ಲಿಂಕ್ ಮಾಡಿರುವ ಚಾನಲ್‌ಗಳನ್ನು ತೆಗೆದುಹಾಕಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.
ನೀವು ಲಿಂಕ್ ಮಾಡಿರುವ ಚಾನಲ್ ಅನ್ನು ತೆಗೆದುಹಾಕಿದಾಗ, ಆ ಚಾನಲ್ ಮತ್ತು ನಿಮ್ಮ ಕಂಟೆಂಟ್ ಮ್ಯಾನೇಜರ್ ನಡುವಿನ ಲಿಂಕ್ ಅನ್ನು ನೀವು ರದ್ದುಗೊಳಿಸುತ್ತೀರಿ. ನೀವು ಈ ಕೆಳಗಿನ ಸಾಮರ್ಥ್ಯಗಳನ್ನು ಕಳೆದುಕೊಳ್ಳುತ್ತೀರಿ:
  • ಆ ಚಾನಲ್‍ನಲ್ಲಿರುವ ವೀಡಿಯೊಗಳಿಗೆ ಸಂಬಂಧಿಸಿದ ಮಾನಿಟೈಸೇಶನ್ ಸ್ಥಿತಿಯ ನಿಯಂತ್ರಣ 
  • ಆ ಚಾನಲ್‌ಗಾಗಿ ವೀಡಿಯೊಗಳನ್ನು ಕ್ಲೈಮ್ ಮಾಡುವುದು
  • ಚಾನಲ್ ಮಾಲೀಕರು ಚಾನಲ್‌ನ ವೀಡಿಯೊಗಳನ್ನು ಕ್ಲೈಮ್ ಮಾಡಬಹುದೇ ಮತ್ತು ಮಾನಿಟೈಸ್ ಮಾಡಬಹುದೇ ಎಂದು ಸೆಟ್ ಮಾಡುವುದು (ವೀಡಿಯೊಗಳನ್ನು ಕ್ಲೈಮ್ ಮಾಡುವ ಸಾಮರ್ಥ್ಯವು ಕಂಟೆಂಟ್ ಮ್ಯಾನೇಜರ್‌ಗೆ ಡೀಫಾಲ್ಟ್ ಆಗಿ ಕಾಯ್ದಿರಿಸಲಾಗಿರುತ್ತದೆ)
  • ಆ ಚಾನಲ್‌ಗೆ ಸಂಬಂಧಿಸಿದ ಐತಿಹಾಸಿಕ ಆದಾಯ ಮತ್ತು ಕಾರ್ಯಕ್ಷಮತೆಯ ಡೇಟಾ ವೀಕ್ಷಣೆ

ನಿಮ್ಮ ಲಿಂಕ್ ರದ್ದುಮಾಡುವ ಸ್ಟ್ರ್ಯಾಟಜಿಯನ್ನು ರೂಪಿಸಿ

ನೀವು ಚಾನಲ್‌ನ ಲಿಂಕ್ ರದ್ದುಮಾಡುವ ಮೊದಲು ವೈಯಕ್ತಿಕ ಸ್ವತ್ತುಗಳನ್ನು ಎಡಿಟ್ ಮಾಡುತ್ತೀರಾ ಎಂಬುದನ್ನು ಆಧರಿಸಿ, ಅನ್‌ಲಿಂಕ್ ಪ್ರಕ್ರಿಯೆಗೆ ಸಂಬಂಧಿಸಿದ ಫಲಿತಾಂಶಗಳು ಬದಲಾಗುತ್ತವೆ. ನಿಮ್ಮ ಅಪೇಕ್ಷಿತ ಫಲಿತಾಂಶದ ಜೊತೆಗೆ ಲಿಂಕ್ ರದ್ದುಮಾಡಲು ಕೆಳಗಿನ ವಿವರಣೆಗಳನ್ನು ಬಳಸಿ:

ಲಿಂಕ್ ರದ್ದುಮಾಡಿ ಮತ್ತು ಎಲ್ಲಾ ಕ್ಲೈಮ್‌ಗಳನ್ನು ಬಿಡುಗಡೆ ಮಾಡಿ

ನೀವು ಲಿಂಕ್ ರದ್ದುಮಾಡುವ ಮೊದಲು ವೈಯಕ್ತಿಕ ಸ್ವತ್ತುಗಳಿಂದ ನಿಮ್ಮ ಮಾಲೀಕತ್ವವನ್ನು ತೆಗೆದುಹಾಕಿದರೆ, ಬಳಕೆದಾರರು-ರಚಿಸಿದ ವೀಡಿಯೊಗಳು ಮತ್ತು ನೀವು ಲಿಂಕ್ ರದ್ದು ಮಾಡುತ್ತಿರುವ ಚಾನಲ್ ಮೂಲಕ ಅಪ್‌ಲೋಡ್ ಮಾಡಲಾದ ವೀಡಿಯೊಗಳ ಮೇಲಿನ ಕ್ಲೈಮ್‌ಗಳನ್ನು ನಿಷ್ಕ್ರಿಯಗೊಳಿಸಲಾಗುವುದು. 

ಲಿಂಕ್ ರದ್ದುಮಾಡಿ ಮತ್ತು ನಿಮ್ಮ ವೀಡಿಯೊಗಳ ಮೇಲಿನ ಎಲ್ಲಾ ಕ್ಲೈಮ್‌ಗಳನ್ನು ಬಿಡುಗಡೆ ಮಾಡಿ

ನೀವು ವೈಯಕ್ತಿಕ ಸ್ವತ್ತಿನ ಮಾಲೀಕತ್ವವನ್ನು ಎಡಿಟ್ ಮಾಡದೆಯೇ ಚಾನಲ್‌ನ ಲಿಂಕ್ ರದ್ದು ಮಾಡಿದರೆ, ಬಳಕೆದಾರರು-ರಚಿಸಿದ ವೀಡಿಯೊಗಳ ಮೇಲಿನ ಕ್ಲೈಮ್‌ಗಳು ಸಕ್ರಿಯವಾಗಿಯೇ ಉಳಿಯುತ್ತವೆ. ಆ ಸ್ವತ್ತುಗಳೊಂದಿಗೆ ಸಂಯೋಜಿತವಾಗಿರುವ ಉಲ್ಲೇಖಿತ ಫೈಲ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನೀವು ಲಿಂಕ್ ರದ್ದುಮಾಡುತ್ತಿರುವ ಚಾನಲ್‌ನಿಂದ ಅಪ್‌ಲೋಡ್ ಮಾಡಲಾದ ವೀಡಿಯೊಗಳ ಮೇಲಿನ ಎಲ್ಲಾ ಕ್ಲೈಮ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಲಿಂಕ್ ರದ್ದುಮಾಡಿ ಮತ್ತು ಕ್ಲೈಮ್‌ಗಳನ್ನು ಸಕ್ರಿಯವಾಗಿ ಉಳಿಸಿ

ಚಾನಲ್ ಅನ್ನು ಹೊಸ ಕಂಟೆಂಟ್ ಮ್ಯಾನೇಜರ್‌ಗೆ ವರ್ಗಾಯಿಸುತ್ತಿದ್ದರೆ ಮಾತ್ರ ಈ ಆಯ್ಕೆ ಲಭ್ಯವಿರುತ್ತದೆ. ನೀವು ಚಾನಲ್ ಲಿಂಕ್ ರದ್ದುಮಾಡುವ ಮೊದಲು ಚಾನಲ್‌ನ ಸ್ವತ್ತುಗಳ ಮಾಲೀಕತ್ವವನ್ನು ವರ್ಗಾಯಿಸಿದರೆ, ಎಲ್ಲಾ ಕ್ಲೈಮ್‌ಗಳು ಸಕ್ರಿಯವಾಗಿಯೇ ಉಳಿಯುತ್ತವೆ.

ನಿಮ್ಮ ಕಂಟೆಂಟ್ ಮ್ಯಾನೇಜರ್‌ನಿಂದ ಚಾನಲ್ ಅನ್ನು ತೆಗೆದುಹಾಕಿ

ಗಮನಿಸಿ: ನಿಮ್ಮ ಖಾತೆಯಿಂದ ಚಾನಲ್ ಅನ್ನು ತೆಗೆದುಹಾಕುವುದರಿಂದ, ಚಾನಲ್ ಅನ್ನು YouTube ನಿಂದ ತೆಗೆದುಹಾಕುವುದಿಲ್ಲ ಅಥವಾ ಚಾನಲ್‌ನಲ್ಲಿರುವ ಯಾವುದೇ ಕಂಟೆಂಟ್ ಅನ್ನು ಅಳಿಸುವುದಿಲ್ಲ. ನಿಮ್ಮ ಯಾವುದೇ ಪಾಲುದಾರರು-ಅಪ್‌ಲೋಡ್ ಮಾಡಿದ ಕ್ಲೈಮ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ, ಆದರೆ ಬಳಕೆದಾರರು-ರಚಿಸಿದ ಕಂಟೆಂಟ್ ಮೇಲಿನ ಕ್ಲೈಮ್‌ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನೀವು ಯಾವುದೇ ಕ್ಲೈಮ್‌ಗಳನ್ನು ಬಿಡುಗಡೆ ಮಾಡಲು ಬಯಸಿದರೆ, ಚಾನಲ್ ಅನ್ನು ತೆಗೆದುಹಾಕುವ ಮೊದಲೇ ಅವುಗಳನ್ನು ಬಿಡುಗಡೆ ಮಾಡಿ.

ನಿಮ್ಮ ಕಂಟೆಂಟ್ ಮ್ಯಾನೇಜರ್‌ನಿಂದ ಲಿಂಕ್ ಮಾಡಿದ ಚಾನಲ್ ಅನ್ನು ತೆಗೆದುಹಾಕಲು:

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಚಾನಲ್‌ಗಳು  ಆಯ್ಕೆಮಾಡಿ.
  3. ನೀವು ತೆಗೆದುಹಾಕಲು ಬಯಸುವ ಚಾನಲ್‌ನ ಪಕ್ಕದಲ್ಲಿರುವ ಬಾಕ್ಸ್ ಗುರುತು ಹಾಕಿ.
  4. ಲಿಂಕ್ ರದ್ದುಮಾಡಿ ನಂತರ ಖಚಿತಪಡಿಸಿ ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14611325839396641480
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false