ವೀಡಿಯೊ ಪ್ಲೇಯರ್‌ನಲ್ಲಿ ಗ್ರೀನ್ ಸ್ಕ್ರೀನ್

ನಿಮ್ಮ ಕಂಪ್ಯೂಟರ್‌ನಲ್ಲಿ YouTube ವೀಡಿಯೊದ ಆಡಿಯೊವನ್ನು ಆಲಿಸಲು ನಿಮಗೆ ಸಾಧ್ಯವಾಗುತ್ತಿದ್ದು, ಆದರೆ ವೀಡಿಯೊ ಪ್ಲೇಯರ್ ಗ್ರೀನ್ ಆಗಿದೆಯೇ? ಹಾಗಿದ್ದರೆ, ಬೇರೊಂದು ಬ್ರೌಸರ್‌ನಲ್ಲಿ ವೀಡಿಯೊ ವೀಕ್ಷಿಸಲು ಪ್ರಯತ್ನಿಸಿ. ಅದು ಸಾಧ್ಯವಾಗದೇ ಇದ್ದರೆ, ಇನ್ನೂ ಕೆಲವು ಸಮಸ್ಯೆ ನಿವಾರಣೆ ಟಿಪ್ಸ್ ಇಲ್ಲಿದೆ.

ಹಾರ್ಡ್‌ವೇರ್ ವೇಗವರ್ಧನೆಯನ್ನು ಆಫ್ ಮಾಡಿ

Chrome ಗಾಗಿ ಕೆಳಗಿನ ಸೂಚನೆಗಳನ್ನು ಫಾಲೋ ಮಾಡಿ:

  1. ಮೇಲಿನ ಬಲಭಾಗದಲ್ಲಿ, ಇನ್ನಷ್ಟು ಆಯ್ಕೆಮಾಡಿ.
  2. ಸೆಟ್ಟಿಂಗ್‌ಗಳು ಆಯ್ಕೆಮಾಡಿ.
  3. ಸುಧಾರಿತ ಆಯ್ಕೆಮಾಡಿ.
  4. ಸಿಸ್ಟಂ ಆಯ್ಕೆಮಾಡಿ.
  5. "ಲಭ್ಯವಿರುವಾಗ ಹಾರ್ಡ್‌ವೇರ್ ವೇಗವರ್ಧನೆ ಬಳಸಿ" ಅನ್ನು ಆಫ್ ಮಾಡಿ.

ನೀವು Chrome ಬಿಟ್ಟು ಬೇರೆಯದಾದ ಬ್ರೌಸರ್ ಬಳಸುತ್ತಿದ್ದರೆ, ಆ ಬ್ರೌಸರ್‌ನ ಸಹಾಯ ಕಂಟೆಂಟ್‌ನಲ್ಲಿ ಹಾರ್ಡ್‌ವೇರ್ ವೇಗವರ್ಧನೆ ಆಫ್ ಮಾಡುವುದು ಹೇಗೆಂದು ನೀವು ತಿಳಿಯಬಹುದು.

ನಿಮ್ಮ ಗ್ರಾಫಿಕ್ಸ್ ಡ್ರೈವರ್ ಅನ್ನು ಅಪ್‌ಡೇಟ್ ಮಾಡಿ

ನಿಮ್ಮ ಕಂಪ್ಯೂಟರ್‌ನ ಗ್ರಾಫಿಕ್ಸ್ ಡ್ರೈವರ್ ಅನ್ನು ಅಪ್‌ಡೇಟ್ ಮಾಡುವುದರಿಂದ ಮೇಲೆ ಪಟ್ಟಿ ಮಾಡಲಾದ ಹಲವು ಸಮಸ್ಯೆಗಳು ಪರಿಹಾರಗೊಳ್ಳಬಹುದು.

PC ಬಳಕೆದಾರರಿಗೆ: ನಿಮ್ಮ ಕಂಪ್ಯೂಟರ್‌ ತಯಾರಕರ ವೆಬ್‌ಸೈಟ್‌ನಿಂದ ಇತ್ತೀಚಿನ ಡ್ರೈವರ್ ಅನ್ನು ಡೌನ್‌ಲೋಡ್ ಮಾಡಿ.

macOS Mojave ಅಥವಾ ನಂತರದ ಆವೃತ್ತಿಯನ್ನು ಹೊಂದಿರುವ Mac ಬಳಕೆದಾರರಿಗೆ:

  1. Apple ಲೋಗೋ ಕ್ಲಿಕ್ ಮಾಡಿ.
  2. Apple ಮೆನುವಿನಲ್ಲಿ, ಸಿಸ್ಟಂ ಆದ್ಯತೆಗಳು ಅನ್ನು ಕ್ಲಿಕ್ ಮಾಡಿ.
  3. ಸಾಫ್ಟ್‌ವೇರ್ ಅಪ್‌ಡೇಟ್ ಅನ್ನು ಕ್ಲಿಕ್ ಮಾಡಿ.
  4. ಇದೀಗ ಅಪ್‌ಡೇಟ್ ಮಾಡಿ ಅನ್ನು ಕ್ಲಿಕ್ ಮಾಡಿ.
  5. ಲಭ್ಯವಿದ್ದಲ್ಲಿ Mac OS ಅಪ್‌ಡೇಟ್ ಅನ್ನು ಇನ್‌ಸ್ಟಾಲ್ ಮಾಡಿ--ಅದು ಗ್ರಾಫಿಕ್ಸ್ ಡ್ರೈವರ್ ಅಪ್‌ಡೇಟ್ ಅನ್ನು ಒಳಗೊಂಡಿರುತ್ತದೆ.

ಇತರ macOS ಆವೃತ್ತಿಗಳಿಗಾಗಿ Apple ನ ಸೂಚನೆಗಳನ್ನು ಫಾಲೋ ಮಾಡಿ.

ವೀಡಿಯೊವನ್ನೇ ಪ್ಲೇ ಮಾಡುವಲ್ಲಿ ನಿಮಗೆ ಸಮಸ್ಯೆಗಳಿದ್ದರೆ, ಈ ಪ್ಲೇಬ್ಯಾಕ್ ಸಮಸ್ಯೆ ನಿವಾರಣೆ ಹಂತಗಳನ್ನು ಪ್ರಯತ್ನಿಸಿ ನೋಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11933868794109247050
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false