ಮಕ್ಕಳು ಮತ್ತು ಕುಟುಂಬಗಳಿಗೆ: ಪಾವತಿಸಿದ ಉತ್ಪನ್ನ ಇರಿಸುವಿಕೆಗಳು, ಪ್ರಾಯೋಜಕತ್ವಗಳು ಮತ್ತು ಅನುಮೋದನೆಗಳು ಎಂದರೆ ಯಾವುವು?

ಪಾವತಿಸಿದ ಉತ್ಪನ್ನ ಇರಿಸುವಿಕೆ ಎಂದರೇನು? (ಮಕ್ಕಳಿಗಾಗಿ)

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

ನೀವು ವೀಡಿಯೊವನ್ನು ವೀಕ್ಷಿಸುತ್ತಿರುವಾಗ, ಈ ಚಿಹ್ನೆ ಪಾಪ್ ಅಪ್ ಆಗುವುದನ್ನು ಗಮನಿಸಿರಬಹುದು. “ಈ ವೀಡಿಯೊವನ್ನು ಮಾಡಲು ಈ ಚಾನಲ್ ಹಣ ಅಥವಾ ಉಚಿತ ವಸ್ತುಗಳನ್ನು ಪಡೆದುಕೊಂಡಿದೆ” ಅಥವಾ "ಪಾವತಿಸಿದ ಪ್ರಚಾರವನ್ನು ಒಳಗೊಂಡಿದೆ" ಎಂದು ಹೇಳುವ ಪಠ್ಯವನ್ನೂ ಸಹ ಕಾಣಬಹುದು. ಇದರರ್ಥ, ವೀಡಿಯೊ ರಚಿಸಿದವರು ಕಂಪನಿಯಿಂದ ಹಣವನ್ನು ಸ್ವೀಕರಿಸಿರಬಹುದು ಅಥವಾ ಉಚಿತ ಸರಕುಗಳನ್ನು ಸ್ವೀಕರಿಸಿರಬಹುದು.

ಉದಾಹರಣೆಗೆ, ವೀಡಿಯೊದಲ್ಲಿ ಆಟಿಕೆಯೊಂದನ್ನು ತೋರಿಸಲಾಗಿದ್ದರೆ, ಆ ಆಟಿಕೆಯನ್ನು ನಿಮಗೆ ತೋರಿಸಲು ವೀಡಿಯೊ ರಚನೆಕಾರರು ಹಣ ಪಡೆದಿರಬಹುದು. ನೀವು ಆ ಆಟಿಕೆಯನ್ನು ಖರೀದಿಸಬೇಕೆಂದು ಕಂಪನಿ ಬಯಸುತ್ತದೆ, ಹೀಗಾಗಿ ಆ ಆಟಿಕೆಯನ್ನು ಅಲ್ಲಿ ತೋರಿಸಲಾಗುತ್ತದೆ.

ಪಾವತಿಸಿದ ಉತ್ಪನ್ನ ಇರಿಸುವಿಕೆಗಳು, ಪ್ರಾಯೋಜಕತ್ವಗಳು ಮತ್ತು ಅನುಮೋದನೆಗಳು ಎಂದರೆ ಯಾವುವು?

ಪಾವತಿಸಿದ ಉತ್ಪನ್ನ ಇರಿಸುವಿಕೆಗಳು:

  • ಹಣ, ಉಚಿತ ಉತ್ಪನ್ನಗಳು ಅಥವಾ ಉಚಿತ ಸೇವೆಗಳಿಗೆ ಪ್ರತಿಯಾಗಿ, ಕಂಪನಿಗಾಗಿ ಅಥವಾ ವ್ಯಾಪಾರಕ್ಕಾಗಿ ರಚಿಸಲಾದ ವೀಡಿಯೊಗಳು.
  • ಆ ಕಂಪನಿ ಅಥವಾ ವ್ಯಾಪಾರದ ಬ್ರ್ಯಾಂಡ್, ಸಂದೇಶ ಅಥವಾ ಉತ್ಪನ್ನವನ್ನು ನೇರವಾಗಿ ಕಂಟೆಂಟ್‍ನಲ್ಲಿ ಸಂಯೋಜಿಸಲಾಗಿರುವ ವೀಡಿಯೊಗಳು. ಕಂಪನಿಯು ವೀಡಿಯೊವನ್ನು ರಚಿಸಲು ರಚನೆಕಾರರಿಗೆ ಹಣ ಅಥವಾ ಉಚಿತ ಉತ್ಪನ್ನಗಳನ್ನು ನೀಡಿರುವುದು.

ಅನುಮೋದನೆಗಳು: ರಚನೆಕಾರರು ಅಥವಾ ಅನುಮೋದನೆ ನೀಡುವ ಪಾರ್ಟಿ ಪರವಾಗಿ ಅಭಿಪ್ರಾಯಗಳು, ನಂಬಿಕೆಗಳು ಅಥವಾ ಅನುಭವಗಳನ್ನು ಪ್ರತಿಬಿಂಬಿಸುವ ಸಂದೇಶಗಳನ್ನು ತಿಳಿಸುವ ಜಾಹೀರಾತುದಾರರು ಅಥವಾ ವ್ಯಾಪಾರಿಗಳಿಗಾಗಿ ರಚಿಸಿದ ವೀಡಿಯೊಗಳು.

ಪ್ರಾಯೋಜಕತ್ವಗಳು: ಕಂಟೆಂಟ್‍ನಲ್ಲಿ ನೇರವಾಗಿ ಬ್ರ್ಯಾಂಡ್, ಸಂದೇಶ ಅಥವಾ ಉತ್ಪನ್ನವನ್ನು ಒಳಗೊಂಡಿರದ, ಕಂಪನಿಯಿಂದ ಸಂಪೂರ್ಣವಾಗಿ ಅಥವಾ ಭಾಗಶಃ ಹಣ ಪಡೆದಿರುವ ವೀಡಿಯೊಗಳು. ಬದಲಾಗಿ, ಸಂಕ್ಷಿಪ್ತ ವೀಡಿಯೊ ಮಧ್ಯಂತರದಲ್ಲಿ, ಬ್ರ್ಯಾಂಡ್, ಸಂದೇಶ ಅಥವಾ ಪ್ರಾಯೋಜಿತ ಉತ್ಪನ್ನವನ್ನು ಪ್ರಚಾರ ಮಾಡಬಹುದು. ಉದಾಹರಣೆಗೆ, ರಚನೆಕಾರರು ಅವರು ಪೇಂಟಿಂಗ್ ಅನ್ನು ಚಿತ್ರಿಸುವ ವೀಡಿಯೊವನ್ನು ರೆಕಾರ್ಡ್ ಮಾಡಬಹುದು, ಆದರೆ ಅವರು ತಮ್ಮ ವೀಡಿಯೊ ಪ್ರಾಯೋಜಕರ ಇತ್ತೀಚಿನ ಉತ್ಪನ್ನವನ್ನು ಪ್ರಚಾರ ಮಾಡಲು ತ್ವರಿತ ವಿರಾಮವನ್ನು ತೆಗೆದುಕೊಳ್ಳಬಹುದು.

ಪಾವತಿಸಿದ ಉತ್ಪನ್ನ ಇರಿಸುವಿಕೆಗಳು, ಪ್ರಾಯೋಜಕತ್ವಗಳು ಮತ್ತು ಅನುಮೋದನೆಗಳ ಬಗ್ಗೆ ನಿಮ್ಮ ಮಗುವಿಕೆ ತಿಳಿಸಿಕೊಡಿ.

ರಚನೆಕಾರರು ತಮ್ಮ ವೀಡಿಯೊಗಳಲ್ಲಿ ಮಾಡುವ ಪ್ರಚಾರಕ್ಕೆ ಪ್ರತಿಯಾಗಿ ಸರಕುಗಳು ಅಥವಾ ಸೇವೆಗಳನ್ನು ಪಡೆಯಬಹುದು ಎಂಬುದನ್ನು ಮಕ್ಕಳು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ. ಪಾವತಿ ಪ್ರಚಾರ ಕುರಿತು ನಿಮ್ಮ ಮಗುವಿಗೆ ತಿಳುವಳಿಕೆ ಮೂಡಿಸಲು ಕೆಲವು ಸಲಹೆಗಳು ಮತ್ತು ತಂತ್ರಗಳು ಇಲ್ಲಿವೆ:
  • ನಿಮ್ಮ ಮಕ್ಕಳೊಂದಿಗೆ ಪಾವತಿ ಪ್ರಚಾರದ ಬಗ್ಗೆ ಚರ್ಚಿಸಿ ಮತ್ತು ವೀಡಿಯೊಗಳಲ್ಲಿ ಪಾವತಿ ಪ್ರಚಾರ ಸೂಚಕವನ್ನು ಗುರುತಿಸಲು ಅವರಿಗೆ ಕಲಿಸಿ. (). ಈ ಚಿಕ್ಕ ವೀಡಿಯೊ ನೋಡಿ ಮತ್ತು ವೀಡಿಯೊವು ಪಾವತಿಸಿದ ಪ್ರಚಾರವನ್ನು ಒಳಗೊಂಡಿದ್ದರೆ ಅದನ್ನು ಗುರುತಿಸುವುದು ಹೇಗೆ ಎಂದು ನಿಮ್ಮ ಮಗುವನ್ನು ಕೇಳಿ.
  • ನಿಮ್ಮ ಮಕ್ಕಳ ನೆಚ್ಚಿನ ರಚನೆಕಾರರ ಬಗ್ಗೆ ಚರ್ಚಿಸಿ ಮತ್ತು ಪಾವತಿಸಿದ ಉತ್ಪನ್ನ ಇರಿಸುವಿಕೆ ಮೂಲಕ ಈ ರಚನೆಕಾರರು ತಮ್ಮ ಚಾನಲ್‍ಗೆ ಹೇಗೆ ಬೆಂಬಲಿಸುತ್ತಾರೆ ಎಂದು ವಿವರಿಸಿ. ಹಲವಾರು ರಚನೆಕಾರರಿಗೆ, YouTube ವೀಡಿಯೊ ರಚಿಸುವುದು ಅವರ ಪೂರ್ಣಾವಧಿ ಕೆಲಸ.
  • ನಿಮ್ಮ ಮಕ್ಕಳಿಗೆ “ಪ್ರಾಯೋಜಕರು,” “ಪಾಲುದಾರರು” ಅಥವಾ “#ಜಾಹೀರಾತು" ರೀತಿಯ ಪದಗಳನ್ನು ಹುಡುಕಲು ನಿಮ್ಮ ಮಕ್ಕಳಿಗೆ ಕಲಿಸಿ.

ನಿಮ್ಮ ಮಗುವಿಗೆ YouTube ಅನ್ನು ಅನ್ವೇಷಿಸಲು ಹೇಗೆ ಸಹಾಯ ಮಾಡುವುದು ಎಂಬುದರ ಕುರಿತು ಹೆಚ್ಚಿನ ಸಲಹೆಗಳಿಗಾಗಿ, ನಮ್ಮ ಕುಟುಂಬ ಗೈಡ್ ಅನ್ನು ಡೌನ್‍ಲೋಡ್ ಮಾಡಿ ಮತ್ತು ಪರಿಶೀಲಿಸಿ.

ಪಾವತಿಸಿದ ಉತ್ಪನ್ನ ಇರಿಸುವಿಕೆ, ಪ್ರಾಯೋಜಕತ್ವ ಮತ್ತು ಅನುಮೋದನೆ ಕಾರ್ಯನೀತಿಗಳು

ಎಲ್ಲಾ ಪಾವತಿ ಪ್ರಚಾರಗಳು, ನಮ್ಮ ಜಾಹೀರಾತು ನೀತಿಗಳನ್ನು ಅನುಸರಿಸಬೇಕು, ಇದು ನಿರ್ದಿಷ್ಟ ವರ್ಗಗಳಲ್ಲಿ ಜಾಹೀರಾತನ್ನು ನಿಷೇಧಿಸುತ್ತದೆ. ರಚನೆಕಾರರು ಮತ್ತು ಅವರು ಸಹಯೋಗ ಹೊಂದಿರುವ ಬ್ರ್ಯಾಂಡ್‍ಗಳು, ತಮ್ಮ ಕಂಟೆಂಟ್‍ನಲ್ಲಿ ಪಾವತಿ ಪ್ರಚಾರವನ್ನು ಬಹಿರಂಗಪಡಿಸಲು ತಮ್ಮ ಸ್ಥಳೀಯ ಮತ್ತು ಕಾನೂನು ಕರ್ತವ್ಯಗಳನ್ನು ತಿಳಿದುಕೊಳ್ಳಲು ಮತ್ತು ಬದ್ಧವಾಗಿರಲು ಜವಾಬ್ದಾರರಾಗಿರುತ್ತಾರೆ. ಈ ಕೆಲವು ಹೊಣೆಗಾರಿಕೆಗಳನ್ನು ಯಾವಾಗ ಮತ್ತು ಹೇಗೆ ಹಂಚಿಕೊಳ್ಳಬೇಕು, ಹಾಗೆಯೇ ಅದನ್ನು ಯಾರಿಗೆ ಬಹಿರಂಗಪಡಿಸಬೇಕು ಎಂಬುದನ್ನು ಸೇರಿದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16444140218735543484
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false