ಟ್ರ್ಯಾಕ್‌ಗಳನ್ನು ಸೇವ್ ಮಾಡಿ ಮತ್ತು ನಿರ್ವಹಿಸಿ

Creator Music, ಇದೀಗ YouTube ಪಾಲುದಾರ ಕಾರ್ಯಕ್ರಮದಲ್ಲಿರುವ (YPP) ಯು.ಎಸ್. ರಚನೆಕಾರರಿಗೆ ಲಭ್ಯವಿದೆ. ಯು.ಎಸ್. ಹೊರಗಡೆ ಇರುವ YPP ರಚನೆಕಾರರಿಗೆ ವಿಸ್ತರಿಸುವುದು ಇನ್ನೂ ಬಾಕಿಯಿದೆ.
ಗಮನಿಸಿ: ಈ ಲೇಖನದಲ್ಲಿ ವಿವರಿಸಲಾದ ಫೀಚರ್‌ಗಳು ವೆಬ್ ಬ್ರೌಸರ್‌ನ ಮೂಲಕ ಲಭ್ಯವಿವೆ.

Creator Music ನಲ್ಲಿ ನಿಮಗೆ ಯಾವುದಾದರೂ ಟ್ರ್ಯಾಕ್ ಇಷ್ಟವಾದರೆ, ನೀವು ಅದನ್ನು ನಿಮ್ಮ ಲೈಬ್ರರಿಯಲ್ಲಿ ಸೇವ್ ಮಾಡಬಹುದು. ನಿಮ್ಮ ಲೈಬ್ರರಿ ಪುಟದಲ್ಲಿ, ನೀವು ಸೇವ್ ಮಾಡಿದ, ಡೌನ್‌ಲೋಡ್ ಮಾಡಿದ ಮತ್ತು ಪರವಾನಗಿ ಪಡೆದ ಟ್ರ್ಯಾಕ್‌ಗಳ ಪಟ್ಟಿಯನ್ನು ವೀಕ್ಷಿಸಬಹುದು, ಫಿಲ್ಟರ್ ಮಾಡಬಹುದು ಮತ್ತು ವಿಂಗಡಿಸಬಹುದು.

ಒಂದು ಟ್ರ್ಯಾಕ್ ಅನ್ನು ನಿಮ್ಮ ಲೈಬ್ರರಿಯಲ್ಲಿ ಸೇವ್ ಮಾಡಿ

ಟ್ರ್ಯಾಕ್ ಅನ್ನು ನಿಮ್ಮ ಲೈಬ್ರರಿಯಲ್ಲಿ ಸೇವ್ ಮಾಡಲು:

  1. ವೆಬ್ ಬ್ರೌಸರ್‌ನಲ್ಲಿ YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, Creator Music ಅನ್ನು ಆಯ್ಕೆ ಮಾಡಿ.
  3. ನೀವು ಸೇವ್ ಮಾಡಲು ಬಯಸುವ ಟ್ರ್ಯಾಕ್ ಅನ್ನು ಹುಡುಕಿ.
  4. ಟ್ರ್ಯಾಕ್‌ನ ಮೇಲೆ ಹೋವರ್ ಮಾಡಿ ಮತ್ತು ಯಾವುದೇ ಟ್ರ್ಯಾಕ್ ಪಟ್ಟಿಯಿಂದ ಅಥವಾ ಪ್ಲೇಯರ್ ಬಾರ್‌ನಿಂದ “ಟ್ರ್ಯಾಕ್ ಅನ್ನು ನಿಮ್ಮ ಲೈಬ್ರರಿಯಲ್ಲಿ ಸೇರಿಸಿ”  ಎಂಬುದನ್ನು ಕ್ಲಿಕ್ ಮಾಡಿ.

ನಿಮ್ಮ ಲೈಬ್ರರಿಯಲ್ಲಿ ನೀವು ಸೇರಿಸಿದ ಟ್ರ್ಯಾಕ್‌ಗಳನ್ನು ನಿಮ್ಮ ಲೈಬ್ರರಿ ಪುಟದಲ್ಲಿ ನೀವು ವೀಕ್ಷಿಸಬಹುದು.

ನಿಮ್ಮ ಲೈಬ್ರರಿಯನ್ನು ವೀಕ್ಷಿಸಿ

ನಿಮ್ಮ ಲೈಬ್ರರಿಯಲ್ಲಿ ಸೇವ್ ಮಾಡಿರುವ ಟ್ರ್ಯಾಕ್‌ಗಳನ್ನು ವೀಕ್ಷಿಸಲು:

  1. ವೆಬ್ ಬ್ರೌಸರ್‌ನಲ್ಲಿ YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, Creator Music ಅನ್ನು ಆಯ್ಕೆ ಮಾಡಿ.
  3. ನಿಮ್ಮ ಲೈಬ್ರರಿ ಎಂಬುದನ್ನು ಕ್ಲಿಕ್ ಮಾಡಿ.
    • ಫಿಲ್ಟರ್ ಮಾಡಿ: ಸೇವ್ ಮಾಡಿರುವುದು, ಡೌನ್‌ಲೋಡ್ ಮಾಡಿರುವುದು, ಅಥವಾ ಪರವಾನಗಿ ಪಡೆದಿರುವುದರ ಪ್ರಕಾರ ಟ್ರ್ಯಾಕ್‌ಗಳನ್ನು ಫಿಲ್ಟರ್ ಮಾಡಲು ಡ್ರಾಪ್‌ಡೌನ್ ಅನ್ನು ಕ್ಲಿಕ್ ಮಾಡಿ.
    • ವಿಂಗಡಿಸಿ: ಸೇರಿಸಿದ ದಿನಾಂಕ (ತೀರಾ ಇತ್ತೀಚಿನದು), ಟ್ರ್ಯಾಕ್‌ನ ಶೀರ್ಷಿಕೆ (A–Z), ಅಥವಾ ಟ್ರ್ಯಾಕ್‌ನ ಶೀರ್ಷಿಕೆಯ (Z–A) ಪ್ರಕಾರ ಟ್ರ್ಯಾಕ್‌ಗಳನ್ನು ವಿಂಗಡಿಸಲು ಡ್ರಾಪ್‌ಡೌನ್ ಅನ್ನು ಕ್ಲಿಕ್ ಮಾಡಿ.

ನಿಮ್ಮ ಲೈಬ್ರರಿಯಿಂದ ಟ್ರ್ಯಾಕ್ ಅನ್ನು ತೆಗೆದುಹಾಕಿ

ನಿಮ್ಮ ಲೈಬ್ರರಿಯಿಂದ ಟ್ರ್ಯಾಕ್ ಅನ್ನು ತೆಗೆದುಹಾಕಲು, ಈ ಯಾವುದೇ ಸ್ಥಳಗಳಲ್ಲಿ ಹಾರ್ಟ್ ಐಕಾನ್  ಅನ್ನು ಕ್ಲಿಕ್ ಮಾಡಿ:

  • ನಿಮ್ಮ ಲೈಬ್ರರಿ ಪುಟದಿಂದ
  • ಟ್ರ್ಯಾಕ್ ಕಾಣಿಸಿಕೊಳ್ಳುವ ಯಾವುದೇ ಟ್ರ್ಯಾಕ್ ಪಟ್ಟಿಯಿಂದ
  • ಟ್ರ್ಯಾಕ್ ಪ್ಲೇ ಆಗುತ್ತಿರುವಾಗ ಅಥವಾ ವಿರಾಮಗೊಳಿಸಲಾಗಿರುವಾಗ, ಪ್ಲೇಯರ್ ಬಾರ್‌ನಿಂದ
ಇನ್ನಷ್ಟು ತಿಳಿಯಲು ಬಯಸುವಿರಾ? ನಮ್ಮ Creator Music FAQ ಗಳನ್ನು ನೋಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14928175070349354305
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false