ಹಕ್ಕುದಾರರಾಗಿ ಪರವಾನಗಿ ನೀಡುವಿಕೆಯನ್ನು ಪ್ರಾರಂಭಿಸಿ

Creator Music, ಇದೀಗ YouTube ಪಾಲುದಾರ ಕಾರ್ಯಕ್ರಮದಲ್ಲಿರುವ (YPP) ಯು.ಎಸ್. ರಚನೆಕಾರರಿಗೆ ಲಭ್ಯವಿದೆ. ಯು.ಎಸ್. ಹೊರಗಡೆ ಇರುವ YPP ರಚನೆಕಾರರಿಗೆ ವಿಸ್ತರಿಸುವುದು ಇನ್ನೂ ಬಾಕಿಯಿದೆ.

ಒಂದು ಪರವಾನಗಿಯು, ಇತರರ ಹಕ್ಕುಗಳಿಗೆ ಒಳಪಟ್ಟ ಕಂಟೆಂಟ್ ಅನ್ನು ಬಳಸಲು ಯಾರಿಗಾದರೂ ಕಾನೂನುಬದ್ಧ ಅನುಮತಿಯನ್ನು ನೀಡುತ್ತದೆ. Creator Music ನೊಂದಿಗೆ, ರಚನೆಕಾರರು ತಮ್ಮ ವೀಡಿಯೊದಲ್ಲಿ ಸಂಗೀತವನ್ನು ಬಳಸುವುದಕ್ಕಾಗಿ ಪರವಾನಗಿಯನ್ನು ಖರೀದಿಸಬಹುದು, ಜೊತೆಗೆ ಮಾನಿಟೈಸೇಶನ್ ಅನ್ನು ಸಹ ಉಳಿಸಿಕೊಳ್ಳಬಹುದು. Creator Music ನಲ್ಲಿ ಪರವಾನಗಿ ನೀಡುವುದಕ್ಕಾಗಿ ಸಂಗೀತವನ್ನು ಲಭ್ಯಗೊಳಿಸುವುದು:

  1. ನಿಮ್ಮ ಯಾವ ಸೌಂಡ್ ರೆಕಾರ್ಡಿಂಗ್ ಅಸೆಟ್‌ಗಳು ಪರವಾನಗಿ ನೀಡುವಿಕೆಗೆ ಅರ್ಹವಾಗಿವೆ ಎಂದು ಕಂಡುಕೊಳ್ಳಿ.
  2. ಬೆಲೆ ಮತ್ತು ಅವಧಿಯಂತಹ ಪರವಾನಗಿ ಬಳಕೆಯ ನಿಯಮಗಳನ್ನು ಕಸ್ಟಮೈಸ್ ಮಾಡಲುಪರವಾನಗಿ ಸ್ಟ್ರ್ಯಾಟಜಿಯನ್ನು ರಚಿಸಿ.
  3. ಪರವಾನಗಿ ನೀಡಲು ಅರ್ಹವಾಗಿರುವ ನಿಮ್ಮ ಅಸೆಟ್‌ಗಳಿಗಾಗಿಪರವಾನಗಿ ಸ್ಟ್ರ್ಯಾಟಜಿಯನ್ನು ಅನ್ವಯಿಸಿ.

ನೀವು ಪ್ರಾರಂಭಿಸುವ ಮೊದಲು, ಪರವಾನಗಿ ಸ್ಟ್ರ್ಯಾಟಜಿಗಳ ಕುರಿತು ಮತ್ತು ಪರವಾನಗಿಗಳನ್ನು ಸೆಟ್ ಅಪ್ ಮಾಡಲು ಅವುಗಳನ್ನು ಹೇಗೆ ಬಳಸಲಾಗುತ್ತದೆ ಎಂಬ ಕುರಿತು ಇನ್ನಷ್ಟು ತಿಳಿಯಲು ಈ ಕೆಳಗಿನ ಮಾಹಿತಿಯನ್ನು ಬಳಸಿ.

ಪರವಾನಗಿ ಸ್ಟ್ರ್ಯಾಟಜಿಗಳನ್ನು ಅರ್ಥಮಾಡಿಕೊಳ್ಳಿ

ರಚನೆಕಾರರು YouTube ರಚನೆಕಾರರ ಸಂಗೀತದಲ್ಲಿ ನಿಮ್ಮ ಸಂಗೀತದ ಪರವಾನಗಿಯನ್ನು ಖರೀದಿಸಿದಾಗ ಅವರು ಒಪ್ಪಿಕೊಳ್ಳುವ ನಿಯಮಗಳನ್ನು ಪರವಾನಗಿ ಸ್ಟ್ರ್ಯಾಟಜಿಯು ನಿರ್ದಿಷ್ಟಪಡಿಸುತ್ತದೆ. ನೀವು 2 ಪ್ರಕಾರಗಳ ಪರವಾನಗಿ ಸ್ಟ್ರ್ಯಾಟಜಿಗಳನ್ನು ಒದಗಿಸಬಹುದು: ಪ್ಲ್ಯಾಟ್‌ಫಾರ್ಮ್ ಸ್ಟ್ರ್ಯಾಟಜಿಗಳು ಮತ್ತು ಚಾನಲ್ ಆಧಾರಿತ ಸ್ಟ್ರ್ಯಾಟಜಿಗಳು. ಪ್ರತಿಯೊಂದು ಪರವಾನಗಿ ಸ್ಟ್ರ್ಯಾಟಜಿಗಾಗಿ ನೀವು ಈ ಕೆಳಗಿನ ಸಬ್‌ಸ್ಕ್ರೈಬರ್ ಬಕೆಟ್‌ಗಳಿಗೆ ವಿಭಿನ್ನ ಪ್ರೈಸ್ ಪಾಯಿಂಟ್‌ಗಳನ್ನು ಹೊಂದಿರಬಹುದು: 1K - 100K, 100K - 500K, 500K - 5M, 5M - 20M, 20M+. ಪ್ರತಿಯೊಂದು ಅಸೆಟ್ ಒಂದು ಸಮಯದಲ್ಲಿ ಗರಿಷ್ಠ 2 ಪರವಾನಗಿ ಸ್ಟ್ರ್ಯಾಟಜಿಗಳನ್ನು ಹೊಂದಿರಬಹುದು: ಒಂದು ಪ್ಲ್ಯಾಟ್‌ಫಾರ್ಮ್ ಸ್ಟ್ರ್ಯಾಟಜಿ ಹಾಗೂ ಒಂದು ಚಾನಲ್ ಆಧಾರಿತ ಸ್ಟ್ರ್ಯಾಟಜಿ.

ಪ್ಲ್ಯಾಟ್‌ಫಾರ್ಮ್ ಪರವಾನಗಿ ಸ್ಟ್ರ್ಯಾಟಜಿಗಳು

Creator Music ಪ್ಲ್ಯಾಟ್‌ಫಾರ್ಮ್‌ಗೆ ಆ್ಯಕ್ಸೆಸ್ ಹೊಂದಿರುವ ಎಲ್ಲಾ ಅರ್ಹ ರಚನೆಕಾರರಿಗೆ ಪ್ಲ್ಯಾಟ್‌ಫಾರ್ಮ್ ಪರವಾನಗಿ ಸ್ಟ್ರ್ಯಾಟಜಿಗಳು ಅನ್ವಯಿಸುತ್ತವೆ. ಪ್ಲ್ಯಾಟ್‌ಫಾರ್ಮ್ ಸ್ಟ್ರ್ಯಾಟಜಿಯನ್ನು ರಚಿಸುವಾಗ, ನೀವು ನಿಮ್ಮದೇ ಆದ ಕಸ್ಟಮ್ ಸ್ಟ್ರ್ಯಾಟಜಿಯನ್ನು ರಚಿಸುವಿರಿ ಅಥವಾ 4 ಪ್ರಿಸೆಟ್ ಬೆಲೆನಿಗದಿ ಸ್ಟ್ರ್ಯಾಟಜಿಗಳಿಂದ ಆರಿಸುವಿರಿ:

  • ಪ್ರೊಮೋಷನಲ್: ಗೋಚರತೆ ಹಾಗೂ ವ್ಯಾಪ್ತಿಗಾಗಿ ಆಪ್ಟಿಮೈಸ್ ಮಾಡಿರುವುದು.
  • ಸಂತುಲಿತ: ಪ್ರೊಮೋಷನಲ್ ಹಾಗೂ Premium ನಡುವೆ ಸಮತೋಲನಗೊಳಿಸಿರುವುದು.
  • Premium: ಪ್ರೀಮಿಯಂ ಕಂಟೆಂಟ್‌ಗಾಗಿ ಆಪ್ಟಿಮೈಸ್ ಮಾಡಿರುವುದು.
  • ಗ್ರ್ಯಾಟಿಸ್: ಗೋಚರತೆ ಹಾಗೂ ವ್ಯಾಪ್ತಿಗಾಗಿ ಅತ್ಯುತ್ತಮವಾಗಿರುವುದು.

ಎಲ್ಲಾ ಗಾತ್ರಗಳ ರಚನೆಕಾರರಿಗಾಗಿ ನೀವು ಸ್ಪರ್ಧಾತ್ಮಕ ದರಗಳನ್ನು ಒದಗಿಸಲು ಸಾಧ್ಯವಾಗುವ ಹಾಗೆ ಪ್ರಿಸೆಟ್ ಬೆಲೆನಿಗದಿ ಸ್ಟ್ರ್ಯಾಟಜಿಗಳನ್ನು ಚಾನಲ್ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯನ್ನು ಆಧರಿಸಿ ವಿಭಜಿಸಲಾಗುತ್ತದೆ. ಕಸ್ಟಮ್ ಸ್ಟ್ರ್ಯಾಟಜಿಗಳು ರಚನೆಕಾರರ ಎಲ್ಲಾ ತುಣುಕುಗಳಿಗಾಗಿ ಒಂದೇ ಬೆಲೆಯನ್ನು ಹೊಂದಿರಬಹುದು ಅಥವಾ ನೀವು ವಿಭಿನ್ನ ಬೆಲೆಗಳನ್ನು ಸೆಟ್ ಮಾಡಬಹುದು, ಆದರೆ ಬೆಲೆಗಳು ಕಡಿಮೆಯಿಂದ ಅಧಿಕದವರೆಗೆ ಏರಿಕೆಯಾಗುವ ಕ್ರಮದಲ್ಲಿರಬೇಕು.

ಚಾನಲ್ ಆಧಾರಿತ ಪರವಾನಗಿ ಸ್ಟ್ರ್ಯಾಟಜಿಗಳು

ಚಾನಲ್ ಆಧಾರಿತ ಪರವಾನಗಿ ಸ್ಟ್ರ್ಯಾಟಜಿಗಳು, ಪ್ರತ್ಯೇಕ ಚಾನಲ್‌ಗಳಿಗಾಗಿ ಕಸ್ಟಮ್ ಪರವಾನಗಿ ನಿಯಮಗಳನ್ನು ಒದಗಿಸಲು ನಿಮಗೆ ಅವಕಾಶ ನೀಡುತ್ತವೆ. ಪಾವತಿಸಿದ ಪರವಾನಗಿಗಳನ್ನು ಕೇವಲ ಪ್ಲ್ಯಾಟ್‌ಫಾರ್ಮ್ ಸ್ಟ್ರ್ಯಾಟಜಿಗಳ ಮೂಲಕ ಒದಗಿಸಬಹುದು.

ಲಕ್ಷ್ಯ ಕೇಂದ್ರೀಕರಿಸಲಾದ ಒಂದು ಚಾನಲ್, ನಿಮ್ಮ ಚಾನಲ್ ಆಧಾರಿತ ಸ್ಟ್ರ್ಯಾಟಜಿಯಿಂದ ಒಂದು ಪರವಾನಗಿಯನ್ನು ಪಡೆಯಲು ಬಯಸುತ್ತದೆ ಎಂದಾದರೆ, ಗ್ರ್ಯಾಟಿಸ್ ಚಾನಲ್ ಆಧಾರಿತ ಪರವಾನಗಿಯನ್ನು ಅನ್ವಯಿಸಲಾಗುವುದು. ಚಾನಲ್ ಆಧಾರಿತ ಸ್ಟ್ರ್ಯಾಟಜಿಗಳಿಂದ ನೀವು ಅಗತ್ಯವಿರುವ ಹಾಗೆಚಾನಲ್‌ಗಳನ್ನು ತೆಗೆದುಹಾಕಬಹುದುಎಂಬುದನ್ನು ನೆನಪಿಡಿ. ಚಾನಲ್ ಆಧಾರಿತ ಪರವಾನಗಿ ಸ್ಟ್ರ್ಯಾಟಜಿಯನ್ನು ರಚಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ಪ್ರಕಾಶಕರ ಫ್ಲೋರ್ ಪ್ರೈಸಿಂಗ್

ಕೆಲವು ಪ್ರಕಾಶಕರು ತಾವು ಹೊಂದಿರುವ ಸ್ವತ್ತುಗಳಿಗೆ ಫ್ಲೋರ್ ಪ್ರೈಸಿಂಗ್ ಅನ್ನು ಸೆಟ್ ಮಾಡಿರುತ್ತಾರೆ, ಅದು ಟ್ರ್ಯಾಕ್‌ಗೆ ಪರವಾನಗಿ ಪಡೆಯಬಹುದಾದ ಅತೀ ಕಡಿಮೆ ದರವನ್ನು ಪ್ರತಿನಿಧಿಸುತ್ತದೆ. ಪ್ರಕಾಶಕರು ಫ್ಲೋರ್ ಪ್ರೈಸ್ ಅನ್ನು ಸೆಟ್ ಮಾಡಿದಾಗ, ಲೇಬಲ್/ವಿತರಕರು Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ಸೆಟ್ ಮಾಡಲಾದ ದರವನ್ನು ಪೂರೈಸಬೇಕು.

ಪ್ರಕಾಶಕರ ಫ್ಲೋರ್ ಪ್ರೈಸ್ ಅನ್ನು ಪೂರೈಸದಿರುವ ಪ್ರಿಸೆಟ್ ಪರವಾನಗಿ ಸ್ಟ್ರ್ಯಾಟಜಿಗಳನ್ನು ನೀವು ಬಳಸಿದ್ದರೆ, ಪರವಾನಗಿ ಪಡೆಯುವ ಅರ್ಹತೆ ಇಲ್ಲದಂತಾಗುವುದನ್ನು ತಪ್ಪಿಸಲು ಸ್ಟ್ರ್ಯಾಟಜಿಯು Creator Music ನಲ್ಲಿ ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ.

ಪರವಾನಗಿ ನೀಡುವಿಕೆ ಅನುಮತಿಗಳನ್ನು ಸೆಟ್ ಮಾಡಿ

ನೀವು ಪರವಾನಗಿ ನೀಡುವಿಕೆಗಾಗಿ ಸಿದ್ಧರಾದಾಗ, ಕಂಟೆಂಟ್ ಮ್ಯಾನೇಜರ್ ಬಳಕೆದಾರರಿಗಾಗಿ ಪರವಾನಗಿ ನೀಡುವಿಕೆ-ನಿರ್ದಿಷ್ಟ ಅನುಮತಿಗಳನ್ನು ನೀವು ಸೆಟ್ ಅಪ್ ಮಾಡಬಹುದು. ಈ ಅನುಮತಿಗಳು, Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ಕೆಲವು ಬಳಕೆದಾರರಿಗೆ ಮಾತ್ರ ಪರವಾನಗಿ ನಿರ್ವಹಣೆ ಫೀಚರ್‌ಗಳನ್ನು ವೀಕ್ಷಿಸಲು ಮತ್ತು ಬಳಸಲು ಅವಕಾಶ ನೀಡುತ್ತವೆ. ಪರವಾನಗಿ ನೀಡುವಿಕೆ ಅನುಮತಿಗಳನ್ನು ಸೆಟ್ ಅಪ್ ಮಾಡಲು:

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡ ಮೆನುವಿನಿಂದ, ಸೆಟ್ಟಿಂಗ್ ಗಳು ಅನ್ನು ಆಯ್ಕೆ ಮಾಡಿ.
  3. ಅನುಮತಿಗಳು ಎಂಬುದನ್ನು ಕ್ಲಿಕ್ ಮಾಡಿ. ಈ ಪುಟವು ಕಂಟೆಂಟ್ ಮ್ಯಾನೇಜರ್ ಆ್ಯಕ್ಸೆಸ್ ಅನ್ನು ಹೊಂದಿರುವ ಬಳಕೆದಾರರ ಪಟ್ಟಿಯನ್ನು ಮತ್ತು ಅವರಿಗೆ ಯಾವ ಪಾತ್ರವನ್ನು ನೀಯೋಜಿಸಲಾಗಿದೆ ಎಂಬುದನ್ನು ತೋರಿಸುತ್ತದೆ.
  4. ಪಾತ್ರಗಳನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. ಡ್ರಾಪ್‌ಡೌನ್  ನಂತರ ಹೊಸದನ್ನು ರಚಿಸಿ ಎಂಬುದನ್ನು ಕ್ಲಿಕ್ ಮಾಡಿ.
  6. ಪಾತ್ರದ ಹೆಸರಿನ ಅಡಿಯಲ್ಲಿ, ಆ ಪಾತ್ರದ ಹೆಸರನ್ನು ನಮೂದಿಸಿ.
    • ಆ ಪಾತ್ರವನ್ನು ನೀವು ಭವಿಷ್ಯದಲ್ಲಿ ಸುಲಭವಾಗಿ ಗುರುತಿಸಲು ಸಾಧ್ಯವಾಗಿಸುವ ಹೆಸರನ್ನು ಬಳಸಿ.
    • ಪಾತ್ರದ ಹೆಸರು ಗರಿಷ್ಠ 100 ಅಕ್ಷರಗಳಷ್ಟು ಉದ್ದವಿರಬೇಕು.
  7. Content ID ಹಕ್ಕುಗಳ ನಿರ್ವಹಣೆ ಎಂಬುದರ ಅಡಿಯಲ್ಲಿ ಒಂದು ಅಥವಾ ಎರಡೂ ಬಾಕ್ಸ್‌ಗಳನ್ನು ಗುರುತು ಮಾಡಿ: 
    • ಪರವಾನಗಿ ನಿರ್ವಹಣೆ: ಅಸೆಟ್‌ಗಳಿಗೆ ಸಂಬಂಧಿಸಿದ ಪ್ಲ್ಯಾಟ್‌ಫಾರ್ಮ್ ಪರವಾನಗಿ ಸ್ಟ್ರ್ಯಾಟಜಿಗಳನ್ನು ವೀಕ್ಷಿಸಲು ಮತ್ತು ಸೆಟ್ ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.
    • ಚಾನಲ್ ಆಧಾರಿತ ಪರವಾನಗಿ ನಿರ್ವಹಣೆ: ಅಸೆಟ್‌‌ಗಳ ಮೇಲೆ ಚಾನಲ್ ಆಧಾರಿತ ಪರವಾನಗಿ ಸ್ಟ್ರ್ಯಾಟಜಿಗಳನ್ನು ವೀಕ್ಷಿಸಲು ಮತ್ತು ಸೆಟ್ ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.
  8. ಮುಗಿದಿದೆ ಎಂಬುದನ್ನು ಕ್ಲಿಕ್ ಮಾಡಿ.
  9. ಹೊಸ ಪಾತ್ರವನ್ನು ಸೇವ್ ಮಾಡಲು, ಅನುಮತಿಗಳ ಪುಟದಲ್ಲಿ, ಸೇವ್ ಎಂಬುದನ್ನು ಕ್ಲಿಕ್ ಮಾಡಿ.

ಆ ಪಾತ್ರವನ್ನು ಇದೀಗ ಕಂಟೆಂಟ್ ಮ್ಯಾನೇಜರ್ ಬಳಕೆದಾರರಿಗೆ ನಿಯೋಜಿಸಬಹುದು. ಪಾತ್ರಗಳನ್ನು ನಿರ್ವಹಿಸುವುದರ ಕುರಿತು ಇನ್ನಷ್ಟು ತಿಳಿಯಿರಿ.

FAQ ಗಳು

ಪ್ರಿಸೆಟ್ ಪರವಾನಗಿ ಸ್ಟ್ರ್ಯಾಟಜಿಗಳಿಗಾಗಿ ಬೆಲೆನಿಗದಿಯು ಬದಲಾವಣೆಗೆ ಒಳಪಟ್ಟಿರುತ್ತದೆಯೇ?

YouTube ರಚನೆಕಾರರ ಪರಿಸರ ವ್ಯವಸ್ಥೆಯು ನಿರಂತರವಾಗಿ ಬದಲಾಗುವ ಕಾರಣ, ಪ್ರಿಸೆಟ್ ಪರವಾನಗಿ ಸ್ಟ್ರ್ಯಾಟಜಿಗಳಿಗಾಗಿ ಬೆಲೆನಿಗದಿಯು ಬದಲಾಗಬಹುದು. ಹೀಗಾದರೆ, ಯಾವುದೇ ಪ್ರಿಸೆಟ್ ಪರವಾನಗಿ ಸ್ಟ್ರ್ಯಾಟಜಿಗಳನ್ನು “ಹೊಸ ಬೆಲೆ ಲಭ್ಯವಿದೆ” ಎಂದು ಲೇಬಲ್ ಮಾಡಲಾಗುತ್ತದೆ, ಮತ್ತು ಇದು ಪರವಾನಗಿ ನಿರ್ವಹಣೆ ಪುಟದಲ್ಲಿ ಅಥವಾ ನೀವು ಸ್ವತ್ತಿನ ಪರವಾನಗಿ ಸ್ಟ್ರ್ಯಾಟಜಿಯನ್ನು ಎಡಿಟ್ ಮಾಡುವಾಗ ಗೋಚರಿಸುತ್ತದೆ.

ನಿಮ್ಮ ಪರವಾನಗಿ ಸ್ಟ್ರ್ಯಾಟಜಿಯನ್ನು ನೀವು ಅಪ್‌ಡೇಟ್ ಮಾಡಬೇಕೇ ಮತ್ತು ಹೊಸ ಬೆಲೆಯನ್ನು ಅಳವಡಿಸಿಕೊಳ್ಳಬೇಕೇ ಅಥವಾ ಹಾಗೆಯೇ ಇರಿಸಬೇಕೇ ಎಂಬುದನ್ನು ನೀವು ಆಯ್ಕೆಮಾಡಬಹುದು. ನೀವು ಬೆಲೆಯನ್ನು ಹಾಗೆಯೇ ಉಳಿಸಿಕೊಳ್ಳುವ ಆಯ್ಕೆಯನ್ನು ಮಾಡಿದರೆ, ಪರವಾನಗಿ ಸ್ಟ್ರ್ಯಾಟಜಿಯನ್ನು ಲೆಗಸಿ ಬೆಲೆ ಎಂದು ಲೇಬಲ್ ಮಾಡಲಾಗುತ್ತದೆ.

ಗಮನಿಸಿ: ಕೆಲವು ಪ್ರಕಾಶಕರು ತಾವು ಹೊಂದಿರುವ ಸ್ವತ್ತುಗಳಿಗೆ ಫ್ಲೋರ್ ಪ್ರೈಸಿಂಗ್ ಅನ್ನು ಸೆಟ್ ಮಾಡಿರುತ್ತಾರೆ, ಅದು ಟ್ರ್ಯಾಕ್‌ಗೆ ಪರವಾನಗಿ ಪಡೆಯಬಹುದಾದ ಅತೀ ಕಡಿಮೆ ದರವನ್ನು ಪ್ರತಿನಿಧಿಸುತ್ತದೆ. ಪ್ರಕಾಶಕರು ಫ್ಲೋರ್ ಪ್ರೈಸ್ ಅನ್ನು ಸೆಟ್ ಮಾಡಿದಾಗ, ಲೇಬಲ್/ವಿತರಕರು Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ಸೆಟ್ ಮಾಡಲಾದ ದರವನ್ನು ಪೂರೈಸಬೇಕು. ಪ್ರಕಾಶಕರ ಫ್ಲೋರ್ ಪ್ರೈಸ್ ಅನ್ನು ಪೂರೈಸದಿರುವ ಪ್ರಿಸೆಟ್ ಪರವಾನಗಿ ಸ್ಟ್ರ್ಯಾಟಜಿಗಳನ್ನು ನೀವು ಬಳಸಿದ್ದರೆ, ಪರವಾನಗಿ ಪಡೆಯುವ ಅರ್ಹತೆ ಇಲ್ಲದಂತಾಗುವುದನ್ನು ತಪ್ಪಿಸಲು ಸ್ಟ್ರ್ಯಾಟಜಿಯು Creator Music ನಲ್ಲಿ ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ.
ನನ್ನ ಪರವಾನಗಿ ಸ್ಟ್ರ್ಯಾಟಜಿಗಳನ್ನು ಹೊಸ ಬೆಲೆಗೆ ನಾನು ಹೇಗೆ ಅಪ್‌ಡೇಟ್ ಮಾಡಬಹುದು?

ಪರವಾನಗಿ ಸ್ಟ್ರ್ಯಾಟಜಿಯನ್ನು ಹೊಸ ಬೆಲೆಗೆ ಅಪ್‌ಡೇಟ್ ಮಾಡಲು, ಪರವಾನಗಿ ಸ್ಟ್ರ್ಯಾಟಜಿ ಎಡಿಟಿಂಗ್ ಪುಟದಲ್ಲಿ ಹೊಸ ಬೆಲೆಯ ಮಟ್ಟವನ್ನು ಆಯ್ಕೆ ಮಾಡಿ ಮತ್ತು ಅನ್ವಯಿಸಿ ಎಂಬುದನ್ನು ಕ್ಲಿಕ್ ಮಾಡಿ.

ಬೆಲೆಯಲ್ಲಿನ ಬದಲಾವಣೆಯು ಯಾವುದೇ ಹಿಂದಿನ ಸ್ವಾಧೀನಗಳು ಅಥವಾ ಪರವಾನಗಿ ಬಳಕೆಯ ಮೇಲೆ ಪರಿಣಾಮ ಬೀರುವುದಿಲ್ಲ. ನೀವು ಹೊಸ ಬೆಲೆಯ ಸ್ಟ್ರ್ಯಾಟಜಿಯನ್ನು ಆಯ್ಕೆ ಮಾಡಿದ ನಂತರ, ಲೆಗಸಿ ಬೆಲೆಗೆ ಮರಳಿ ಹೋಗಲು ಸಾಧ್ಯವಾಗುವುದಿಲ್ಲ.

ಹೆಚ್ಚಿನ ಮಾಹಿತಿ

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7750046142229036688
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false