ನಿಮ್ಮ ಚಾನಲ್‌ನ ಬ್ರ್ಯಾಂಡಿಂಗ್ ಅನ್ನು ನಿರ್ವಹಿಸಿ

ನಿಮ್ಮ ಪ್ರೊಫೈಲ್ ಚಿತ್ರ, ಚಾನಲ್ ಬ್ಯಾನರ್ ಮತ್ತು ವೀಡಿಯೊ ವಾಟರ್‌ಮಾರ್ಕ್ ಅನ್ನು ಅಪ್‌ಡೇಟ್ ಮಾಡುವ ಮೂಲಕ ನಿಮ್ಮ YouTube ಚಾನಲ್‌ನ ಗುರುತನ್ನು ಬ್ರ್ಯಾಂಡ್ ಮಾಡಿ.

ನಿಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿ

 YouTube Studio ದಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿ. ನಿಮ್ಮ ಪ್ರೊಫೈಲ್ ಚಿತ್ರ ಎಂಬುದು ನಿಮ್ಮ ಚಾನಲ್, ವೀಡಿಯೊಗಳು, ಮತ್ತು YouTube ನಾದ್ಯಂತ ಸಾರ್ವಜನಿಕವಾಗಿ ಹೊಣೆಯಾಗಿಸಬಹುದಾದ ಆ್ಯಕ್ಷನ್‌ಗಳಲ್ಲಿ ವೀಕ್ಷಕರಿಗೆ ತೋರಿಸಲಾಗುವ ಚಿತ್ರವಾಗಿದೆ.

After selecting 'Customization', The 'Branding' tab will be at the top.

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಕಸ್ಟಮೈಸೇಶನ್ ನಂತರ ಬ್ರ್ಯಾಂಡಿಂಗ್ ಎಂಬುದನ್ನು ಆಯ್ಕೆ ಮಾಡಿ.
  3. ಬದಲಾಯಿಸಿ ಎಂಬುದನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಕಂಪ್ಯೂಟರ್‌ನಿಂದ ಚಿತ್ರಣ ಅಥವಾ ಚಿತ್ರವನ್ನು ಆಯ್ಕೆಮಾಡಿ. ಪ್ರಿಸೆಟ್ ಬಣ್ಣಗಳನ್ನು ಬದಲಾಯಿಸಿ ಮತ್ತು ಚಿತ್ರಣದ ಕ್ರಾಪ್ ಅಥವಾ ನೀವು ಅಪ್‌ಲೋಡ್ ಮಾಡಿದ ಚಿತ್ರದ ಗಾತ್ರವನ್ನು ಬದಲಾಯಿಸಿ, ನಂತರ ಮುಗಿದಿದೆ ಎಂಬುದನ್ನು ಕ್ಲಿಕ್ ಮಾಡಿ.
  4. ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ. ನಿಮ್ಮ ಪ್ರೊಫೈಲ್ ಚಿತ್ರ YouTube ನಾದ್ಯಂತ ಅಪ್‌ಡೇಟ್ ಆಗಲು ಕೆಲವು ನಿಮಿಷಗಳಷ್ಟು ಸಮಯ ಬೇಕಾಗಬಹುದು.

ಸಹಾಯಕ ತಂತ್ರಜ್ಞಾನ ಅಥವಾ ಕೀಬೋರ್ಡ್ ಮೂಲಕ ನಿಮ್ಮ ಫೋಟೋವನ್ನು ಕ್ರಾಪ್ ಮಾಡಿ

ನಿಮ್ಮ ಫೋಟೋವನ್ನು ಒಂದು ಮೂಲೆಯಿಂದ ಕ್ರಾಪ್ ಮಾಡಿ

  1. ನಿಮ್ಮ ಫೋಟೋದ ಮೂಲೆಯನ್ನು ಆಯ್ಕೆಮಾಡಲು ನ್ಯಾವಿಗೇಟ್ ಮಾಡಿ.
  2. ಫೋಟೋವನ್ನು ಕ್ರಾಪ್ ಮಾಡಲು ಬಾಣದ ಕೀಗಳನ್ನು ಬಳಸಿ.

ಇಡೀ ಕ್ರಾಪ್ ಸ್ಕ್ವೇರ್ ಅನ್ನು ಸರಿಸಿ

  1. ಇಡೀ ಕ್ರಾಪ್ ಸ್ಕ್ವೇರ್ ಅನ್ನು ಆಯ್ಕೆ ಮಾಡಲು ನ್ಯಾವಿಗೇಟ್ ಮಾಡಿ.
  2. ಕ್ರಾಪ್ ಸ್ಕ್ವೇರ್‌ನ ಸ್ಥಳವನ್ನು ಬದಲಾಯಿಸಲು ಬಾಣದ ಕೀಗಳನ್ನು ಬಳಸಿ.

ಪ್ರೊಫೈಲ್ ಚಿತ್ರದ ಕುರಿತಾದ ಮಾರ್ಗಸೂಚಿಗಳು

ನಿಮ್ಮ ಪ್ರೊಫೈಲ್ ಚಿತ್ರವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಬೇಕು ಮತ್ತು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:

  • JPG, GIF, BMP, ಅಥವಾ PNG ಫೈಲ್ (ಆ್ಯನಿಮೇಟ್ ಮಾಡಲಾದ GIF ಗಳು ಇರಬಾರದು)
  • ಚಿತ್ರದ ಗಾತ್ರವು 15 MB ಗಿಂತ ಹೆಚ್ಚಿರಬಾರದು.
  • 98 X 98 ಪಿಕ್ಸೆಲ್‌ನಲ್ಲಿ ರೆಂಡರ್ ಆಗುವ ಚಿತ್ರ.

YouTube ರಚನೆಕಾರರು

ನಿಮ್ಮ ಬ್ಯಾನರ್ ಚಿತ್ರವು, ನಿಮ್ಮ YouTube ಪುಟದ ಮೇಲ್ಭಾಗದಲ್ಲಿ ಹಿನ್ನೆಲೆಯಾಗಿ ಕಾಣಿಸಿಕೊಳ್ಳುತ್ತದೆ.
  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಸ್ಟಮೈಸ್ ಮಾಡುವಿಕೆ ನಂತರ ಬ್ರ್ಯಾಂಡಿಂಗ್ ಎಂಬುದನ್ನು ಆಯ್ಕೆ ಮಾಡಿ.
  3. ಬದಲಾಯಿಸಿ ಎಂಬುದನ್ನು ಕ್ಲಿಕ್ ಮಾಡಿ ಮತ್ತು ಒಂದು ಚಿತ್ರವನ್ನು ಆಯ್ಕೆ ಮಾಡಿ. ಬದಲಾವಣೆಗಳನ್ನು ಮಾಡಲು, ಪ್ರಿವ್ಯೂ ಅನ್ನು ಆಯ್ಕೆ ಮಾಡಿ ಮತ್ತು ಕ್ರಾಪ್ ಅನ್ನು ಬದಲಾಯಿಸಿ, ನಂತರ ಮುಗಿದಿದೆ ಎಂಬುದನ್ನು ಕ್ಲಿಕ್ ಮಾಡಿ.
  4. ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.
ಸೂಚನೆ: ಒಂದೇ ಬ್ಯಾನರ್ ಚಿತ್ರವನ್ನು ಕಂಪ್ಯೂಟರ್, ಮೊಬೈಲ್ ಮತ್ತು ಟಿವಿ ಡಿಸ್‌ಪ್ಲೇಗಳಲ್ಲಿ ಬಳಸಲಾಗುತ್ತದೆ, ಆದರೆ ಇದು ನಿಮ್ಮ ಸಾಧನವನ್ನು ಆಧರಿಸಿ ವಿಭಿನ್ನ ರೀತಿಯಲ್ಲಿ ತೋರಿಸುತ್ತದೆ.

ಅಧಿಕೃತ ಕಲಾವಿದರ ಚಾನೆಲ್‌ಗಳು

ನಿಮ್ಮ ಬ್ಯಾನರ್ ಚಿತ್ರವನ್ನು ಕಂಪ್ಯೂಟರ್ ಮತ್ತು ಮೊಬೈಲ್ ಸಾಧನಗಳಲ್ಲಿ ಮಾತ್ರ ಬಳಸಲಾಗುತ್ತದೆ. ಆ ಬ್ಯಾನರ್ ಅನ್ನು ಅಪ್‌ಡೇಟ್ ಮಾಡಲು, ಮೇಲಿರುವ YouTube ರಚನೆಕಾರರ ಸೂಚನೆಗಳನ್ನು ಅನುಸರಿಸಿ. 

ಟಿವಿ ಮತ್ತು YouTube Music ನಲ್ಲಿ ನೀವು ಹೊಂದಿರುವ ಬ್ಯಾನರ್ ಅನ್ನು ಅಪ್‌ಡೇಟ್ ಮಾಡಲು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಪ್ರೊಫೈಲ್ ಎಂಬುದನ್ನು ಆಯ್ಕೆಮಾಡಿ.
  3. ಪ್ರೊಫೈಲ್ ಫೋಟೋದ ಪಕ್ಕದಲ್ಲಿ ಅನ್ನು ಕ್ಲಿಕ್ ಮಾಡಿ ಮತ್ತು ಚಿತ್ರವನ್ನು ಆಯ್ಕೆಮಾಡಿ. ಚಿತ್ರವೊಂದರಲ್ಲಿ ಬದಲಾವಣೆಗಳನ್ನು ಮಾಡಲು,
    • ಪ್ರಿವ್ಯೂ ಅನ್ನು ಆಯ್ಕೆಮಾಡಿ ಮತ್ತು ಚಿತ್ರವನ್ನು ಎಡಿಟ್ ಮಾಡಿ.
    • ಮುಗಿದಿದೆ ಅನ್ನು ಕ್ಲಿಕ್ ಮಾಡಿ.
  4. ಪುಟದ ಮೇಲಿನ ಬಲಭಾಗದಲ್ಲಿರುವ ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ಬ್ಯಾನರ್ ಚಿತ್ರದ ಕುರಿತು ಮಾರ್ಗಸೂಚಿಗಳು

ನಿಮ್ಮ ಬ್ಯಾನರ್ ಚಿತ್ರವು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:

  • ಅಪ್‌ಲೋಡ್‌ಗಾಗಿ ಕನಿಷ್ಠ ಅಳತೆ: 2560 x 1440 ಪಿಕ್ಸೆಲ್ ಜೊತೆಗೆ ದೃಶ್ಯಾನುಪಾತ 16:9.
  • ಕನಿಷ್ಠ ಅಳತೆಯಲ್ಲಿ, ಪಠ್ಯ ಮತ್ತು ಲೋಗೋಗಳಿಗಾಗಿ ಸುರಕ್ಷಿತ ಪ್ರದೇಶ: 1235 x 338 ಪಿಕ್ಸೆಲ್.
  • ದೊಡ್ಡ ಸಾಧನಗಳಲ್ಲಿ ಚಿತ್ರಗಳು ಸಂಪೂರ್ಣ ಸ್ಕ್ರೀನ್ ಅನ್ನು ಆವರಿಸುತ್ತವೆ ಆದರೆ ಕೆಲವು ವೀಕ್ಷಣೆಗಳು ಅಥವಾ ಸಾಧನಗಳಲ್ಲಿ ಇವು ಕ್ರಾಪ್ ಆಗಬಹುದು.
  • ಯಾವುದೇ ಹೆಚ್ಚುವರಿ ಫೈಲ್ ಅಲಂಕಾರಗಳನ್ನು (ಉದಾ., ನೆರಳುಗಳು, ಬಾರ್ಡರ್‌ಗಳು ಮತ್ತು ಫ್ರೇಮ್‌ಗಳು) ಸೇರಿಸಬೇಡಿ.
  • ಫೈಲ್ ಗಾತ್ರ: 6 MB ಅಥವಾ ಅದಕ್ಕಿಂತ ಕಡಿಮೆ.

ಚಿತ್ರಗಳನ್ನು ಮರುಗಾತ್ರಗೊಳಿಸುವುದು ಹೇಗೆ

ಚಿತ್ರಗಳನ್ನು ಮರುಗಾತ್ರಗೊಳಿಸಲು, ನಿಮ್ಮ ಕಂಪ್ಯೂಟರ್‌ನ ಇಮೇಜ್ ಎಡಿಟರ್ ಅಥವಾ ಆನ್‌ಲೈನ್ ಇಮೇಜ್ ರೀಸೈಝರ್ ಅನ್ನು ಬಳಸಬಹುದು. ಉದಾಹರಣೆಗೆ, ನೀವು Apple ಕಂಪ್ಯೂಟರ್‌ನಲ್ಲಿ ಪ್ರಿವ್ಯೂ ಅಥವಾ Windows ನಲ್ಲಿ Microsoft Photos ಅನ್ನು ಬಳಸಬಹುದು.

ನಿಮ್ಮ ವೀಡಿಯೊ ವಾಟರ್‌ಮಾರ್ಕ್ ಅನ್ನು ಸೇರಿಸಿ

ನಿಮ್ಮ ವೀಡಿಯೊದಲ್ಲಿ ವೀಡಿಯೊ ವಾಟರ್‌ಮಾರ್ಕ್ ಅನ್ನು ಸೇರಿಸುವ ಮೂಲಕ ನಿಮ್ಮ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಲು ನೀವು ವೀಕ್ಷಕರನ್ನು ಪ್ರೋತ್ಸಾಹಿಸಬಹುದು. ನೀವು ವೀಡಿಯೊ ವಾಟರ್‌ಮಾರ್ಕ್ ಅನ್ನು ಸೇರಿಸಿದಾಗ, ವೀಕ್ಷಕರು YouTube ಅನ್ನು ಕಂಪ್ಯೂಟರ್‌ನಲ್ಲಿ ಬಳಸುವಾಗ ನಿಮ್ಮ ಚಾನಲ್‌ಗೆ ನೇರವಾಗಿ ಸಬ್‌ಸ್ಕ್ರೈಬ್ ಮಾಡಬಹುದು.
  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಸ್ಟಮೈಸ್ ಮಾಡುವಿಕೆ ನಂತರ ಬ್ರ್ಯಾಂಡಿಂಗ್ ಎಂಬುದನ್ನು ಆಯ್ಕೆ ಮಾಡಿ.
  3. ನಿಮ್ಮ ಡಿಸ್‌ಪ್ಲೇ ಸಮಯವನ್ನು ಆಯ್ಕೆ ಮಾಡಿ:
    • ವೀಡಿಯೊದ ಮುಕ್ತಾಯ: ವೀಡಿಯೊ ವಾಟರ್‌ಮಾರ್ಕ್, ವೀಡಿಯೊದ ಕೊನೆಯ 15 ಸೆಕೆಂಡ್‌ಗಳಲ್ಲಿ ಕಾಣಿಸಿಕೊಳ್ಳುತ್ತದೆ.
    • ಕಸ್ಟಮ್ ಪ್ರಾರಂಭ ಸಮಯ: ವೀಡಿಯೊ ವಾಟರ್‌ಮಾರ್ಕ್, ನೀವು ಆಯ್ಕೆ ಮಾಡಿದ ಸಮಯದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.
    • ಸಂಪೂರ್ಣ ವೀಡಿಯೊ: ವೀಡಿಯೊ ವಾಟರ್‌ಮಾರ್ಕ್, ಸಂಪೂರ್ಣ ವೀಡಿಯೊದಾದ್ಯಂತ ಕಾಣಿಸಿಕೊಳ್ಳುತ್ತದೆ.
  4. ಬದಲಾಯಿಸಿ ಎಂಬುದನ್ನು ಕ್ಲಿಕ್ ಮಾಡಿ ಮತ್ತು ಒಂದು ಚಿತ್ರವನ್ನು ಆಯ್ಕೆ ಮಾಡಿ. ನಿಮ್ಮ ಚಿತ್ರದ ಗಾತ್ರವನ್ನು ಬದಲಾಯಿಸಿ, ನಂತರ ಮುಗಿದಿದೆ ಎಂಬುದನ್ನು ಕ್ಲಿಕ್ ಮಾಡಿ.
  5. ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.
ಗಮನಿಸಿ: ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಲಾದ ವೀಡಿಯೊಗಳಲ್ಲಿ ವೀಡಿಯೊ ವಾಟರ್‌ಮಾರ್ಕ್‌ಗಳು ಲಭ್ಯವಿರುವುದಿಲ್ಲ. ನೀವು ಈ ಹಿಂದೆ ವೀಡಿಯೊ ವಾಟರ್‌ಮಾರ್ಕ್ ಅನ್ನು ಸೇರಿಸಿದ್ದೀರಿ, ಆದರೆ ಇದೀಗ ನಿಮ್ಮ ವೀಡಿಯೊವನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿದ್ದರೆ, ವೀಕ್ಷಕರಿಗೆ ವಾಟರ್‌ಮಾರ್ಕ್ ಕಾಣಿಸುವುದಿಲ್ಲ.

ವೀಡಿಯೊ ವಾಟರ್‌ಮಾರ್ಕ್ ಕುರಿತು ಮಾರ್ಗಸೂಚಿಗಳು

ನಿಮ್ಮ ವೀಡಿಯೊ ವಾಟರ್‌ಮಾರ್ಕ್ ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:

  • ಕನಿಷ್ಠ 150x150 ಪಿಕ್ಸೆಲ್‌ಗಳು.
  • 1 MB ಗಿಂತ ಕಡಿಮೆ ಗಾತ್ರ ಹೊಂದಿರುವ ಚೌಕಾಕಾರದ ಚಿತ್ರ.

ಲಭ್ಯತೆ

ಚಾನಲ್ ವಾಟರ್‌ಮಾರ್ಕ್, ಕಂಪ್ಯೂಟರ್‌ಗಳಲ್ಲಿ ಮತ್ತು ಮೊಬೈಲ್ ಸಾಧನಗಳಲ್ಲಿ ಲ್ಯಾಂಡ್‌ಸ್ಕೇಪ್ ವೀಕ್ಷಣೆಯಲ್ಲಿ ಲಭ್ಯವಿರುತ್ತದೆ (ಮೊಬೈಲ್‌ನಲ್ಲಿ ಕ್ಲಿಕ್ ಮಾಡಲು ಸಾಧ್ಯವಾಗುವುದಿಲ್ಲ). ಚಾನಲ್ ವಾಟರ್‌ಮಾರ್ಕ್‌ಗಳು, ಕಸ್ಟಮ್ YouTube chromeless ಪ್ಲೇಯರ್‌ಗಳಲ್ಲಿ ಅಥವಾ Adobe Flash ನಲ್ಲಿ ಕಾಣಿಸಿಕೊಳ್ಳುವುದಿಲ್ಲ.

ವೀಡಿಯೊ ವಾಟರ್‌ಮಾರ್ಕ್ ಮೆಟ್ರಿಕ್‌ಗಳು

YouTube Analytic ನಲ್ಲಿ ಸಬ್‌ಸ್ಕ್ರಿಪ್ಶನ್ ಮೂಲ ವರದಿಯಲ್ಲಿ ನೀವು ಮೆಟ್ರಿಕ್‌ಗಳನ್ನು ಪಡೆದುಕೊಳ್ಳಬಹುದು.

ನಿಮ್ಮ ಚಾನಲ್ ಬ್ರ್ಯಾಂಡಿಂಗ್ ಅನ್ನು ನಿರ್ವಹಿಸುವುದು ಹೇಗೆ ಎಂದು ವೀಕ್ಷಿಸಿ

ನಿಮ್ಮ ಪ್ರೊಫೈಲ್ ಚಿತ್ರ, ಚಾನಲ್ ಬ್ಯಾನರ್ ಹಾಗೂ ವೀಡಿಯೊ ವಾಟರ್‌ಮಾರ್ಕ್ ಅನ್ನು ಅಪ್‌ಡೇಟ್ ಮಾಡುವುದು ಹೇಗೆ ಎಂಬ ಕುರಿತು, YouTube Creators ಚಾನಲ್‌ನಿಂದ ಈ ಕೆಳಗಿನ ವೀಡಿಯೊವನ್ನು ನೋಡಿ.

Customize Your Channel Branding & Layout: Add a Profile Picture, Banner, Trailer, Sections, & more!

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4056445077550891568
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false