ಪರವಾನಗಿ ಸ್ಟ್ರ್ಯಾಟಜಿಗಳನ್ನು ಎಡಿಟ್ ಮಾಡಿ ಅಥವಾ ನಿಷ್ಕ್ರಿಯಗೊಳಿಸಿ

ನೀವು ಪರವಾನಗಿ ಸ್ಟ್ರ್ಯಾಟಜಿಯನ್ನು ರಚಿಸಿದ ಬಳಿಕ, ಸ್ಟ್ರ್ಯಾಟಜಿಯ ಶೀರ್ಷಿಕೆ, ಬೆಲೆನಿಗದಿ ಅಥವಾ ಬಳಕೆಯ ವಿವರಗಳನ್ನು ನೀವು ಎಡಿಟ್ ಮಾಡಬಹುದು. ಚಾನಲ್ ಆಧಾರಿತ ಪರವಾಗಿ ಸ್ಟ್ರ್ಯಾಟಜಿಗಳಿಗಾಗಿ, ಅಗತ್ಯವಿರುವ ಹಾಗೆ ನೀವು ಉಚಿತ ಪರವಾನಗಿಗೆ ಚಾನಲ್‌ಗಳನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು. ನೀವು ಇನ್ನು ಮುಂದೆ ಒಂದು ಪರವಾನಗಿ ಸ್ಟ್ರ್ಯಾಟಜಿಯನ್ನು ಬಳಸುವುದಿಲ್ಲ ಎಂದಾದರೆ, ನೀವು ಅದನ್ನು ನಿಷ್ಕ್ರಿಯಗೊಳಿಸಬಹುದು.

ಪ್ರತಿ ಎಡಿಟ್ ಅನ್ನು Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ಸೇವ್ ಮಾಡಲಾಗುತ್ತದೆ ಮತ್ತು “ಪರಿಷ್ಕರಣೆ” ಎಂಬುದಾಗಿ ಗೋಚರಿಸುತ್ತದೆ.

ಪರವಾನಗಿ ಸ್ಟ್ರ್ಯಾಟಜಿಯನ್ನು ಎಡಿಟ್ ಮಾಡಿ

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಪರವಾನಗಿ ನಿರ್ವಹಣೆ ಎಂಬುದನ್ನು ಆಯ್ಕೆ ಮಾಡಿ.
  3. ಪ್ಲ್ಯಾಟ್‌ಫಾರ್ಮ್ ಸ್ಟ್ರ್ಯಾಟಜಿಯನ್ನು ಎಡಿಟ್ ಮಾಡಲು,ಪ್ಲ್ಯಾಟ್‌ಫಾರ್ಮ್ ಸ್ಟ್ರ್ಯಾಟಜಿಗಳ ಟ್ಯಾಬ್‌ನಲ್ಲಿರಿ. ಚಾನಲ್ ಆಧಾರಿತ ಸ್ಟ್ರ್ಯಾಟಜಿಯನ್ನು ಎಡಿಟ್ ಮಾಡಲು ಚಾನಲ್ ಆಧಾರಿತ ಸ್ಟ್ರ್ಯಾಟಜಿಗಳು  ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
    • ಸ್ಟ್ರ್ಯಾಟಜಿಯ ಶೀರ್ಷಿಕೆಯ ಪ್ರಕಾರ ಪಟ್ಟಿಯನ್ನು ಫಿಲ್ಟರ್ ಮಾಡಲು, ಫಿಲ್ಟರ್ ಬಾರ್  ನಂತರ ಸ್ಟ್ರ್ಯಾಟಜಿಯ ಶೀರ್ಷಿಕೆ ಎಂಬುದನ್ನು ಕ್ಲಿಕ್ ಮಾಡಿ. ಸ್ಟ್ರ್ಯಾಟಜಿ ಶೀರ್ಷಿಕೆಯನ್ನು ನಮೂದಿಸಿ, ನಂತರ ಅನ್ವಯಿಸಿ ಎಂಬುದನ್ನು ಕ್ಲಿಕ್ ಮಾಡಿ.
  4. ನೀವು ಎಡಿಟ್ ಮಾಡಲು ಬಯಸುವ ಪರವಾನಗಿ ಸ್ಟ್ರ್ಯಾಟಜಿಯ ಶೀರ್ಷಿಕೆಯನ್ನು ಕ್ಲಿಕ್ ಮಾಡಿ.
  5. ಶೀರ್ಷಿಕೆ, ಬೆಲೆ ಅಥವಾ ಹೆಚ್ಚುವರಿ ವಿವರಗಳನ್ನು ಅಪ್‌ಡೇಟ್ ಮಾಡಿ.
  6. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

ಚಾನಲ್ ಆಧಾರಿತ ಸ್ಟ್ರ್ಯಾಟಜಿಯಿಂದ ಚಾನಲ್‍ಗೆ ಚಾನಲ್‌ಗಳನ್ನು ಸೇರಿಸಿ ಅಥವಾ ತೆಗೆದುಹಾಕಿ

ನಿರ್ದಿಷ್ಟ ಚಾನಲ್‌ಗಳಿಗೆ ಉಚಿತ ಪರವಾನಗಿಯನ್ನು ಒದಗಿಸುವ ಚಾನಲ್ ಆಧಾರಿತ ಪರವಾನಗಿ ಸ್ಟ್ರ್ಯಾಟಜಿಯನ್ನು ನೀವು ರಚಿಸಿದ್ದರೆ, ಆ ಪರವಾನಗಿ ಸ್ಟ್ರ್ಯಾಟಜಿಗೆ ನೀವು ಚಾನಲ್‌ಗಳನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು.

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಪರವಾನಗಿ ನಿರ್ವಹಣೆ ಎಂಬುದನ್ನು ಆಯ್ಕೆ ಮಾಡಿ.
  3. ಚಾನಲ್ ಆಧಾರಿತ ಸ್ಟ್ರ್ಯಾಟಜಿಗಳು ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. ನೀವು ಚಾನಲ್‌ಗಳನ್ನು ಸೇರಿಸಲು ಅಥವಾ ತೆಗೆದುಹಾಕಲು ಬಯಸುವ ಪರವಾನಗಿ ಸ್ಟ್ರ್ಯಾಟಜಿಯನ್ನು ಕ್ಲಿಕ್ ಮಾಡಿ.
    • ಚಾನಲ್‌ಗಳನ್ನು ಸೇರಿಸಲು, ಚಾನಲ್‌ಗಳನ್ನು ಸೇರಿಸಿ ಎಂಬುದನ್ನು ಕ್ಲಿಕ್ ಮಾಡಿ. ಚಾನಲ್ ಐಡಿಗಳನ್ನು ಅಂಟಿಸಿ ಮತ್ತು ಸೇರಿಸಿ ಎಂಬುದನ್ನು ಕ್ಲಿಕ್ ಮಾಡಿ.
    • ಚಾನಲ್‌ಗಳನ್ನು ತೆಗೆದುಹಾಕಲು, ಚಾನಲ್‌ಗಳನ್ನು ಆಯ್ಕೆ ಮಾಡಿ ಮತ್ತು ಮೇಲಿನ ಬ್ಯಾನರ್‌ನಲ್ಲಿ ಚಾನಲ್‌ಗಳನ್ನು ತೆಗೆದುಹಾಕಿ ಎಂಬುದನ್ನು ಕ್ಲಿಕ್ ಮಾಡಿ. ನೀವು ಒಂದು ಚಾನಲ್ ಅನ್ನು ತಪ್ಪಿ ತೆಗೆದುಹಾಕಿದ್ದರೆ, ನೀವು ಆ ಚಾನಲ್ ಅನ್ನು ಆಯ್ಕೆ ಮಾಡಬಹುದು ಮತ್ತು ಮೇಲಿನ ಬ್ಯಾನರ್‌ನಲ್ಲಿ ತೆಗೆದುಹಾಕುವುದನ್ನು ರದ್ದುಗೊಳಿಸಿ ಎಂಬುದನ್ನು ಕ್ಲಿಕ್ ಮಾಡಬಹುದು.
  5. ಸೇವ್ ಎಂಬುದನ್ನು ಕ್ಲಿಕ್ ಮಾಡಿ.
  6. ಅಪ್‌ಡೇಟ್ ಅನ್ನು ಪೂರ್ಣಗೊಳಿಸಲು, ಖಚಿತಪಡಿಸಿ ಎಂಬುದನ್ನು ಕ್ಲಿಕ್ ಮಾಡಿ.

ಪರವಾನಗಿ ಸ್ಟ್ರ್ಯಾಟಜಿಯನ್ನು ನಿಷ್ಕ್ರಿಯಗೊಳಿಸಿ

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಪರವಾನಗಿ ನಿರ್ವಹಣೆ ಎಂಬುದನ್ನು ಆಯ್ಕೆ ಮಾಡಿ.
  3. ಪ್ಲ್ಯಾಟ್‌ಫಾರ್ಮ್ ಪರವಾನಗಿ ಸ್ಟ್ರ್ಯಾಟಜಿಯೊಂದನ್ನು ನಿಷ್ಕ್ರಿಯಗೊಳಿಸಲು ಪ್ಲ್ಯಾಟ್‌ಫಾರ್ಮ್ ಸ್ಟ್ರ್ಯಾಟಜಿಗಳು ಎಂಬ ಟ್ಯಾಬ್‌ನಲ್ಲೇ ಇರಿ. ಚಾನಲ್ ಆಧಾರಿತ ಪರವಾನಗಿ ಸ್ಟ್ರ್ಯಾಟಜಿಯೊಂದನ್ನು ನಿಷ್ಕ್ರಿಯಗೊಳಿಸಲು ಚಾನಲ್ ಆಧಾರಿತ ಸ್ಟ್ರ್ಯಾಟಜಿಗಳು ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ
    • ಸ್ಟ್ರ್ಯಾಟಜಿಯ ಶೀರ್ಷಿಕೆಯ ಪ್ರಕಾರ ಪಟ್ಟಿಯನ್ನು ಫಿಲ್ಟರ್ ಮಾಡಲು, ಫಿಲ್ಟರ್ ಬಾರ್  ನಂತರ ಸ್ಟ್ರ್ಯಾಟಜಿಯ ಶೀರ್ಷಿಕೆ ಎಂಬುದನ್ನು ಕ್ಲಿಕ್ ಮಾಡಿ. ಸ್ಟ್ರ್ಯಾಟಜಿ ಶೀರ್ಷಿಕೆಯನ್ನು ನಮೂದಿಸಿ, ನಂತರ ಅನ್ವಯಿಸಿ ಎಂಬುದನ್ನು ಕ್ಲಿಕ್ ಮಾಡಿ.
  4. ನೀವು ನಿಷ್ಕ್ರಿಯಗೊಳಿಸಲು ಬಯಸುವ ಪರವಾನಗಿ ಸ್ಟ್ರ್ಯಾಟಜಿಯನ್ನು ಆಯ್ಕೆ ಮಾಡಿ.
  5. ಪರವಾನಗಿ ಸ್ಟ್ರ್ಯಾಟಜಿಯನ್ನು ನಿಷ್ಕ್ರಿಯಗೊಳಿಸಿ ಎಂಬುದನ್ನು ಕ್ಲಿಕ್ ಮಾಡಿ.
ಒಂದು ಸ್ವತ್ತಿನ ಮೇಲಿನ ಪರವಾನಗಿ ಸ್ಟ್ರ್ಯಾಟಜಿಯನ್ನು ನಿಷ್ಕ್ರಿಯಗೊಳಿಸಲು, ಇಲ್ಲಿ ಕೊಡಲಾಗಿರುವ ಹಂತಗಳನ್ನು ಅನುಸರಿಸಿ.

ಪರಿಷ್ಕರಣೆ ಇತಿಹಾಸವನ್ನು ವೀಕ್ಷಿಸಿ

ನಿಮ್ಮ ಪರವಾನಗಿ ಸ್ಟ್ರ್ಯಾಟಜಿಗಳಲ್ಲಿ ನೀವು ಮಾಡುವ ಬದಲಾವಣೆಗಳನ್ನು Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ಸೇವ್ ಮಾಡಲಾಗುತ್ತದೆ ಮತ್ತು ಅವು “ಪರಿಷ್ಕರಣೆಗಳು” ಎಂಬುದಾಗಿ ಗೋಚರಿಸುತ್ತವೆ. ಪರವಾನಗಿ ಸ್ಟ್ರ್ಯಾಟಜಿಗೆ ಮಾಡಲಾದ ಪರಿಷ್ಕರಣೆಗಳ ದಾಖಲೆಯನ್ನು ವೀಕ್ಷಿಸಲು, ಸರಿಹೊಂದಿಸಿದ ಬೆಲೆನಿಗದಿ ಅಥವಾ ಇತಿಹಾಸ ಎಂಬುದನ್ನು ಆಯ್ಕೆಮಾಡಿ. ಪ್ರತಿಯೊಂದು ಪರಿಷ್ಕರಣೆಯನ್ನು ಮಾಡಿದಾಗ ಸೇರಿಸಲಾದ ಅಥವಾ ತೆಗೆದುಹಾಕಲಾದ ಚಾನಲ್‌ಗಳ ಕುರಿತು ಹೆಚ್ಚಿನ ವಿವರಗಳನ್ನು ವೀಕ್ಷಿಸಲು ನೀವು ಪ್ರತಿಯೊಂದು ಪರಿಷ್ಕರಣೆ ಸಾಲನ್ನು ಕ್ಲಿಕ್ ಮಾಡಬಹುದು.

ಅಪ್‍ಡೇಟ್ ಮಾಡಲಾಗಿರುವ ಪರವಾನಗಿ ಸ್ಟ್ರ್ಯಾಟಜಿಯ ವಿವರಗಳನ್ನು ನೋಡಲು ಇತಿಹಾಸ ಟ್ಯಾಬ್‍ನಿಂದ ಡ್ರಾಪ್‍ಡೌನ್ ಆ್ಯರೋವನ್ನು ಕ್ಲಿಕ್ ಮಾಡಿ: 

  • ಪರಿಷ್ಕರಣೆಗಳು: ಬದಲಾವಣೆಯ ವಿವರಗಳನ್ನು ನೋಡಿ, ಅದು ಅಸ್ತಿತ್ವದಲ್ಲಿರುವ ಪರವಾನಗಿ ಸ್ಟ್ರ್ಯಾಟಜಿಗೆ ಮಾಡಿದ ಬದಲಾವಣೆಯೇ ಅಥವಾ ಹೊಸದರ ಆಯ್ಕೆಯೇ ಎಂಬುದನ್ನು ನೋಡಿ
  • ಶೀರ್ಷಿಕೆ | ಬೆಲೆ: ಒಂದು ಪರವಾನಗಿ ಸ್ಟ್ರ್ಯಾಟಜಿಯ ಶೀರ್ಷಿಕೆ ಹಾಗೂ ಬೆಲೆಯ ಮಟ್ಟವನ್ನು ನೋಡಿ
  • ಪ್ರಾರಂಭ ದಿನಾಂಕ ಮತ್ತು ಮುಕ್ತಾಯ ದಿನಾಂಕ: ಒಂದು ಪರವಾನಗಿ ಸ್ಟ್ರ್ಯಾಟಜಿಯನ್ನು ಒಂದು ಸ್ವತ್ತಿಗೆ ಯಾವಾಗ ನಿಯೋಜಿಸಲಾಯಿತು ಮತ್ತು ಅದನ್ನು ಯಾವಾಗ ಬದಲಾಯಿಸಲಾಯಿತು ಅಥವಾ ನಿಷ್ಕ್ರಿಯಗೊಳಿಸಲಾಯಿತು ಎನ್ನುವುದನ್ನು ಸೂಚಿಸುತ್ತದೆ. ಮುಕ್ತಾಯ ದಿನಾಂಕ ಮತ್ತು ಪರವಾನಗಿ ಅವಧಿ ಒಂದೇ ಆಗಿರುವುದಿಲ್ಲ.
  • ಪಡೆದುಕೊಳ್ಳುವಿಕೆಗಳು: ಸ್ಟೋರ್ ಫ್ರಂಟ್‌ನಲ್ಲಿ ಖರೀದಿಸಿದ ಪರವಾನಗಿಗಳ ಸಂಖ್ಯೆಯನ್ನು ಸೂಚಿಸುತ್ತವೆ
  • ಬಳಕೆಗಳು: ಪರವಾನಗಿ ಪಡೆಯಲಾದ ಕಂಟೆಂಟ್ ಅನ್ನು ವೀಡಿಯೊದಲ್ಲಿ ವಾಸ್ತವವಾಗಿ ಎಷ್ಟು ಬಾರಿ ಬಳಸಲಾಗಿದೆ ಎಂಬುದನ್ನು ಸೂಚಿಸುತ್ತವೆ.
  • ಸ್ಥಿತಿ: ಪರವಾನಗಿ ಸ್ಟ್ರ್ಯಾಟಜಿಯ ಪ್ರಸ್ತುತ ಸ್ಥಿತಿ; ಇದು “ಪ್ರಸ್ತುತ ನಿಯಮಗಳು” ಅಥವಾ “ಹಿಂದಿನ ನಿಯಮಗಳನ್ನು” ಸೂಚಿಸಬಹುದು

ನೀವು ಸರಿಹೊಂದಿಸಿದ ಬೆಲೆನಿಗದಿ ಟ್ಯಾಬ್‍ನಲ್ಲಿ, ಬಳಕೆದಾರರ ಮಾಹಿತಿ ಅಥವಾ ಬದಲಾವಣೆಯನ್ನು ಯಾವಾಗ ಮಾಡಲಾಗಿದೆ ಎಂಬುದರ ಸಮಯ‍ಸ್ಟ್ಯಾಂಪ್‍ನಂತಹ ಹೆಚ್ಚಿನ ವಿವರಗಳನ್ನು ಕಾಣುವಿರಿ. ಸ್ಟ್ರ್ಯಾಟಜಿಯು ಪ್ರಕಾಶಕರ ಬೆಲೆನಿಗದಿ ಹೊಂದಾಣಿಕೆಯಿಂದ ಪ್ರಭಾವಿತವಾಗಿದ್ದರೆ, ಪರಿಷ್ಕೃತ ಸ್ಟ್ರ್ಯಾಟಜಿಯು ಅದರ ಶೀರ್ಷಿಕೆಯಲ್ಲಿ ಪ್ರಕಾಶಕರ ಹೆಸರನ್ನು ಒಳಗೊಂಡಿರುತ್ತದೆ.

ಪರವಾನಗಿ ಸ್ಟ್ರ್ಯಾಟಜಿ ಪರಿಷ್ಕರಣೆಗಳನ್ನು ಅಳಿಸುವ ಹಾಗಿಲ್ಲ. 0 ಪಡೆದುಕೊಳ್ಳುವಿಕೆಗಳನ್ನು ಹೊಂದಿರುವ ಪರಿಷ್ಕರಣೆಗಳನ್ನು ಪ್ರದರ್ಶಿಸಲಾಗುವುದಿಲ್ಲ. 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8959917313297778891
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false