Creator Music ಅನ್ನು ಪ್ರಾರಂಭಿಸಿ

Creator Music, ಇದೀಗ YouTube ಪಾಲುದಾರ ಕಾರ್ಯಕ್ರಮದಲ್ಲಿರುವ (YPP) ಯು.ಎಸ್. ರಚನೆಕಾರರಿಗೆ ಲಭ್ಯವಿದೆ. ಯು.ಎಸ್. ಹೊರಗಡೆ ಇರುವ YPP ರಚನೆಕಾರರಿಗೆ ವಿಸ್ತರಿಸುವುದು ಇನ್ನೂ ಬಾಕಿಯಿದೆ.
ಗಮನಿಸಿ: ಈ ಲೇಖನದಲ್ಲಿ ವಿವರಿಸಲಾದ ಫೀಚರ್‌ಗಳು ವೆಬ್ ಬ್ರೌಸರ್‌ನ ಮೂಲಕ ಲಭ್ಯವಿವೆ.

Creator Music ಎಂಬುದು, ಮಾನಿಟೈಸೇಶನ್ ಅನ್ನು ಕಳೆದುಕೊಳ್ಳದೆ, ರಚನೆಕಾರರು ವೀಡಿಯೊಗಳಲ್ಲಿ ಬಳಸಬಹುದಾದ ಅಧಿಕ ಗುಣಮಟ್ಟದ ಸಂಗೀತವನ್ನು ಒಳಗೊಂಡಿರುವ, ಬೆಳೆಯುತ್ತಿರುವ ಕ್ಯಾಟಲಾಗ್ ಆಗಿದೆ. ಕೆಲವು ಹಾಡುಗಳ ಪರವಾನಗಿಯನ್ನು ನೇರವಾಗಿ ಪಡೆದುಕೊಳ್ಳಬಹುದು ಮತ್ತು ರಚನೆಕಾರರು ಸಂಪೂರ್ಣ ಮಾನಿಟೈಸೇಶನ್ ಅನ್ನು ಉಳಿಸಿಕೊಳ್ಳಲು ಇದು ಅವಕಾಶ ನೀಡುತ್ತದೆ. ಇತರ ಹಾಡುಗಳು, ಟ್ರ್ಯಾಕ್‌ನ ಹಕ್ಕುದಾರರೊಂದಿಗೆ ಆದಾಯವನ್ನು ಹಂಚಿಕೊಳ್ಳಲು ಅರ್ಹವಾಗಿರಬಹುದು.

Creator Music ಅನ್ನು ಪ್ರಾರಂಭಿಸಲು, ಈ ವೀಡಿಯೊವನ್ನು ನೋಡಿ:

Creator Music

Creator Music ಅನ್ನು ತೆರೆಯಿರಿ

Creator Music, YouTube Studio ದ ಒಳಗೆ ಇದೆ. Creator Music ಅನ್ನು ತೆರೆಯಲು:

  1. ವೆಬ್ ಬ್ರೌಸರ್‌ನಲ್ಲಿ YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, Creator Music ಅನ್ನು ಆಯ್ಕೆ ಮಾಡಿ.

ಟ್ರ್ಯಾಕ್‌ಗಳನ್ನು ಹುಡುಕಿ ಮತ್ತು ಪ್ರಿವ್ಯೂ ನೋಡಿ

Creator Music ನಲ್ಲಿ ನಿಮ್ಮ ಮೆಚ್ಚಿನ ಟ್ರ್ಯಾಕ್‌ಗಳನ್ನು ಹುಡುಕಲು ಅನೇಕ ವಿಧಾನಗಳಿವೆ:

  • ಹೋಮ್ ಪೇಜ್‌ನಲ್ಲಿ ಫೀಚರ್ ಮಾಡಲಾದ ಟ್ರ್ಯಾಕ್‌ಗಳನ್ನು ಬ್ರೌಸ್ ಮಾಡಿ
  • ಶೈಲಿ ಮತ್ತು ಮೂಡ್‌ನಂತಹ ವರ್ಗಗಳಲ್ಲಿ ಟ್ರ್ಯಾಕ್‌ಗಳನ್ನು ಬ್ರೌಸ್ ಮಾಡಿ
  • ನಿರ್ದಿಷ್ಟ ಟ್ರ್ಯಾಕ್ ಅಥವಾ ಕಲಾವಿದರನ್ನು ಹುಡುಕಿ
  • ಪರವಾನಗಿ ಪಡೆಯಬಹುದಾದ ಅಥವಾ ಆದಾಯ ಹಂಚಿಕೊಳ್ಳಲು ಅರ್ಹವಾದ ಟ್ರ್ಯಾಕ್‌ಗಳನ್ನು ಹುಡುಕಿ

ನೀವು ಎಕ್ಸ್‌ಪ್ಲೋರ್ ಮಾಡುತ್ತಾ ಹೋದ ಹಾಗೆ, ಹಾಡುಗಳು ನಿಮ್ಮ ಕಂಟೆಂಟ್‌ಗೆ ಸೂಕ್ತವಾಗಿವೆಯೇ ಎಂದು ನಿರ್ಧರಿಸಲು ಸಹಾಯ ಮಾಡುವುದಕ್ಕಾಗಿ ನೀವು ಹಾಡುಗಳ ಪ್ರಿವ್ಯೂ ನೋಡಬಹುದು. ಪರವಾನಗಿ ನೀಡಬಹುದಾದ ಕೆಲವು ಟ್ರ್ಯಾಕ್‌ಗಳ ಪ್ರಿವ್ಯೂಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ನೀವು ಹಾಡಿನ ಪರವಾನಗಿ ಪಡೆಯುವ ಮೊದಲು ಅದು ನಿಮ್ಮ ವೀಡಿಯೊಗೆ ಹೊಂದಿಕೆಯಾಗುತ್ತದೆ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬಹುದು. ಆದಾಯ ಹಂಚಿಕೆಗೆ ಅರ್ಹವೆಂದು ಗುರುತಿಸಲಾಗಿರುವ ಟ್ರ್ಯಾಕ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಿ.

ಟ್ರ್ಯಾಕ್ ಅನ್ನು ನಿಮ್ಮ ವೀಡಿಯೊದಲ್ಲಿ ನೀವು ಹೇಗೆ ಬಳಸಬಹುದು ಎಂಬುದನ್ನು ನೀವು ತಿಳಿದುಕೊಳ್ಳುವುದಕ್ಕಾಗಿ ಟ್ರ್ಯಾಕ್‌ನ ಬಳಕೆಯ ವಿವರಗಳನ್ನು ಸಹ ನೀವು ಪ್ರಿವ್ಯೂ ಮಾಡಬಹುದು. ಟ್ರ್ಯಾಕ್‌ಗಳನ್ನು ಹುಡುಕುವ ಮತ್ತು ಪ್ರಿವ್ಯೂ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.

ಟ್ರ್ಯಾಕ್‌ಗಳನ್ನು ಸೇವ್ ಮಾಡಿ ಮತ್ತು ನಿರ್ವಹಿಸಿ

ನಿಮಗೆ ಇಷ್ಟವಾದ ಹಾಡು ಕಂಡುಬಂದಾಗ, ಅದನ್ನು ನಿಮ್ಮ ಲೈಬ್ರರಿಯಲ್ಲಿ ಸೇವ್ ಮಾಡಬಹುದು. ನಿಮ್ಮ ಲೈಬ್ರರಿ ಪುಟದಲ್ಲಿ, ನೀವು ಸೇವ್ ಮಾಡಿದ, ಡೌನ್‌ಲೋಡ್ ಮಾಡಿದ ಮತ್ತು ಪರವಾನಗಿ ಪಡೆದ ಟ್ರ್ಯಾಕ್‌ಗಳ ಪಟ್ಟಿಯನ್ನು ವೀಕ್ಷಿಸಬಹುದು, ಫಿಲ್ಟರ್ ಮಾಡಬಹುದು ಮತ್ತು ವಿಂಗಡಿಸಬಹುದು. ಟ್ರ್ಯಾಕ್‌ಗಳನ್ನು ಸೇವ್ ಮಾಡುವ ಮತ್ತು ನಿರ್ವಹಿಸುವ ಕುರಿತು ಇನ್ನಷ್ಟು ತಿಳಿಯಿರಿ.

ಪರವಾನಗಿ ಪಡೆಯಿರಿ

ನೀವು ಬಳಸಲು ಬಯಸುವ, ಪರವಾನಗಿ ನೀಡಬಹುದಾದ ಟ್ರ್ಯಾಕ್ ಕಂಡುಬಂದಾಗ, ನೀವು ನೇರವಾಗಿ Creator Music ನಲ್ಲಿ ಪರವಾನಗಿ ಪಡೆಯಬಹುದು ಅಥವಾ ಆ ಟ್ರ್ಯಾಕ್ ಅನ್ನು ಬಳಸುವ ವೀಡಿಯೊವನ್ನು ಅಪ್‌ಲೋಡ್ ಮಾಡಿದಾಗ ಪರವಾನಗಿ ಪಡೆಯಬಹುದು.

ನೀವು ಒಂದು ಟ್ರ್ಯಾಕ್‌ಗಾಗಿ ಪರವಾನಗಿ ಪಡೆದುಕೊಂಡಾಗ, ಆ ಟ್ರ್ಯಾಕ್ ಅನ್ನು ಬಳಸುವ ನಿಮ್ಮ ವೀಡಿಯೊದ ಸಂಪೂರ್ಣ ಮಾನಿಟೈಸೇಶನ್ ಅನ್ನು ನೀವು ಉಳಿಸಿಕೊಳ್ಳುವಿರಿ. ಹಾಡಿನ ನಿಮ್ಮ ಬಳಕೆಯು ಆದಾಯ ಹಂಚಿಕೆಯ ಅವಶ್ಯಕತೆಗಳನ್ನು ಪೂರೈಸಿದರೆ, ಪರವಾನಗಿ ಪಡೆಯಬಹುದಾದ ಟ್ರ್ಯಾಕ್‌ಗಳು ಆದಾಯ ಹಂಚಿಕೊಳ್ಳಲು ಸಹ ಅರ್ಹವಾಗಿರಬಹುದು ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಿ. ಪರವಾನಗಿ ಪಡೆದುಕೊಳ್ಳುವ ಕುರಿತು ಇನ್ನಷ್ಟು ತಿಳಿಯಿರಿ.

ಆದಾಯ ಹಂಚಿಕೊಳ್ಳಿ

ಆದಾಯ ಹಂಚಿಕೆಗೆ ಅರ್ಹವಾದ ಟ್ರ್ಯಾಕ್‌ಗಳನ್ನು ನೀವು ಬಳಸಿದಾಗ , ನಿಮ್ಮ ವೀಡಿಯೊ ಆದಾಯ ಹಂಚಿಕೆಯ ಅವಶ್ಯಕತೆಗಳನ್ನು ಪೂರೈಸುವವರೆಗೆ ವೀಡಿಯೊದ ಆದಾಯವನ್ನು ಟ್ರ್ಯಾಕ್‌ನ ಹಕ್ಕುದಾರರೊಂದಿಗೆ ನೀವು ಹಂಚಿಕೊಳ್ಳುವಿರಿ. ನಿಮ್ಮ ವೀಡಿಯೊ, ಆದಾಯ ಹಂಚಿಕೆಯ ಅವಶ್ಯಕತೆಗಳನ್ನು ಪೂರೈಸಿದರೆ, ಪರವಾನಗಿ ನೀಡಬಹುದಾದ ಕೆಲವು ಟ್ರ್ಯಾಕ್‌ಗಳು ಆದಾಯ ಹಂಚಿಕೆಗೂ ಅರ್ಹವಾಗಿರಬಹುದು. ಆದಾಯ ಹಂಚಿಕೆ ಹೇಗೆ ಕೆಲಸ ಮಾಡುತ್ತದೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.

ಇನ್ನಷ್ಟು ತಿಳಿಯಿರಿ

ಟ್ರ್ಯಾಕ್‌ಗಳಿಗಾಗಿ ಪರವಾನಗಿ ಪಡೆಯುವುದು, ಹಕ್ಕುದಾರರೊಂದಿಗೆ ಆದಾಯ ಹಂಚಿಕೊಳ್ಳುವುದು ಮತ್ತು Creator Music ಅನ್ನು ಬಳಸುವುದು ಹೇಗೆ ಎಂಬಂತಹ ಸಾಮಾನ್ಯ ಪ್ರಶ್ನೆಗಳಿಗೆ ನಮ್ಮ Creator Music FAQ ಎಂಬಲ್ಲಿ ಉತ್ತರಗಳನ್ನು ಪಡೆಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1539364448795543456
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false