ನಿಮ್ಮ ಚಾನಲ್‌ನ ಬ್ರ್ಯಾಂಡಿಂಗ್ ಅನ್ನು ನಿರ್ವಹಿಸಿ

ನಿಮ್ಮ ಪ್ರೊಫೈಲ್ ಚಿತ್ರ, ಚಾನಲ್ ಬ್ಯಾನರ್ ಮತ್ತು ವೀಡಿಯೊ ವಾಟರ್‌ಮಾರ್ಕ್ ಅನ್ನು ಅಪ್‌ಡೇಟ್ ಮಾಡುವ ಮೂಲಕ ನಿಮ್ಮ YouTube ಚಾನಲ್‌ನ ಗುರುತನ್ನು ಬ್ರ್ಯಾಂಡ್ ಮಾಡಿ.

ನಿಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿ

ನಿಮ್ಮ ಪ್ರೊಫೈಲ್ ಚಿತ್ರ ಎಂಬುದು ನಿಮ್ಮ ಚಾನಲ್‌ನ ವೀಕ್ಷಕರಿಗೆ ಮತ್ತು YouTube ನಾದ್ಯಂತ ವೀಡಿಯೊಗಳಲ್ಲಿ ತೋರಿಸಲಾಗುವ ಚಿತ್ರವಾಗಿದೆ.

YouTube iPhone ಹಾಗೂ iPad ಆ್ಯಪ್

  1. ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ .
  2. ನಿಮ್ಮ ಚಾನಲ್ ಅನ್ನು ಟ್ಯಾಪ್ ಮಾಡಿ.
  3. ಚಾನಲ್ ಅನ್ನು ಎಡಿಟ್ ಮಾಡಿ  ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.
  4. ನೀವು ಫೋಟೋ ತೆಗೆಯಬಹುದು ಅಥವಾ ಅಪ್‌ಲೋಡ್ ಮಾಡಲು ಫೋಟೋವನ್ನು ಆಯ್ಕೆ ಮಾಡಬಹುದು.
  5. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

iPhone ಹಾಗೂ iPad ಗಾಗಿ YouTube Studio ಆ್ಯಪ್

  1. ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ .
  2. ಚಾನಲ್ ಪ್ರೊಫೈಲ್ ಅನ್ನು ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.
  3. ನೀವು ಫೋಟೋ ತೆಗೆಯಬಹುದು ಅಥವಾ ಅಪ್‌ಲೋಡ್ ಮಾಡಲು ಫೋಟೋವನ್ನು ಆಯ್ಕೆ ಮಾಡಬಹುದು.
  4. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

ಪ್ರೊಫೈಲ್ ಚಿತ್ರದ ಕುರಿತಾದ ಮಾರ್ಗಸೂಚಿಗಳು

ನಿಮ್ಮ ಪ್ರೊಫೈಲ್ ಚಿತ್ರವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಬೇಕು ಮತ್ತು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:

  • JPG, GIF, BMP, ಅಥವಾ PNG ಫೈಲ್ (ಆ್ಯನಿಮೇಟ್ ಮಾಡಲಾದ GIF ಗಳು ಇರಬಾರದು).
  • 800 X 800 ಪಿಕ್ಸೆಲ್ ಚಿತ್ರ (ಶಿಫಾರಸು ಮಾಡಿರುವುದು).
  • 4 MB ಅಥವಾ ಅದಕ್ಕಿಂತ ಸಣ್ಣ ಗಾತ್ರದ ಚೌಕಾಕಾರದ ಅಥವಾ ವೃತ್ತಾಕಾರದ ಚಿತ್ರ.

ನಿಮ್ಮ ಬ್ಯಾನರ್ ಚಿತ್ರವು, ನಿಮ್ಮ YouTube ಪುಟದ ಮೇಲ್ಭಾಗದಲ್ಲಿ ಹಿನ್ನೆಲೆಯಾಗಿ ಕಾಣಿಸಿಕೊಳ್ಳುತ್ತದೆ.

YouTube iPhone ಹಾಗೂ iPad ಆ್ಯಪ್

  1. ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ .
  2. ನಿಮ್ಮ ಚಾನಲ್ ಅನ್ನು ಟ್ಯಾಪ್ ಮಾಡಿ.
  3. ಚಾನಲ್ ಅನ್ನು ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಬಲಬದಿಯಲ್ಲಿರುವ ನಿಮ್ಮ ಬ್ಯಾನರ್ ಚಿತ್ರವನ್ನು ಟ್ಯಾಪ್ ಮಾಡಿ.
  4. ನೀವು ಫೋಟೋ ತೆಗೆಯಬಹುದು ಅಥವಾ ಅಪ್‌ಲೋಡ್ ಮಾಡಲು ಫೋಟೋವನ್ನು ಆಯ್ಕೆ ಮಾಡಬಹುದು.
  5. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

iPhone ಹಾಗೂ iPad ಗಾಗಿ YouTube Studio ಆ್ಯಪ್

  1. ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ .
  2. ಚಾನಲ್ ಪ್ರೊಫೈಲ್ ಅನ್ನು ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಬ್ಯಾನರ್ ಚಿತ್ರವನ್ನು ಟ್ಯಾಪ್ ಮಾಡಿ.
  3. ನೀವು ಫೋಟೋ ತೆಗೆಯಬಹುದು ಅಥವಾ ಅಪ್‌ಲೋಡ್ ಮಾಡಲು ಫೋಟೋವನ್ನು ಆಯ್ಕೆ ಮಾಡಬಹುದು.
  4. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

ಬ್ಯಾನರ್ ಚಿತ್ರದ ಕುರಿತು ಮಾರ್ಗಸೂಚಿಗಳು

ನಿಮ್ಮ ಬ್ಯಾನರ್ ಚಿತ್ರವು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:

  • ಅಪ್‌ಲೋಡ್‌ಗಾಗಿ ಕನಿಷ್ಠ ಅಳತೆ: 2560 x 1440 ಪಿಕ್ಸೆಲ್ ಜೊತೆಗೆ ದೃಶ್ಯಾನುಪಾತ 16:9.
  • ಕನಿಷ್ಠ ಅಳತೆಯಲ್ಲಿ, ಪಠ್ಯ ಮತ್ತು ಲೋಗೋಗಳಿಗಾಗಿ ಸುರಕ್ಷಿತ ಪ್ರದೇಶ: 1235 x 338 ಪಿಕ್ಸೆಲ್.
  • ದೊಡ್ಡ ಸಾಧನಗಳಲ್ಲಿ ಚಿತ್ರಗಳು ಸಂಪೂರ್ಣ ಸ್ಕ್ರೀನ್ ಅನ್ನು ಆವರಿಸುತ್ತವೆ ಆದರೆ ಕೆಲವು ವೀಕ್ಷಣೆಗಳು ಅಥವಾ ಸಾಧನಗಳಲ್ಲಿ ಇವು ಕ್ರಾಪ್ ಆಗಬಹುದು.
  • ಯಾವುದೇ ಹೆಚ್ಚುವರಿ ಫೈಲ್ ಅಲಂಕಾರಗಳನ್ನು (ಉದಾ., ನೆರಳುಗಳು, ಬಾರ್ಡರ್‌ಗಳು ಮತ್ತು ಫ್ರೇಮ್‌ಗಳು) ಸೇರಿಸಬೇಡಿ.
  • ಫೈಲ್ ಗಾತ್ರ: 6 MB ಅಥವಾ ಅದಕ್ಕಿಂತ ಕಡಿಮೆ.

ಚಿತ್ರಗಳನ್ನು ಮರುಗಾತ್ರಗೊಳಿಸುವುದು ಹೇಗೆ

ಚಿತ್ರಗಳನ್ನು ಮರುಗಾತ್ರಗೊಳಿಸಲು, ನಿಮ್ಮ ಕಂಪ್ಯೂಟರ್‌ನ ಇಮೇಜ್ ಎಡಿಟರ್ ಅಥವಾ ಆನ್‌ಲೈನ್ ಇಮೇಜ್ ರೀಸೈಝರ್ ಅನ್ನು ಬಳಸಬಹುದು. ಉದಾಹರಣೆಗೆ, ನೀವು Apple ಕಂಪ್ಯೂಟರ್‌ನಲ್ಲಿ ಪ್ರಿವ್ಯೂ ಅಥವಾ Windows ನಲ್ಲಿ Microsoft Photos ಅನ್ನು ಬಳಸಬಹುದು.

ನಿಮ್ಮ ವೀಡಿಯೊ ವಾಟರ್‌ಮಾರ್ಕ್ ಅನ್ನು ಸೇರಿಸಿ

ಈ ಸೆಟ್ಟಿಂಗ್ ಕಂಪ್ಯೂಟರ್‌ನಲ್ಲಿ ಲಭ್ಯವಿದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14793166231122496336
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false