YouTube Shorts ಅನ್ನು ವೀಕ್ಷಿಸಿ

YouTube Shorts ಕಡಿಮೆ ಅವಧಿಯ ವರ್ಟಿಕಲ್ ವೀಡಿಯೊಗಳಾಗಿವೆ, ಅವುಗಳು ಹೊಸ ಮತ್ತು ಆಸಕ್ತಿದಾಯಕ ಕಂಟೆಂಟ್ ಅನ್ನು ಅನ್ವೇಷಿಸಲು ನಿಮಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತವೆ. ಪ್ರತಿ Short ನ ಅವಧಿ 60 ಸೆಕೆಂಡ್‌ಗಳು ಅಥವಾ ಅದಕ್ಕಿಂತ ಕಡಿಮೆಯಿರುತ್ತದೆ, ಆದ್ದರಿಂದ ನೀವು ಮುಂದಿನದಕ್ಕೆ ಹೋಗಲು ತಡವಾಗುವುದಿಲ್ಲ.

YouTube Shorts ಪ್ಲೇಯರ್, Shorts ಫೀಡ್‌ನಲ್ಲಿ ಎಂದಿಗೂ ಮುಗಿಯದ ವೀಡಿಯೊಗಳ ಸ್ಟ್ರೀಮ್ ಅನ್ನು ವೀಕ್ಷಿಸಲು ಮತ್ತು ಸಂವಹಿಸಲು ನಿಮಗೆ ಅನುಮತಿಸುತ್ತದೆ.

ಸ್ಮಾರ್ಟ್ ಟಿವಿಗಳು ಮತ್ತು ಗೇಮ್ ಕನ್ಸೋಲ್‌ಗಳಲ್ಲಿ Shorts ಅನ್ನು ವೀಕ್ಷಿಸಿ

ನಿಮ್ಮ ಟಿವಿಯಲ್ಲಿ YouTube Shorts ಅನ್ನು ವೀಕ್ಷಿಸಿ

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

ಬಹುತೇಕ ಸ್ಮಾರ್ಟ್ ಟಿವಿಗಳು, ಗೇಮ್ ಕನ್ಸೋಲ್‌ಗಳು ಮತ್ತು ಇತರ ಸ್ಟ್ರೀಮಿಂಗ್ ಸಾಧನಗಳಿಗೆ ಸಂಬಂಧಿಸಿದ YouTube ಆ್ಯಪ್‌ನಲ್ಲಿ ನೀವು Shorts ಅನ್ನು ವೀಕ್ಷಿಸಬಹುದು, ಆದರೆ 2019 ರ ಮೊದಲು ಬಿಡುಗಡೆಯಾದ ಕೆಲವು ಸಾಧನಗಳಲ್ಲಿ Shorts ಪ್ಲೇಯರ್ ಕಾರ್ಯನಿರ್ವಹಿಸದೇ ಇರಬಹುದು ಎಂಬುದನ್ನು ಗಮನಿಸಿ.

ನಿಮ್ಮ YouTube ಹೋಮ್‌ಪೇಜ್‌ನಲ್ಲಿನ Shorts ಶೆಲ್ಫ್‌ನಲ್ಲಿ, ಹುಡುಕಾಟ ಫಲಿತಾಂಶಗಳಲ್ಲಿ ಮತ್ತು YouTube ನಾದ್ಯಂತ ಚಾನಲ್ ಪುಟಗಳಲ್ಲಿ Shorts ಗೋಚರಿಸುತ್ತವೆ. ನೀವು Short ಅನ್ನು ಆಯ್ಕೆಮಾಡಿದಾಗ, ಅದು Shorts ಪ್ಲೇಯರ್‌ನಲ್ಲಿ ನಿರಂತರವಾಗಿ ಪ್ಲೇ ಆಗುತ್ತದೆ.

ಪ್ಲೇಯರ್‌ನಲ್ಲಿ ನ್ಯಾವಿಗೇಟ್ ಮಾಡುವುದಕ್ಕೆ ನಿಮ್ಮ ರಿಮೋಟ್ ಅನ್ನು ಹೇಗೆ ಬಳಸುವುದು ಎಂಬುದರ ಮಾಹಿತಿ ಇಲ್ಲಿದೆ:

  1. Short ಅನ್ನು ಪ್ರಾರಂಭಿಸಲು ಅಥವಾ ವಿರಾಮಗೊಳಿಸಲು, ಅದರ ಮೇಲೆ ನೇರವಾಗಿ ಕ್ಲಿಕ್ ಮಾಡಿ.
  2. Short ಕುರಿತು ಹೆಚ್ಚಿನ ಮಾಹಿತಿಯನ್ನು ಹುಡುಕಲು, ಬಲ ಕ್ಲಿಕ್ ಮಾಡಿ.
  3. ಮುಂದಿನ Short ಗೆ ಮುಂದುವರಿಯಲು, ಕೆಳಕ್ಕೆ ಸ್ಕ್ರಾಲ್ ಮಾಡಿ ಅಥವಾ ಕ್ಲಿಕ್ ಮಾಡಿ.
  4. ಹಿಂದಿನ Short ಗೆ ಹಿಂತಿರುಗಲು, ಮೇಲಕ್ಕೆ ಸ್ಕ್ರಾಲ್ ಮಾಡಿ ಅಥವಾ ಕ್ಲಿಕ್ ಮಾಡಿ.

YouTube ನಲ್ಲಿ Shorts ಅನ್ನು ವೀಕ್ಷಿಸಿ

YouTube ನಲ್ಲಿ Shorts ಅನ್ನು ವೀಕ್ಷಿಸಲು:

  1. ಹೋಮ್  ಎಂಬುದಕ್ಕೆ ಹೋಗಿ.
  2. ಎಡಭಾಗದಲ್ಲಿ, YouTube Shorts ಪ್ಲೇಯರ್‌ಗೆ ಪ್ರವೇಶಿಸಲು Shorts  ಎಂಬುದನ್ನು ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6351940451674997280
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false