ನಿಮ್ಮ ವೀಡಿಯೊದ ಮೇಲೆ ಮಾಡಲಾಗಿರುವ ವಯಸ್ಸಿನ ನಿರ್ಬಂಧದ ಕುರಿತು ಮೇಲ್ಮನವಿ ಸಲ್ಲಿಸುವುದು

YouTube ನಲ್ಲಿ ಯಾವ ಕಂಟೆಂಟ್ ಅನುಮತಿಸಲಾಗಿದೆ ಅಥವಾ ಅನುಮತಿಸಲಾಗಿಲ್ಲ ಎಂಬುದನ್ನು ನಮ್ಮ ಸಮುದಾಯ ಮಾರ್ಗಸೂಚಿಗಳು ವಿವರಿಸುತ್ತವೆ. ಅವುಗಳು ರಸ್ತೆಯ ನಿಯಮಗಳಾಗಿರುತ್ತವೆ ಮತ್ತು ಪ್ರತಿ ವೀಡಿಯೊ ಅವುಗಳನ್ನು ಪಾಲಿಸಬೇಕಾಗುತ್ತದೆ. ಈ ಮಾರ್ಗಸೂಚಿಗಳನ್ನು ವೀಡಿಯೊಗಳು ಉಲ್ಲಂಘಿಸಿದಾಗ, ನಾವು ಅವುಗಳನ್ನು ತೆಗೆದುಹಾಕುತ್ತೇವೆ. ಕೆಲವು ವೀಡಿಯೊಗಳು ನಮ್ಮ ನೀತಿಗಳನ್ನು ಉಲ್ಲಂಘಿಸುವುದಿಲ್ಲ, ಆದರೆ 18 ಕ್ಕಿಂತ ಕಡಿಮೆ ವಯಸ್ಸಿನ ವೀಕ್ಷಕರಿಗೆ ಸೂಕ್ತವಾಗಿಲ್ಲದಿರಬಹುದು. ಈ ವೀಡಿಯೊಗಳ ಮೇಲೆ ನಾವು ವಯಸ್ಸಿನ-ನಿರ್ಬಂಧ ಹೇರುತ್ತೇವೆ. ಕಂಟೆಂಟ್‌ನ ಮೇಲೆ ವಯಸ್ಸಿನ-ನಿರ್ಬಂಧ ಹೇರಬೇಕೇ ಎಂಬುದನ್ನು ತೀರ್ಮಾನಿಸುವಾಗ ನಾವು ಈ ಕೆಳಗಿನ ಅಂಶಗಳನ್ನು ಪರಿಗಣಿಸುತ್ತೇವೆ.

  • ಹಿಂಸೆ
  • ಘಾಸಿ ಉಂಟು ಮಾಡುವ ಚಿತ್ರ
  • ಲೈಂಗಿಕವಾಗಿ ಪ್ರಚೋದಕ ಕಂಟೆಂಟ್
  • ನಗ್ನತೆ
  • ಅಪಾಯಕಾರಿ ಅಥವಾ ಕಾನೂನುಬಾಹಿರ ಚಟುವಟಿಕೆಗಳ ಚಿತ್ರಣ

ವೀಡಿಯೊದ ಮೇಲೆ ವಯಸ್ಸಿನ-ನಿರ್ಬಂಧವನ್ನು ಹೇರಿದಾಗ, ವೀಡಿಯೊ ಪ್ಲೇ ಆಗುವುದಕ್ಕೂ ಮೊದಲು ಎಚ್ಚರಿಕೆ ಸ್ಕ್ರೀನ್ ಕಾಣಿಸುತ್ತದೆ. 18 ವರ್ಷಗಳು ಅಥವಾ ಹೆಚ್ಚಿನ ವಯಸ್ಸಾಗಿರುವ ವೀಕ್ಷಕರು ನಂತರದಲ್ಲಿ ಕಂಟೆಂಟ್ ವೀಕ್ಷಿಸಲು ಮುಂದುವರಿಯಬಹುದು. ಈ ವೀಡಿಯೊಗಳನ್ನು ವೀಕ್ಷಕರು ಆಕಸ್ಮಿಕವಾಗಿ ವೀಕ್ಷಿಸುವ ಅವಕಾಶವನ್ನು ಕಡಿಮೆ ಮಾಡಲು, YouTube ನ ಕೆಲವು ವಿಭಾಗಗಳಲ್ಲಿ ಅವುಗಳನ್ನು ತೋರಿಸಲಾಗುವುದಿಲ್ಲ. ವಯಸ್ಸಿನ-ನಿರ್ಬಂಧವಿರುವ ವೀಡಿಯೊಗಳನ್ನು ಹೆಚ್ಚಿನ ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳಲ್ಲಿ ವೀಕ್ಷಿಸಲಾಗುವುದಿಲ್ಲ. ಈ ವೀಡಿಯೊಗಳನ್ನು ಪ್ಲೇ ಮಾಡಿದಾಗ ಅವು ವೀಕ್ಷಕರನ್ನು ಮರಳಿ YouTube ಗೆ ರೀಡೈರೆಕ್ಟ್ ಮಾಡುತ್ತವೆ.

ನಿಮ್ಮ ವೀಡಿಯೊದ ಮೇಲೆ ಮಾಡಲಾಗಿರುವ ವಯಸ್ಸಿನ ನಿರ್ಬಂಧದ ಕುರಿತು ಮೇಲ್ಮನವಿ ಸಲ್ಲಿಸುವುದು

ನಿಮ್ಮ ವೀಡಿಯೊದ ಮೇಲೆ ವಯಸ್ಸಿನ-ನಿರ್ಬಂಧವನ್ನು ಹೇರಲಾಗಿದ್ದರೆ, ನೀವು ನಿರ್ಬಂಧದ ಕುರಿತು ಮೇಲ್ಮನವಿ ಸಲ್ಲಿಸಬಹುದು.

Android ಗಾಗಿ YouTube Studio ಆ್ಯಪ್

  1. YouTube Studio ಆ್ಯಪ್ ತೆರೆಯಿರಿ.
  2. ಕೆಳಗಿನ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಟ್ಯಾಪ್ ಮಾಡಿ.
  3. ನಿರ್ಬಂಧವಿರುವ ವೀಡಿಯೊವನ್ನು ಆಯ್ಕೆಮಾಡಿ, ನಂತರ ಆ ನಿರ್ಬಂಧದ ಮೇಲೆ ಟ್ಯಾಪ್ ಮಾಡಿ.
  4. ಸಮಸ್ಯೆಗಳನ್ನು ಪರಿಶೀಲಿಸಿ ಎಂಬುದನ್ನು ಟ್ಯಾಪ್ ಮಾಡಿ.
  5. ಸಂಬಂಧಿತ ಕ್ಲೇಮ್ ಅನ್ನು ಟ್ಯಾಪ್ ಮಾಡಿ.
  6. ಮೇಲ್ಮನವಿ ಸಲ್ಲಿಸುವುದಕ್ಕಾಗಿನ ನಿಮ್ಮ ಕಾರಣವನ್ನು ನಮೂದಿಸಿ ಮತ್ತು ಸಲ್ಲಿಸಿ ಎಂಬುದನ್ನು ಕ್ಲಿಕ್ ಮಾಡಿ.

ನಿಮ್ಮ ವೀಡಿಯೊದ ಮೇಲೆ ಮಾಡಲಾಗಿರುವ ವಯಸ್ಸಿನ ನಿರ್ಬಂಧದ ಕುರಿತು ಮೇಲ್ಮನವಿ ಸಲ್ಲಿಸುವುದು

ನಿಮ್ಮ ವೀಡಿಯೊದ ಮೇಲೆ ವಯಸ್ಸಿನ-ನಿರ್ಬಂಧವನ್ನು ಹೇರಲಾಗಿದ್ದರೆ, ನೀವು ನಿರ್ಬಂಧದ ಕುರಿತು ಮೇಲ್ಮನವಿ ಸಲ್ಲಿಸಬಹುದು.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡ ಮೆನುವಿನಲ್ಲಿ, ಕಂಟೆಂಟ್ ಕ್ಲಿಕ್ ಮಾಡಿ.
  3. ನೀವು ಮೇಲ್ಮನವಿ ಸಲ್ಲಿಸಲು ಬಯಸುವ ವೀಡಿಯೊಗೆ ಹೋಗಿ. 
  4. “ನಿರ್ಬಂಧಗಳು” ಕಾಲಮ್‌ನಲ್ಲಿ, ನಿರ್ಬಂಧದ ಪ್ರಕಾರಕ್ಕೆ ಹೋಗಿ. ಮೇಲ್ಮನವಿ ಅನ್ನು ಕ್ಲಿಕ್ ಮಾಡಿ. 
  5. ಮೇಲ್ಮನವಿ ಸಲ್ಲಿಸುವುದಕ್ಕಾಗಿನ ನಿಮ್ಮ ಕಾರಣವನ್ನು ನಮೂದಿಸಿ. ಸಲ್ಲಿಸಿ ಕ್ಲಿಕ್ ಮಾಡಿ.

ಗಮನಿಸಿ: ಒಂದು ಬಾರಿ ಮಾತ್ರ ನಿಮ್ಮ ವೀಡಿಯೊದ ಮೇಲಿನ ವಯಸ್ಸಿನ ನಿರ್ಬಂಧದ ಕುರಿತು ನೀವು ಮೇಲ್ಮನವಿ ಸಲ್ಲಿಸಬಹುದು.

ಮೇಲ್ಮನವಿಯನ್ನು ನೀವು ಸಲ್ಲಿಸಿದ ನಂತರ

ನಿಮ್ಮ ವಿನಂತಿಯನ್ನು YouTube ತಂಡವು ಪರಿಶೀಲಿಸುತ್ತದೆ ಮತ್ತು ಸೂಕ್ತವೆನಿಸಿದಲ್ಲಿ ಹೆಚ್ಚಿನ ಕ್ರಮವನ್ನು ತೆಗೆದುಕೊಳ್ಳುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11681264570359931348
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false