಿಮ್ಮ ಬ್ರೌಸರ್‌ಗಾಗಿ (youtube.com ಗಾಗಿ) ಕ್ಯಾಷ್ ಹಾಗೂ ಕುಕೀಗಳನ್ನು ತೆರವುಗೊಳಿಸುವುದು ಮತ್ತು ಪುನಃ ಬಿತ್ತರಿಸುವುದು.
  • ಮೊಬೈಲ್‌ನಲ್ಲಿನ YouTube ಆ್ಯಪ್ ಮತ್ತು ನಿಮ್ಮ ಟಿವಿಯಲ್ಲಿನ YouTube ಆ್ಯಪ್‌ನಲ್ಲಿ ನೀವು ಒಂದೇ ಖಾತೆಗೆ ಸೈನ್ ಇನ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ನಿಮ್ಮ ಟಿವಿಗೆ ಬಿತ್ತರಿಸುವುದಕ್ಕಾಗಿ ಸ್ಥಳ ಹಂಚಿಕೆಯನ್ನು ಆನ್ ಮಾಡಿ

ನಿಮ್ಮ ಮೊಬೈಲ್ ಸಾಧನ ಮತ್ತು ನಿಮ್ಮ ಟಿವಿಯಲ್ಲಿನ YouTube ಆ್ಯಪ್ - ಎರಡರಲ್ಲೂ ನೀವು ಒಂದೇ ಖಾತೆಗೆ ಸೈನ್ ಇನ್ ಆಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ಮೇಲೆ ಹೇಳಿದ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಮೊಬೈಲ್ ಬ್ರೌಸರ್ ಹಾಗೂ ನಿಮ್ಮ YouTube ಆ್ಯಪ್ - ಎರಡಕ್ಕಾಗಿಯೂ ಸ್ಥಳ ಹಂಚಿಕೆಯನ್ನು ಸಕ್ರಿಯಗೊಳಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಂತರ:

  1. ನಿಮ್ಮ ಮೊಬೈಲ್ ಸಾಧನದಲ್ಲಿ ಪ್ರೋಗ್ರಾಂ ಅನ್ನು ತೆರೆಯಿರಿ ಮತ್ತು ಪ್ರೋಗ್ರಾಂ ಅನ್ನು ನಿಮ್ಮ ಟಿವಿಗೆ ಬಿತ್ತರಿಸಿ .
  2. ನಿಮ್ಮ ಟಿವಿಯಲ್ಲಿನ YouTube ಆ್ಯಪ್‌ನಲ್ಲಿ ಪ್ರಾಂಪ್ಟ್‌ಗಳನ್ನು ಅನುಸರಿಸಿ. 
  3. YouTube ಆ್ಯಪ್‌ನಲ್ಲಿ ಸೈನ್ ಇನ್ ಮಾಡಿರುವ ಅದೇ ಖಾತೆಯನ್ನು ಬಳಸಿಕೊಂಡು ಮೊಬೈಲ್ ವೆಬ್ ಬ್ರೌಸರ್‌ನಲ್ಲಿ youtube.com/locate ಅನ್ನು ತೆರೆಯಿರಿ. 
  4. ನಿಮ್ಮ ಮೊಬೈಲ್ ಸಾಧನದಿಂದ ಸ್ಥಳವನ್ನು ಯಶಸ್ವಿಯಾಗಿ ಒದಗಿಸಿದ ಬಳಿಕ ನಿಮ್ಮ ಟಿವಿ ಸ್ವಯಂಚಾಲಿತವಾಗಿ ಪ್ಲೇ ಆಗಲು ಪ್ರಾರಂಭವಾಗುತ್ತದೆ.
ನಿಮ್ಮ ಪ್ಲೇಬ್ಯಾಕ್ ಪ್ರದೇಶವು ತಪ್ಪಾಗಿದ್ದರೆ, ನಿಮ್ಮ ಸ್ಮಾರ್ಟ್ ಟಿವಿಯಲ್ಲಿ ಅದನ್ನು ಅಪ್‌ಡೇಟ್ ಮಾಡಿ
ನಿಮ್ಮ ಸ್ಮಾರ್ಟ್ ಟಿವಿಯಲ್ಲಿ ನಿಮ್ಮ ಪ್ಲೇಬ್ಯಾಕ್ ಪ್ರದೇಶವನ್ನು ಉಳಿಸಿದ ಬಳಿಕ, ಅದು ತಪ್ಪಾಗಿದೆ ಎಂದು ನಿಮಗೆ ಕಂಡುಬಂದರೆ, ನಿಮ್ಮ ಸಾಧನದ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ನೀವು ಅದನ್ನು ಎಡಿಟ್ ಮಾಡಬಹುದು ಅಥವಾ ತೆರವುಗೊಳಿಸಬಹುದು.
  1. ನಿಮ್ಮ ಸ್ಮಾರ್ಟ್ ಟಿವಿಯಲ್ಲಿ YouTube ಆ್ಯಪ್ ಅನ್ನು ತೆರೆಯಿರಿ.
  2. ಸೆಟ್ಟಿಂಗ್‌ಗಳು ನಂತರ ಪ್ಲೇಬ್ಯಾಕ್ ಪ್ರದೇಶ ಎಂಬಲ್ಲಿಗೆ ಹೋಗಿ.
  3. ನಿಮ್ಮ ಸ್ಥಳವನ್ನು ಬದಲಾಯಿಸಿ:
    • ಎಡಿಟ್ ಮಾಡಲು ಪೆನ್ಸಿಲ್ ಅನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಪಿನ್ ಕೋಡ್ ಅನ್ನು ನಮೂದಿಸಿ.
    • ನಿಮ್ಮ ಪ್ರಸ್ತುತ ಪ್ಲೇಬ್ಯಾಕ್ ಪ್ರದೇಶವನ್ನು ಸೆಟ್ ಮಾಡಲು ಮತ್ತು ದೃಢೀಕರಿಸಲು ಆನ್‌-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.

ನಿಮ್ಮ ಸ್ಮಾರ್ಟ್ ಟಿವಿಯಲ್ಲಿ ನಿಮ್ಮ ಪ್ಲೇಬ್ಯಾಕ್ ಪ್ರದೇಶವನ್ನು ತೆರವುಗೊಳಿಸಿ

ನಿಮ್ಮ ಪ್ಲೇಬ್ಯಾಕ್ ಪ್ರದೇಶವನ್ನು ತೆರವುಗೊಳಿಸಲು:

  1. ನಿಮ್ಮ ಟಿವಿಯಲ್ಲಿ YouTube ಆ್ಯಪ್ ಅನ್ನು ತೆರೆಯಿರಿ.
  2. ಸೆಟ್ಟಿಂಗ್‌ಗಳಿಗೆ ಹೋಗಿ ನಂತರ ಪ್ಲೇಬ್ಯಾಕ್ ಪ್ರದೇಶವನ್ನು ತೆರವುಗೊಳಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6712697892067168778
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false