ಪಾವತಿಸಿದ ಉತ್ಪನ್ನ ಪ್ಲೇಸ್‌ಮೆಂಟ್‌ಗಳು, ಪ್ರಾಯೋಜಕತ್ವಗಳು ಮತ್ತು ಅನುಮೋದನೆಗಳ ಜೊತೆಗೆ ವೀಡಿಯೊಗಳನ್ನು ವೀಕ್ಷಿಸುವುದು

ವೀಡಿಯೊವು ಪಾವತಿಸಿದ ಉತ್ಪನ್ನ ಪ್ಲೇಸ್‌ಮೆಂಟ್‌ಗಳು, ಅನುಮೋದನೆಗಳು ಅಥವಾ ಪ್ರಾಯೋಜಕತ್ವಗಳನ್ನು ಒಳಗೊಂಡಿದ್ದರೆ, ವೀಡಿಯೊವನ್ನು ರಚನೆಕಾರರು ವಿನ್ಯಾಸಗೊಳಿಸಿದ ಬಳಿಕ ಅದರ ಪ್ರಾರಂಭದಲ್ಲಿ ನೀವು ಪ್ರಕಟಣೆಯನ್ನು ನೋಡುತ್ತೀರಿ.

ಸೂಚನೆ: YouTube Premium ಜಾಹೀರಾತು-ಮುಕ್ತ ವೀಡಿಯೊಗಳನ್ನು ಒದಗಿಸುತ್ತದೆ. ಆದರೂ, ವೀಡಿಯೊಗಳಿಗೆ ರಚನೆಕಾರರು ನೇರವಾಗಿ ಸೇರಿಸಿರುವ ಪ್ರಾಯೋಜಿತ ಕಂಟೆಂಟ್ ಅನ್ನು ನೀವು ಈಗಲೂ ನೋಡಬಹುದು.

ಪಾವತಿಸಿದ ಉತ್ಪನ್ನ ಪ್ಲೇಸ್‌ಮೆಂಟ್‌ಗಳು, ಪ್ರಾಯೋಜಕತ್ವಗಳು ಮತ್ತು ಅನುಮೋದನೆಗಳು ಎಂದರೆ ಯಾವುವು?

ಪಾವತಿಸಿದ ಉತ್ಪನ್ನ ಪ್ಲೇಸ್‌ಮೆಂಟ್‌ಗಳು:

  • ರಚನೆಕಾರರು ಮತ್ತು ಉತ್ಪನ್ನದ ತಯಾರಕರು ಅಥವಾ ಸೇವೆಯ ನಡುವೆ ಸಂಪರ್ಕವಿರುವ ಕಾರಣದಿಂದಾಗಿ ಉತ್ಪನ್ನ ಅಥವಾ ಸೇವೆಯ ಕುರಿತಾದ ವೀಡಿಯೊಗಳು.
  • ಪರಿಹಾರ ಅಥವಾ ಉಚಿತ ಉತ್ಪನ್ನಗಳು/ಸೇವೆಗಳಿಗೆ ಬದಲಾಗಿ ಕಂಪನಿ ಅಥವಾ ವ್ಯಾಪಾರಕ್ಕಾಗಿ ರಚಿಸಲಾದ ವೀಡಿಯೊಗಳು.
  • ಆ ಕಂಪನಿ ಅಥವಾ ವ್ಯಾಪಾರದ ಬ್ರ್ಯಾಂಡ್, ಸಂದೇಶ ಅಥವಾ ಉತ್ಪನ್ನವನ್ನು ನೇರವಾಗಿ ಕಂಟೆಂಟ್‍ನಲ್ಲಿ ಸಂಯೋಜಿಸಲಾಗಿರುವ ವೀಡಿಯೊಗಳು ಮತ್ತು ಕಂಪನಿಯು ರಚನೆಕಾರರಿಗೆ ಹಣ ಅಥವಾ ಉಚಿತ ಉತ್ಪನ್ನಗಳನ್ನು ನೀಡಿ ರಚಿಸಲ್ಪಟ್ಟಿರುವ ವೀಡಿಯೊಗಳು.

ಅನುಮೋದನೆಗಳು: ರಚನೆಕಾರರ ಅಭಿಪ್ರಾಯಗಳು, ನಂಬಿಕೆಗಳು ಅಥವಾ ಅನುಭವಗಳನ್ನು ಪ್ರತಿಬಿಂಬಿಸುವ ಸಂದೇಶಗಳನ್ನು ತಿಳಿಸುವ ಜಾಹೀರಾತುದಾರರು ಅಥವಾ ವ್ಯಾಪಾರಿಗಳಿಗಾಗಿ ರಚಿಸಿದ ವೀಡಿಯೊಗಳು.

ಪ್ರಾಯೋಜಕತ್ವಗಳು: ಕಂಟೆಂಟ್‍ನಲ್ಲಿ ನೇರವಾಗಿ ಬ್ರ್ಯಾಂಡ್, ಸಂದೇಶ ಅಥವಾ ಉತ್ಪನ್ನವನ್ನು ಇಂಟಿಗ್ರೇಟ್ ಮಾಡಿರದ, ಕಂಪನಿಯಿಂದ ಸಂಪೂರ್ಣವಾಗಿ ಅಥವಾ ಭಾಗಶಃ ಹಣ ಪಡೆದಿರುವ ವೀಡಿಯೊಗಳು. ಪ್ರಾಯೋಜಕತ್ವಗಳು ಸಾಮಾನ್ಯವಾಗಿ ಪ್ರಚಾರ ಮಾಡುವುದೇನೆಂದರೆ:

  • ಬ್ರ್ಯಾಂಡ್
  • ಸಂದೇಶ
  • ಥರ್ಡ್ ಪಾರ್ಟಿಯ ಉತ್ಪನ್ನ

ನೀವು ರಚನೆಕಾರರಾಗಿದ್ದರೆ, ನಿಮ್ಮ ವೀಡಿಯೊಗೆ ಪಾವತಿಸಿದ ಉತ್ಪನ್ನ ಪ್ಲೇಸ್‌ಮೆಂಟ್‌ಗಳು, ಪ್ರಾಯೋಜಕತ್ವಗಳು ಮತ್ತು ಅನುಮೋದನೆಗಳನ್ನು ಹೇಗೆ ಸೇರಿಸುವುದು ಎಂಬುದರ ಕುರಿತು ಇಲ್ಲಿ ತಿಳಿಯಿರಿ.

ಮೇಲ್ವಿಚಾರಣೆ ಮಾಡಿದ ಖಾತೆಗಳಿಂದ ವೀಕ್ಷಿಸಲಾದ ಕಂಟೆಂಟ್‌ಗಾಗಿ ಅಥವಾ ಮಕ್ಕಳಿಗಾಗಿ ರಚಿಸಲಾದ ಕಂಟೆಂಟ್‌ಗಾಗಿ ಪಾವತಿಸಿದ ಉತ್ಪನ್ನ ಪ್ಲೇಸ್‌ಮೆಂಟ್‌ಗಳು, ಪ್ರಾಯೋಜಕತ್ವಗಳು ಮತ್ತು ಅನುಮೋದನೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಮಕ್ಕಳನ್ನು ಉದ್ದೇಶಿಸಿ ರಚಿಸಲಾದ ವೀಡಿಯೊಗಳಲ್ಲಿ ಕಾಣಿಸುವ ಎಲ್ಲಾ ಪಾವತಿ ಪ್ರಚಾರಗಳು, ಮಕ್ಕಳು ಓದಿ ಅರ್ಥಮಾಡಿಕೊಳ್ಳಬಹುದಾದ ಪ್ರಕಟಣೆಯನ್ನು ಒಳಗೊಂಡಿರುತ್ತವೆ.

ಎಲ್ಲಾ ಪಾವತಿ ಪ್ರಚಾರಗಳು ನಮ್ಮ ಜಾಹೀರಾತು ನೀತಿಗಳನ್ನು ಅನುಸರಿಸಬೇಕಾಗುತ್ತದೆ, ಇದು ನಿರ್ದಿಷ್ಟ ವರ್ಗಗಳಲ್ಲಿ ಜಾಹೀರಾತುಗಳನ್ನು ನಿಷೇಧಿಸುತ್ತದೆ. "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ಸೆಟ್ ಮಾಡಿದ ಕಂಟೆಂಟ್‌ನಲ್ಲಿ ಜಾಹೀರಾತು ನೀಡುವುದು ಅದರ ಉದ್ದೇಶಿತ ಪ್ರೇಕ್ಷಕರನ್ನು ಮೋಸಗೊಳಿಸಬಾರದು, ಅನ್ಯಾಯ ಮಾಡಬಾರದು ಅಥವಾ ಅನುಚಿತ ವರ್ತನೆಯನ್ನು ತೋರಬಾರದು. ಕಂಟೆಂಟ್‌ಗಳು ಯಾವುದೇ ಥರ್ಡ್ ಪಾರ್ಟಿ ಟ್ರ್ಯಾಕರ್‌ಗಳನ್ನು ಬಳಸಬಾರದು ಅಥವಾ ಪೋಷಕರ ಸಮ್ಮತಿಯನ್ನು ಪಡೆಯದೆಯೇ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಬಾರದು. ಕಂಟೆಂಟ್‌ಗಳು ಎಲ್ಲಾ ಸಂಬಂಧಿತ ಕಾನೂನುಗಳು ಮತ್ತು ನಿಯಮಗಳನ್ನು ಅನುಸರಿಸಬೇಕು. ರಚನೆಕಾರರು ಮತ್ತು ಅವರು ಸಹಯೋಗ ಹೊಂದಿರುವ ಬ್ರ್ಯಾಂಡ್‍ಗಳು, ತಮ್ಮ ಕಂಟೆಂಟ್‍ನಲ್ಲಿ ಪಾವತಿ ಪ್ರಚಾರವನ್ನು ಬಹಿರಂಗಪಡಿಸಲು ತಮ್ಮ ಸ್ಥಳೀಯ ಮತ್ತು ಕಾನೂನು ಕರ್ತವ್ಯಗಳನ್ನು ತಿಳಿದುಕೊಳ್ಳಲು ಮತ್ತು ಬದ್ಧವಾಗಿರಲು ಜವಾಬ್ದಾರರಾಗಿರುತ್ತಾರೆ. ಈ ಕೆಲವು ಹೊಣೆಗಾರಿಕೆಗಳು ಯಾವಾಗ ಮತ್ತು ಹೇಗೆ ಹಂಚಿಕೊಳ್ಳಬೇಕು, ಹಾಗೆಯೇ ಅದನ್ನು ಯಾರಿಗೆ ಬಹಿರಂಗಪಡಿಸಬೇಕು ಎಂಬುದನ್ನು ಒಳಗೊಂಡಿವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15661800848143242462
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false