ಸ್ಫೂರ್ತಿದಾಯಕ ಐಡಿಯಾಗಳನ್ನು ಎಕ್ಸ್‌ಪ್ಲೋರ್ ಮಾಡಿ

YouTube ನಾದ್ಯಂತ ನಿಮ್ಮ ಪ್ರೇಕ್ಷಕರು ಮತ್ತು ವೀಕ್ಷಕರು ಏನನ್ನು ಹುಡುಕುತ್ತಿದ್ದಾರೆ ಎಂಬುದನ್ನು ಎಕ್ಸ್‌ಪ್ಲೋರ್ ಮಾಡಲು, ನೀವು YouTube Analytics ನಲ್ಲಿ ಸ್ಫೂರ್ತಿ ಟ್ಯಾಬ್ ಅನ್ನು ಬಳಸಬಹುದು. ಸ್ಫೂರ್ತಿ ಟ್ಯಾಬ್‌ನಿಂದ ಒಳನೋಟಗಳು, ವೀಕ್ಷಕರು ವೀಕ್ಷಿಸಲು ಬಯಸಬಹುದಾದ ವೀಡಿಯೊಗೆ ಸಂಬಂಧಿಸಿದ ಐಡಿಯಾಗಳ ಕುರಿತು ಯೋಚಿಸಲು ನಿಮಗೆ ಸಹಾಯ ಮಾಡಬಹುದು.

ಸ್ಫೂರ್ತಿ ಟ್ಯಾಬ್ ಅನ್ನು ವೀಕ್ಷಿಸಿ

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ Analytics ಎಂಬುದನ್ನು ಆಯ್ಕೆ ಮಾಡಿ.
  3. ಮೇಲಿನ ಮೆನುವಿನಿಂದ ಸ್ಫೂರ್ತಿ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. ಪ್ರಾರಂಭಿಸಲು, ಸರ್ಚ್ ಬಾರ್‌ನಲ್ಲಿ ಹುಡುಕಾಟ ಪದ ಅಥವಾ ವಿಷಯವನ್ನು ನಮೂದಿಸಿ. ಹುಡುಕಾಟ ಪದವನ್ನು ಸೇವ್ ಮಾಡಲು, ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ನೀವು ಹುಡುಕಾಟ ಪದವನ್ನು ನಮೂದಿಸಿದ ನಂತರ, ಆ ವಿಷಯಕ್ಕೆ ಸಂಬಂಧಿಸಿದಂತೆ ವೀಕ್ಷಕರ ಚಟುವಟಿಕೆಯನ್ನು ನೀವು ವೀಕ್ಷಿಸಬಹುದು:

  • ಪ್ರೇಕ್ಷಕರ ಇತ್ತೀಚಿನ ಚಟುವಟಿಕೆ: ನಿಮ್ಮ ಪ್ರೇಕ್ಷಕರ ನಡುವೆ ವಿಷಯವು ಎಷ್ಟು ಜನಪ್ರಿಯವಾಗಿದೆ ಎಂಬುದನ್ನು ತೋರಿಸುತ್ತದೆ.
  • YouTube ನಲ್ಲಿ ಹುಡುಕಿರುವುದು: ವಿಷಯಕ್ಕೆ ಸಂಬಂಧಿಸಿದಂತೆ YouTube ನಾದ್ಯಂತ ವೀಕ್ಷಕರು ನಡೆಸಿದ ಜನಪ್ರಿಯ ಹುಡುಕಾಟಗಳನ್ನು ತೋರಿಸುತ್ತದೆ.
  • YouTube ನಲ್ಲಿ ವೀಕ್ಷಿಸಿರುವುದು: ವಿಷಯಕ್ಕೆ ಸಂಬಂಧಿಸಿದಂತೆ YouTube ನಲ್ಲಿ ವೀಕ್ಷಕರು ವೀಕ್ಷಿಸಿದ ಜನಪ್ರಿಯ ವೀಡಿಯೊಗಳನ್ನು ತೋರಿಸುತ್ತದೆ.

ಸ್ಫೂರ್ತಿ ಟ್ಯಾಬ್ ಏನನ್ನು ತೋರಿಸುತ್ತದೆ

ಗಮನಿಸಿ: ಪ್ರಸ್ತುತ, ಈ ಒಳನೋಟಗಳು ನಿರ್ದಿಷ್ಟ ದೇಶಗಳು, ಭಾಷೆಗಳು ಮತ್ತು ಸಾಧನಗಳಿಗೆ ಮಾತ್ರ ಸೀಮಿತವಾಗಿವೆ. ಪ್ರಸ್ತುತ ಯಾವುದೇ ಸೂಕ್ತ ವೀಡಿಯೊಗಳಿಲ್ಲದಿದ್ದರೆ, ಇವುಗಳಲ್ಲಿ ಕೆಲವು ವಿಭಾಗಗಳು ನಿಮಗೆ ಕಾಣಿಸದಿರಬಹುದು.

ಸ್ಫೂರ್ತಿ ಪಡೆಯಿರಿ

ಗಮನಿಸಿ: AI-ಜನರೇಟೆಡ್ ಕಂಟೆಂಟ್ ನಿಖರವಾಗಿಲ್ಲದಿರಬಹುದು ಅಥವಾ ಸೂಕ್ತವಲ್ಲದಿರಬಹುದು, ಗುಣಮಟ್ಟದಲ್ಲಿ ವ್ಯತ್ಯಾಸ ಹೊಂದಿರಬಹುದು ಅಥವಾ YouTube ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸದಿರುವ ಮಾಹಿತಿಯನ್ನು ಒದಗಿಸಬಹುದು. ಈ ಫೀಚರ್ ಅನ್ನು ಬಳಸುವಾಗ ನಿಮ್ಮ ಕುರಿತು ಅಥವಾ ಇತರರ ಕುರಿತಾದ ವೈಯಕ್ತಿಕ ಮಾಹಿತಿಯನ್ನು ಸೇರಿಸಬೇಡಿ ಅಥವಾ ವೃತ್ತಿಪರ ಸಲಹೆಗಾಗಿ ಈ ಫೀಚರ್‌ನಿಂದ ಐಡಿಯಾಗಳು, ಔಟ್‌ಲೈನ್‌ಗಳು ಅಥವಾ ಇತರ ಔಟ್‌ಪುಟ್‌ಗಳನ್ನು ಅವಲಂಬಿಸಬೇಡಿ. YouTube ಒದಗಿಸುವ ಇಂತಹ ಯಾವುದೇ AI-ಜನರೇಟೆಡ್ ಕಂಟೆಂಟ್ ಅನ್ನು ರಚಿಸುವ ಅಥವಾ ಬಳಸುವ ಮೊದಲು ಸ್ವಂತ ವಿವೇಚನೆಯನ್ನು ಬಳಸಿ. 

ನಿಮ್ಮ ಚಾನಲ್ ಮತ್ತು ಪ್ರೇಕ್ಷಕರಿಗಾಗಿ ವೈಯಕ್ತೀಕರಿಸಲಾದ ಹೊಸ ಕಂಟೆಂಟ್ ಐಡಿಯಾಗಳನ್ನು ಬ್ರೈನ್‌ಸ್ಟಾರ್ಮ್ ಮಾಡುವುದಕ್ಕಾಗಿ ನಿಮಗೆ ಸಹಾಯ ಮಾಡಲು ಈ ಕಾರ್ಡ್ ಜನರೇಟಿವ್ AI ಅನ್ನು ಬಳಸುತ್ತದೆ. ನಿಮ್ಮ ಮುಂದಿನ ವೀಡಿಯೊವನ್ನು ಪ್ಲಾನ್ ಮಾಡಲು ಸಹಾಯ ಮಾಡುವುದಕ್ಕಾಗಿ ನೀವು ಹೊಸ ಕಂಟೆಂಟ್ ವಿಷಯಗಳನ್ನು ಕಂಡುಕೊಳ್ಳಬಹುದು ಮತ್ತು ತ್ವರಿತವಾಗಿ ವೀಡಿಯೊ ಔಟ್‌ಲೈನ್ ಅನ್ನು ಜನರೇಟ್ ಮಾಡಬಹುದು. ಪ್ರಾರಂಭಿಸಲು, ಒಂದು ಐಡಿಯಾವನ್ನು ಟೈಪ್ ಮಾಡಿ ಅಥವಾ ಟಾಪ್ ಹುಡುಕಾಟ ಪದವೊಂದನ್ನು ಎಕ್ಸ್‌ಪ್ಲೋರ್ ಮಾಡಿ ಮತ್ತು ಔಟ್‌ಲೈನ್ ರಚಿಸಿ  ಎಂಬುದನ್ನು ಕ್ಲಿಕ್ ಮಾಡಿ.

ಟಾಪ್ ಹುಡುಕಾಟಗಳು

ಈ ಕಾರ್ಡ್, ನಿಮ್ಮ ಪ್ರೇಕ್ಷಕರ ಆಧಾರದ ಮೇಲೆ ಟಾಪ್ ಹುಡುಕಾಟಗಳನ್ನು ಮತ್ತು ಕಳೆದ 28 ದಿನಗಳಲ್ಲಿನ ನಿಮ್ಮ ಸೇವ್‌ಗಳನ್ನು ತೋರಿಸುತ್ತದೆ. ಕೆಲವು ಹುಡುಕಾಟ ಪದಗಳ ಮೇಲೆ, "ಕಂಟೆಂಟ್ ಗ್ಯಾಪ್ " ಎಂದು ಹೇಳುವ ಲೇಬಲ್ ಇರುತ್ತದೆ.

ಇವುಗಳಿಗೆ ಸಂಬಂಧಿಸಿದ ಇತ್ತೀಚಿನ ವೀಡಿಯೊಗಳು

ಈ ಕಾರ್ಡ್, ಕಳೆದ 28 ದಿನಗಳಲ್ಲಿ ನಿಮ್ಮ ಪ್ರೇಕ್ಷಕರು ವೀಕ್ಷಿಸಿದ ವಿಷಯಗಳು ಮತ್ತು ನಿಮ್ಮ ಸೇವ್ ಮಾಡಿದ ಹುಡುಕಾಟಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ತೋರಿಸುತ್ತದೆ.

Shorts ಗೆ ಸಂಬಂಧಿಸಿದ ಕಂಟೆಂಟ್ ಗ್ಯಾಪ್‌ಗಳು

ಈ ಕಾರ್ಡ್, ವೀಕ್ಷಕರು ತಮಗೆ ಹೆಚ್ಚು ಸೂಕ್ತವಾದ ಅಥವಾ ಉನ್ನತ ಗುಣಮಟ್ಟದ Shorts ಅನ್ನು ಹುಡುಕುತ್ತಿರಬಹುದಾದ ಕಂಟೆಂಟ್ ಗ್ಯಾಪ್‌ಗಳನ್ನು ತೋರಿಸುತ್ತದೆ.

ಕಂಟೆಂಟ್ ಗ್ಯಾಪ್‌ಗಳ ಕುರಿತು ತಿಳಿಯಿರಿ

ನಿರ್ದಿಷ್ಟ ಹುಡುಕಾಟಕ್ಕೆ ಸಂಬಂಧಿಸಿದಂತೆ, YouTube ನಲ್ಲಿ ಸಾಕಷ್ಟು ಗುಣಮಟ್ಟದ ಹುಡುಕಾಟದ ಫಲಿತಾಂಶಗಳನ್ನು ಹುಡುಕಲು ವೀಕ್ಷಕರಿಗೆ ಸಾಧ್ಯವಾಗದಿದ್ದಾಗ ಕಂಟೆಂಟ್ ಗ್ಯಾಪ್ ಸಂಭವಿಸುತ್ತದೆ. ಅಸ್ತಿತ್ವದಲ್ಲಿಲ್ಲದ ಅಥವಾ ಸುಧಾರಿಸಬಹುದಾದ ಕಂಟೆಂಟ್ ಅನ್ನು ರಚಿಸಲು ನೀವು ಕಂಟೆಂಟ್ ಗ್ಯಾಪ್‌ಗಳನ್ನು ಸ್ಫೂರ್ತಿಯಾಗಿ ಬಳಸಬಹುದು. 

ಈ ಸಂದರ್ಭಗಳಲ್ಲಿ ಕಂಟೆಂಟ್ ಗ್ಯಾಪ್ ಸಂಭವಿಸಬಹುದು:

  • ವೀಕ್ಷಕರು ತಮ್ಮ ಹುಡುಕಾಟಗಳಿಗೆ ಸಂಬಂಧಿಸಿದ ಯಾವುದೇ ಫಲಿತಾಂಶಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.
  • ವೀಕ್ಷಕರು ತಮ್ಮ ಹುಡುಕಾಟಗಳಿಗೆ ಸಂಬಂಧಿಸಿದಂತೆ ನಿಖರವಾದ ಹೊಂದಾಣಿಕೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.
  • ವೀಕ್ಷಕರು ತಮ್ಮ ಹುಡುಕಾಟಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ – ಉದಾಹರಣೆಗೆ, ಕಂಟೆಂಟ್ ಹಳೆಯದಾಗಿದೆ ಅಥವಾ ಕಡಿಮೆ ಗುಣಮಟ್ಟದ್ದಾಗಿದೆ.
ಕಂಪ್ಯೂಟರ್‌ನಲ್ಲಿ ಹುಡುಕಾಟ ಒಳನೋಟಗಳ ಕುರಿತು ಇನ್ನಷ್ಟು ತಿಳಿಯಲು, YouTube ರಚನೆಕಾರರ ಚಾನಲ್‌ನಿಂದ ಕೆಳಗಿನ ವೀಡಿಯೊವನ್ನು ನೋಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12458885677591858709
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false