ಸಂಶೋಧನಾ ಒಳನೋಟಗಳನ್ನು ಅರ್ಥಮಾಡಿಕೊಳ್ಳಿ

YouTube ನಾದ್ಯಂತ ನಿಮ್ಮ ಪ್ರೇಕ್ಷಕರು ಮತ್ತು ವೀಕ್ಷಕರು ಏನನ್ನು ಹುಡುಕುತ್ತಿದ್ದಾರೆ ಎಂಬುದನ್ನು ಎಕ್ಸ್‌ಪ್ಲೋರ್ ಮಾಡಲು, ನೀವು YouTube Analytics ನಲ್ಲಿ ಸಂಶೋಧನಾ ಟ್ಯಾಬ್ ಅನ್ನು ಬಳಸಬಹುದು. ಸಂಶೋಧನೆ ಟ್ಯಾಬ್‌ನಲ್ಲಿನ ಒಳನೋಟಗಳು, ವೀಕ್ಷಕರು ವೀಕ್ಷಿಸಲು ಬಯಸಬಹುದಾದ ವೀಡಿಯೊ ಐಡಿಯಾಗಳ ಕುರಿತು ಯೋಚಿಸಲು ನಿಮಗೆ ಸಹಾಯ ಮಾಡಬಲ್ಲವು.

ಸಂಶೋಧನಾ ಟ್ಯಾಬ್ ಅನ್ನು ವೀಕ್ಷಿಸಿ

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ Analytics ಎಂಬುದನ್ನು ಆಯ್ಕೆ ಮಾಡಿ.
  3. ಸಂಶೋಧನೆ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. ಪ್ರಾರಂಭಿಸಲು, ಹುಡುಕಾಟ ಪಟ್ಟಿಯಲ್ಲಿ ಹುಡುಕಾಟ ಪದವನ್ನು ನಮೂದಿಸಿ. ಹುಡುಕಾಟ ಪದವನ್ನು ಸೇವ್ ಮಾಡಲು, ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ನೀವು ಹುಡುಕಾಟ ಪದವನ್ನು ನಮೂದಿಸಿದ ನಂತರ, ಆ ವಿಷಯಕ್ಕೆ ಸಂಬಂಧಿಸಿದಂತೆ ವೀಕ್ಷಕರ ಚಟುವಟಿಕೆಯನ್ನು ನೀವು ವೀಕ್ಷಿಸಬಹುದು:

  • ಪ್ರೇಕ್ಷಕರ ಇತ್ತೀಚಿನ ಚಟುವಟಿಕೆ: ನಿಮ್ಮ ಪ್ರೇಕ್ಷಕರಲ್ಲಿ ವಿಷಯವು ಎಷ್ಟು ಜನಪ್ರಿಯವಾಗಿದೆ ಎಂಬುದನ್ನು ತೋರಿಸುತ್ತದೆ.
  • YouTube ನಲ್ಲಿ ಹುಡುಕಿರುವುದು: ವಿಷಯಕ್ಕೆ ಸಂಬಂಧಿಸಿದಂತೆ YouTube ನಾದ್ಯಂತ ವೀಕ್ಷಕರು ನಡೆಸಿದ ಜನಪ್ರಿಯ ಹುಡುಕಾಟಗಳನ್ನು ತೋರಿಸುತ್ತದೆ.
  • YouTube ನಲ್ಲಿ ವೀಕ್ಷಿಸಿರುವುದು: ವಿಷಯಕ್ಕೆ ಸಂಬಂಧಿಸಿದಂತೆ YouTube ನಲ್ಲಿ ವೀಕ್ಷಕರು ವೀಕ್ಷಿಸಿದ ಜನಪ್ರಿಯ ವೀಡಿಯೊಗಳನ್ನು ತೋರಿಸುತ್ತದೆ.

ಗಮನಿಸಿ: ಸದ್ಯಕ್ಕೆ, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಭಾರತ, ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿರುವ ವೀಕ್ಷಕರು ಇಂಗ್ಲಿಷ್‌ನಲ್ಲಿ ನಮೂದಿಸುವ ಹುಡುಕಾಟ ಪ್ರಶ್ನೆಗಳಿಗೆ ಒಳನೋಟಗಳು ಸೀಮಿತವಾಗಿವೆ. 

ಸಂಶೋಧನೆ ಟ್ಯಾಬ್‌ಗಳು ಏನನ್ನು ತೋರಿಸುತ್ತವೆ

YouTube ನಾದ್ಯಂತದ ಹುಡುಕಾಟಗಳು

ಈ ಟ್ಯಾಬ್ ಕಳೆದ 28 ದಿನಗಳಲ್ಲಿ ಹುಡುಕಾಟ ಪದಕ್ಕೆ ಸಂಬಂಧಿಸಿದ ಟಾಪ್ ಸಂಬಂಧಿತ ಹುಡುಕಾಟಗಳನ್ನು ತೋರಿಸುತ್ತದೆ. ನಿಮ್ಮ ಪ್ರೇಕ್ಷಕರು ಮಾತ್ರವಲ್ಲದೇ, YouTube ನಾದ್ಯಂತದ ವೀಕ್ಷಕರು ಈ ಹುಡುಕಾಟಗಳನ್ನು ಮಾಡುತ್ತಾರೆ.

  • ಪ್ರತಿ ಹುಡುಕಾಟ ಪದದ ಮುಂದೆ, ಪದವು ಎಷ್ಟು ಜನಪ್ರಿಯವಾಗಿದೆ ಎಂಬುದನ್ನು ವಿವರಿಸುವ ಮಟ್ಟವಿದೆ: ಕಡಿಮೆ, ಮಧ್ಯಮ ಅಥವಾ ಅಧಿಕ.
  • ಕೆಲವು ಹುಡುಕಾಟ ಪದಗಳ ಮುಂದೆ, ಕಂಟೆಂಟ್ ಗ್ಯಾಪ್ ಎಂದು ಹೇಳುವ ಲೇಬಲ್ ಇದೆ. ಕಂಟೆಂಟ್ ಗ್ಯಾಪ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.
  • ಹೆಚ್ಚು ನಿರ್ದಿಷ್ಟವಾದ ಡೇಟಾವನ್ನು ಪಡೆಯಲು, ನೀವು ಕಂಟೆಂಟ್ ಗ್ಯಾಪ್‌ಗಳು, ಭೂಗೋಳ ಅಥವಾ ಭಾಷೆಯ ಮೂಲಕ ಫಲಿತಾಂಶಗಳನ್ನು ಫಿಲ್ಟರ್ ಮಾಡಬಹುದು.

ಗಮನಿಸಿ: ಯಾವುದೇ ಹುಡುಕಾಟ ಫಲಿತಾಂಶಗಳಿಲ್ಲದಿದ್ದರೆ, ನಿಮ್ಮ ಪ್ರೇಕ್ಷಕರ ಆಸಕ್ತಿಯನ್ನು ಅಂದಾಜು ಮಾಡಲು ಸಾಕಷ್ಟು ಡೇಟಾ ಇಲ್ಲದಿರುವುದು ಇದಕ್ಕೆ ಕಾರಣ.

ನಿಮ್ಮ ವೀಕ್ಷಕರ ಹುಡುಕಾಟಗಳು

ಈ ಟ್ಯಾಬ್, ಕಳೆದ 28 ದಿನಗಳಲ್ಲಿ ನಿಮ್ಮ ಪ್ರೇಕ್ಷಕರು ಮತ್ತು ಇದೇ ರೀತಿಯ ಚಾನಲ್‌ಗಳ ವೀಕ್ಷಕರು ಹುಡುಕಿದ ಟಾಪ್ ಹುಡುಕಾಟಗಳನ್ನು ತೋರಿಸುತ್ತದೆ.

  • ಪ್ರತಿ ಹುಡುಕಾಟ ಪದದ ಮುಂದೆ, ಪದವು ಎಷ್ಟು ಜನಪ್ರಿಯವಾಗಿದೆ ಎಂಬುದನ್ನು ವಿವರಿಸುವ ಹುಡುಕಾಟ ಪರಿಮಾಣ ಶ್ರೇಣಿಯಿದೆ: ಕಡಿಮೆ, ಮಧ್ಯಮ ಅಥವಾ ಅಧಿಕ.
  • ಕೆಲವು ಹುಡುಕಾಟ ಪದಗಳ ಮುಂದೆ, ಕಂಟೆಂಟ್ ಗ್ಯಾಪ್ ಎಂದು ಹೇಳುವ ಲೇಬಲ್ ಇದೆ. ಕಂಟೆಂಟ್ ಗ್ಯಾಪ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.
  • ಹೆಚ್ಚು ನಿರ್ದಿಷ್ಟವಾದ ಡೇಟಾವನ್ನು ಪಡೆಯಲು, ನೀವು ಕಂಟೆಂಟ್ ಗ್ಯಾಪ್‌ಗಳು, ಭೂಗೋಳ ಅಥವಾ ಭಾಷೆಯ ಮೂಲಕ ಫಲಿತಾಂಶಗಳನ್ನು ಫಿಲ್ಟರ್ ಮಾಡಬಹುದು.

ಗಮನಿಸಿ: ಯಾವುದೇ ಹುಡುಕಾಟ ಫಲಿತಾಂಶಗಳಿಲ್ಲದಿದ್ದರೆ, ನಿಮ್ಮ ಪ್ರೇಕ್ಷಕರ ಆಸಕ್ತಿಯನ್ನು ಅಂದಾಜು ಮಾಡಲು ಸಾಕಷ್ಟು ಡೇಟಾ ಇಲ್ಲದಿರುವುದು ಇದಕ್ಕೆ ಕಾರಣ.

ಸೇವ್ ಮಾಡಲಾಗಿದೆ

ಈ ಟ್ಯಾಬ್, ನೀವು ಸೇವ್ ಮಾಡಿದ ಹುಡುಕಾಟ ಪದಗಳನ್ನು ವೀಕ್ಷಿಸಲು ನಿಮಗೆ ಅವಕಾಶ ನೀಡುತ್ತದೆ. Google Trends ಗೆ ಹೋಗಲು, ಹುಡುಕಾಟ ಪದವನ್ನು ಅನ್‌ಸೇವ್ ಮಾಡಲು ಅಥವಾ ಹುಡುಕಾಟ ಪದವನ್ನು ವರದಿ ಮಾಡಲು, ಇನ್ನಷ್ಟು '' ಎಂಬುದನ್ನು ಕ್ಲಿಕ್ ಮಾಡಿ.

ಹುಡುಕಾಟ ಒಳನೋಟಗಳನ್ನು ವೀಕ್ಷಿಸಿ ಮತ್ತು ಅವುಗಳ ಕುರಿತು ತಿಳಿದುಕೊಳ್ಳಿ

ಕಂಪ್ಯೂಟರ್‌ನಲ್ಲಿ ಹುಡುಕಾಟ ಒಳನೋಟಗಳ ಕುರಿತು ಇನ್ನಷ್ಟು ತಿಳಿಯಲು, YouTube Creators ಚಾನಲ್‌ನಿಂದ ಕೆಳಗಿನ ವೀಡಿಯೊವನ್ನು ನೋಡಿ.

Understand Search Insights: Research Tab in YouTube Analytics

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7828972584033535063
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false