ಸ್ವತ್ತುಗಳ ಮೇಲೆ ಪರವಾನಗಿ ಸ್ಟ್ರ್ಯಾಟಜಿಗಳನ್ನು ಅನ್ವಯಿಸಿ ಮತ್ತು ನಿರ್ವಹಿಸಿ

Creator Music, ಇದೀಗ YouTube ಪಾಲುದಾರ ಕಾರ್ಯಕ್ರಮದಲ್ಲಿರುವ (YPP) ಯು.ಎಸ್. ರಚನೆಕಾರರಿಗೆ ಲಭ್ಯವಿದೆ. ಯು.ಎಸ್. ಹೊರಗಡೆ ಇರುವ YPP ರಚನೆಕಾರರಿಗೆ ವಿಸ್ತರಿಸುವುದು ಇನ್ನೂ ಬಾಕಿಯಿದೆ.

ನೀವು ಪರವಾನಗಿ ಸ್ಟ್ರ್ಯಾಟಜಿಯನ್ನು ರಚಿಸಿದ ಬಳಿಕ, ಅವು Creator Music ನಲ್ಲಿ ಪರವಾನಗಿ ನೀಡುವಿಕೆಗೆ ಲಭ್ಯವಾಗುವ ಹಾಗೆ ನಿಮ್ಮ ಪರವಾನಗಿ ನೀಡಬಹುದಾದ ಸ್ವತ್ತುಗಳಿಗೆ ಅವುಗಳನ್ನು ಅನ್ವಯಿಸಬಹುದು. ಒಂದು ಸ್ವತ್ತಿಗಾಗಿ ನೀವು ಇನ್ನು ಮುಂದೆ Creator Music ನಿಂದ ಪರವಾನಗಿ ನೀಡಲು ಬಯಸುವುದಿಲ್ಲ ಎಂದಾದರೆ, ಸ್ವತ್ತಿನ ಪರವಾನಗಿ ಸ್ಟ್ರ್ಯಾಟಜಿಯನ್ನು ನೀವು ನಿಷ್ಕ್ರಿಯಗೊಳಿಸಬಹುದು.

ಪರವಾನಗಿ ಸ್ಟ್ರ್ಯಾಟಜಿಯನ್ನು ಒಂದು ಸ್ವತ್ತಿಗೆ ಅನ್ವಯಿಸಿ

ಪರವಾನಗಿ ಸ್ಟ್ರ್ಯಾಟಜಿಯನ್ನು ಸ್ವತ್ತಿಗೆ ಸೇರಿಸಲು:

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಸ್ವತ್ತುಗಳು ಆಯ್ಕೆಮಾಡಿ.
  3. ನೀವು ಪರವಾನಗಿ ಸ್ಟ್ರ್ಯಾಟಜಿಯನ್ನು ಸೇರಿಸಲು ಬಯಸುವ ಸ್ವತ್ತನ್ನು ಕ್ಲಿಕ್ ಮಾಡಿ.
  4. ಸ್ವತ್ತಿನ ವಿವರಗಳ ಪುಟದಲ್ಲಿ ಮಾನಿಟೈಸೇಶನ್  ಎಂಬುದನ್ನು ಕ್ಲಿಕ್ ಮಾಡಿ. 
  5. ಪ್ಲ್ಯಾಟ್‌ಫಾರ್ಮ್ ಸ್ಟ್ರ್ಯಾಟಜಿಗಳು ಟ್ಯಾಬ್ ಅಥವಾ ಚಾನಲ್ ಆಧಾರಿತ ಸ್ಟ್ರ್ಯಾಟಜಿಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  6. ಪ್ಲ್ಯಾಟ್‌ಫಾರ್ಮ್ ಸ್ಟ್ರ್ಯಾಟಜಿಯನ್ನು ಆಯ್ಕೆ ಮಾಡಿ ಅಥವಾ ಚಾನಲ್ ಆಧಾರಿತ ಸ್ಟ್ರ್ಯಾಟಜಿಯನ್ನು ಆಯ್ಕೆ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  7. ಸ್ಟ್ರ್ಯಾಟಜಿಯ ಶೀರ್ಷಿಕೆಯನ್ನು ಹುಡುಕಿ ಮತ್ತು ಪಟ್ಟಿಯಿಂದ ಅದನ್ನು ಆಯ್ಕೆ ಮಾಡಿ.
  8. ಅನ್ವಯಿಸಿ ಎಂಬುದನ್ನು ಕ್ಲಿಕ್ ಮಾಡಿ.
    • ಗಮನಿಸಿ: “ಈ ಸ್ಟ್ರ್ಯಾಟಜಿಗಾಗಿ ಬೆಲೆಯ ಅಪ್‌ಡೇಟ್ ಲಭ್ಯವಿದೆ” ಎಂಬ ಸೂಚನೆ ಮತ್ತು ಒಂದು ಎಡಿಟ್ ಬಟನ್ ಅನ್ನು ನೀವು ನೋಡಬಹುದು. ಬೆಲೆಯ ಅಪ್‌ಡೇಟ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.
    • ಪ್ರಕಾಶಕರು ಪ್ರೈಸಿಂಗ್ ಫ್ಲೋರ್ ಅನ್ನು ಒದಗಿಸಿದ್ದರೆ, ನಿಮ್ಮ ಪರವಾನಗಿ ಸ್ಟ್ರ್ಯಾಟಜಿಯು ಪ್ರಕಾಶಕರು ಸೆಟ್ ಮಾಡಿದ ಕನಿಷ್ಠ ದರವನ್ನು ಪೂರೈಸಬೇಕು. ಒಂದು ಚಾನಲ್ ಸೆಗ್ಮೆಂಟ್‌ನ ದರವು ಸ್ವತ್ತಿಗೆ ಇರುವ ಪ್ರಕಾಶಕರ ದರಕ್ಕಿಂತ ಕಡಿಮೆ ಇದ್ದರೆ ಪರವಾನಗಿ ಸ್ಟ್ರ್ಯಾಟಜಿಯು ಅನರ್ಹಗೊಳ್ಳುತ್ತದೆ.

ನೀವು ಈಗಷ್ಟೇ ಅನ್ವಯಿಸಿದ ಸ್ಟ್ರ್ಯಾಟಜಿಯು “ಪ್ರಸ್ತುತ ನಿಯಮಗಳು” ಲೇಬಲ್‌ನೊಂದಿಗೆ ಸ್ಥಿತಿ ಕಾಲಮ್‌ನಲ್ಲಿ ಪಟ್ಟಿಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.

ಒಮ್ಮೆಗೆ ಅನೇಕ ಸ್ವತ್ತುಗಳಿಗೆ ಪರವಾನಗಿ ಸ್ಟ್ರ್ಯಾಟಜಿಯನ್ನು ಅನ್ವಯಿಸಿ

ನೀವು ಒಮ್ಮೆಗೆ ಗರಿಷ್ಠ 2500 ಸ್ವತ್ತುಗಳನ್ನು ಅಪ್‌ಡೇಟ್ ಮಾಡಬಹುದು. ಅನೇಕ ಸ್ವತ್ತುಗಳಿಗೆ ಪರವಾನಗಿ ಸ್ಟ್ರ್ಯಾಟಜಿಯನ್ನು ಅನ್ವಯಿಸಲು:

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಸ್ವತ್ತುಗಳು ಎಂಬುದನ್ನು ಆಯ್ಕೆ ಮಾಡಿ.
  3. ನೀವು ಅಪ್‌ಡೇಟ್ ಮಾಡಲು ಬಯಸುವ ಪ್ರತಿ ಸ್ವತ್ತಿನ ಪಕ್ಕದಲ್ಲಿರುವ ಬಾಕ್ಸ್ ಅನ್ನು ಚೆಕ್ ಮಾಡಿ.
    • ಒಂದು ಪುಟದಲ್ಲಿನ ಎಲ್ಲಾ ಸ್ವತ್ತುಗಳನ್ನು ಆಯ್ಕೆ ಮಾಡಲು, ಮೇಲೆ ಇರುವ ಬಾಕ್ಸ್ ಅನ್ನು ಚೆಕ್ ಮಾಡಿ.
    • ಎಲ್ಲಾ ಪುಟಗಳಲ್ಲಿರುವ ಎಲ್ಲಾ ಸ್ವತ್ತುಗಳನ್ನು ಆಯ್ಕೆ ಮಾಡಲು, ಮೇಲೆ ಇರುವ ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು ಹೊಂದಾಣಿಕೆಯಾಗುವ ಎಲ್ಲವನ್ನೂ ಆಯ್ಕೆ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  4. ಎಡಿಟ್ ಮಾಡಿ  ನಂತರ ಪರವಾನಗಿ ಸ್ಟ್ರ್ಯಾಟಜಿಯನ್ನು ಸೆಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
    • ಈ ಬೃಹತ್ ಕ್ರಿಯೆಯು ಆಯ್ಕೆ ಮಾಡಿದ ಸ್ವತ್ತುಗಳ ಮೇಲೆ ಪರವಾನಗಿ ಸ್ಟ್ರ್ಯಾಟಜಿಯನ್ನು ಸೆಟ್ ಮಾಡುತ್ತದೆ. ಹೊಸ ನಿಯಮಗಳು Creator Music ನಲ್ಲಿ ಪ್ರತಿಫಲಿಸುತ್ತವೆ. ಸ್ವತ್ತಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಪರವಾನಗಿ ಪಡೆದುಕೊಳ್ಳುವಿಕೆಗಳು ಮತ್ತು ಬಳಕೆಗಳ ಮೇಲೆ ಪರಿಣಾಮ ಬೀರುವುದಿಲ್ಲ. 
    • ಈ ಕ್ರಿಯೆಯು ಆಯ್ಕೆಮಾಡಿದ ಸ್ವತ್ತುಗಳ ಮೇಲೆ ಅದೇ ಪ್ರಕಾರದ ಯಾವುದೇ ಅಸ್ತಿತ್ವದಲ್ಲಿರುವ ಪರವಾನಗಿ ಸ್ಟ್ರ್ಯಾಟಜಿಯನ್ನು ಬದಲಾಯಿಸುತ್ತದೆ.
  5. ಡ್ರಾಪ್‌ಡೌನ್ ಮೆನುವಿನಿಂದ ಪರವಾನಗಿ ಸ್ಟ್ರ್ಯಾಟಜಿ ನಂತರ ಅನ್ವಯಿಸಿ ಎಂಬುದನ್ನು ಆಯ್ಕೆ ಮಾಡಿ.
    • ನೀವು ಪ್ಲ್ಯಾಟ್‌ಫಾರ್ಮ್ ಆಧಾರಿತ ಪರವಾನಗಿ ಸ್ಟ್ರ್ಯಾಟಜಿಯನ್ನು ಆಯ್ಕೆ ಮಾಡಿದರೆ, ಸ್ವತ್ತಿನ ಪ್ಲ್ಯಾಟ್‌ಫಾರ್ಮ್ ಸ್ಟ್ರ್ಯಾಟಜಿಗಳನ್ನು ಮಾತ್ರ ಅಪ್‌ಡೇಟ್ ಮಾಡಲಾಗುತ್ತದೆ.
  6. ಸ್ವತ್ತುಗಳನ್ನು ಅಪ್‌ಡೇಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ ಮತ್ತು ಪಾಪ್-ಅಪ್ ವಿಂಡೋದಲ್ಲಿ ಸ್ವತ್ತುಗಳ ಸಂಖ್ಯೆಯನ್ನು ಖಚಿತಪಡಿಸಿ.
ಗಮನಿಸಿ: ಪ್ರಕಾಶಕರು ಪ್ರೈಸಿಂಗ್ ಫ್ಲೋರ್ ಅನ್ನು ಒದಗಿಸಿದ್ದರೆ, ನಿಮ್ಮ ಪರವಾನಗಿ ಸ್ಟ್ರ್ಯಾಟಜಿಯು ಪ್ರಕಾಶಕರು ಸೆಟ್ ಮಾಡಿದ ಕನಿಷ್ಠ ದರವನ್ನು ಪೂರೈಸಬೇಕು. ಒಂದು ಚಾನಲ್ ಸೆಗ್ಮೆಂಟ್‌ನ ದರವು ಸ್ವತ್ತಿಗೆ ಇರುವ ಪ್ರಕಾಶಕರ ದರಕ್ಕಿಂತ ಕಡಿಮೆ ಇದ್ದರೆ ಪರವಾನಗಿ ಸ್ಟ್ರ್ಯಾಟಜಿಯು ಅನರ್ಹಗೊಳ್ಳುತ್ತದೆ.

ಒಂದು ಸ್ವತ್ತಿನ ಪರವಾನಗಿ ಸ್ಟ್ರ್ಯಾಟಜಿಯನ್ನು ನಿಷ್ಕ್ರಿಯಗೊಳಿಸಿ

ಒಂದು ಸ್ವತ್ತಿಗಾಗಿ ನೀವು ಇನ್ನು ಮುಂದೆ Creator Music ನಿಂದ ಪರವಾನಗಿ ನೀಡಲು ಬಯಸುವುದಿಲ್ಲ ಎಂದಾದರೆ, ಸ್ವತ್ತಿನ ಪರವಾನಗಿ ಸ್ಟ್ರ್ಯಾಟಜಿಯನ್ನು ನೀವು ನಿಷ್ಕ್ರಿಯಗೊಳಿಸಬಹುದು. ಸ್ವತ್ತಿಗೆ ಸಂಬಂಧಿಸಿದಂತೆ, ಅಸ್ತಿತ್ವದಲ್ಲಿರುವ ಪರವಾನಗಿ ಸ್ವಾಧೀನಗಳು ಮತ್ತು ಬಳಕೆಗಳ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂಬುದನ್ನು ನೆನಪಿಡಿ.

ಒಂದು ಸ್ವತ್ತಿನ ಪರವಾನಗಿ ಸ್ಟ್ರ್ಯಾಟಜಿಯನ್ನು ನಿಷ್ಕ್ರಿಯಗೊಳಿಸಿದ ಬಳಿಕ, ಸ್ವತ್ತನ್ನು Creator Music ನಿಂದ ತೆಗೆದುಹಾಕಲಾಗುತ್ತದೆ ಮತ್ತು ಇನ್ನು ಮುಂದೆ ಟ್ರ್ಯಾಕ್‌ಗಾಗಿ ಪರವಾನಗಿ ಪಡೆಯಲು ರಚನೆಕಾರರಿಗೆ ಸಾಧ್ಯವಾಗುವುದಿಲ್ಲ.

ಸ್ವತ್ತಿನ ಮೇಲೆ ಪರವಾನಗಿ ಸ್ಟ್ರ್ಯಾಟಜಿಯನ್ನು ನಿಷ್ಕ್ರಿಯಗೊಳಿಸಲು:

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಸ್ವತ್ತುಗಳು ಆಯ್ಕೆ ಮಾಡಿ.
  3. ನೀವು ಯಾವ ಸ್ವತ್ತಿನ ಪರವಾನಗಿ ಸ್ಟ್ರ್ಯಾಟಜಿಯನ್ನು ನಿಷ್ಕ್ರಿಯಗೊಳಿಸಲು ಬಯಸುತ್ತೀರೋ, ಅದನ್ನು ಕ್ಲಿಕ್ ಮಾಡಿ.
  4. ಸ್ವತ್ತಿನ ವಿವರಗಳ ಪುಟದಲ್ಲಿ ಮಾನಿಟೈಸೇಶನ್  ಎಂಬುದನ್ನು ಕ್ಲಿಕ್ ಮಾಡಿ. 
  5. ಪ್ಲ್ಯಾಟ್‌ಫಾರ್ಮ್ ಸ್ಟ್ರ್ಯಾಟಜಿಗಳು ಟ್ಯಾಬ್ ಅಥವಾ ಚಾನಲ್ ಆಧಾರಿತ ಸ್ಟ್ರ್ಯಾಟಜಿಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  6. ಪ್ಲ್ಯಾಟ್‌ಫಾರ್ಮ್ ಸ್ಟ್ರ್ಯಾಟಜಿಯನ್ನು ನಿಷ್ಕ್ರಿಯಗೊಳಿಸಿ ಅಥವಾ ಚಾನಲ್ ಆಧಾರಿತ ಸ್ಟ್ರ್ಯಾಟಜಿಯನ್ನು ನಿಷ್ಕ್ರಿಯಗೊಳಿಸಿ ಎಂಬುದನ್ನು ಕ್ಲಿಕ್ ಮಾಡಿ.
  7. ಡೈಲಾಗ್ ಎಚ್ಚರಿಕೆಯನ್ನು ಓದಿ ಮತ್ತು ನಿಷ್ಕ್ರಿಯಗೊಳಿಸಿ ಎಂಬುದನ್ನು ಕ್ಲಿಕ್ ಮಾಡಿ.

ನೀವು ಈಗಷ್ಟೇ ನಿಷ್ಕ್ರಿಯಗೊಳಿಸಿದ ಸ್ಟ್ರ್ಯಾಟಜಿಯನ್ನು “ಹಿಂದಿನ ನಿಯಮಗಳು” ಎಂಬ ಲೇಬಲ್‌ನೊಂದಿಗೆ ಸ್ಥಿತಿ ಕಾಲಮ್‌ನಲ್ಲಿ ಪಟ್ಟಿಯ ಮೇಲ್ತುದಿಯಲ್ಲಿ ತೋರಿಸಲಾಗುತ್ತದೆ. 

ಗಮನಿಸಿ: ಪರವಾನಗಿ ಸ್ಟ್ರ್ಯಾಟಜಿಗಳನ್ನು ಅಳಿಸಲು ಸಾಧ್ಯವಿಲ್ಲ, ಅವುಗಳನ್ನು ಸ್ವತ್ತುಗಳ ಮೇಲೆ ನಿಷ್ಕ್ರಿಯಗೊಳಿಸಲು ಮಾತ್ರ ಸಾಧ್ಯವಿದೆ. ಒಂದು ಪರವಾನಗಿ ಸ್ಟ್ರ್ಯಾಟಜಿಯನ್ನು ಅನ್ವಯಿಸಿದ ಎಲ್ಲಾ ಸ್ವತ್ತುಗಳ ಮೇಲೆ ಅದನ್ನು ನಿಷ್ಕ್ರಿಯಗೊಳಿಸಲು ಇಲ್ಲಿ ಕೊಟ್ಟಿರುವ ಹಂತಗಳನ್ನು ಅನುಸರಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3109789252626162239
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false