ಕ್ಲಿಪ್‌ಗಳನ್ನು ರಚಿಸಿ ಮತ್ತು ನಿರ್ವಹಿಸಿ

ನೀವು ವೀಡಿಯೊ ಅಥವಾ ಲೈವ್ ಸ್ಟ್ರೀಮ್‌ನ ಸಣ್ಣ ಭಾಗವನ್ನು ಕ್ಲಿಪ್ ಮಾಡಬಹುದು ಮತ್ತು ಸಾಮಾಜಿಕ ಚಾನಲ್‌ಗಳಲ್ಲಿ ಹಾಗೂ ಇಮೇಲ್ ಅಥವಾ ಪಠ್ಯ ಸಂದೇಶದಂತಹ ನೇರ ಸಂವಹನಗಳ ಮೂಲಕ ಅದನ್ನು ಇತರರ ಜೊತೆ ಹಂಚಿಕೊಳ್ಳಬಹುದು. ಕ್ಲಿಪ್‌ಗಳು ಸಾರ್ವಜನಿಕವಾಗಿದ್ದು ಕ್ಲಿಪ್‌ಗೆ ಆ್ಯಕ್ಸೆಸ್ ಇರುವ ಯಾರು ಬೇಕಾದರೂ ಅವುಗಳನ್ನು ವೀಕ್ಷಿಸಬಹುದು, ಅಲ್ಲದೇ ಅವರು ಮೂಲ ವೀಡಿಯೊವನ್ನು ಸಹ ವೀಕ್ಷಿಸಬಹುದು. ನೀವು ರಚಿಸಿದ ಕ್ಲಿಪ್‌ಗಳು ಮತ್ತು ನಿಮ್ಮ ವೀಡಿಯೊಗಳಿಂದ ರಚಿಸಲಾದ ಕ್ಲಿಪ್‌ಗಳನ್ನು ನಿಮ್ಮ ಕ್ಲಿಪ್‌ಗಳ ಲೈಬ್ರರಿ ಪುಟದಲ್ಲಿ ನೀವು ಕಾಣಬಹುದು. ವೀಡಿಯೊ ರಚನೆಕಾರರು ತಮ್ಮ ವೀಡಿಯೊಗಳಿಂದ ರಚಿಸಲಾದ ಕ್ಲಿಪ್‌ಗಳನ್ನು YouTube Studio ದಲ್ಲಿ ನಿರ್ವಹಿಸಬಹುದು.

ಗಮನಿಸಿ: ಡಿಫಾಲ್ಟ್ ಆಗಿ, ಕ್ಲಿಪ್ಪಿಂಗ್ ವೀಡಿಯೊಗಳನ್ನು ಆನ್ ಮಾಡಲಾಗಿದೆ. ಅದನ್ನು ಆಫ್ ಮಾಡುವುದು ಹೇಗೆ ಎಂದು ತಿಳಿಯಿರಿ.

YouTube ಕ್ಲಿಪ್‌ಗಳು

ಕ್ಲಿಪ್ ಅನ್ನು ರಚಿಸಿ ಮತ್ತು ಹಂಚಿಕೊಳ್ಳಿ

ಕ್ಲಿಪ್‌ಗಳು 5-60 ಸೆಕೆಂಡ್‌ಗಳ ಅವಧಿಯದ್ದಾಗಿರುತ್ತವೆ ಮತ್ತು ಮೂಲ ವೀಡಿಯೊದ ವೀಕ್ಷಣಾ ಪುಟದಿಂದ ಪಡೆದ ಲೂಪ್‌ನಲ್ಲಿ ಪ್ಲೇ ಮಾಡಲಾಗುವುದು.

  1. YouTube ಗೆ ಸೈನ್ ಇನ್ ಮಾಡಿ.
  2. ನೀವು ಕ್ಲಿಪ್ ಮಾಡಲು ಬಯಸುವ ವೀಡಿಯೊಗೆ ಹೋಗಿ.
  3. ಮೆನು ''ನಂತರ  ಕ್ಲಿಪ್ ಮಾಡಿ ಎಂಬುದನ್ನು ಆಯ್ಕೆಮಾಡಿ. 
  4. ನಿಮ್ಮ ಕ್ಲಿಪ್‌ನ ಶೀರ್ಷಿಕೆಯನ್ನು ಸೇರಿಸಿ (ಗರಿಷ್ಠ 140 ಅಕ್ಷರಗಳು).
  5. ನೀವು ಕ್ಲಿಪ್ ಮಾಡಲು ಬಯಸುವ ವೀಡಿಯೊದ ಭಾಗವನ್ನು ಆಯ್ಕೆಮಾಡಿ. ಸ್ಲೈಡರ್ ಅನ್ನು ಡ್ರ್ಯಾಗ್ ಮಾಡುವ ಮೂಲಕ ನಿಮ್ಮ ಆಯ್ಕೆಯ ಅವಧಿಯನ್ನು ನೀವು ಹೆಚ್ಚಿಸಬಹುದು (ಗರಿಷ್ಠ 60 ಸೆಕೆಂಡ್‌ಗಳು) ಅಥವಾ ಕಡಿಮೆ ಮಾಡಬಹುದು (ಕನಿಷ್ಠ 5 ಸೆಕೆಂಡ್‌ಗಳು).
  6. ಕ್ಲಿಪ್ ಹಂಚಿಕೊಳ್ಳಿ ಎಂಬುದನ್ನು ಕ್ಲಿಕ್ ಮಾಡಿ.
  7. ಕ್ಲಿಪ್ ಅನ್ನು ಹಂಚಿಕೊಳ್ಳಲು ಆಯ್ಕೆಯೊಂದನ್ನು ಆರಿಸಿ:
    • ಎಂಬೆಡ್ ಮಾಡಿ: ನೀವು ವೆಬ್‌ಸೈಟ್ ಒಂದರಲ್ಲಿ ವೀಡಿಯೊವನ್ನು ಎಂಬೆಡ್ ಮಾಡಬಹುದು.
    • ಸಾಮಾಜಿಕ ನೆಟ್‌ವರ್ಕ್‌ಗಳು: ನೀವು Facebook ಅಥವಾ Twitter ನಂತಹ ಸಾಮಾಜಿಕ ನೆಟ್‌ವರ್ಕ್‌ನಲ್ಲಿ ನಿಮ್ಮ ಕ್ಲಿಪ್ ಅನ್ನು ಹಂಚಿಕೊಳ್ಳಬಹುದು.
    • ಲಿಂಕ್ ಅನ್ನು ನಕಲಿಸಿ: ನೀವು ಬೇರೆ ಎಲ್ಲಾದರೂ ಪೇಸ್ಟ್ ಮಾಡುವುದಕ್ಕಾಗಿ ನಿಮ್ಮ ಕ್ಲಿಪ್‌ನ ಲಿಂಕ್ ಅನ್ನು ಕಾಪಿ ಮಾಡಬಹುದು.
    • ಇಮೇಲ್: ನಿಮ್ಮ ಕಂಪ್ಯೂಟರ್‌ನಲ್ಲಿರುವ ಡೀಫಾಲ್ಟ್ ಇಮೇಲ್ ಸಾಫ್ಟ್‌ವೇರ್ ಅನ್ನು ಬಳಸಿ ನಿಮ್ಮ ಕ್ಲಿಪ್ ಅನ್ನು ನೀವು ಹಂಚಿಕೊಳ್ಳಬಹುದು.

ಗಮನಿಸಿ: ನೀವು ರಚಿಸಿದ ಕ್ಲಿಪ್‌ಗಳನ್ನು ನೀವು ಕ್ಲಿಪ್‌ಗಳ ಲೈಬ್ರರಿಯಲ್ಲಿ ಕಾಣಬಹುದು.

ನೀವು ರಚಿಸಿದ ಕ್ಲಿಪ್ ಅನ್ನು ಅಳಿಸಿ

  1. YouTube ಗೆ ಸೈನ್ ಇನ್ ಮಾಡಿ.
  2. ಲೈಬ್ರರಿ ವಿಭಾಗಕ್ಕೆ ಹೋಗಿ.
  3. ನಿಮ್ಮ ಕ್ಲಿಪ್‌ಗಳನ್ನು ಟ್ಯಾಪ್ ಮಾಡಿ.
  4. ನೀವು ಅಳಿಸಲು ಬಯಸುವ ಕ್ಲಿಪ್ ಅನ್ನು ಹುಡುಕಿ ಮತ್ತು ಮೆನು '' ಎಂಬುದನ್ನು ಆಯ್ಕೆಮಾಡಿ.
  5. “ಕ್ಲಿಪ್ ಅನ್ನು ಅಳಿಸಿ” ಆಯ್ಕೆಯನ್ನು ಟ್ಯಾಪ್ ಮಾಡಿ.

ಗಮನಿಸಿ: ಕ್ಲಿಪ್ ಒಂದನ್ನು ಅಳಿಸಿದರೆ ಅದನ್ನು YouTube ನಿಂದ ತೆಗೆದುಹಾಕಲಾಗುತ್ತದೆ. ಕ್ಲಿಪ್‌ನ URL ಗೆ ಆ್ಯಕ್ಸೆಸ್ ಹೊಂದಿರುವ ಬಳಕೆದಾರರು ಮತ್ತು ಕ್ಲಿಪ್ ಅನ್ನು ಯಾವ ವೀಡಿಯೊದಿಂದ ರಚಿಸಲಾಯಿತೋ ಆ ಮೂಲ ವೀಡಿಯೊದ ಒಡೆತನ ಹೊಂದಿರುವ ಬಳಕೆದಾರರು ಇನ್ನು ಮುಂದೆ ಕ್ಲಿಪ್‌ಗೆ ಆ್ಯಕ್ಸೆಸ್ ಹೊಂದಿರುವುದಿಲ್ಲ.

ನಿಮ್ಮ ಕಂಟೆಂಟ್ ಅನ್ನು ಕ್ಲಿಪ್ ಮಾಡಲು ವೀಕ್ಷಕರಿಗೆ ಅನುಮತಿಸಬೇಡಿ

ನಿಮ್ಮ ಪ್ರೇಕ್ಷಕರು ನಿಮ್ಮ ವೀಡಿಯೊದ ಕ್ಲಿಪ್‌ಗಳನ್ನು ರಚಿಸುವುದನ್ನು ಮತ್ತು ಹಂಚಿಕೊಳ್ಳುವುದನ್ನು ನೀವು ತಡೆಗಟ್ಟಬಹುದು.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಸೆಟ್ಟಿಂಗ್‌ಗಳನ್ನು ಕ್ಲಿಕ್ ಮಾಡಿ.
  3. ಚಾನಲ್ ನಂತರ ಸುಧಾರಿತ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆಮಾಡಿ.
  4. ಕ್ಲಿಪ್‌ಗಳು ಎಂಬುದರ ಅಡಿಯಲ್ಲಿ, ನನ್ನ ಕಂಟೆಂಟ್ ಅನ್ನು ಕ್ಲಿಪ್ ಮಾಡಲು ವೀಕ್ಷಕರಿಗೆ ಅನುಮತಿಸಿ ಎಂದು ಗುರುತಿಸಿರುವುದನ್ನು ತೆಗೆದುಹಾಕಿ.

ಗಮನಿಸಿ: ಬಳಕೆದಾರರು ನಿಮ್ಮ ವೀಡಿಯೊಗಳು ಅಥವಾ ಲೈವ್ ಸ್ಟ್ರೀಮ್‌ಗಳ ಕ್ಲಿಪ್‌ಗಳನ್ನು ರಚಿಸದಂತೆ ತಡೆಗಟ್ಟಲು ನೀವು ಬಳಕೆದಾರರನ್ನು ನಿಮ್ಮ ಚಾನಲ್‌ನ "ಮರೆಮಾಡಲಾದ ಬಳಕೆದಾರರು" ಪಟ್ಟಿಗೆ ಸೇರಿಸಬಹುದು. ನಿಮ್ಮ ವೀಡಿಯೊಗಳು ಮತ್ತು ಲೈವ್ ಸ್ಟ್ರೀಮ್‌ಗಳ ಕ್ಲಿಪ್‌ಗಳ ಶೀರ್ಷಿಕೆಗಳಲ್ಲಿ ನಿರ್ಬಂಧಿಸಿರುವ ಪದಗಳನ್ನು ಬಳಸದಂತೆ ತಡೆಗಟ್ಟಲು ನೀವು ನಿಮ್ಮ ನಿರ್ಬಂಧಿಸಿರುವ ಪದಗಳ ಪಟ್ಟಿಗೆ ಪದಗಳನ್ನು ಸೇರಿಸಬಹುದು.

ನಿಮ್ಮ ವೀಡಿಯೊಗಳ ಕ್ಲಿಪ್‌ಗಳನ್ನು ನಿರ್ವಹಿಸಿ

ನಿಮ್ಮ ವೀಡಿಯೊಗಳಿಂದ ರಚಿಸಲಾದ ಕ್ಲಿಪ್‌ಗಳನ್ನು ನೀವು YouTube Studio ದಲ್ಲಿ ನಿರ್ವಹಿಸಬಹುದು.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಕಂಟೆಂಟ್ ಎಂಬುದನ್ನು ಕ್ಲಿಕ್ ಮಾಡಿ.
  3. ವೀಡಿಯೊದ ಶೀರ್ಷಿಕೆ ಅಥವಾ ಥಂಬ್‌ನೇಲ್ ಅನ್ನು ಆಯ್ಕೆಮಾಡಿ.
  4. ಎಡಭಾಗದ ಮೆನುವಿನಲ್ಲಿ, ಕ್ಲಿಪ್‌ಗಳು ಎಂಬುದನ್ನು ಕ್ಲಿಕ್ ಮಾಡಿ.
  5. ನಿಮ್ಮ ಕ್ಲಿಪ್‌ಗಳನ್ನು ನೀವು ವೀಕ್ಷಿಸಬಹುದು, ಪ್ಲೇ ಮಾಡಬಹುದು, ಹಂಚಿಕೊಳ್ಳಬಹುದು, ಮರೆಮಾಡಬಹುದು ಮತ್ತು ವರದಿಮಾಡಬಹುದು.

"ಟಾಪ್ ಸಮುದಾಯ ಕ್ಲಿಪ್‌ಗಳು" ವಿಭಾಗವನ್ನು ನಿರ್ವಹಿಸಿ

ನಿಮ್ಮ ಚಾನಲ್ ಹೋಮ್ ಟ್ಯಾಬ್‌ನಲ್ಲಿ ನಿಮ್ಮ ವೀಡಿಯೊಗಳ ಟಾಪ್ ಕ್ಲಿಪ್‌ಗಳನ್ನು ನೀವು ಪ್ರದರ್ಶಿಸಬಹುದು. ಈ ಕ್ಲಿಪ್‌ಗಳನ್ನು ನೀವು ಅಥವಾ ನಿಮ್ಮ ವೀಕ್ಷಕರು ರಚಿಸಿರಬಹುದು. ನಿಮ್ಮ ಹೋಮ್ ಟ್ಯಾಬ್‌ಗೆ ಸೇರಿಸಿದ ನಂತರ, ಕ್ಲಿಪ್‌ಗಳು ಸಾರ್ವಜನಿಕವಾಗಿ ಗೋಚರಿಸುತ್ತವೆ ಮತ್ತು ಜನಪ್ರಿಯತೆ ಹಾಗೂ ಇತ್ತೀಚೆಗೆ ಯಾವಾಗ ರಚಿಸಲಾಗಿದೆ ಎಂಬುದಕ್ಕೆ ಅನುಗುಣವಾಗಿ ಅವುಗಳನ್ನು ವ್ಯವಸ್ಥಿತಗೊಳಿಸಲಾಗುತ್ತದೆ.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಕಸ್ಟಮೈಸೇಶನ್ ಎಂಬುದನ್ನು ಕ್ಲಿಕ್ ಮಾಡಿ.
  3. “ಫೀಚರ್ ಮಾಡಿದ ವಿಭಾಗಗಳು” ಅಡಿಯಲ್ಲಿ, ವಿಭಾಗವನ್ನು ಸೇರಿಸಿ ಎಂಬುದನ್ನು ಕ್ಲಿಕ್ ಮಾಡಿ.
  4. “ಟಾಪ್ ಸಮುದಾಯ ಕ್ಲಿಪ್‌ಗಳು” ಎಂಬುದನ್ನು ಆನ್ ಅಥವಾ ಆಫ್ ಮಾಡಿ. 
  • ಸಲಹೆ: ನೀವು ಶೆಲ್ಫ್ ಅನ್ನು ಮೇಲಕ್ಕೆ ಮತ್ತು ಕೆಳಕ್ಕೆ ಡ್ರ್ಯಾಗ್ ಮಾಡುವ ಮೂಲಕ ಅದರ ಸ್ಥಾನವನ್ನು ನಿರ್ಧರಿಸಬಹುದು.

ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQ ಗಳು)

YouTube ನಲ್ಲಿ ಕ್ಲಿಪ್‌ಗಳನ್ನು ರಚಿಸುವುದು ಹೇಗೆ ಎಂಬುದು ನನಗೆ ಕಾಣಿಸುತ್ತಿಲ್ಲ.

YouTube ನಲ್ಲಿರುವ ವೀಡಿಯೊ ಅಥವಾ ಲೈವ್ ಸ್ಟ್ರೀಮ್‌ನಿಂದ ಕ್ಲಿಪ್‌ಗಳನ್ನು ಮಾಡಲು, ನೀವು:

  • ಸೈನ್ ಇನ್ ಆಗಿರಬೇಕು.
  • ಅರ್ಹ ಮತ್ತು ಸಕ್ರಿಯಗೊಳಿಸಿರುವ ಚಾನಲ್‌ನಿಂದ ಕ್ಲಿಪ್ ಅನ್ನು ರಚಿಸಿ. ಚಾನಲ್‌ವೊಂದು ತನ್ನ ಕಂಟೆಂಟ್ ಮೇಲೆ ಕ್ಲಿಪ್ ರಚಿಸುವುದನ್ನು ಆಫ್ ಸಹ ಮಾಡಬಹುದು.

ಇಲ್ಲಿ ತಿಳಿಸಿರುವ ಅಂಶಗಳಿಂದ ಕ್ಲಿಪ್‌ಗಳನ್ನು ಮಾಡಲು ಸಾಧ್ಯವಿಲ್ಲ:

  • 2 ನಿಮಿಷಗಳಿಗಿಂತ ಚಿಕ್ಕದಾದ ವೀಡಿಯೊಗಳು
  • ಮಕ್ಕಳಿಗಾಗಿ ರಚಿಸಲಾದ ವೀಡಿಯೊಗಳು
  • DVR ಇಲ್ಲದಿರುವ ಲೈವ್ ಸ್ಟ್ರೀಮ್‌ಗಳು
  • 8 ಗಂಟೆಗಳಿಗಿಂತ ಹೆಚ್ಚಿನ ಅವಧಿಯ ಲೈವ್ ಸ್ಟ್ರೀಮ್‌ಗಳು
  • ಇನ್ನೂ ಲೈವ್ ಆಗುತ್ತಿರುವಾಗಲೇ ಪ್ರೀಮಿಯರ್ ಆಗುವುದು
  • ಸುದ್ದಿ ಚಾನಲ್‌ಗಳಿಂದ ಮಾಡಿರುವ ವೀಡಿಯೊಗಳು

ನಾನು ರಚಿಸಿರುವ ಕ್ಲಿಪ್‌ಗಳನ್ನು ಯಾರು ನೋಡಬಹುದು?

ಕ್ಲಿಪ್‌ಗಳು ಸಾರ್ವಜನಿಕವಾಗಿದ್ದು ಕ್ಲಿಪ್‌ಗೆ ಆ್ಯಕ್ಸೆಸ್ ಇರುವ ಯಾರು ಬೇಕಾದರೂ ಅವುಗಳನ್ನು ವೀಕ್ಷಿಸಬಹುದು ಮತ್ತು ಹಂಚಿಕೊಳ್ಳಬಹುದು, ಅಲ್ಲದೇ ಅವರು ಮೂಲ ವೀಡಿಯೊವನ್ನು ಸಹ ವೀಕ್ಷಿಸಬಹುದು. ಮೂಲ ವೀಡಿಯೊದ ಒಡೆತನ ಹೊಂದಿರುವ ರಚನೆಕಾರರು ಲೈಬ್ರರಿ ಪುಟದಲ್ಲಿ ಮತ್ತು YouTube Studio ದಲ್ಲಿ ತಮ್ಮ ವೀಡಿಯೊದಿಂದ ರಚಿಸಲಾದ ಎಲ್ಲಾ ಕ್ಲಿಪ್‌ಗಳಿಗೆ ಆ್ಯಕ್ಸೆಸ್ ಹೊಂದಿರುತ್ತಾರೆ ಹಾಗೂ ಅವರು ಆ ವೀಡಿಯೊದ ಕ್ಲಿಪ್‌ಗಳನ್ನು ವೀಕ್ಷಿಸಬಹುದು ಮತ್ತು ಹಂಚಿಕೊಳ್ಳಬಹುದು. YouTube ನಲ್ಲಿರುವ ವೀಕ್ಷಕರು ಮತ್ತು ರಚನೆಕಾರರಿಗೆ ಲಭ್ಯವಿರುವ ಆಯ್ದ ಹುಡುಕಾಟ, ಕಂಡುಹಿಡಿಯುವಿಕೆ ಮತ್ತು ಅನಾಲಿಟಿಕ್ಸ್ ಸರ್‌ಫೇಸ್‌ಗಳಲ್ಲಿ ಸಹ ಕ್ಲಿಪ್‌ಗಳನ್ನು ನೋಡಬಹುದು.

ನಾನು ರಚಿಸಿದ ಕ್ಲಿಪ್‌ಗಳು ಇನ್ನು ಮುಂದೆ ಏಕೆ ಲಭ್ಯವಿರುವುದಿಲ್ಲ?

ವೀಡಿಯೊವನ್ನು ಅಳಿಸಿದ್ದರೆ ಅಥವಾ ಖಾಸಗಿ ಎಂದು ಹೊಂದಿಸಿದ್ದರೆ, ಆಗ ಆ ವೀಡಿಯೊದ ಕ್ಲಿಪ್‌ಗಳು ಲಭ್ಯವಿರುವುದಿಲ್ಲ. ವೀಡಿಯೊವನ್ನು ಪಟ್ಟಿ ಮಾಡದಿರುವುದು ಎಂದು ಹೊಂದಿಸಿದ್ದರೆ, ಆಗ ಆ ವೀಡಿಯೊದ ಕ್ಲಿಪ್‌ಗಳು ಆಗಲೂ ಲಭ್ಯವಿರುತ್ತವೆ.

ಮೂಲ ವೀಡಿಯೊ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ, ಆಗ ಆ ವೀಡಿಯೊದಿಂದ ರಚಿಸಲಾದ ಕ್ಲಿಪ್‌ಗಳನ್ನು ತೆಗೆದುಹಾಕಲಾಗುತ್ತದೆ.

ಲೈವ್ ಸ್ಟ್ರೀಮ್‌ನಿಂದ ನಾನು ಕ್ಲಿಪ್ ಅನ್ನು ರಚಿಸಿದ್ದೇನೆ ಅದು ಕೆಲಸ ಮಾಡುತ್ತಿಲ್ಲ.

ಲೈವ್ ಸ್ಟ್ರೀಮ್ ಮುಗಿದ ನಂತರ ಮತ್ತು ಅದನ್ನು ವೀಡಿಯೊವನ್ನಾಗಿ ಅಪ್‌ಲೋಡ್ ಮಾಡಿದಾಗ ಕ್ಲಿಪ್‌ಗಳು ಕಂಡುಬರುತ್ತವೆ. DVR ಇಲ್ಲದ ಲೈವ್ ಸ್ಟ್ರೀಮ್‌ಗಳು ಅಥವಾ DVR ಸಮಯಾವಧಿಗಿಂತ ದೀರ್ಘವಾಗಿರುವ ಲೈವ್ ಸ್ಟ್ರೀಮ್‌ಗಳಿಂದ ನೀವು ಕ್ಲಿಪ್‌ಗಳನ್ನು ರಚಿಸಲು ಸಾಧ್ಯವಿಲ್ಲ. ಲೈವ್ ಸ್ಟ್ರೀಮ್‌ಗಳಲ್ಲಿ DVR ಆನ್ ಮಾಡುವುದು ಹೇಗೆ ಎಂದು ತಿಳಿಯಿರಿ.

ಲೈವ್ ಸ್ಟ್ರೀಮ್ DVR ಸಮಯಾವಧಿಗಿಂತ ದೀರ್ಘವಾಗಿದ್ದರೆ, ಲೈವ್ ಸ್ಟ್ರೀಮ್ ಮುಗಿಯುವವರೆಗೆ ಮತ್ತು ಮೂಲ ವೀಡಿಯೊವನ್ನು ಪೋಸ್ಟ್ ಮಾಡುವವರೆಗೂ, DVR ಸಮಯಾವಧಿಯನ್ನು ಮೀರುವ ಯಾವುದೇ ಕ್ಲಿಪ್‌ಗಳನ್ನು ಪ್ಲೇ ಮಾಡಲು ಆಗುವುದಿಲ್ಲ.

ಕ್ಲಿಪ್‌ಗಳಿಂದ ನಾನು Shorts ಅನ್ನು ರಚಿಸಬಹುದೇ?

ಹೌದು, ಕ್ಲಿಪ್‌ನ ಮೂಲ ವೀಡಿಯೊ ಸಹ ರೀಮಿಕ್ಸ್‌ಗೆ ಅರ್ಹವಾಗಿದ್ದರೆ ನೀವು ಕ್ಲಿಪ್ ಅನ್ನು ರೀಮಿಕ್ಸ್ ಮಾಡಬಹುದು. ವೀಡಿಯೊದಲ್ಲಿ ನಿಮಗೆ ಲಭ್ಯವಿರುವ ಎಲ್ಲಾ ರೀಮಿಕ್ಸ್ ಟೂಲ್‍ಗಳು ಆ ವೀಡಿಯೊದ ಯಾವುದೇ ಕ್ಲಿಪ್‌ನಲ್ಲಿಯೂ ಸಹ ಲಭ್ಯವಿರುತ್ತವೆ, ಇಲ್ಲಿ ಇನ್ನಷ್ಟು ತಿಳಿಯಿರಿ.

ಕ್ಲೀಪ್‌ನ ಮೂಲ ವೀಡಿಯೊವನ್ನು ಹೊಂದಿರುವ ರಚನೆಕಾರರು ಇಡೀ ಕ್ಲಿಪ್ ಅನ್ನು Short ಆಗಿ ಪರಿವರ್ತಿಸಬಹುದು, ಇಲ್ಲಿ ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8447306682974890677
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false