RTMPS ಬಳಸಿಕೊಂಡು ನಿಮ್ಮ ಸ್ಟ್ರೀಮ್ ಅನ್ನು ಎನ್‌ಕ್ರಿಪ್ಟ್ ಮಾಡಿ

ಜನಪ್ರಿಯ RTMP ಸ್ಟ್ರೀಮಿಂಗ್ ವೀಡಿಯೊ ಪ್ರೊಟೊಕಾಲ್‌ನ ಸುಭದ್ರ ವಿಸ್ತರಣೆಯಾಗಿರುವ RTMPS ಅನ್ನು ಬಳಸಿಕೊಂಡು, ನೀವು YouTube ಲೈವ್‌ಗೆ ಸ್ಟ್ರೀಮ್ ಮಾಡಬಹುದು. ಇದು ಟ್ರಾನ್ಸ್‌ಪೋರ್ಟ್ ಲೇಯರ್‌ನ ಭದ್ರತೆ (TLS/SSL) ಕನೆಕ್ಷನ್‌ನ ಮೇಲೆ RTMP ಆಗಿದೆ ಮತ್ತು ಎನ್‌ಕ್ರಿಪ್ಶನ್ ಅನ್ನು ಒದಗಿಸುತ್ತದೆ.

ನೀವು ಪ್ರಾರಂಭಿಸುವ ಮೊದಲು

ನಿಮ್ಮ ಎನ್‌ಕೋಡರ್, RTMPS ಅನ್ನು ಬೆಂಬಲಿಸುತ್ತದೆ ಮತ್ತು ನೀವು YouTube ನಲ್ಲಿ ಲೈವ್ ಸ್ಟ್ರೀಮ್ ಮಾಡುವುದಕ್ಕೆ ಸಂಬಂಧಪಟ್ಟ ಮೂಲ ಸಂಗತಿಗಳನ್ನು ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

1 YouTube RTMPS ಪ್ರಿಸೆಟ್ ಇದೆಯೇ ಎಂದು ನೋಡಿ

ನಿಮ್ಮ ಎನ್‌ಕೋಡರ್ ಅನ್ನು ಹೊಚ್ಚಹೊಸ ಆವೃತ್ತಿಗೆ ಅಪ್‌ಡೇಟ್ ಮಾಡಿ ಮತ್ತು YouTube RTMPS ಗಾಗಿ ಬಿಲ್ಟ್-ಇನ್ ಸೆಟ್ಟಿಂಗ್ ಇದೆಯೇ ಎಂದು ನೋಡಿ. 

YouTube RTMPS ಪ್ರಿಸೆಟ್ ಕಂಡುಬಂದರೆ, ಅದನ್ನು ಆಯ್ಕೆ ಮಾಡಿ. ನಿಮ್ಮ ಸ್ಟ್ರೀಮ್ ಕೀಯನ್ನು ಲೈವ್ ನಿಯಂತ್ರಣ ಕೊಠಡಿಯಿಂದಲೂ ನಮೂದಿಸಬೇಕಾಗಬಹುದು. ಇದೀಗ ನೀವು ಸ್ಟ್ರೀಮ್ ಮಾಡಲು ಸಿದ್ಧರಾಗಿದ್ದೀರಿ.

ನಿಮ್ಮ ಎನ್‌ಕೋಡರ್, YouTube RTMPS ಪ್ರಿಸೆಟ್ ಅನ್ನು ಹೊಂದಿರದಿದ್ದರೆ, “ಸರ್ವರ್ URL ಅನ್ನು ಸೆಟ್ ಮಾಡಿ” ಎಂಬಲ್ಲಿಗೆ ಹೋಗಿ.

2 ಸರ್ವರ್ URL ಅನ್ನು ಸೆಟ್ ಮಾಡಿ

ನೀವು ಲೈವ್ ನಿಯಂತ್ರಣ ಕೊಠಡಿಯಿಂದ RTMPS URL ಅನ್ನು ಪಡೆದುಕೊಳ್ಳಬಹುದು. ಗಮನಿಸಿ, ಇದು ನಿಮಗೆ ಈಗಲೂ ಡೀಫಾಲ್ಟ್ ಆಗಿ ಸಾಮಾನ್ಯ RTMP URL ಅನ್ನು ತೋರಿಸುತ್ತದೆ, ಆದ್ದರಿಂದ ನೀವು ಅದರ ಬದಲಿಗೆ RTMPS URL ಅನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.

  1. YouTube ಲೈವ್ ನಿಯಂತ್ರಣ ಕೊಠಡಿಯನ್ನು ತೆರೆಯಿರಿ.
  2. ಸ್ಟ್ರೀಮ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ ಅಥವಾ ಹೊಸ ಸ್ಟ್ರೀಮ್ ಅನ್ನು ನಿಗದಿಪಡಿಸಿ.
  3. “ಸ್ಟ್ರೀಮ್ ಸೆಟ್ಟಿಂಗ್‌ಗಳು” ಎಂಬುದರ ಅಡಿಯಲ್ಲಿ "ಸ್ಟ್ರೀಮ್ URL" ಫೀಲ್ಡ್‌ನಲ್ಲಿ, RTMPS URL ಅನ್ನು ತೋರಿಸಲು ಲಾಕ್ ಐಕಾನ್ ಅನ್ನು ಕ್ಲಿಕ್ ಮಾಡಿ.
  4. ಸ್ಟ್ರೀಮ್ URL ಅನ್ನು ನಕಲಿಸಿ.
  5. URL ಅನ್ನು ನಿಮ್ಮ ಎನ್‌ಕೋಡರ್‌ಗೆ ನಕಲಿಸಿ.
  6. ನಿಮ್ಮ YouTube ಸ್ಟ್ರೀಮ್ ಕೀಯನ್ನು ಲೈವ್ ನಿಯಂತ್ರಣ ಕೊಠಡಿಯಿಂದ ನಕಲಿಸಿ ಮತ್ತು ನಿಮ್ಮ ಎನ್‌ಕೋಡರ್‌ನಲ್ಲಿ ಅಂಟಿಸಿ.

ಸಮಸ್ಯೆ ನಿವಾರಣೆ

SSL ದೋಷಗಳು

"RTMP ಸರ್ವರ್ ಅಮಾನ್ಯವಾದ SSL ಪ್ರಮಾಣಪತ್ರವನ್ನು ಕಳುಹಿಸಿದೆ" ಎಂಬಂತಹ ದೋಷ ಕಂಡುಬಂದರೆ, ಇದನ್ನು ಪ್ರಯತ್ನಿಸಿ:

 

1 ಸರ್ವರ್ URL ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ

ಸರ್ವರ್ URL ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು “ಸರ್ವರ್ URL ಅನ್ನು ಸೆಟ್ ಮಾಡಿ” ಎಂಬಲ್ಲಿರುವ ಹಂತಗಳನ್ನು ಅನುಸರಿಸಿ. ಪ್ರೊಟೊಕಾಲ್ ಹಾಗೂ ಸರ್ವರ್ ಎರಡೂ rtmps, ಆಗಿರಬೇಕೇ ಹೊರತು ಕೇವಲ rtmp ಅಲ್ಲ.

 

2 ಪೋರ್ಟ್ ಸಂಖ್ಯೆಯನ್ನು ನಿರ್ದಿಷ್ಟಪಡಿಸಿ

URL ಸರಿಯಾಗಿದೆ ಎಂದು ಕಂಡುಬಂದರೂ ನೀವು SSL ದೋಷವನ್ನು ಪಡೆಯುತ್ತಿದ್ದೀರಿ ಎಂದಾದರೆ, URL ನಲ್ಲಿ ಪೋರ್ಟ್ 443 ಅನ್ನು ನಿರ್ದಿಷ್ಟಪಡಿಸಿ ನೋಡಿ. ಇಲ್ಲೊಂದು ಉದಾಹರಣೆಯನ್ನು ಕೊಡಲಾಗಿದೆ, ಆದರೆ ನೀವು ಲೈವ್ ನಿಯಂತ್ರಣ ಕೊಠಡಿಯಿಂದ ಪಡೆಯುವ ಸ್ಟ್ರೀಮ್ URL ಗೆ ಹೊಂದಿಕೆಯಾಗುವಂತೆ ಇದನ್ನು ಅಪ್‌ಡೇಟ್ ಮಾಡಬೇಕಾಗುತ್ತದೆ:

rtmps://exampleYouTubeServer.com:443/stream

 

ಅಥವಾ, ಕಾನ್ಫಿಗರೇಶನ್ ಆಯ್ಕೆಗಳಲ್ಲಿ ಪೋರ್ಟ್ ಸಂಖ್ಯೆಯನ್ನು ನಿರ್ದಿಷ್ಟಪಡಿಸಲು ನಿಮ್ಮ ಎನ್‍ಕೋಡರ್ ಅವಕಾಶ ನೀಡುತ್ತದೆ ಎಂದಾದರೆ, ಅಲ್ಲಿ 443 ಅನ್ನು ಬಳಸಿ.

ಕನೆಕ್ಷನ್‌ನ ಅವಧಿ ಮೀರಿದೆ

"ಸರ್ವರ್‌ಗೆ ಕನೆಕ್ಟ್ ಮಾಡಲು ವಿಫಲವಾಗಿದೆ — ಕನೆಕ್ಷನ್‌ನ ಅವಧಿ ಮೀರಿದೆ" ಎಂಬಂತಹ ದೋಷ ಕಂಡುಬಂದರೆ, ಇದನ್ನು ಪ್ರಯತ್ನಿಸಿ:

 

1 ಸರ್ವರ್ URL ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ

ಸರ್ವರ್ URL ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು “ಸರ್ವರ್ URL ಅನ್ನು ಸೆಟ್ ಮಾಡಿ” ಎಂಬಲ್ಲಿರುವ ಹಂತಗಳನ್ನು ಅನುಸರಿಸಿ.

 

ಪ್ರೊಟೊಕಾಲ್ ಹಾಗೂ ಸರ್ವರ್ ಎರಡೂ rtmps, ಆಗಿರಬೇಕೇ ಹೊರತು ಕೇವಲ rtmp ಅಲ್ಲ.

 

2 ನಿಮ್ಮ ಎನ್‌ಕೋಡರ್, RTMPS ಅನ್ನು ಬೆಂಬಲಿಸುತ್ತದೆಯೇ ಎಂದು ನೋಡಿ

ನೀವು ಇನ್ನೂ ಸಮಸ್ಯೆ ಹೊಂದಿದ್ದರೆ, ನಿಮ್ಮ ಎನ್‌ಕೋಡರ್ RTMPS ಅನ್ನು ಬೆಂಬಲಿಸದಿರಬಹುದು. ನಿಮ್ಮ ಎನ್‌ಕೋಡರ್‌ನ ಡಾಕ್ಯುಮೆಂಟೇಶನ್ ಅನ್ನು ಮರುಪರಿಶೀಲಿಸಿ.

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
18093032699993531614
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false