ಪರವಾನಗಿ ಸ್ಟ್ರ್ಯಾಟಜಿಯನ್ನು ರಚಿಸಿ

YouTube ಕ್ರಿಯೇಟರ್‌ಗಳು, YouTube Creator Music ನಲ್ಲಿ ನಿಮ್ಮ ಕಂಟೆಂಟ್‌ಗೆ ಪರವಾನಗಿಯನ್ನು ಖರೀದಿಸಿದಾಗ ಅವರು ಒಪ್ಪಿಕೊಳ್ಳುವ ನಿಯಮಗಳನ್ನು ಪರವಾನಗಿ ಸ್ಟ್ರ್ಯಾಟಜಿಯು ನಿರ್ದಿಷ್ಟಪಡಿಸುತ್ತದೆ. ನೀವು ರಚಿಸಬಹುದಾದ 2 ರೀತಿಯ ಪರವಾನಗಿ ಸ್ಟ್ರ್ಯಾಟಜಿಗಳಿವೆ:

  • ಪ್ಲ್ಯಾಟ್‌ಫಾರ್ಮ್ ಪರವಾನಗಿ ಸ್ಟ್ರ್ಯಾಟಜಿ: ನಿಮ್ಮ ಕಂಟೆಂಟ್‌ಗೆ ಪರವಾನಗಿ ನೀಡಲು ಬಯಸುವ ಯಾವುದೇ YouTube ಕ್ರಿಯೇಟರ್‌ಗೆ ಅನ್ವಯಿಸುತ್ತದೆ.
  • ಚಾನಲ್ ಆಧಾರಿತ ಪರವಾನಗಿ ಸ್ಟ್ರ್ಯಾಟಜಿ: ನೀವು ನಿರ್ದಿಷ್ಟಪಡಿಸಿದ ಕೆಲವು ಚಾನಲ್‌ಗಳಿಗೆ ಅನ್ವಯಿಸುತ್ತದೆ.

ನೀವು ಪರವಾನಗಿ ಸ್ಟ್ರ್ಯಾಟಜಿಯನ್ನು ರಚಿಸಿದಾಗ, ನೀವು ಪ್ರಿಸೆಟ್ ಪ್ರೈಸ್ ಪಾಯಿಂಟ್ ಅನ್ನು ಆಯ್ಕೆಮಾಡಬಹುದು ಅಥವಾ ನಿಮ್ಮದೇ ಒಂದನ್ನು ಕಸ್ಟಮೈಸ್ ಮಾಡಬಹುದು. ಪರವಾನಗಿ ಬೆಲೆಯ ಕುರಿತು ಇನ್ನಷ್ಟು ತಿಳಿಯಿರಿ.

ಟಿಪ್ಪಣಿಗಳು:

  • ಒಂದು ಪರವಾನಗಿ ಸ್ಟ್ರ್ಯಾಟಜಿಯನ್ನು ಅನೇಕ ಸ್ವತ್ತುಗಳಿಗೆ ಅನ್ವಯಿಸಬಹುದು.
  • ನೀವು ಗರಿಷ್ಠ 5000 ಪರವಾನಗಿ ಸ್ಟ್ರ್ಯಾಟಜಿಗಳನ್ನು ರಚಿಸಬಹುದು.
  • ಪ್ರಕಾಶಕರು ಪ್ರೈಸಿಂಗ್ ಫ್ಲೋರ್ ಅನ್ನು ಒದಗಿಸಿದ್ದರೆ, ನಿಮ್ಮ ಪರವಾನಗಿ ಸ್ಟ್ರ್ಯಾಟಜಿಯು ಪ್ರಕಾಶಕರು ಸೆಟ್ ಮಾಡಿದ ಕನಿಷ್ಠ ದರವನ್ನು ಪೂರೈಸಬೇಕು. ಒಂದು ಚಾನಲ್ ಸೆಗ್ಮೆಂಟ್‌ನ ದರವು ಸ್ವತ್ತಿಗೆ ಇರುವ ಪ್ರಕಾಶಕರ ದರಕ್ಕಿಂತ ಕಡಿಮೆ ಇದ್ದರೆ ಪರವಾನಗಿ ಸ್ಟ್ರ್ಯಾಟಜಿಯು ಅನರ್ಹಗೊಳ್ಳುತ್ತದೆ.

ಪ್ಲ್ಯಾಟ್‌ಫಾರ್ಮ್ ಸ್ಟ್ರ್ಯಾಟಜಿಯನ್ನು ರಚಿಸಿ

ಪ್ಲ್ಯಾಟ್‌ಫಾರ್ಮ್ ಸ್ಟ್ರ್ಯಾಟಜಿಯನ್ನು ರಚಿಸಲು, ನೀವು ಮೊದಲು ಪರವಾನಗಿ ನಿರ್ವಹಣೆ ಫೀಚರ್ ಅನ್ನು ನಿಮ್ಮ ಕಂಟೆಂಟ್ ಮ್ಯಾನೇಜರ್ ರೋಲ್‌ಗೆ ನಿಯೋಜಿಸಿರಬೇಕು. ನಂತರ, ಸ್ಟ್ರ್ಯಾಟಜಿಯನ್ನು ರಚಿಸಲು ಈ ಹಂತಗಳನ್ನು ಬಳಸಿ:

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಪರವಾನಗಿ ನಿರ್ವಹಣೆ ಎಂಬುದನ್ನು ಆಯ್ಕೆಮಾಡಿ.
  3. ಪ್ಲ್ಯಾಟ್‌ಫಾರ್ಮ್ ಸ್ಟ್ರ್ಯಾಟಜಿಗಳ ಟ್ಯಾಬ್‌ನಲ್ಲಿ, ಪ್ಲ್ಯಾಟ್‌ಫಾರ್ಮ್ ಸ್ಟ್ರ್ಯಾಟಜಿಯನ್ನು ರಚಿಸಿ ಎಂಬುದನ್ನು ಕ್ಲಿಕ್ ಮಾಡಿ.
  4. ಸ್ಟ್ರ್ಯಾಟಜಿ ಶೀರ್ಷಿಕೆ ಬಾಕ್ಸ್‌ನಲ್ಲಿ, ನಿಮ್ಮ ಪರವಾನಗಿ ಸ್ಟ್ರ್ಯಾಟಜಿಗಾಗಿ ಶೀರ್ಷಿಕೆಯನ್ನು ನಮೂದಿಸಿ.
    • ಸ್ಟ್ರ್ಯಾಟಜಿ ಕ್ರಿಯೆಯನ್ನು ಸಾರಾಂಶಗೊಳಿಸುವ ಮತ್ತು ಇತರ ಪರವಾನಗಿ ಸ್ಟ್ರ್ಯಾಟಜಿಗಳಿಂದ ಅದನ್ನು ಸ್ಪಷ್ಟವಾಗಿ ಪ್ರತ್ಯೇಕಿಸುವ ಅನನ್ಯ ಹೆಸರನ್ನು ಆರಿಸಿ.
  5. ಬೆಲೆ ಸ್ಟ್ರ್ಯಾಟಜಿಯ ಅಡಿಯಲ್ಲಿ, ಪ್ರಿಸೆಟ್ ಪರವಾನಗಿ ಸ್ಟ್ರ್ಯಾಟಜಿಯನ್ನು (ಪ್ರೊಮೋಷನಲ್, ಬ್ಯಾಲೆನ್ಸ್ ಮಾಡಿರುವುದು, Premium ಅಥವಾ ಉಚಿತ) ಆಯ್ಕೆಮಾಡಿ ಅಥವಾ ನಿಮ್ಮದೇ ಪ್ರೈಸ್ ಪಾಯಿಂಟ್‌ಗಳನ್ನು ವ್ಯಾಖ್ಯಾನಿಸಲು ಕಸ್ಟಮ್ ಆಯ್ಕೆಮಾಡಿ. ಪರವಾನಗಿ ಬೆಲೆಯ ಕುರಿತು ಇನ್ನಷ್ಟು ತಿಳಿಯಿರಿ.
    ಪ್ರಕಾಶಕರು ಪ್ರೈಸಿಂಗ್ ಫ್ಲೋರ್ ಅನ್ನು ಒದಗಿಸಿದ್ದರೆ, ನಿಮ್ಮ ಪರವಾನಗಿ ಸ್ಟ್ರ್ಯಾಟಜಿಯು ಪ್ರಕಾಶಕರು ಸೆಟ್ ಮಾಡಿದ ಕನಿಷ್ಠ ದರವನ್ನು ಪೂರೈಸಬೇಕು. ಒಂದು ಚಾನಲ್ ಸೆಗ್ಮೆಂಟ್‌ನ ದರವು ಸ್ವತ್ತಿಗೆ ಇರುವ ಪ್ರಕಾಶಕರ ದರಕ್ಕಿಂತ ಕಡಿಮೆ ಇದ್ದರೆ ಪರವಾನಗಿ ಸ್ಟ್ರ್ಯಾಟಜಿಯು ಅನರ್ಹಗೊಳ್ಳುತ್ತದೆ.
  6. ಹೆಚ್ಚುವರಿ ವಿವರಗಳ ಅಡಿಯಲ್ಲಿ, ಪರವಾನಗಿ ಅವಧಿಯನ್ನು (ಕ್ರಿಯೇಟರ್ ನಿಮ್ಮ ಕಂಟೆಂಟ್ ಅನ್ನು ಎಷ್ಟು ಸಮಯದವರೆಗೆ ಬಳಸಬಹುದು) 2 ವರ್ಷಗಳು, 5 ವರ್ಷಗಳು, 10 ವರ್ಷಗಳು ಅಥವಾ ನಿರಂತರತೆಗೆ ಸೆಟ್ ಮಾಡಿ. ಅವಧಿ ಮುಗಿದ ನಂತರ, ನಿಮ್ಮ ಕಂಟೆಂಟ್ ಅನ್ನು ಬಳಸಿದರೆ ವೀಡಿಯೊದಲ್ಲಿ Content ID ಕ್ಲೈಮ್ ಅನ್ನು ರಚಿಸಬಹುದು.
    ಗಮನಿಸಿ: ಭೂಪ್ರದೇಶದ ಬಳಕೆಯು ಪ್ರಪಂಚದಲ್ಲಿ ಎಲ್ಲಿ ಕಂಟೆಂಟ್ ಅನ್ನು ಬಳಸಲು ಪರವಾನಗಿ ಅನುಮತಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ಪರವಾನಗಿ ಬಳಕೆಯು ಕ್ರಿಯೇಟರ್ ಕಂಟೆಂಟ್ ಅನ್ನು ಬಳಸಬಹುದಾದ ವೀಡಿಯೊಗಳ ಸಂಖ್ಯೆಯನ್ನು ಸೂಚಿಸುತ್ತದೆ.
  7. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

 ಒಮ್ಮೆ ನಿಮ್ಮ ಪರವಾನಗಿ ಸ್ಟ್ರ್ಯಾಟಜಿಯನ್ನು ರಚಿಸಿದ ನಂತರ, ನೀವು ಪರವಾನಗಿ ಟ್ಯಾಬ್‌ನಿಂದ ಅದನ್ನು ವೀಕ್ಷಿಸಬಹುದು ಮತ್ತು ಅದರಲ್ಲಿ ಎಡಿಟ್‌ಗಳನ್ನು ಮಾಡಬಹುದು. ಇನ್ನಷ್ಟು ತಿಳಿಯಿರಿ.

ಸಲಹೆ: ಕಸ್ಟಮ್ ಪರವಾನಗಿ ಸ್ಟ್ರ್ಯಾಟಜಿಯನ್ನು ರಚಿಸುವಾಗ, ಎಲ್ಲಾ ಕ್ರಿಯೇಟರ್ ಸೆಗ್ಮೆಂಟ್‌ಗಳಲ್ಲಿ ಒಂದೇ ಬೆಲೆಯನ್ನು ಸೇರಿಸಲು ನೀವು ನಕಲು ಐಕಾನ್  ಅನ್ನು ಕ್ಲಿಕ್ ಮಾಡಬಹುದು ಅಥವಾ ವಿವಿಧ ಕ್ರಿಯೇಟರ್ ಸೆಗ್ಮೆಂಟ್‌ಗಳ ಆಧಾರದ ಮೇಲೆ ಪ್ರೈಸ್ ಪಾಯಿಂಟ್‌ಗಳನ್ನು ಅಡ್ಜಸ್ಟ್ ಮಾಡುವ ಮಲ್ಟಿಪ್ಲೈಯರ್ ಅನ್ನು ಬಳಸಲು ಮಲ್ಟಿಪ್ಲೈಯರ್ ಐಕಾನ್ ಅನ್ನು ಕ್ಲಿಕ್ ಮಾಡಬಹುದು.

ಚಾನಲ್ ಆಧಾರಿತ ಸ್ಟ್ರ್ಯಾಟಜಿಯನ್ನು ರಚಿಸಿ

ಚಾನಲ್ ಆಧಾರಿತ ಪರವಾನಗಿ ಸ್ಟ್ರ್ಯಾಟಜಿಗಳು ಮಾನಿಟೈಸೇಶನ್ ಮೇಲೆ ಪರಿಣಾಮ ಬೀರುವ Content ID ಕ್ಲೈಮ್‌ಗಳಿಂದ ನಿಮ್ಮ ಸ್ವತ್ತುಗಳಿಗೆ ಪರವಾನಗಿ ನೀಡುವ ಚಾನಲ್‌ಗಳಿಗೆ ವಿನಾಯಿತಿ ನೀಡಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ನೀವು ನಿರ್ದಿಷ್ಟಪಡಿಸಿದ ಕೆಲವು ಸ್ವತ್ತುಗಳನ್ನು ಬಳಸಲು ಈ ಚಾನಲ್‌ಗಳಿಗೆ ಉಚಿತ ಪರವಾನಗಿ ನೀಡುವ ಮೂಲಕ ನೀವು ಇದನ್ನು ಮಾಡುತ್ತೀರಿ.

ಗಮನಿಸಿ: ಎಲ್ಲಾ Content ID ಕ್ಲೈಮ್‌ಗಳಿಂದ ಚಾನಲ್‌ಗಳಿಗೆ ವಿನಾಯಿತಿ ನೀಡಲು ನೀವು ಬಯಸಿದರೆ, ನಿಮ್ಮ ಅನುಮತಿ ಪಟ್ಟಿಗೆ ಚಾನಲ್‌ಗಳನ್ನು ಸೇರಿಸಿ.

ಚಾನಲ್ ಆಧಾರಿತ ಸ್ಟ್ರ್ಯಾಟಜಿಯನ್ನು ರಚಿಸಲು, ನೀವು ಮೊದಲು ಚಾನಲ್ ಆಧಾರಿತ ಪರವಾನಗಿ ಸ್ಟ್ರ್ಯಾಟಜಿ ಫೀಚರ್ ಅನ್ನು ನಿಮ್ಮ ಕಂಟೆಂಟ್ ಮ್ಯಾನೇಜರ್ ರೋಲ್‌ಗೆ ನಿಯೋಜಿಸಿರಬೇಕು. ನಂತರ, ಸ್ಟ್ರ್ಯಾಟಜಿಯನ್ನು ರಚಿಸಲು ಈ ಹಂತಗಳನ್ನು ಬಳಸಿ:

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಪರವಾನಗಿ ನಿರ್ವಹಣೆ ಎಂಬುದನ್ನು ಆಯ್ಕೆಮಾಡಿ.
  3. ಚಾನಲ್ ಆಧಾರಿತ ಸ್ಟ್ರ್ಯಾಟಜಿಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. ಚಾನಲ್ ಆಧಾರಿತ ಸ್ಟ್ರ್ಯಾಟಜಿಯನ್ನು ರಚಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. ಸ್ಟ್ರ್ಯಾಟಜಿ ಶೀರ್ಷಿಕೆ ಬಾಕ್ಸ್‌ನಲ್ಲಿ, ನಿಮ್ಮ ಪರವಾನಗಿ ಸ್ಟ್ರ್ಯಾಟಜಿಗಾಗಿ ಶೀರ್ಷಿಕೆಯನ್ನು ನಮೂದಿಸಿ.
    • ಸ್ಟ್ರ್ಯಾಟಜಿ ಕ್ರಿಯೆಯನ್ನು ಸಾರಾಂಶಗೊಳಿಸುವ ಮತ್ತು ಇತರ ಪರವಾನಗಿ ಸ್ಟ್ರ್ಯಾಟಜಿಗಳಿಂದ ಅದನ್ನು ಸ್ಪಷ್ಟವಾಗಿ ಪ್ರತ್ಯೇಕಿಸುವ ಅನನ್ಯ ಹೆಸರನ್ನು ಆರಿಸಿ.
  6. ಚಾನಲ್‌ಗಳ ಬಾಕ್ಸ್‌ನಲ್ಲಿ, ಚಾನಲ್ ID ಗಳನ್ನು ನಮೂದಿಸಿ.
    • ಚಾನಲ್ ID, 24 ಅಕ್ಷರಗಳ ಆಲ್ಫಾನ್ಯೂಮರಿಕ್ ಸ್ಟ್ರಿಂಗ್ ಆಗಿದೆ ಮತ್ತು ಚಾನಲ್‌ನ URL ನಲ್ಲಿ 'UC' ಯೊಂದಿಗೆ ಪ್ರಾರಂಭವಾಗುತ್ತದೆ.
  7. ಹೆಚ್ಚುವರಿ ವಿವರಗಳ ವಿಭಾಗದಲ್ಲಿ, ಪರವಾನಗಿ ಅವಧಿಯನ್ನು (ಕ್ರಿಯೇಟರ್ ನಿಮ್ಮ ಕಂಟೆಂಟ್ ಅನ್ನು ಎಷ್ಟು ಸಮಯದವರೆಗೆ ಬಳಸಬಹುದು) 2 ವರ್ಷಗಳು, 5 ವರ್ಷಗಳು, 10 ವರ್ಷಗಳು ಅಥವಾ ನಿರಂತರತೆಗೆ ಸೆಟ್ ಮಾಡಿ. ಅವಧಿ ಮುಗಿದ ನಂತರ, ನಿಮ್ಮ ಕಂಟೆಂಟ್ ಅನ್ನು ಬಳಸಿದರೆ ವೀಡಿಯೊದಲ್ಲಿ Content ID ಕ್ಲೈಮ್ ಅನ್ನು ರಚಿಸಬಹುದು.
    ಗಮನಿಸಿ: ಭೂಪ್ರದೇಶದ ಬಳಕೆಯು ಪ್ರಪಂಚದಲ್ಲಿ ಎಲ್ಲಿ ಕಂಟೆಂಟ್ ಅನ್ನು ಬಳಸಲು ಪರವಾನಗಿ ಅನುಮತಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ಪರವಾನಗಿ ಬಳಕೆಯು ಕ್ರಿಯೇಟರ್ ಕಂಟೆಂಟ್ ಅನ್ನು ಬಳಸಬಹುದಾದ ವೀಡಿಯೊಗಳ ಸಂಖ್ಯೆಯನ್ನು ಸೂಚಿಸುತ್ತದೆ.
  8. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

ಒಮ್ಮೆ ನಿಮ್ಮ ಚಾನಲ್ ಆಧಾರಿತ ಪರವಾನಗಿ ಸ್ಟ್ರ್ಯಾಟಜಿಯನ್ನು ರಚಿಸಿದ ನಂತರ, ನೀವು ಚಾನಲ್ ಆಧಾರಿತ ಸ್ಟ್ರ್ಯಾಟಜಿಗಳು ಟ್ಯಾಬ್‌ನಿಂದ ಅದನ್ನು ವೀಕ್ಷಿಸಬಹುದು ಮತ್ತು ಅದರಲ್ಲಿ ಎಡಿಟ್‌ಗಳನ್ನು ಮಾಡಬಹುದು. ಇನ್ನಷ್ಟು ತಿಳಿಯಿರಿ.

ಪ್ರಕಾಶಕರ ಫ್ಲೋರ್ ಪ್ರೈಸಿಂಗ್

ಕೆಲವು ಪ್ರಕಾಶಕರು ತಾವು ಹೊಂದಿರುವ ಸ್ವತ್ತುಗಳಿಗೆ ಫ್ಲೋರ್ ಪ್ರೈಸಿಂಗ್ ಅನ್ನು ಸೆಟ್ ಮಾಡಿರುತ್ತಾರೆ, ಅದು ಟ್ರ್ಯಾಕ್‌ಗೆ ಪರವಾನಗಿ ಪಡೆಯಬಹುದಾದ ಅತೀ ಕಡಿಮೆ ದರವನ್ನು ಪ್ರತಿನಿಧಿಸುತ್ತದೆ. ಪ್ರಕಾಶಕರು ಫ್ಲೋರ್ ಪ್ರೈಸ್ ಅನ್ನು ಸೆಟ್ ಮಾಡಿದಾಗ, ಲೇಬಲ್/ವಿತರಕರು Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ಸೆಟ್ ಮಾಡಲಾದ ದರವನ್ನು ಪೂರೈಸಬೇಕು.

ಪ್ರಕಾಶಕರ ಫ್ಲೋರ್ ಪ್ರೈಸ್ ಅನ್ನು ಪೂರೈಸದಿರುವ ಪ್ರಿಸೆಟ್ ಪರವಾನಗಿ ಸ್ಟ್ರ್ಯಾಟಜಿಗಳನ್ನು ನೀವು ಬಳಸಿದ್ದರೆ, ಪರವಾನಗಿ ಪಡೆಯುವ ಅರ್ಹತೆ ಇಲ್ಲದಂತಾಗುವುದನ್ನು ತಪ್ಪಿಸಲು ಸ್ಟ್ರ್ಯಾಟಜಿಯು Creator Music ನಲ್ಲಿ ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13169772416157442465
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false