YouTube ಆ್ಯಪ್‌ಗಳಲ್ಲಿ ಗೌಪ್ಯತೆಯ ಮೂಲ ಸಂಗತಿಗಳನ್ನು ಅರ್ಥಮಾಡಿಕೊಳ್ಳುವುದು

ನಿಮ್ಮನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸುವುದು ನಮ್ಮ ಮುಖ್ಯ ಗುರಿಯಾಗಿದೆ - ನಾವು ಬಳಸುವ ಡೇಟಾದ ಕುರಿತು ನಿಮಗೆ ಆಯ್ಕೆ ಮತ್ತು ಅದರ ನಿಯಂತ್ರಣವನ್ನು ಒದಗಿಸುವಾಗ, ಪಾರದರ್ಶಕವಾಗಿರುವುದು ನಮ್ಮ ಬದ್ಧತೆಯಾಗಿದೆ.

ನೀವು Google ಹಾಗೂ YouTube ಗೆ ಒದಗಿಸುವ ಡೇಟಾವು ನಮ್ಮ ಸೇವೆಗಳನ್ನು ಬಳಸುವಾಗ ನಿಮ್ಮ ಅನುಭವವನ್ನು ಸುಧಾರಿಸಲು ನಮಗೆ ಸಹಾಯ ಮಾಡುತ್ತದೆ. YouTube ನಲ್ಲಿ ನಿಮ್ಮ ಡೇಟಾ ಅಥವಾ ನಿಮ್ಮ Google ಖಾತೆಗೆ ಭೇಟಿ ನೀಡುವ ಮೂಲಕ ನಿಮ್ಮ YouTube ಗೌಪ್ಯತೆಯ ಸೆಟ್ಟಿಂಗ್‌ಗಳನ್ನು ನೀವು ನಿಯಂತ್ರಿಸಬಹುದು.

ನಿಮ್ಮ ಖಾತೆಗೆ ಲಿಂಕ್ ಮಾಡಲಾದ ಡೇಟಾವನ್ನು YouTube ಹೇಗೆ ಬಳಸಬಹುದು

ನೀವು ವೀಕ್ಷಿಸಿರುವುದನ್ನು ನೆನಪಿಸುವುದು ಮತ್ತು ನಿಮಗೆ ಹೆಚ್ಚು ಸೂಕ್ತವಾದ ಶಿಫಾರಸುಗಳು ಹಾಗೂ ಹುಡುಕಾಟ ಫಲಿತಾಂಶಗಳನ್ನು ಒದಗಿಸುವುದರ ಹಾಗೆ ನಿಮ್ಮ ಅನುಭವವನ್ನು ಸುಧಾರಿಸಲು YouTube ನಿಮ್ಮ ಡೇಟಾವನ್ನು ಬಳಸುತ್ತದೆ. YouTube ಮತ್ತು ಇತರ Google ಸೇವೆಗಳಲ್ಲಿ ಆ್ಯಡ್‌ಗಳನ್ನು ವೈಯಕ್ತಿಕಗೊಳಿಸುವುದಕ್ಕಾಗಿಯೂ ಸಹ ನಿಮ್ಮ ಚಟುವಟಿಕೆ ಹಾಗೂ ಮಾಹಿತಿಯನ್ನು ಬಳಸಬಹುದಾಗಿದೆ. YouTube ನಲ್ಲಿ ನಿಮ್ಮ ಡೇಟಾ ಎಂಬಲ್ಲಿ ನಿಮ್ಮ ಚಟುವಟಿಕೆ ಡೇಟಾವನ್ನು ನೀವು ನಿರ್ವಹಿಸಬಹುದು ಅಥವಾ ಆಫ್ ಮಾಡಬಹುದು.

ಅಗ್ರಿಗೇಟ್ ಡೇಟಾವನ್ನು YouTube ಹೇಗೆ ಬಳಸುತ್ತದೆ

ನಮ್ಮ ಸೇವೆಗಳನ್ನು ನಿರಂತರವಾಗಿ ಸುಧಾರಿಸಲು, ಅನಾಮಧೇಯಗೊಳಿಸಲಾದ, ಅಗ್ರಿಗೇಟ್ YouTube ಡೇಟಾವನ್ನು, ಎಲ್ಲಾ ಬಳಕೆದಾರರ ಅನುಭವವನ್ನು ಸುಧಾರಿಸುವುದಕ್ಕಾಗಿ ಬಳಸುತ್ತೇವೆ. ಉದಾಹರಣೆಗೆ, YouTube ಆ್ಯಪ್‌ನ ಆರೋಗ್ಯವನ್ನು ಅರ್ಥಮಾಡಿಕೊಳ್ಳಲು, ಬಗ್‌ಗಳನ್ನು ಸರಿಪಡಿಸಲು ಮತ್ತು ವೇಗೆ ಹಾಗೂ ಕಾರ್ಯಕ್ಷಮತೆಯನ್ನು ಸುಧಾರಿಸಲು ನಾವು ಡಯಾಗ್ನಾಸ್ಟಿಕ್ಸ್ ಅನ್ನು ಬಳಸುತ್ತೇವೆ.

ನಿಮ್ಮ ಗೌಪ್ಯತೆ ಮತ್ತು ಸುರಕ್ಷತೆಯನ್ನು ನಿಯಂತ್ರಿಸಲು YouTube ನಿಮಗೆ ಹೇಗೆ ಸಹಾಯ ಮಾಡುತ್ತದೆ

YouTube ನಲ್ಲಿ ನಿಮ್ಮ ಗೌಪ್ಯತೆ ಮತ್ತು ಸುರಕ್ಷತೆಯ ನಿಯಂತ್ರಣವನ್ನು ನಿಮಗೆ ಕೊಡಲು ನಾವು ನಿರಂತರವಾಗಿ ಕೆಲಸ ಮಾಡುತ್ತೇವೆ — ಕ್ರಿಯಾಶೀಲ ಪರಿಕರಗಳೊಂದಿಗೆ ನಿಮ್ಮ ಸೆಟ್ಟಿಂಗ್‌ಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುವುದು ಅಥವಾ ಆ ಸೆಟ್ಟಿಂಗ್‌ಗಳನ್ನು ನಮ್ಮ ಉತ್ಪನ್ನಗಳಲ್ಲಿ ಬಳಸುವುದನ್ನು ಸುಲಭಗೊಳಿಸುವುದು ಇದರಲ್ಲಿ ಸೇರಿವೆ. ಉದಾಹರಣೆಗೆ, ನಿರ್ದಿಷ್ಟ ಸಮಯಾವಧಿಯ ಬಳಿಕ ನಿಮ್ಮ ಡೇಟಾವನ್ನು YouTube ಸ್ವಯಂಚಾಲಿತವಾಗಿ ಅಳಿಸುವ ಆಯ್ಕೆಯನ್ನು ನಿಮಗೆ ನೀಡುವ ಸ್ವಯಂ-ಅಳಿಸುವಿಕೆಯಂತಹ ಡೇಟಾ ಕಡಿಮೆಗೊಳಿಸುವಿಕೆ ಪರಿಕರಗಳನ್ನು ನಿಮಗೆ ಒದಗಿಸುತ್ತವೆ. YouTube ನಲ್ಲಿ ನಿಮ್ಮ ಡೇಟಾ ಎಂಬಲ್ಲಿ ನಿಮ್ಮ ಚಟುವಟಿಕೆ ಡೇಟಾವನ್ನು ನೀವು ನಿರ್ವಹಿಸಬಹುದು.

YouTube ನಿಮ್ಮ ಹುಡುಕಾಟ ಮತ್ತು ವೀಕ್ಷಣೆ ಇತಿಹಾಸವನ್ನು ಹೇಗೆ ಬಳಸಬಹುದು ಮತ್ತು ನೀವು ಅದನ್ನು ಹೇಗೆ ನಿಯಂತ್ರಿಸಬಹುದು

ನಿಮ್ಮ ಅನುಭವವನ್ನು ಸುಧಾರಿಸುವುದಕ್ಕಾಗಿ YouTube, ಹುಡುಕಾಟ ಮತ್ತು ವೀಕ್ಷಣೆ ಇತಿಹಾಸವನ್ನು ಬಳಸುತ್ತದೆ, ಉದಾಹರಣೆಗೆ ನೀವು ಇತ್ತೀಚೆಗೆ ವೀಕ್ಷಿಸಿದ ವೀಡಿಯೊಗಳನ್ನು ಹುಡುಕುವುದನ್ನು ಸುಲಭಗೊಳಿಸುವುದು ಅಥವಾ ನಿಮ್ಮ ಶಿಫಾರಸುಗಳನ್ನು ಸುಧಾರಿಸುವುದು. ನಿಮಗೆ ಸೂಕ್ತವಾದ ಮತ್ತು ಉಪಯುಕ್ತ ಆ್ಯಡ್‌ಗಳನ್ನು ತೋರಿಸುವುದಕ್ಕಾಗಿಯೂ ಹುಡುಕಾಟ ಮತ್ತು ವೀಕ್ಷಣೆ ಇತಿಹಾಸವನ್ನು ಬಳಸಬಹುದು. ಶಿಫಾರಸುಗಳು ಮತ್ತು ಆ್ಯಡ್‌ಗಳನ್ನು ನಿಮಗೆ ಇನ್ನೂ ಹೆಚ್ಚು ಸೂಕ್ತಗೊಳಿಸಲು YouTube ನಲ್ಲಿ ನಿಮ್ಮ ಡೇಟಾ ಎಂಬಲ್ಲಿ ನಿಮ್ಮ ಹುಡುಕಾಟ ಮತ್ತು ವೀಕ್ಷಣೆ ಇತಿಹಾಸದಿಂದ ಡೇಟಾವನ್ನು ನೀವು ವೀಕ್ಷಿಸಬಹುದು ಅಥವಾ ಅಳಿಸಬಹುದು. ನೀವು ಯಾವುದೇ ಗಮನಾರ್ಹವಾದ ಹಿಂದಿನ ವೀಕ್ಷಣೆ ಇತಿಹಾಸವನ್ನು ಹೊಂದಿಲ್ಲದಿದ್ದರೆ, YouTube ಹೋಮ್ ಪೇಜ್‌ನಲ್ಲಿ ಶಿಫಾರಸುಗಳಂತಹ ವೀಡಿಯೊ ಶಿಫಾರಸುಗಳನ್ನು ನೀಡಲು ನಿಮ್ಮ ವೀಕ್ಷಣೆ ಇತಿಹಾಸವನ್ನು ಅವಲಂಬಿಸುವ YouTube ಫೀಚರ್‌ಗಳನ್ನು ತೆಗೆದುಹಾಕಲಾಗುತ್ತದೆ.
ನಿಮ್ಮ Google ಖಾತೆಯಲ್ಲಿ ಯಾವ ಚಟುವಟಿಕೆ ಡೇಟಾವನ್ನು ಸೇವ್ ಮಾಡಬೇಕು ಎಂಬುದನ್ನು ನಿರ್ವಹಿಸಲು YouTube ನಲ್ಲಿ ನಿಮ್ಮ ಡೇಟಾ ಎಂಬಲ್ಲಿಗೆ ಭೇಟಿ ನೀಡಿ. ನಿಮ್ಮ YouTube ಚಟುವಟಿಕೆಯನ್ನು ನೀವು ಬ್ರೌಸ್ ಮಾಡಬಹುದು ಅಥವಾ ಅಳಿಸಬಹುದು.

YouTube ನಿಮ್ಮ ಸ್ಥಳದ ಡೇಟಾವನ್ನು ಹೇಗೆ ಬಳಸಬಹುದು

ನಿಮಗೆ ಸ್ಥಳೀಯವಾಗಿ ಸೂಕ್ತವಾದ ಕಂಟೆಂಟ್ ಶಿಫಾರಸುಗಳು ಹಾಗೂ ಹುಡುಕಾಟ ಫಲಿತಾಂಶಗಳನ್ನು ತೋರಿಸುವುದಕ್ಕಾಗಿ, ನಿಮ್ಮ IP ವಿಳಾಸದಿಂದ ಅಂದಾಜಿಸಲಾದ ನಿಮ್ಮ ಸಾಮಾನ್ಯ ಪ್ರದೇಶದಂತಹ ಸ್ಥಳ ಮಾಹಿತಿಯನ್ನು YouTube ಬಳಸಿಕೊಳ್ಳಬಹುದು. ಉದಾಹರಣೆಗೆ, ನೀವು YouTube ನಲ್ಲಿ ಸುದ್ದಿ ಅಥವಾ ಹವಾಮಾನದ ಕುರಿತು ಹುಡುಕಾಟ ನಡೆಸುತ್ತಿದ್ದರೆ, ನಿಮ್ಮ ಹುಡುಕಾಟ ಫಲಿತಾಂಶಗಳಲ್ಲಿ ನಿಮ್ಮ ಸಾಮಾನ್ಯ ಪ್ರದೇಶಕ್ಕಾಗಿ ಟಾಪ್ ಸುದ್ದಿ ಮತ್ತು ಸ್ಥಳೀಯ ಹವಾಮಾನವು ಒಳಗೊಂಡಿರಬಹುದು. ಹೆಚ್ಚುವರಿಯಾಗಿ, ನೀವು ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಆಯ್ಕೆಮಾಡಿದರೆ, ನೀವು ವೀಡಿಯೊವನ್ನು ಅಪ್‌ಲೋಡ್ ಮಾಡುವಾಗ ನಿಮ್ಮ ಸಾಮಾನ್ಯ ಪ್ರದೇಶ ಅಥವಾ ವೀಡಿಯೊವನ್ನು ನೀವು ಟ್ಯಾಗ್ ಮಾಡಿರುವ ಸ್ಥಳದಂತಹ ನಿಮ್ಮ ಸ್ಥಳ ಮಾಹಿತಿಯು ನಿಮ್ಮ ಕಂಟೆಂಟ್ ಅನ್ನು ಸ್ಥಳೀಯವಾಗಿ ಸೂಕ್ತ ಪ್ರೇಕ್ಷಕರಿಗೆ ಶಿಫಾರಸು ಮಾಡಲು ಸಹ ಬಳಸಬಹುದು.

ಸಾಮಾನ್ಯ ಪ್ರದೇಶವು 1 ಚದರ ಮೈಲಿಗಿಂತ ದೊಡ್ಡದಾಗಿರುತ್ತದೆ ಮತ್ತು ಕನಿಷ್ಠ 1,000 ಬಳಕೆದಾರರನ್ನು ಹೊಂದಿರುತ್ತದೆ. ನಿಮ್ಮ ಹುಡುಕಾಟದ ಸಾಮಾನ್ಯ ಪ್ರದೇಶವು ನಿಮ್ಮನ್ನು ಗುರುತಿಸುವುದಿಲ್ಲ. ಅದರ ಬದಲಿಗೆ, ಸಾಮಾನ್ಯ ಪ್ರದೇಶವು ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಅದು ಸಾಮಾನ್ಯವಾಗಿ, ನಗರಗಳ ಹೊರಗೆ 1 ಚದರ ಮೈಲಿಗಿಂತಲೂ ದೊಡ್ಡದಾಗಿರುತ್ತದೆ.

YouTube ನಲ್ಲಿ ನಿಮ್ಮ ಡೇಟಾ ಎಂಬಲ್ಲಿಂದ ನಿಮ್ಮ ಸ್ಥಳ ಇತಿಹಾಸವನ್ನು ನೀವು ವೀಕ್ಷಿಸಬಹುದು, ತೆರವುಗೊಳಿಸಬಹುದು, ಆಫ್ ಮಾಡಬಹುದು ಅಥವಾ ಸ್ವಯಂಚಾಲಿತವಾಗಿ ಅಳಿಸಲು ಆಯ್ಕೆ ಮಾಡಬಹುದು.

YouTube ನಲ್ಲಿ ನಿಮಗೆ ಹೆಚ್ಚು ಉಪಯುಕ್ತವಾದ ಆ್ಯಡ್‌ಗಳನ್ನು ತೋರಿಸುವುದಕ್ಕಾಗಿಯೂ ಸೇರಿದಂತೆ Google ನಾದ್ಯಂತ ಸ್ಥಳವನ್ನು ಹೇಗೆ ಬಳಸಲಾಗುತ್ತದೆ ಎಂಬ ಕುರಿತು ನೀವು ಇನ್ನಷ್ಟು ತಿಳಿಯಬಹುದು.

ನಿಮ್ಮ ಹುಡುಕಾಟದಲ್ಲಿ ಸ್ಥಳವನ್ನು ಸೇರಿಸುವ ಮೂಲಕ ಸ್ಥಳೀಯ ಕಂಟೆಂಟ್ ಅನ್ನು ಹುಡುಕಿ

ನೀವು ನಿರ್ದಿಷ್ಟವಾದ ಏನನ್ನಾದರೂ ಹುಡುಕುತ್ತಿದ್ದೀರಿ ಮತ್ತು ಸೂಕ್ತ ಹುಡುಕಾಟ ಫಲಿತಾಂಶಗಳು ಕಂಡುಬರುತ್ತಿಲ್ಲ ಎಂದಾದರೆ, ಚೆಲ್ಸೀಯಲ್ಲಿ ಹವಾಮಾನ ಎಂಬ ಹಾಗೆ, ನಿಮ್ಮ ಹುಡುಕಾಟದಲ್ಲಿ ಸ್ಥಳವನ್ನು ಸೇರಿಸಿ ನೋಡಿ.

ವೈಯಕ್ತೀಕರಿಸಿದ ಜಾಹೀರಾತುಗಳು ಯಾವ ಡೇಟಾವನ್ನು ಮತ್ತು ಚಟುವಟಿಕೆಯನ್ನು ಬಳಸುತ್ತವೆ ಎನ್ನುವುದನ್ನು ನಿಯಂತ್ರಿಸಿ

ನೀವು Google ಆ್ಯಪ್‌ಗಳನ್ನು ಬಳಸಿದಾಗ, ಆ್ಯಡ್‌ಗಳನ್ನು ವೈಯಕ್ತೀಕರಿಸಲು ಯಾವ ಡೇಟಾವನ್ನು ಬಳಸಲಾಗುತ್ತದೆ ಎನ್ನುವುದನ್ನು ನೀವು ನಿಯಂತ್ರಿಸಬಹುದು ಅಥವಾ ನೀವು ಸಂಪೂರ್ಣವಾಗಿ ಆ್ಯಡ್ ವೈಯಕ್ತೀಕರಿಸುವಿಕೆಯನ್ನು ಆಫ್ ಮಾಡಬಹುದು. ನಿಮಗಾಗಿ ಆ್ಯಡ್‌ಗಳನ್ನು ವೈಯಕ್ತೀಕರಿಸಲು ಬಳಸಲಾಗುವ ಡೇಟಾವನ್ನು ಆ್ಯಡ್ ಸೆಟ್ಟಿಂಗ್‌ಗಳಲ್ಲಿ ಸುಲಭವಾಗಿ ನಿಯಂತ್ರಿಸಬಹುದು. ಈ ಡೇಟಾದಲ್ಲಿ ನಿಮ್ಮ ಚಟುವಟಿಕೆ, ಹಾಗೂ ಆ್ಯಡ್‌ಗಳನ್ನು ತೋರಿಸುವುದಕ್ಕಾಗಿ ನಮ್ಮೊಂದಿಗೆ ಪಾಲುದಾರಿಕೆ ಹೊಂದಿರುವ ಇತರ ಜಾಹೀರಾತುದಾರರೊಂದಿಗಿನ ಸಂವಹನಗಳನ್ನು ಆಧರಿಸಿ ನಾವು ಅಂದಾಜಿಸಿದ ಸಂಗತಿಗಳು ಮತ್ತು ನಿಮ್ಮ Google ಖಾತೆಯಲ್ಲಿ ನೀವು ಸೇರಿಸಿದ ಡೇಟಾ ಒಳಗೊಂಡಿರುತ್ತದೆ.

ನಿಮ್ಮ Google ಖಾತೆಗೆ ನೀವು ಸೈನ್ ಇನ್ ಮಾಡಿದಾಗ, ನಿಮ್ಮ ಆ್ಯಡ್‌ಗಳನ್ನು ಹೇಗೆ ವೈಯಕ್ತೀಕರಿಸಲಾಗುತ್ತದೆ ಎನ್ನುವುದನ್ನು ನಿರ್ವಹಿಸಿ ಅಥವಾ ನಿಮ್ಮ ಆ್ಯಡ್ ಸೆಟ್ಟಿಂಗ್‌ಗಳಲ್ಲಿವೈಯಕ್ತೀಕರಿಸಿದ ಆ್ಯಡ್‌ಗಳನ್ನು ಆಫ್ ಮಾಡಿ.

Google Ads ಹಾಗೂ ಡೇಟಾದ ಕುರಿತು ಇನ್ನಷ್ಟು ತಿಳಿಯಲು, ನಮ್ಮ ಸುರಕ್ಷತಾ ಕೇಂದ್ರಕ್ಕೆ ಹೋಗಿ.

YouTube ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೇಗೆ ಬಳಸಬಹುದು

ನಿಮ್ಮ ವೈಯಕ್ತಿಕ ಮಾಹಿತಿಯು ನಿಮ್ಮ ಹೆಸರು ಹಾಗೂ ಫೋಟೋದಂತಹ ಮಾಹಿತಿಯನ್ನು ಒಳಗೊಂಡಿರುತ್ತದೆ. ನಿಮ್ಮ Google ಖಾತೆಯಲ್ಲಿ ವೈಯಕ್ತಿಕ ಮಾಹಿತಿಯನ್ನು ನಿರ್ವಹಿಸುವ ಮೂಲಕ, Google ಸೇವೆಗಳಾದ್ಯಂತ ಇತರರಿಗೆ ನೀವು ಯಾವ ವೈಯಕ್ತಿಕ ಮಾಹಿತಿಯನ್ನು ಗೋಚರಿಸುವಂತೆ ಮಾಡುತ್ತೀರಿ ಎನ್ನುವುದನ್ನು ನೀವು ನಿರ್ಧರಿಸಬಹುದು. ಕೆಲವು ಆ್ಯಡ್‌ಗಳು, ಇಮೇಲ್ ವಿಳಾದ ಮತ್ತು ಫೋನ್ ಸಂಖ್ಯೆಯಂತಹ ಹೆಚ್ಚುವರಿ ಮಾಹಿತಿಯನ್ನು ಒದಗಿಸಲು ಫಾರ್ಮ್‌ಗಳನ್ನು ಹೊಂದಿರಬಹುದು, ಆದರೆ ಇವು ಐಚ್ಛಿಕವಾಗಿವೆ ಮತ್ತು YouTube ಅನ್ನು ಬಳಸುವುದನ್ನು ಮುಂದುವರಿಸಲು ಅಗತ್ಯವಾಗಿಲ್ಲ.

YouTube ನಿಮ್ಮ ವೈಯಕ್ತಿಕ ಮಾಹಿತಿಯನ್ನು ಮಾರಾಟ ಮಾಡುವುದಿಲ್ಲ.

ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ಮಾರಾಟ ಮಾಡುವುದಿಲ್ಲ. ಶಿಫಾರಸುಗಳನ್ನು ಒದಗಿಸುವುದು, ಹುಡುಕಾಟ ಫಲಿತಾಂಶಗಳನ್ನು ವೈಯಕ್ತೀಕರಿಸುವುದು ಮತ್ತು ಸೂಕ್ತ ಆ್ಯಡ್‌ಗಳನ್ನು ಸರ್ವ್ ಮಾಡುವುದು ಸೇರಿದಂತೆ ನಮ್ಮ ಸೇವೆಗಳನ್ನು ನಿಮಗಾಗಿ ಕಸ್ಟಮೈಸ್ ಮಾಡಲು, ನಾವು ಸಂಗ್ರಹಿಸುವ ಮಾಹಿತಿಯನ್ನು ಬಳಸುತ್ತೇವೆ. ಈ ಆ್ಯಡ್‌ಗಳು ನಮ್ಮ ಸೇವೆಗಳಿಗೆ ಧನಸಹಾಯ ಒದಗಿಸುತ್ತವೆ ಮತ್ತು ಯಾವುದೇ ವೆಚ್ಚವಿಲ್ಲದೆ ಅವುಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ನೆರವಾಗುತ್ತವೆ, ಆದರೆ ನಿಮ್ಮ ವೈಯಕ್ತಿಕ ಮಾಹಿತಿಯು ಮಾರಾಟದ ಸರಕಲ್ಲ.

ನೀವು ಅಪ್‌ಲೋಡ್ ಮಾಡಲು ಆಯ್ಕೆ ಮಾಡುವ ವೀಡಿಯೊಗಳು ಹಾಗೂ ಫೋಟೋಗಳಂತಹ ಕಂಟೆಂಟ್ ಅನ್ನು YouTube ಹೇಗೆ ಬಳಸಬಹುದು

ನೀವು ಅಪ್‌ಲೋಡ್ ಮಾಡಲು ಬಯಸುವ ಕಂಟೆಂಟ್ ಅನ್ನು ಮಾತ್ರ YouTube ಸಂಗ್ರಹಣೆ ಮಾಡುತ್ತದೆ ಮತ್ತು ನಿಮ್ಮ YouTube ಚಾನಲ್‌ಗೆ ಲಿಂಕ್ ಮಾಡುತ್ತದೆ. ಈ ಕಂಟೆಂಟ್ ಅನ್ನು ಯಾರು ವೀಕ್ಷಿಸಬಹುದು ಎಂಬುದು ನೀವು ಆಯ್ಕೆ ಮಾಡುವ ವೀಡಿಯೊ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಆಧರಿಸಿರುತ್ತದೆ. ನಿಮ್ಮ ವೀಡಿಯೊ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಆಧರಿಸಿ, ನೀವು ಅಪ್‌ಲೋಡ್ ಮಾಡಿದ ಕಂಟೆಂಟ್ ಅನ್ನು ಗೋಚರಿಸುವಂತೆ ಮಾಡಬಹುದು ಅಥವಾ ಇತರ ವೀಕ್ಷಕರಿಗೆ ಶಿಫಾರಸು ಮಾಡಬಹುದು. ನಿಮ್ಮ ವೀಡಿಯೊ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಹೇಗೆ ಬದಲಾಯಿಸಬಹುದು ಎಂಬ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ. ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಲ್ಲಿ YouTube Studio ಅನ್ನು ಬಳಸಿಕೊಂಡು ಕಂಟೆಂಟ್ ಅನ್ನು ನಿರ್ವಹಿಸುವುದು ಮತ್ತು ಎಡಿಟ್ ಮಾಡುವುದು ಹೇಗೆ ಎಂಬ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ.

ನೀವು ವೀಡಿಯೊವನ್ನು ಅಳಿಸಿದ ಬಳಿಕ ನಿಮ್ಮ ಕಂಟೆಂಟ್ ಹಾಗೂ ಸಂಬಂಧಿತ ಡೇಟಾಕ್ಕೆ ಏನಾಗುತ್ತದೆ

ನೀವು YouTube ನಿಂದ ಒಂದು ವೀಡಿಯೊವನ್ನು ಅಳಿಸಲು ಆಯ್ಕೆ ಮಾಡಿದರೆ, ಆ ವೀಡಿಯೊವನ್ನು ಶಾಶ್ವತವಾಗಿ ಅಳಿಸಲಾಗುತ್ತದೆ. ಅದನ್ನು ಆನಂತರ ರಿಕವರ್ ಮಾಡಲು ಸಾಧ್ಯವಿಲ್ಲ ಮತ್ತು ಆ ವೀಡಿಯೊವನ್ನು ಇನ್ನು ಮುಂದೆ YouTube ನಲ್ಲಿ ಹುಡುಕಲು ಸಾಧ್ಯವಾಗುವುದಿಲ್ಲ. ವೀಕ್ಷಣೆ ಸಮಯದ ಹಾಗೆ, ವೀಡಿಯೊದೊಂದಿಗೆ ಸಂಯೋಜಿತವಾದ ಡೇಟಾ ಈಗಲೂ ಅಗ್ರಿಗೇಟ್ ವರದಿಗಳ ಭಾಗವಾಗಿರುತ್ತದೆ. ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಲ್ಲಿ YouTube Studio ಅನ್ನು ಬಳಸಿಕೊಂಡು ಕಂಟೆಂಟ್ ಅನ್ನು ನಿರ್ವಹಿಸುವುದು ಮತ್ತು ಎಡಿಟ್ ಮಾಡುವುದು ಹೇಗೆ ಎಂಬ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ. ವೀಡಿಯೊಗಳನ್ನು ಅಳಿಸುವುದು ಮತ್ತು ಬದಲಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

ನಿಮ್ಮ YouTube ಚಾನಲ್ ಅನ್ನು ನೀವು ಅಳಿಸಿದಾಗ ಏನಾಗುತ್ತದೆ

ನೀವು ಯಾವಾಗ ಬೇಕಾದರೂ ನಿಮ್ಮ YouTube ಚಾನಲ್ ಅನ್ನು ಮುಚ್ಚಲು ಅಥವಾ ಅಳಿಸಲು ಆಯ್ಕೆ ಮಾಡಬಹುದು. ನಿಮ್ಮ ಚಾನಲ್ ಅನ್ನು ಮುಚ್ಚುವುದು ಅಥವಾ ಅಳಿಸುವುದರಿಂದ ನಿಮ್ಮ ವೀಡಿಯೊಗಳು, ಕಾಮೆಂಟ್‌ಗಳು, ಸಂದೇಶಗಳು ಹಾಗೂ ಪ್ಲೇಪಟ್ಟಿಗಳು ಸೇರಿದಂತೆ ಎಲ್ಲಾ ಕಂಟೆಂಟ್ ಅಳಿಸಿಹೋಗುತ್ತದೆ. ಆನಂತರ ನೀವು ಕಾಮೆಂಟ್ ನೀಡಲು ಅಥವಾ ಕಂಟೆಂಟ್ ಅನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ.

YouTube ಹಾಗೂ Google ನಾದ್ಯಂತ ನಾವು ಡೇಟಾವನ್ನು ಹೇಗೆ ಬಳಸುತ್ತೇವೆ ಎಂಬ ಕುರಿತು ಹೆಚ್ಚಿನ ವಿವರಗಳಿಗಾಗಿ ನಮ್ಮ ಗೌಪ್ಯತೆ ನೀತಿಯನ್ನು ನೋಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1650689703612231601
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false