ನಿಮ್ಮ Premium ಸದಸ್ಯತ್ವವನ್ನು ವಿರಾಮಗೊಳಿಸಿ ಅಥವಾ ಪುನರಾರಂಭಿಸಿ

YouTube Premium ಹಾಗೂ YouTube Music Premium ಸಬ್‌ಸ್ಕ್ರೈಬರ್‌ಗಳು, ತಮ್ಮ ಪಾವತಿಸಿದ ಸದಸ್ಯತ್ವದ ಯಾವುದೇ ಅವಧಿಯಲ್ಲಿ ವಿರಾಮಗೊಳಿಸಬಹುದು, ಪುನರಾರಂಭಿಸಬಹುದು ಅಥವಾ ರದ್ದುಗೊಳಿಸಬಹುದು.

ನಿಮ್ಮ ಪಾವತಿಸಿದ ಸದಸ್ಯತ್ವವನ್ನು ವೀಕ್ಷಿಸಲು ಹಾಗೂ ನಿರ್ವಹಿಸಲು ಬಟನ್ ಅನ್ನು ಒತ್ತಿ. ನಂತರ, YouTube Premium ಅಥವಾ YouTube Music Premium ಸದಸ್ಯತ್ವವನ್ನು ವಿರಾಮಗೊಳಿಸಲು ಅಥವಾ ಪುನರಾರಂಭಿಸಲು ಈ ಲೇಖನದಲ್ಲಿರುವ ಹಂತಗಳನ್ನು ಅನುಸರಿಸಿ.

ಗಮನಿಸಿ: ವಾರ್ಷಿಕ ಪ್ಲಾನ್‍ಗಳನ್ನು ವಿರಾಮಗೊಳಿಸಲು ಸಾಧ್ಯವಾಗುವುದಿಲ್ಲ. Apple ಮೂಲಕ ಬಿಲ್ ಮಾಡಲಾಗುವ ಬಳಕೆದಾರರಿಗೆ ಪಾವತಿಸಿದ ಸದಸ್ಯತ್ವವನ್ನು ವಿರಾಮಗೊಳಿಸುವ ಮತ್ತು ಪುನರಾರಂಭಿಸುವ ಸೌಲಭ್ಯ ಲಭ್ಯವಿರುವುದಿಲ್ಲ.

ನಿಮ್ಮ ಸದಸ್ಯತ್ವವನ್ನು ವಿರಾಮಗೊಳಿಸುವುದು ಹೇಗೆ

 

ಈಗ ವಿರಾಮಗೊಳಿಸಿ

  1. youtube.com/paid_memberships ಗೆ ಹೋಗಿ.
  2. ಸದಸ್ಯತ್ವವನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.​
  3. ನಿಷ್ಕ್ರಿಯಗೊಳಿಸಿ ಎಂಬುದನ್ನು ಕ್ಲಿಕ್ ಮಾಡಿ.
  4. ಅದರ ಬದಲಿಗೆ ವಿರಾಮಗೊಳಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. ಸ್ಲೈಡರ್ ಅನ್ನು ಬಳಸಿಕೊಂಡು, ನಿಮ್ಮ ಸದಸ್ಯತ್ವವನ್ನು ಎಷ್ಟು ತಿಂಗಳ ಕಾಲ ವಿರಾಮಗೊಳಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ, ನಂತರ ಸದಸ್ಯತ್ವವನ್ನು ವಿರಾಮಗೊಳಿಸಿ ಎಂಬುದನ್ನು ಟ್ಯಾಪ್ ಮಾಡಿ.

ನೀವು ಸದಸ್ಯತ್ವವನ್ನು ವಿರಾಮಗೊಳಿಸಿದಾಗ:

  • ಈ ವಿರಾಮಗೊಳಿಸಿದ ಸ್ಥಿತಿಯ ಅವಧಿಯನ್ನು 1 ರಿಂದ 6 ತಿಂಗಳವರೆಗೆ ನೀವು ಆಯ್ಕೆ ಮಾಡಬಹುದು.
  • ಪ್ರಸ್ತುತ ಬಿಲ್ಲಿಂಗ್ ಸೈಕಲ್‌ನ ಕೊನೆಗೆ ನಿಮ್ಮ ಸದಸ್ಯತ್ವವನ್ನು ವಿರಾಮಗೊಳಿಸಲಾಗುವುದು.
  • ನಿಮ್ಮ ಸದಸ್ಯತ್ವವನ್ನು ವಿರಾಮಗೊಳಿಸಿದಾಗ, ನೀವು (ಮತ್ತು ನಿಮ್ಮ ಪ್ಲಾನ್‌ನಲ್ಲಿ ಒಳಗೊಂಡಿರುವ ಕುಟುಂಬದ ಯಾವುದೇ ಸದಸ್ಯರು) YouTube Premium ಅಥವಾ YouTube Music Premium ಪ್ರಯೋಜನಗಳಿಗೆ ಆ್ಯಕ್ಸೆಸ್ ಹೊಂದಿರುವುದಿಲ್ಲ.
  • ವಿರಾಮಗೊಳಿಸಿದ ಸ್ಥಿತಿಯಲ್ಲಿ ಯಾವುದೇ ಸಮಯದಲ್ಲಿ ನಿಮ್ಮ ಸದಸ್ಯತ್ವವನ್ನು ನೀವು ರದ್ದುಗೊಳಿಸಬಹುದು.
  • ನೀವು YouTube Premium ಸಬ್‌ಸ್ಕ್ರಿಪ್ಶನ್ ಅನ್ನು ಹೊಂದಿದ್ದರೆ, ನೀವು ಡೌನ್‌ಲೋಡ್ ಮಾಡಿದ ಯಾವುದೇ ವೀಡಿಯೊಗಳು ಅಥವಾ ಸಂಗೀತವನ್ನು ಉಳಿಸಿಕೊಳ್ಳಲಾಗುವುದು. ನಿಮ್ಮ ಸದಸ್ಯತ್ವವನ್ನು ನೀವು ಮುಂದುವರಿಸುವವರೆಗೆ ಅವುಗಳನ್ನು ಆ್ಯಕ್ಸೆಸ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.
  • ನೀವು YouTube Music Premium ಸಬ್‌ಸ್ಕ್ರಿಪ್ಶನ್ ಅನ್ನು ಹೊಂದಿದ್ದರೆ, ನೀವು ಡೌನ್‌ಲೋಡ್ ಮಾಡಿದ ಯಾವುದೇ ಸಂಗೀತವನ್ನು ಉಳಿಸಿಕೊಳ್ಳಲಾಗುತ್ತದೆ. ನಿಮ್ಮ ಸದಸ್ಯತ್ವವನ್ನು ನೀವು ಮುಂದುವರಿಸುವವರೆಗೆ ಅವುಗಳನ್ನು ಆ್ಯಕ್ಸೆಸ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.
  • ವಿರಾಮಗೊಳಿಸಿದ ಸ್ಥಿತಿ ಕೊನೆಗೊಂಡಾಗ, ನಿಮ್ಮ ಸಾಮಾನ್ಯ ಮಾಸಿಕ ದರದಲ್ಲಿ ನಿಮಗೆ ಮುಂದಿನ ತಿಂಗಳ ಸೇವೆಗಾಗಿ ಸ್ವಯಂಚಾಲಿತವಾಗಿ ಶುಲ್ಕ ವಿಧಿಸಲಾಗುತ್ತದೆ. ನಿಮ್ಮ ಸದಸ್ಯತ್ವವು ವಿರಾಮಗೊಳಿಸಿದ ಸ್ಥಿತಿಯಲ್ಲಿದ್ದಾಗ ನಿಮ್ಮ ಪ್ಲಾನ್ ದರವು ಬದಲಾದರೆ, ಹೊಸ ಬೆಲೆಗೆ ಬದಲಾಯಿಸುವ ಮೊದಲು ನಿಮಗೆ ಹಳೆಯ ದರವನ್ನು ಒಮ್ಮೆ ವಿಧಿಸಲಾಗುತ್ತದೆ. ನಿಮ್ಮ ದೇಶ/ಪ್ರದೇಶದಲ್ಲಿ ದರ ಏರಿಕೆಯಾಗುವ ಕನಿಷ್ಠ 30 ದಿನಗಳ ಮುಂಚಿತವಾಗಿ ನಾವು ಇಮೇಲ್ ಮೂಲಕ ನಿಮಗೆ ತಿಳಿಸುತ್ತೇವೆ.
  • ನಿಮ್ಮ ನಿಗದಿತ ಪುನರಾರಂಭ ದಿನದ ಮೊದಲು ಯಾವಾಗ ಬೇಕಾದರೂ YouTube ಗೆ ಭೇಟಿ ನೀಡುವ ಮೂಲಕ ನಿಮ್ಮ ಸದಸ್ಯತ್ವದ ವಿರಾಮಗೊಳಿಸುವಿಕೆಯನ್ನು ನೀವು ರದ್ದುಗೊಳಿಸಬಹುದು ಮತ್ತು ಪುನರಾರಂಭಿಸಬಹುದು.

ನಿಮ್ಮ ಸದಸ್ಯತ್ವವನ್ನು ಪುನರಾರಂಭಿಸುವುದು ಹೇಗೆ

 

ಈಗ ಪುನರಾರಂಭಿಸಿ

  1. youtube.com/paid_memberships ಗೆ ಹೋಗಿ.
  2. ಸದಸ್ಯತ್ವವನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.​
  3. ಪುನರಾರಂಭಿಸಿ ಎಂಬುದನ್ನು ಕ್ಲಿಕ್ ಮಾಡಿ.
  4. ಪುನರಾರಂಭಿಸಿ  ಎಂಬುದನ್ನು ಮತ್ತೊಮ್ಮೆ ಕ್ಲಿಕ್ ಮಾಡಿ.

 

Pixel Pass ಸಬ್‌ಸ್ಕ್ರಿಪ್ಶನ್‌ನ ಮೂಲಕ ನೀವು YouTube Premium ಅನ್ನು ಸ್ವೀಕರಿಸಿದ್ದರೆ, ನಿಮ್ಮ ಖಾತೆಯನ್ನು ಹೇಗೆ ನಿರ್ವಹಿಸಬೇಕು ಎಂಬ ಕುರಿತು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಿ.
2022 ರಲ್ಲಿ, Android ಮೂಲಕ ಸೈನ್ ಅಪ್ ಮಾಡಿದ ಹೊಸ YouTube Premium ಹಾಗೂ Music Premium ಸಬ್‌ಸ್ಕ್ರೈಬರ್‌ಗಳಿಗೆ Google Play ಮೂಲಕ ಬಿಲ್ ಮಾಡಲಾಗುತ್ತದೆ. ಈ ಬದಲಾವಣೆಯು ಪ್ರಸ್ತುತ ಸಬ್‌ಸ್ಕ್ರೈಬರ್‌ಗಳ ಮೇಲೆ ಪ್ರಭಾವ ಬೀರುವುದಿಲ್ಲ. ಇತ್ತೀಚಿನ ಶುಲ್ಕಗಳನ್ನು ನೋಡಲು ಹಾಗೂ ನಿಮಗೆ ಹೇಗೆ ಬಿಲ್ ಮಾಡಲಾಗುತ್ತದೆ ಎಂದು ತಿಳಿಯಲು pay.google.com ಗೆ ಭೇಟಿ ನೀಡಬಹುದು. Google Play ಖರೀದಿಗಾಗಿ ಮರುಪಾವತಿಯನ್ನು ವಿನಂತಿಸಲು, ಇಲ್ಲಿ ಸ್ಥೂಲವಾಗಿ ವಿವರಿಸಲಾಗಿರುವ ಹಂತಗಳನ್ನು ಅನುಸರಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
ಕಂಪ್ಯೂಟರ್‌ Android
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3149112910708214133
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false