HLS ಸ್ಟ್ರೀಮ್ ಅನ್ನು ಸೆಟ್ ಅಪ್ ಮಾಡಿ

HDR ಅನ್ನು ಸ್ಟ್ರೀಮ್ ಮಾಡಿ ಅಥವಾ YouTube ಲೈವ್‌ನಲ್ಲಿ HLS (HTTP ಲೈವ್ ಸ್ಟ್ರೀಮಿಂಗ್) ಇಂಜೆಷನ್ ಪ್ರೊಟೊಕಾಲ್ ಅನ್ನು ಬಳಸುವ ಮೂಲಕ RTMP ಬೆಂಬಲಿಸದ ಕೋಡೆಕ್‌ಗಳನ್ನು ಬಳಸಿ.

ನೀವು ಪ್ರಾರಂಭಿಸುವ ಮೊದಲು

ನಿಮ್ಮ ಎನ್‌ಕೋಡರ್, HLS ಅನ್ನು ಬೆಂಬಲಿಸುತ್ತದೆ ಮತ್ತು ನೀವು YouTube ನಲ್ಲಿ ಲೈವ್ ಸ್ಟ್ರೀಮ್ ಮಾಡುವುದಕ್ಕೆ ಸಂಬಂಧಪಟ್ಟ ಮೂಲ ಸಂಗತಿಗಳನ್ನು ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿ.

1. YouTube HLS ಪ್ರಿಸೆಟ್ ಇದೆಯೇ ಎಂದು ಹುಡುಕಿ

ನಿಮ್ಮ ಎನ್‌ಕೋಡರ್, YouTube ಗೆ HLS ಇಂಜೆಷನ್‌ಗಾಗಿ ಪ್ರಿಸೆಟ್ ಅನ್ನು ಹೊಂದಿದ್ದರೆ, ಆ ಪ್ರಿಸೆಟ್ ಅನ್ನು ಆಯ್ಕೆ ಮಾಡಿ. RTMP ಸ್ಟ್ರೀಮ್‌ಗಳೊಂದಿಗೆ ಮಾಡುವ ಹಾಗೆ, ನಿಮ್ಮ ಸ್ಟ್ರೀಮ್ ಕೀಯನ್ನು ನಕಲಿಸಿ, ಅಂಟಿಸಬೇಕಾಗಬಹುದು. ಇದೀಗ ನೀವು ಸ್ಟ್ರೀಮ್ ಮಾಡಲು ಸಿದ್ಧರಾಗಿದ್ದೀರಿ.

ನಿಮ್ಮ ಎನ್‌ಕೋಡರ್, YouTube ಗೆ HLS ಇಂಜೆಷನ್‌ಗಾಗಿ ಪ್ರಿಸೆಟ್ ಅನ್ನು ಹೊಂದಿಲ್ಲದಿದ್ದರೆ, ಹಂತ 2 “ಇಂಜೆಷನ್ URL ಅನ್ನು ಸೆಟ್ ಮಾಡಿ” ಎಂಬಲ್ಲಿಗೆ ಹೋಗಿ.

2. ಸರ್ವರ್ URL ಅನ್ನು ಸೆಟ್ ಮಾಡಿ

  1. YouTube ನ ಲೈವ್ ನಿಯಂತ್ರಣ ಕೊಠಡಿ ನಂತರ ಸ್ಟ್ರೀಮ್ ಎಂಬಲ್ಲಿಗೆ ಹೋಗಿ. “ಸ್ಟ್ರೀಮ್ ಕೀಯನ್ನು ಆಯ್ಕೆ ಮಾಡಿ” ಎಂಬುದರ ಅಡಿಯಲ್ಲಿ, ಹೊಸ ಸ್ಟ್ರೀಮ್ ಕೀಯನ್ನು ರಚಿಸಿ ಎಂಬುದನ್ನು ಕ್ಲಿಕ್ ಮಾಡಿ ಮತ್ತು ಸ್ಟ್ರೀಮ್ ಪ್ರೊಟೊಕಾಲ್ ಆಗಿ HLS ಅನ್ನು ಆಯ್ಕೆ ಮಾಡಿ.

ಗಮನಿಸಿ: ನೀವು HDR ನಲ್ಲಿ ಸ್ಟ್ರೀಮ್ ಮಾಡಲು ಬಯಸುತ್ತೀರಾದರೆ, “ಮ್ಯಾನುವಲ್ ರೆಸಲ್ಯೂಷನ್ ಅನ್ನು ಆನ್ ಮಾಡಿ” ಎಂಬುದನ್ನು ಗುರುತಿಸಿರುವುದನ್ನು ನೀವು ತೆಗೆಯಬೇಕು.

  1. HLS ಇಂಜೆಷನ್‌ಗಾಗಿ “ಸ್ಟ್ರೀಮ್ URL” ಅಪ್‌ಡೇಟ್ ಆಗುತ್ತದೆ. URL, “https” ಎಂಬುದಾಗಿ ಪ್ರಾರಂಭವಾಗಬೇಕೇ ಹೊರತು “rtmp” ಎಂದಲ್ಲ. URL ಅನ್ನು ನಿಮ್ಮ ಎನ್‌ಕೋಡರ್‌ಗೆ ನಕಲಿಸಿ.
  2. ನಿಮಗೆ ಬ್ಯಾಕಪ್ ಇಂಜೆಷನ್‌ನ ಅಗತ್ಯವಿದ್ದರೆ, “ಬ್ಯಾಕಪ್ ಸರ್ವರ್ URL” ಅನ್ನು ನಕಲಿಸಿ. ಸ್ಟ್ರೀಮ್ ಕೀ ಈಗಾಗಲೇ URL ನ ಭಾಗವಾಗಿದೆ, ಆದ್ದರಿಂದ ನೀವು “ಸ್ಟ್ರೀಮ್ ಕೀ” ಅನ್ನು ಪ್ರತ್ಯೇಕವಾಗಿ ನಕಲಿಸುವ ಅಗತ್ಯವಿಲ್ಲ.

ಗಮನಿಸಿ: HLS ಅನ್ನು ಆಯ್ಕೆ ಮಾಡಿದಾಗ, “ಅಲ್ಟ್ರಾ-ಲೋ ವಿಳಂಬ” ಅಯ್ಕೆಯನ್ನು ಆಫ್ ಮಾಡಲಾಗುತ್ತದೆ. HLS ಅಧಿಕ ವಿಳಂಬವನ್ನು ಹೊಂದಿದೆ ಏಕೆಂದರೆ ಅದು RTMP ಯ ಹಾಗೆ ನಿರಂತರ ಸ್ಟ್ರೀಮ್ ಅನ್ನು ಕಳುಹಿಸುವ ಬದಲಿಗೆ ವೀಡಿಯೊಗಳ ತುಣುಕುಗಳನ್ನು ಕಳುಹಿಸುತ್ತದೆ.

3. HLS ಸೆಟ್ಟಿಂಗ್‌ಗಳನ್ನು ಪೂರ್ಣಗೊಳಿಸಿ

YouTube ಲೈವ್‌ಗಾಗಿ ಅಗತ್ಯವಿರುವ ಈ HLS ಸೆಟ್ಟಿಂಗ್‌ಗಳನ್ನು ಸಹ ಅಪ್‌ಡೇಟ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ:

  • ತುಣುಕಿನ ಅವಧಿ: 1-4 ಸೆಕೆಂಡ್‌ಗಳ ನಡುವೆ, ತುಣುಕಿನ ಅವಧಿ ಕಡಿಮೆಯಾಗಿದ್ದರೆ, ವಿಳಂಬವೂ ಸಹ ಕಡಿಮೆಯಾಗಿರುತ್ತದೆ.
  • ತುಣುಕಿನ ಫಾರ್ಮ್ಯಾಟ್: TS (ಟ್ರಾನ್ಸ್‌ಪೋರ್ಟ್ ಸ್ಟ್ರೀಮ್) ಆಗಿರಬೇಕು.
  • ಬೈಟ್ ಶ್ರೇಣಿಗೆ ಬೆಂಬಲವಿಲ್ಲ.
  • 5 ಕ್ಕಿಂತ ಹೆಚ್ಚು ಬಾಕಿ ತುಣುಕುಗಳಿರದ ರೋಲಿಂಗ್ ಪ್ಲೇಪಟ್ಟಿಯನ್ನು ಬಳಸಲೇಬೇಕು.
  • HTTPS POST/PUT ಅನ್ನು ಬಳಸಲೇಬೇಕು.
  • HTTPS ಅನ್ನು ಬಳಸುವುದನ್ನು ಹೊರತುಪಡಿಸಿ ಎನ್‌ಕ್ರಿಪ್ಶನ್‌ಗೆ ಬೆಂಬಲವಿಲ್ಲ.

ಎನ್‌ಕೋಡರ್ ಸೆಟ್ಟಿಂಗ್‌ಗಳು

ಎನ್‌ಕೋಡರ್ ಸೆಟ್ಟಿಂಗ್‌ಗಳಿಗಾಗಿ, ಸೆಟ್ಟಿಂಗ್‌ಗಳು, ಬಿಟ್ ಪ್ರಮಾಣಗಳು ಮತ್ತು ರೆಸಲ್ಯೂಷನ್‌ಗಳ ಕುರಿತಾದ ನಮ್ಮ ಸಾಮಾನ್ಯ ಮಾರ್ಗಸೂಚಿಗಳನ್ನು ನೋಡಿ. HLS ಗಾಗಿ RTMP ಗಿಂತ ಭಿನ್ನವಾದ ಹೆಚ್ಚುವರಿ ಸೆಟ್ಟಿಂಗ್‌ಗಳಲ್ಲಿ ಇವು ಸೇರಿವೆ:

  • ವೀಡಿಯೊ ಕೋಡೆಕ್: H.264 ಅಲ್ಲದೆ HEVC ಅನ್ನು ಸಹ ಬೆಂಬಲಿಸುತ್ತದೆ
  • ಆಡಿಯೋ ಕೋಡೆಕ್: AAC, AC3 ಹಾಗೂ EAC3

ಶಿಫಾರಸು ಮಾಡಲಾದ ಸುಧಾರಿತ ಸೆಟ್ಟಿಂಗ್‌ಗಳು

  • ಆಡಿಯೋ ಸ್ಯಾಂಪಲ್ ದರ: ಸ್ಟೀರಿಯೋ ಆಡಿಯೋಗಾಗಿ 44.1KHz , 5.1 ಸರೌಂಡ್ ಶಬ್ದಕ್ಕಾಗಿ 48KHz
  • ಆಡಿಯೋ ಬಿಟ್ ಪ್ರಮಾಣ: ಸ್ಟೀರಿಯೋಗಾಗಿ 128 Kbps ಅಥವಾ 5.1 ಸರೌಂಡ್ ಶಬ್ದಕ್ಕಾಗಿ 384Kbps

HLS ಔಟ್‌ಪುಟ್ ಅನ್ನು ಬೆಂಬಲಿಸುವ ಎನ್‌ಕೋಡರ್‌ಗಳು

  • ಕೊಬಾಲ್ಟ್ ಎನ್‌ಕೋಡರ್‌ಗಳು
  • ಹಾರ್ಮೋನಿಕ್
  • ಮಿರಿಲ್ಲಿಸ್ ಆ್ಯಕ್ಷನ್: HEVC ವೀಡಿಯೊ ಕೋಡೆಕ್ ಅನ್ನು ಆಯ್ಕೆ ಮಾಡಿದ್ದರೆ, HLS ಇಂಜೆಷನ್ ಅನ್ನು ಸ್ವಯಂಚಾಲಿತವಾಗಿ ಬಳಸಲಾಗುತ್ತದೆ.
  • OBS
  • ಟೆಲಿಸ್ಟ್ರೀಮ್

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2328971749339668525
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false