ಹಕ್ಕು ಸ್ಥಾಪನೆ ಮಾಡಲಾದ ವೀಡಿಯೊಗಳಲ್ಲಿ ಪರವಾನಗಿ ಪಡೆಯಲಾಗಿರುವ ಕಂಟೆಂಟ್ ಅನ್ನು ಪರಿಶೀಲಿಸಿ

ಅಸೆಟ್‌ಗೆ ಪರವಾನಗಿ ಸ್ಟ್ರ್ಯಾಟಜಿಯನ್ನು ಅನ್ವಯಿಸಿದಾಗ ಮತ್ತು ವೀಡಿಯೊವನ್ನು ಕ್ಲೇಮ್ ಮಾಡಿದಾಗ, ಕ್ಲೇಮ್ ಮಾಡಲಾದ ವೀಡಿಯೊಗಳ ಪುಟವು, ಕ್ಲೇಮ್ ಮಾಡಲಾದ ವೀಡಿಯೊದಲ್ಲಿ ಕಂಡುಬಂದ ಪರವಾನಗಿ ಪಡೆದ ಕಂಟೆಂಟ್ ಕುರಿತು ಹೆಚ್ಚಿನ ಮಾಹಿತಿಯನ್ನು ತೋರಿಸುತ್ತದೆ.

ಹಕ್ಕು ಸ್ಥಾಪನೆ ಮಾಡಲಾದ ವೀಡಿಯೊಗಳ ಕುರಿತಾದ ಪರವಾನಗಿ ಮಾಹಿತಿಯನ್ನು ವೀಕ್ಷಿಸಿ

  1. Studio ಕಂಟೆಂಟ್ ನಿರ್ವಾಹಕಕ್ಕೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಹಕ್ಕು ಸ್ಥಾಪನೆ ಮಾಡಲಾದ ವೀಡಿಯೊಗಳನ್ನು ಆಯ್ಕೆ ಮಾಡಿ.
  3. ಫಿಲ್ಟರ್ ಬಾರ್ ಅನ್ನು ಕ್ಲಿಕ್ ಮಾಡಿ.
  4. ಹಸ್ತಚಾಲಿತವಾಗಿ ಘೋಷಿಸಲಾದ ಪರವಾನಗಿ ಹಕ್ಕು ಸ್ಥಾಪನೆಗಳನ್ನು ವೀಕ್ಷಿಸಲು, ಮೂಲಸ್ಥಾನ ನಂತರ ಉತ್ಪನ್ನದಲ್ಲಿ (Studio) ಮತ್ತು ಪರವಾನಗಿಯ ಸ್ಥಿತಿ ನಂತರ ಸಕ್ರಿಯ ಎಂಬುದನ್ನು ಆಯ್ಕೆ ಮಾಡಿ. ಸ್ವಯಂಚಾಲಿತವಾಗಿ ಗುರುತಿಸಲಾದ ಪರವಾನಗಿ ಹಕ್ಕು ಸ್ಥಾಪನೆಗಳನ್ನು ವೀಕ್ಷಿಸಲು ಮೂಲಸ್ಥಾನ ನಂತರ ಆಡಿಯೋ ಹೊಂದಾಣಿಕೆಹಾಗೂ ಪರವಾನಗಿಯ ಸ್ಥಿತಿ ನಂತರ ಸಕ್ರಿಯ ಎಂಬುದನ್ನು ಆಯ್ಕೆ ಮಾಡಿ.
  5. ಅನ್ವಯಿಸಿ ಎಂಬುದನ್ನು ಕ್ಲಿಕ್ ಮಾಡಿ.
  6. ಪರವಾನಗಿ ಬಳಕೆಗಳು ಕಾಲಮ್‌ನಲ್ಲಿ, ಪರವಾನಗಿ ಸ್ಟ್ರ್ಯಾಟಜಿ, ಆ ನಿರ್ದಿಷ್ಟ ರಚನೆಕಾರರಿಗಾಗಿ ಪಡೆದುಕೊಳ್ಳುವಿಕೆ ದರ, ಅಸೆಟ್‌ನ ಹೆಸರು ಮತ್ತು ID, ಹಾಗೂ ಇತರ ಪರವಾನಗಿ ನಿಯಮಗಳಂತಹ ವಿವರಗಳನ್ನು ವೀಕ್ಷಿಸಲು ಕ್ಲೇಮ್ ಮಾಡಲಾದ ವೀಡಿಯೊ ಸಾಲಿನ ಮೇಲೆ ಹೋವರ್ ಮಾಡಿ.
ಗಮನಿಸಿ: ಪ್ರಮಾಣಿತ Content ID ಕ್ಲೇಮ್ ಅನ್ನು ಹೊಂದಿರುವ ಕ್ಲೇಮ್ ಮಾಡಲಾದ ವೀಡಿಯೊಗೆ ಯಾವುದೇ ಪರವಾನಗಿ ಸ್ಟ್ರ್ಯಾಟಜಿಯನ್ನು ಅನ್ವಯಿಸದಿದ್ದರೆ, ಪರವಾನಗಿ ಬಳಕೆಗಳು ಕಾಲಮ್‌ನಲ್ಲಿ ಡ್ಯಾಶ್ ಅನ್ನು ತೋರಿಸಲಾಗುತ್ತದೆ.

ಹಕ್ಕು ಸ್ಥಾಪನೆ ಮಾಡಲಾದ ವೀಡಿಯೊಗಳ ಪರವಾನಗಿ ಸ್ಥಿತಿಗಳನ್ನು ಪರಿಶೀಲಿಸಿ

  1. ಹಕ್ಕು ಸ್ಥಾಪನೆ ಮಾಡಲಾದ ವೀಡಿಯೊಗಳ ಪುಟದಲ್ಲಿ, ಫಿಲ್ಟರ್ ಬಾರ್ ಅನ್ನು ಕ್ಲಿಕ್ ಮಾಡಿ.
  2. ಪರವಾನಗಿಯ ಸ್ಥಿತಿಯನ್ನು ಆಯ್ಕೆ ಮಾಡಿ.
  3. ಒಂದು ಅಥವಾ ಹೆಚ್ಚು ಫಿಲ್ಟರ್‌ಗಳನ್ನು ಆಯ್ಕೆ ಮಾಡಿ:
    • ಸಕ್ರಿಯ: ಸಕ್ರಿಯ ಪರವಾನಗಿಯ ಅಡಿಯಲ್ಲಿ ಬಳಸಲಾದ ಕಂಟೆಂಟ್ ಅನ್ನು ಹೊಂದಿರುವ ಹಕ್ಕು ಸ್ಥಾಪನೆ ಮಾಡಲಾದ ವೀಡಿಯೊಗಳು.
    • ನಿಷ್ಕ್ರಿಯ ನಂತರ ಪರವಾನಗಿಯ ಅವಧಿ ಮುಗಿದಿದೆ: ಪರವಾನಗಿಯ ಅವಧಿ ಮುಗಿದ ಕಾರಣ, ಈಗ ನಿಷ್ಕ್ರಿಯವಾಗಿರುವ ಪರವಾನಗಿಯ ಅಡಿಯಲ್ಲಿ ಬಳಸಲಾದ ಕಂಟೆಂಟ್ ಅನ್ನು ಹೊಂದಿರುವ ಹಕ್ಕು ಸ್ಥಾಪನೆ ಮಾಡಲಾದ ವೀಡಿಯೊಗಳು.
    • ನಿಷ್ಕ್ರಿಯ ನಂತರ ತೆಗೆದುಹಾಕಲಾಗಿರುವ ಬಳಕೆ: ಪರವಾನಗಿ ಪಡೆದಿರುವ ಕಂಟೆಂಟ್ ಅನ್ನು ರಚನೆಕಾರರು ಈಗ ಬಳಸುತ್ತಿರದ ಕಾರಣ ಈಗ ನಿಷ್ಕ್ರಿಯವಾಗಿರುವ ಪರವಾನಗಿಯ ಅಡಿಯಲ್ಲಿ ಬಳಸಲಾದ ಕಂಟೆಂಟ್ ಅನ್ನು ಹೊಂದಿರುವ ಹಕ್ಕು ಸ್ಥಾಪನೆ ಮಾಡಲಾದ ವೀಡಿಯೊಗಳು.
    • ನಿಷ್ಕ್ರಿಯ ನಂತರ ನಿಯಮಗಳನ್ನು ಉಲ್ಲಂಘಿಸಲಾಗಿದೆ: Creator Music ನಿರ್ಬಂಧಗಳನ್ನು ಬಳಕೆದಾರರು ಉಲ್ಲಂಘಿಸಿದ ಕಾರಣ ಪರವಾನಗಿಯನ್ನು ಹಿಂಪಡೆದುದರಿಂದ ಇದೀಗ ನಿಷ್ಕ್ರಿಯವಾಗಿರುವ ಪರವಾನಗಿಯ ಅಡಿಯಲ್ಲಿ ಬಳಸಲಾದ ಕಂಟೆಂಟ್ ಅನ್ನು ಹೊಂದಿರುವ ಹಕ್ಕು ಸ್ಥಾಪನೆ ಮಾಡಲಾದ ವೀಡಿಯೊಗಳು.
  4. ಅನ್ವಯಿಸಿ ಎಂಬುದನ್ನು ಕ್ಲಿಕ್ ಮಾಡಿ.

ಪರವಾನಗಿ ಬಳಕೆಯ ಕುರಿತು ಇನ್ನಷ್ಟು ವಿವರಗಳನ್ನು ಪಡೆಯಿರಿ

  1. ಕ್ಲೇಮ್ ಮಾಡಲಾದ ವೀಡಿಯೊಗಳ ಪುಟದಲ್ಲಿ, ಕ್ಲೇಮ್ ಮಾಡಲಾದ ವೀಡಿಯೊದ ವಿವರಗಳ ಪುಟವನ್ನು ತೆರೆಯಲು ಆ ವೀಡಿಯೊವನ್ನು ಕ್ಲಿಕ್ ಮಾಡಿ.
  2. ಕ್ಲೇಮ್ ಮಾಡಲಾದ ವೀಡಿಯೊ ವಿವರಗಳ ಪುಟದಲ್ಲಿ, ನೀವು ಈ ರೀತಿಯ ಮಾಹಿತಿಯನ್ನು ವೀಕ್ಷಿಸಬಹುದು:
    • ಬೆಲೆ: ಪರವಾನಗಿ ಪಡೆದ ಟ್ರ್ಯಾಕ್‌ಗಾಗಿ ರಚನೆಕಾರರು ಪಾವತಿಸಿದ ಮೊತ್ತ.
    • ಸಬ್‌ಸ್ಕ್ರೈಬರ್‌ಗಳು: ಪರವಾನಗಿಯನ್ನು ಪಡೆದುಕೊಂಡಾಗ ರಚನೆಕಾರರು ಎಷ್ಟು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದರು.
    • ಸ್ಟ್ರ್ಯಾಟಜಿ: ಪರವಾನಗಿ ಸ್ಟ್ರ್ಯಾಟಜಿ ಪುಟಕ್ಕೆ ಲಿಂಕ್ ಮಾಡಲಾಗಿರುವ ಪರವಾನಗಿ ಸ್ಟ್ರ್ಯಾಟಜಿ.
    • ಖರೀದಿ ದಿನಾಂಕ: ರಚನೆಕಾರರು ಟ್ರ್ಯಾಕ್ ಅನ್ನು ಖರೀದಿಸಿದ ದಿನಾಂಕ.
    • ಪ್ರಾರಂಭ ದಿನಾಂಕ: ಪರವಾನಗಿ ಪಡೆದುಕೊಂಡ ಟ್ರ್ಯಾಕ್ ಅನ್ನು ಬಳಸಿಕೊಂಡು ರಚನೆಕಾರರು ತಮ್ಮ ವೀಡಿಯೊವನ್ನು ಪ್ರಕಟಿಸಿದ ದಿನಾಂಕ.
    • ಅವಧಿ ಮುಗಿದ ದಿನಾಂಕ: ಪರವಾನಗಿಯ ಅವಧಿ ಮುಗಿಯುವ ದಿನಾಂಕ.

ಪರವಾನಗಿಯ ಅವಧಿ: ಪರವಾನಗಿ ಸ್ಟ್ರ್ಯಾಟಜಿಯ ನಿಯಮಗಳು ವ್ಯಾಖ್ಯಾನಿಸಿದ ಪ್ರಕಾರ ಪರವಾನಗಿಯು ಸಕ್ರಿಯವಾಗಿ ಉಳಿಯುವ ಸಮಯದ ಪ್ರಮಾಣ.

ಗಮನಿಸಿ: ಪರವಾನಗಿ ಸಕ್ರಿಯವಾಗಿದ್ದರೆ, ಕ್ಲೈಮ್‌ಗೆ ಸಂಬಂಧಿಸಿದ ನೀತಿ ಗ್ರೇಯ್ಡ್ ಔಟ್ ಆಗಿರುತ್ತದೆ ಏಕೆಂದರೆ ಪರವಾನಗಿಯ ಅವಧಿ ಮುಗಿಯುವವರೆಗೆ ನೀತಿಯನ್ನು ಅನ್ವಯಿಸಲಾಗುವುದಿಲ್ಲ. ಪರವಾನಗಿಯ ಅವಧಿ ಮುಗಿದ ಬಳಿಕ, “ಪರವಾನಗಿಯ ಅವಧಿ ಮುಗಿದಿದೆ” ಲೇಬಲ್ ಕಾಣಿಸಿಕೊಳ್ಳುತ್ತದೆ ಮತ್ತು ನೀವು ಆಯ್ಕೆ ಮಾಡಿದ ನೀತಿಯನ್ನು ಅನುಸರಿಸಿ Content ID ಕ್ಲೈಮ್ ಅನ್ನು ರಚಿಸಲಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10412855111907374081
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false