YouTube Premium ಮೂಲಕ ವೀಡಿಯೊಗಳನ್ನು ಆಫ್‌ಲೈನ್‌ನಲ್ಲಿ ವೀಕ್ಷಿಸಿ

YouTube Premium ನಿಮ್ಮ ಸ್ಥಳದಲ್ಲಿ ಲಭ್ಯವಿದ್ದರೆ, ನಿಮ್ಮ ಮೊಬೈಲ್ ಸಾಧನದಲ್ಲಿ ನೀವು ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು ಮತ್ತು ವೀಕ್ಷಿಸಬಹುದು. Chrome, Edge ಮತ್ತು Opera ಬ್ರೌಸರ್‌ಗಳನ್ನು ಬಳಸಿಕೊಂಡು ನಿಮ್ಮ ಕಂಪ್ಯೂಟರ್‌ನಿಂದ ಸಹ ನೀವು ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು. ಭವಿಷ್ಯದಲ್ಲಿ ಇತರ ಬ್ರೌಸರ್‌ಗಳಲ್ಲಿ ಈ ಫೀಚರ್ ಅನ್ನು ತರಲು ನಾವು ಭಾವಿಸುತ್ತೇವೆ.

ನಿಮ್ಮ YouTube Premium ಡೌನ್‌ಲೋಡ್ ಸೆಟ್ಟಿಂಗ್‌ಗಳನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ತಿಳಿಯಿರಿ ಅಥವಾ ಪ್ರಾರಂಭಿಸಲು YouTube Premium ಗೆ ಸೈನ್ ಅಪ್ ಮಾಡಿ.

ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‍ನಲ್ಲಿ ವೀಡಿಯೊಗಳನ್ನು ಡೌನ್‍ಲೋಡ್ ಮಾಡುವುದು ಹೇಗೆ | ನಿರ್ಬಂಧಗಳು ಅನ್ವಯಿಸುತ್ತವೆ

ವೀಡಿಯೊಗಳನ್ನು ಆಫ್‌ಲೈನ್‌ನಲ್ಲಿ ವೀಕ್ಷಿಸಲು ಡೌನ್‌ಲೋಡ್ ಮಾಡಿ

ನಿಮ್ಮ Apple ಸಾಧನದಲ್ಲಿ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು, ಕೆಳಗಿನ ಹಂತಗಳನ್ನು ಅನುಸರಿಸಿ:

  1. YouTube ಆ್ಯಪ್‌ನಲ್ಲಿ ನಿಮ್ಮ ಖಾತೆಗೆ ಸೈನ್ ಇನ್ ಮಾಡಿ.
  2. ನೀವು ಡೌನ್‌ಲೋಡ್ ಮಾಡಲು ಬಯಸುವ ವೀಡಿಯೊದ ವೀಕ್ಷಣಾ ಪುಟಕ್ಕೆ ಹೋಗಿ.
  3. ವೀಡಿಯೊದ ಕೆಳಗೆ, ಡೌನ್‌ಲೋಡ್ ಮಾಡಿ ಕ್ಲಿಕ್ ಮಾಡಿ.

ವೀಡಿಯೊವನ್ನು ಡೌನ್‌ಲೋಡ್ ಮಾಡಿದ ನಂತರ, ವೀಡಿಯೊದ ಕೆಳಗಿನ ಡೌನ್‌ಲೋಡ್ ಐಕಾನ್ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ವೀಡಿಯೊಗಳನ್ನು ಡೌನ್‌ಲೋಡ್ ಮಾಡುವಾಗ ನಿಮ್ಮ ಸಾಧನವು ಇಂಟರ್ನೆಟ್ ಕನೆಕ್ಷನ್ ಅನ್ನು ಕಳೆದುಕೊಂಡರೆ, ನೀವು ಇಂಟರ್ನೆಟ್‌ಗೆ ಮರುಕನೆಕ್ಟ್ ಮಾಡಿದ ನಂತರ ನಿಮ್ಮ ಪ್ರಗತಿಯು ಸ್ವಯಂಚಾಲಿತವಾಗಿ ಪುನರಾರಂಭಗೊಳ್ಳುತ್ತದೆ.

ಡೌನ್‌ಲೋಡ್ ಮಾಡಿದ ವೀಡಿಯೊಗಳನ್ನು ವೀಕ್ಷಿಸಿ

ನಿಮ್ಮ Apple ಸಾಧನದಲ್ಲಿ ನೀವು ಡೌನ್‌ಲೋಡ್ ಮಾಡಿದ ವೀಡಿಯೊಗಳನ್ನು ಹುಡುಕಲು ಮತ್ತು ವೀಕ್ಷಿಸಲು,

  1. YouTube ಆ್ಯಪ್‌ನಿಂದ ನಿಮ್ಮ Premium ಖಾತೆಗೆ ಸೈನ್ ಇನ್ ಮಾಡಿ.
  2. ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.
  3. ಆಯ್ಕೆಗಳ ಪಟ್ಟಿಯಿಂದ ಡೌನ್‌ಲೋಡ್‌ಗಳು  ಎಂಬುದನ್ನು ಆಯ್ಕೆಮಾಡಿ.

ನಿಮ್ಮ ಡೌನ್‌ಲೋಡ್‌ಗಳಿಂದ ಪ್ರತ್ಯೇಕ ವೀಡಿಯೊಗಳನ್ನು ತೆಗೆದುಹಾಕಿ

ನೀವು ಡೌನ್‌ಲೋಡ್ ಮಾಡಿದ ವೀಡಿಯೊಗಳನ್ನು ನೀವು ಎರಡು ವಿಧಗಳಲ್ಲಿ ತೆಗೆದುಹಾಕಬಹುದು:

  1. ವೀಡಿಯೊ ಪ್ಲೇಯರ್ ಅಡಿಯಲ್ಲಿ, ನೀವು ತೆಗೆದುಹಾಕಲು ಬಯಸುವ ವೀಡಿಯೊದ ಪಕ್ಕದಲ್ಲಿನ ಡೌನ್‌ಲೋಡ್ ಮಾಡಿರುವುದು ಎಂಬುದನ್ನು ಆಯ್ಕೆಮಾಡಿ.
  2. ಅಳಿಸಿ ಎಂಬುದನ್ನು ಕ್ಲಿಕ್ ಮಾಡಿ.

ಅಥವಾ

  1. ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ ನಂತರ ಡೌನ್‌ಲೋಡ್‌ಗಳು  ಎಂಬಲ್ಲಿಗೆ ಹೋಗಿ.
  2. ನೀವು ತೆಗೆದುಹಾಕಲು ಬಯಸುವ ವೀಡಿಯೊದ ಪಕ್ಕದಲ್ಲಿನ ಇನ್ನಷ್ಟು ಎಂಬುದನ್ನು ಟ್ಯಾಪ್ ಮಾಡಿ.
  3. ಡೌನ್‌ಲೋಡ್‌ಗಳಿಂದ ಅಳಿಸಿ ಎಂಬುದನ್ನು ಆಯ್ಕೆಮಾಡಿ.

ಡೌನ್‌ಲೋಡ್ ಮಾಡಿದ ಎಲ್ಲಾ ವೀಡಿಯೊಗಳನ್ನು ತೆಗೆದುಹಾಕಿ

ಈ ಹಂತಗಳನ್ನು ಅನುಸರಿಸುವ ಮೂಲಕ ನೀವು ಡೌನ್‌ಲೋಡ್ ಮಾಡಿದ ವೀಡಿಯೊಗಳನ್ನು ನೀವು ವೀಕ್ಷಿಸಬಹುದು ಮತ್ತು ಅಳಿಸಬಹುದು:

  1. ನಿಮ್ಮ ಪ್ರೊಫೈಲ್ ಚಿತ್ರ  ನಂತರ ಸೆಟ್ಟಿಂಗ್‌ಗಳು ಎಂಬುದನ್ನು ಕ್ಲಿಕ್ ಮಾಡಿ.
  2. ಸೆಟ್ಟಿಂಗ್‌ಗಳಲ್ಲಿ, ಹಿನ್ನೆಲೆ ಮತ್ತು ಡೌನ್‌ಲೋಡ್‌ಗಳು ನಂತರ ಡೌನ್‌ಲೋಡ್‌ಗಳನ್ನು ಅಳಿಸಿ ಎಂಬುದನ್ನು ಆಯ್ಕೆಮಾಡಿ.
  3. ಕೆಳಗಿನ "ಎಲ್ಲಾ ಡೌನ್‌ಲೋಡ್‌ಗಳನ್ನು ಅಳಿಸಬೇಕೆ?" ಎಂಬ ಡೈಲಾಗ್‌ನಲ್ಲಿನ ಅಳಿಸಿ ಎಂಬುದನ್ನು ಕ್ಲಿಕ್ ಮಾಡಿ

ಡೌನ್‌ಲೋಡ್ ಸೆಟ್ಟಿಂಗ್‌ಗಳನ್ನು ಅಪ್‌ಡೇಟ್ ಮಾಡಿ

ಈ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಡೌನ್‌ಲೋಡ್‌ಗಳ ಡೀಫಾಲ್ಟ್ ಗುಣಮಟ್ಟವನ್ನು ಸೆಟ್ ಮಾಡಿ:

  1. ನಿಮ್ಮ ಪ್ರೊಫೈಲ್ ಚಿತ್ರ  ನಂತರ ಸೆಟ್ಟಿಂಗ್‌ಗಳು ಎಂಬುದನ್ನು ಟ್ಯಾಪ್ ಮಾಡಿ.
  2. ಸೆಟ್ಟಿಂಗ್‌ಗಳಲ್ಲಿ, ಹಿನ್ನೆಲೆ ಮತ್ತು ಡೌನ್‌ಲೋಡ್‌ಗಳು ನಂತರ ಡೌನ್‌ಲೋಡ್ ಗುಣಮಟ್ಟ ಎಂಬುದನ್ನು ಆಯ್ಕೆಮಾಡಿ.

ಉತ್ತಮ ಗುಣಮಟ್ಟದ ವೀಡಿಯೊಗಳು ಹೆಚ್ಚಿನ ಡೇಟಾವನ್ನು ಬಳಸಿಕೊಳ್ಳಬಹುದು, ಡೌನ್‌ಲೋಡ್‌ಗಳು ವಿಭಾಗದಲ್ಲಿ ತೋರಿಸಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಮತ್ತು ನಿಮ್ಮ ಸಾಧನದಲ್ಲಿ ಹೆಚ್ಚಿನ ಸ್ಥಳವನ್ನು ತೆಗೆದುಕೊಳ್ಳಬಹುದು.

ವೀಡಿಯೊಗಳನ್ನು ಡೌನ್‌ಲೋಡ್ ಮಾಡುವಾಗ ಎದುರಾಗುವ ಸಮಸ್ಯೆಗಳನ್ನು ನಿವಾರಿಸಿ

  • ಡೌನ್‌ಲೋಡ್ ಮಾಡಿರುವ ವೀಡಿಯೊಗಳನ್ನು 29 ದಿನಗಳವರೆಗೆ ಆಫ್‌ಲೈನ್‌ನಲ್ಲಿ ಪ್ಲೇ ಮಾಡಬಹುದು. ಅದರ ನಂತರ, ನಿಮ್ಮ ಸಾಧನವನ್ನು ಇಂಟರ್ನೆಟ್‌ಗೆ ಮರುಕನೆಕ್ಟ್ ಮಾಡುವ ಅಗತ್ಯವಿದೆ. ಮರುಕನೆಕ್ಟ್ ಮಾಡುವುದರಿಂದ ವೀಡಿಯೊದಲ್ಲಿನ ಬದಲಾವಣೆಗಳು ಅಥವಾ ಅದರ ಲಭ್ಯತೆಯನ್ನು ಪರಿಶೀಲಿಸಲು ಆ್ಯಪ್‌ಗೆ ಅನುಮತಿಸುತ್ತದೆ. ಆಫ್‌ಲೈನ್ ಪ್ಲೇಬ್ಯಾಕ್‌ಗಾಗಿ ವೀಡಿಯೊ ಇನ್ನು ಮುಂದೆ ಲಭ್ಯವಿಲ್ಲದಿದ್ದರೆ, ಮುಂದಿನ ಸಿಂಕ್ ಸಮಯದಲ್ಲಿ ನಿಮ್ಮ ಸಾಧನದಿಂದ ಅದನ್ನು ತೆಗೆದುಹಾಕಲಾಗುತ್ತದೆ.
  • ಕೆಲವು ದೇಶಗಳಲ್ಲಿ/ಪ್ರದೇಶಗಳಲ್ಲಿ, ಇಂಟರ್ನೆಟ್ ಕನೆಕ್ಷನ್ ಇಲ್ಲದೆ 48 ಗಂಟೆಗಳವರೆಗೆ ಕಂಟೆಂಟ್ ಅನ್ನು ಪ್ಲೇ ಮಾಡಬಹುದು. ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ನಿಮ್ಮ Premium ಖಾತೆಗೆ ನೀವು ಸೈನ್ ಇನ್ ಆಗಿರಬೇಕು. ನಿಮ್ಮ ಡೌನ್‌ಲೋಡ್‌ಗಳಲ್ಲಿ ಸೇರಿಸಲಾದ ವೀಡಿಯೊಗಳನ್ನು ಅದೇ ಖಾತೆಗೆ ಸೈನ್ ಇನ್ ಮಾಡಿದಾಗ ಪ್ಲೇ ಮಾಡಬಹುದು. ನಿಮ್ಮ ಸಾಧನವು ವೈ-ಫೈ ನೆಟ್‌ವರ್ಕ್‌ಗೆ ಕನೆಕ್ಟ್ ಆಗಿರುವಾಗ ಮಾತ್ರ ಕಾಮೆಂಟ್ ಮಾಡುವುದು ಮತ್ತು ಲೈಕ್ ಮಾಡುವಂತಹ ಕೆಲವು ಫೀಚರ್‌ಗಳು ಲಭ್ಯವಿರುತ್ತವೆ. YouTube ಆಫ್‌ಲೈನ್ ವೀಡಿಯೊಗಳ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3810232285914205197
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false