ಕ್ಲಿಪ್‌ಗಳನ್ನು ರಚಿಸಿ ಮತ್ತು ನಿರ್ವಹಿಸಿ

ನೀವು ವೀಡಿಯೊ ಅಥವಾ ಲೈವ್ ಸ್ಟ್ರೀಮ್‌ನ ಸಣ್ಣ ಭಾಗವನ್ನು ಕ್ಲಿಪ್ ಮಾಡಬಹುದು ಮತ್ತು ಸಾಮಾಜಿಕ ಚಾನಲ್‌ಗಳಲ್ಲಿ ಹಾಗೂ ಇಮೇಲ್ ಅಥವಾ ಪಠ್ಯ ಸಂದೇಶದಂತಹ ನೇರ ಸಂವಹನಗಳ ಮೂಲಕ ಅದನ್ನು ಇತರರ ಜೊತೆ ಹಂಚಿಕೊಳ್ಳಬಹುದು. ಕ್ಲಿಪ್‌ಗಳು ಸಾರ್ವಜನಿಕವಾಗಿದ್ದು ಕ್ಲಿಪ್‌ಗೆ ಆ್ಯಕ್ಸೆಸ್ ಇರುವ ಯಾರು ಬೇಕಾದರೂ ಅವುಗಳನ್ನು ವೀಕ್ಷಿಸಬಹುದು, ಅಲ್ಲದೇ ಅವರು ಮೂಲ ವೀಡಿಯೊವನ್ನು ಸಹ ವೀಕ್ಷಿಸಬಹುದು. ನೀವು ರಚಿಸಿದ ಕ್ಲಿಪ್‌ಗಳು ಮತ್ತು ನಿಮ್ಮ ವೀಡಿಯೊಗಳಿಂದ ರಚಿಸಲಾದ ಕ್ಲಿಪ್‌ಗಳನ್ನು ನಿಮ್ಮ ಕ್ಲಿಪ್‌ಗಳ ಲೈಬ್ರರಿ ಪುಟದಲ್ಲಿ ನೀವು ಕಾಣಬಹುದು. ವೀಡಿಯೊ ರಚನೆಕಾರರು ತಮ್ಮ ವೀಡಿಯೊಗಳಿಂದ ರಚಿಸಲಾದ ಕ್ಲಿಪ್‌ಗಳನ್ನು YouTube Studio ದಲ್ಲಿ ನಿರ್ವಹಿಸಬಹುದು.

ಗಮನಿಸಿ: ಡಿಫಾಲ್ಟ್ ಆಗಿ, ಕ್ಲಿಪ್ಪಿಂಗ್ ವೀಡಿಯೊಗಳನ್ನು ಆನ್ ಮಾಡಲಾಗಿದೆ. ಅದನ್ನು ಆಫ್ ಮಾಡುವುದು ಹೇಗೆ ಎಂದು ತಿಳಿಯಿರಿ.

YouTube ಕ್ಲಿಪ್‌ಗಳು

ಕ್ಲಿಪ್ ಅನ್ನು ರಚಿಸಿ ಮತ್ತು ಹಂಚಿಕೊಳ್ಳಿ

  1. YouTube ಆ್ಯಪ್  ತೆರೆಯಿರಿ.
  2. ನೀವು ಕ್ಲಿಪ್ ಮಾಡಲು ಬಯಸುವ ವೀಡಿಯೊಗೆ ಹೋಗಿ.
  3. ಸಬ್‌ಸ್ಕ್ರೈಬ್‌ ಬಟನ್ ಕೆಳಗೆ, ಆಯ್ಕೆಗಳನ್ನು ಬಲಕ್ಕೆ ಸ್ಲೈಡ್ ಮಾಡಿ, ಕ್ಲಿಪ್ ಅನ್ನು ಟ್ಯಾಪ್ ಮಾಡಿ.
  4. ಸ್ಲೈಡರ್ ಅನ್ನು ಡ್ರ್ಯಾಗ್ ಮಾಡುವ ಮೂಲಕ ನೀವು ಕ್ಲಿಪ್ ಮಾಡಲು ಬಯಸುವ ವೀಡಿಯೊದ ವಿಭಾಗವನ್ನು ಆಯ್ಕೆಮಾಡಿ. ನಿಮ್ಮ ಆಯ್ಕೆಯ ಉದ್ದವನ್ನು ನೀವು ಗರಿಷ್ಠ 60 ಸೆಕೆಂಡ್‌ಗಳು ಅಥವಾ ಕನಿಷ್ಠ 5 ಸೆಕೆಂಡ್‌ಗಳವರೆಗೆ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
  5. ಕ್ಲಿಪ್ ಹಂಚಿಕೊಳ್ಳಿ ಟ್ಯಾಪ್ ಮಾಡಿ.
  6. ಕ್ಲಿಪ್ ಹಂಚಿಕೊಳ್ಳಲು ಆಯ್ಕೆಯನ್ನು ಆರಿಸಿ:
    • ಎಂಬೆಡ್ ಮಾಡಿ: ನೀವು ವೆಬ್‌ಸೈಟ್‌ನಲ್ಲಿ ವೀಡಿಯೊವನ್ನು ಎಂಬೆಡ್ ಮಾಡಬಹುದು.
    • ಸಾಮಾಜಿಕ ನೆಟ್‌ವರ್ಕ್‌ಗಳು: ನೀವು Facebook ಅಥವಾ Twitter ನಂತಹ ಸಾಮಾಜಿಕ ನೆಟ್‌ವರ್ಕ್‌ನಲ್ಲಿ ನಿಮ್ಮ ಕ್ಲಿಪ್ ಅನ್ನು ಹಂಚಿಕೊಳ್ಳಬಹುದು.
    • ಲಿಂಕ್ ಅನ್ನು ನಕಲಿಸಿ: ನೀವು ಬೇರೆ ಎಲ್ಲಾದರೂ ಪೇಸ್ಟ್ ಮಾಡುವುದಕ್ಕಾಗಿ ನಿಮ್ಮ ಕ್ಲಿಪ್‌ನ ಲಿಂಕ್ ಅನ್ನು ಕಾಪಿ ಮಾಡಬಹುದು.
    • ಇಮೇಲ್: ನಿಮ್ಮ ಮೊಬೈಲ್ ಸಾಧನದಲ್ಲಿರುವ ಡೀಫಾಲ್ಟ್ ಇಮೇಲ್ ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ನಿಮ್ಮ ಕ್ಲಿಪ್ ಅನ್ನು ನೀವು ಹಂಚಿಕೊಳ್ಳಬಹುದು.
ಗಮನಿಸಿ: ನೀವು ರಚಿಸಿದ ಕ್ಲಿಪ್‌ಗಳು ಮತ್ತು ವೀಕ್ಷಕರು ನಿಮ್ಮ ಕಂಟೆಂಟ್‌ನಿಂದ ರಚಿಸಿದ ಕ್ಲಿಪ್‌ಗಳನ್ನು ಕ್ಲಿಪ್‌ಗಳ ಲೈಬ್ರರಿಯಲ್ಲಿ ಕಾಣಬಹುದು. ಇದನ್ನು ನೀವು ಮುಖ್ಯ ಆ್ಯಪ್‌ನಲ್ಲಿನ ನೀವು ಟ್ಯಾಬ್ ನಂತರ ನಿಮ್ಮ ಕ್ಲಿಪ್‌ಗಳು ಎಂಬಲ್ಲಿ ಇದನ್ನು ಕಾಣಬಹುದು.

ನಿಮ್ಮ ವೀಡಿಯೊಗಳ ಕ್ಲಿಪ್‌ಗಳನ್ನು ನಿರ್ವಹಿಸಿ

  1. YouTube Studio ಆ್ಯಪ್ ತೆರೆಯಿರಿ.
  2. ಕೆಳಭಾಗದಲ್ಲಿ, ಕಂಟೆಂಟ್ ಟ್ಯಾಬ್  ಅನ್ನು ಟ್ಯಾಪ್ ಮಾಡಿ.
  3. ಮೇಲ್ಭಾಗದಲ್ಲಿ, ಫಿಲ್ಟರ್ ಟ್ಯಾಪ್ ಮಾಡಿ.
  4. ವೀಡಿಯೊ ಕ್ಲಿಪ್‌ಗಳನ್ನು ಒಳಗೊಂಡಿದೆ ನಂತರ ಅನ್ವಯಿಸಿ ಎಂಬುದನ್ನು ಆಯ್ಕೆಮಾಡಿ.
  5. ವೀಡಿಯೊದ ಕ್ಲಿಪ್‌ಗಳನ್ನು ನೋಡಲು ಅದನ್ನು ಟ್ಯಾಪ್ ಮಾಡಿ.
  6. ಇತ್ತೀಚಿನ ಕ್ಲಿಪ್‌ಗಳು ಅಡಿಯಲ್ಲಿ ಇನ್ನಷ್ಟು ವೀಕ್ಷಿಸಿ ಆಯ್ಕೆಮಾಡಿ.
  7. ನೀವು ನಿರ್ವಹಿಸಲು ಬಯಸುವ ಕ್ಲಿಪ್‌ನಲ್ಲಿ, ಟ್ಯಾಪ್ ಮಾಡಿ.
  8. ನೀವು ತೆಗೆದುಕೊಳ್ಳಲು ಬಯಸುವ ಕ್ರಮವನ್ನು ಆಧರಿಸಿ, ಕ್ಲಿಪ್ ಹಂಚಿಕೊಳ್ಳಿ , ಕ್ಲಿಪ್ ಪ್ಲೇ ಮಾಡಿ , ಚಾನಲ್‌ನಿಂದ ಬಳಕೆದಾರರನ್ನು ಮರೆಮಾಡಿ ಅಥವಾ ಕ್ಲಿಪ್ ಅನ್ನು ವರದಿಮಾಡಿ ಟ್ಯಾಪ್ ಮಾಡಿ.

ನೀವು ರಚಿಸಿದ ಕ್ಲಿಪ್ ಅನ್ನು ಅಳಿಸಿ

YouTube ಆ್ಯಪ್‌ನಲ್ಲಿ

  1. YouTube ಆ್ಯಪ್    ತೆರೆಯಿರಿ.
  2. ನಿಮ್ಮ ಪ್ರೊಫೈಲ್ ಚಿತ್ರ ಅನ್ನು ಟ್ಯಾಪ್ ಮಾಡಿ.
  3. ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು ನಿಮ್ಮ ಕ್ಲಿಪ್‌ಗಳು ಟ್ಯಾಪ್ ಮಾಡಿ.
  4. ನೀವು ಅಳಿಸಲು ಬಯಸುವ ಕ್ಲಿಪ್ ಮೇಲೆ, ಮೆನು ಟ್ಯಾಪ್ ಮಾಡಿ.
  5. ಕ್ಲಿಪ್ ಅಳಿಸಿ ಟ್ಯಾಪ್ ಮಾಡಿ.

YouTube Studio ಆ್ಯಪ್‌ನಲ್ಲಿ

  1. YouTube Studio     ತೆರೆಯಿರಿ.
  2. ಕಂಟೆಂಟ್ ಟ್ಯಾಬ್    ಟ್ಯಾಪ್ ಮಾಡಿ.
  3. ಫಿಲ್ಟರ್    ಟ್ಯಾಪ್ ಮಾಡಿ.
  4. ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು ವೀಡಿಯೊ ಕ್ಲಿಪ್‌ಗಳನ್ನು ಒಳಗೊಂಡಿದೆ ನಂತರ  ಅನ್ವಯಿಸಿ ಆಯ್ಕೆಮಾಡಿ.
  5. ನೀವು ಕ್ಲಿಪ್‌ಗಳನ್ನು ನೋಡಲು ಬಯಸುವ ವೀಡಿಯೊವನ್ನು ಆಯ್ಕೆಮಾಡಿ.
  6. ಇತ್ತೀಚಿನ ಕ್ಲಿಪ್‌ಗಳು ಕಾರ್ಡ್ ಅಡಿಯಲ್ಲಿ ಇನ್ನಷ್ಟು ವೀಕ್ಷಿಸಿ ಟ್ಯಾಪ್ ಮಾಡಿ.
  7. ನೀವು ನಿರ್ವಹಿಸಲು ಬಯಸುವ ಕ್ಲಿಪ್ ಪಕ್ಕದಲ್ಲಿ,     ಟ್ಯಾಪ್ ಮಾಡಿ.
  8. ಕ್ಲಿಪ್ ಅಳಿಸಿ   ಟ್ಯಾಪ್ ಮಾಡಿ.

ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQs)

YouTube ನಲ್ಲಿ ಕ್ಲಿಪ್‌ಗಳನ್ನು ರಚಿಸುವುದು ಹೇಗೆ ಎಂಬುದು ನನಗೆ ಕಾಣಿಸುತ್ತಿಲ್ಲ.

YouTube ನಲ್ಲಿರುವ ವೀಡಿಯೊ ಅಥವಾ ಲೈವ್ ಸ್ಟ್ರೀಮ್‌ನಿಂದ ಕ್ಲಿಪ್‌ಗಳನ್ನು ಮಾಡಲು, ನೀವು:

  • ಸೈನ್ ಇನ್ ಆಗಿರಬೇಕು.
  • ಅರ್ಹ ಮತ್ತು ಸಕ್ರಿಯಗೊಳಿಸಿರುವ ಚಾನಲ್‌ನಿಂದ ಕ್ಲಿಪ್ ಅನ್ನು ರಚಿಸಿ. ಚಾನಲ್‌ವೊಂದು ತನ್ನ ಕಂಟೆಂಟ್ ಮೇಲೆ ಕ್ಲಿಪ್ ರಚಿಸುವುದನ್ನು ಆಫ್ ಸಹ ಮಾಡಬಹುದು.

ಇಲ್ಲಿ ತಿಳಿಸಿರುವ ಅಂಶಗಳಿಂದ ಕ್ಲಿಪ್‌ಗಳನ್ನು ಮಾಡಲು ಸಾಧ್ಯವಿಲ್ಲ:

  • 2 ನಿಮಿಷಗಳಿಗಿಂತ ಚಿಕ್ಕದಾದ ವೀಡಿಯೊಗಳು
  • ಮಕ್ಕಳಿಗಾಗಿ ರಚಿಸಲಾದ ವೀಡಿಯೊಗಳು
  • DVR ಇಲ್ಲದಿರುವ ಲೈವ್ ಸ್ಟ್ರೀಮ್‌ಗಳು
  • 8 ಗಂಟೆಗಳಿಗಿಂತ ಹೆಚ್ಚಿನ ಅವಧಿಯ ಲೈವ್ ಸ್ಟ್ರೀಮ್‌ಗಳು
  • ಇನ್ನೂ ಲೈವ್ ಆಗುತ್ತಿರುವಾಗಲೇ ಪ್ರೀಮಿಯರ್ ಆಗುವುದು
  • ಸುದ್ದಿ ಚಾನಲ್‌ಗಳಿಂದ ಮಾಡಿರುವ ವೀಡಿಯೊಗಳು

ನಾನು ರಚಿಸಿರುವ ಕ್ಲಿಪ್‌ಗಳನ್ನು ಯಾರು ನೋಡಬಹುದು?

ಕ್ಲಿಪ್‌ಗಳು ಸಾರ್ವಜನಿಕವಾಗಿದ್ದು ಕ್ಲಿಪ್‌ಗೆ ಆ್ಯಕ್ಸೆಸ್ ಇರುವ ಯಾರು ಬೇಕಾದರೂ ಅವುಗಳನ್ನು ವೀಕ್ಷಿಸಬಹುದು ಮತ್ತು ಹಂಚಿಕೊಳ್ಳಬಹುದು, ಅಲ್ಲದೇ ಅವರು ಮೂಲ ವೀಡಿಯೊವನ್ನು ಸಹ ವೀಕ್ಷಿಸಬಹುದು. ಮೂಲ ವೀಡಿಯೊದ ಒಡೆತನ ಹೊಂದಿರುವ ರಚನೆಕಾರರು ಲೈಬ್ರರಿ ಪುಟದಲ್ಲಿ ಮತ್ತು YouTube Studio ದಲ್ಲಿ ತಮ್ಮ ವೀಡಿಯೊದಿಂದ ರಚಿಸಲಾದ ಎಲ್ಲಾ ಕ್ಲಿಪ್‌ಗಳಿಗೆ ಆ್ಯಕ್ಸೆಸ್ ಹೊಂದಿರುತ್ತಾರೆ ಹಾಗೂ ಅವರು ಆ ವೀಡಿಯೊದ ಕ್ಲಿಪ್‌ಗಳನ್ನು ವೀಕ್ಷಿಸಬಹುದು ಮತ್ತು ಹಂಚಿಕೊಳ್ಳಬಹುದು. YouTube ನಲ್ಲಿರುವ ವೀಕ್ಷಕರು ಮತ್ತು ರಚನೆಕಾರರಿಗೆ ಲಭ್ಯವಿರುವ ಆಯ್ದ ಹುಡುಕಾಟ, ಕಂಡುಹಿಡಿಯುವಿಕೆ ಮತ್ತು ಅನಾಲಿಟಿಕ್ಸ್ ಸರ್‌ಫೇಸ್‌ಗಳಲ್ಲಿ ಸಹ ಕ್ಲಿಪ್‌ಗಳನ್ನು ನೋಡಬಹುದು.

ನಾನು ರಚಿಸಿದ ಕ್ಲಿಪ್‌ಗಳು ಇನ್ನು ಮುಂದೆ ಏಕೆ ಲಭ್ಯವಿರುವುದಿಲ್ಲ?

ವೀಡಿಯೊವನ್ನು ಅಳಿಸಿದ್ದರೆ ಅಥವಾ ಖಾಸಗಿ ಎಂದು ಹೊಂದಿಸಿದ್ದರೆ, ಆಗ ಆ ವೀಡಿಯೊದ ಕ್ಲಿಪ್‌ಗಳು ಲಭ್ಯವಿರುವುದಿಲ್ಲ. ವೀಡಿಯೊವನ್ನು ಪಟ್ಟಿ ಮಾಡದಿರುವುದು ಎಂದು ಹೊಂದಿಸಿದ್ದರೆ, ಆಗ ಆ ವೀಡಿಯೊದ ಕ್ಲಿಪ್‌ಗಳು ಆಗಲೂ ಲಭ್ಯವಿರುತ್ತವೆ.

ಮೂಲ ವೀಡಿಯೊ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ, ಆಗ ಆ ವೀಡಿಯೊದಿಂದ ರಚಿಸಲಾದ ಕ್ಲಿಪ್‌ಗಳನ್ನು ತೆಗೆದುಹಾಕಲಾಗುತ್ತದೆ.

ಲೈವ್ ಸ್ಟ್ರೀಮ್‌ನಿಂದ ನಾನು ಕ್ಲಿಪ್ ಅನ್ನು ರಚಿಸಿದ್ದೇನೆ ಅದು ಕೆಲಸ ಮಾಡುತ್ತಿಲ್ಲ.

ಲೈವ್ ಸ್ಟ್ರೀಮ್ ಮುಗಿದ ನಂತರ ಮತ್ತು ಅದನ್ನು ವೀಡಿಯೊವನ್ನಾಗಿ ಅಪ್‌ಲೋಡ್ ಮಾಡಿದಾಗ ಕ್ಲಿಪ್‌ಗಳು ಕಂಡುಬರುತ್ತವೆ. DVR ಇಲ್ಲದ ಲೈವ್ ಸ್ಟ್ರೀಮ್‌ಗಳು ಅಥವಾ DVR ಸಮಯಾವಧಿಗಿಂತ ದೀರ್ಘವಾಗಿರುವ ಲೈವ್ ಸ್ಟ್ರೀಮ್‌ಗಳಿಂದ ನೀವು ಕ್ಲಿಪ್‌ಗಳನ್ನು ರಚಿಸಲು ಸಾಧ್ಯವಿಲ್ಲ. ಲೈವ್ ಸ್ಟ್ರೀಮ್‌ಗಳಲ್ಲಿ DVR ಆನ್ ಮಾಡುವುದು ಹೇಗೆ ಎಂದು ತಿಳಿಯಿರಿ.

ಲೈವ್ ಸ್ಟ್ರೀಮ್ DVR ಸಮಯಾವಧಿಗಿಂತ ದೀರ್ಘವಾಗಿದ್ದರೆ, ಲೈವ್ ಸ್ಟ್ರೀಮ್ ಮುಗಿಯುವವರೆಗೆ ಮತ್ತು ಮೂಲ ವೀಡಿಯೊವನ್ನು ಪೋಸ್ಟ್ ಮಾಡುವವರೆಗೂ, DVR ಸಮಯಾವಧಿಯನ್ನು ಮೀರುವ ಯಾವುದೇ ಕ್ಲಿಪ್‌ಗಳನ್ನು ಪ್ಲೇ ಮಾಡಲು ಆಗುವುದಿಲ್ಲ.

ಕ್ಲಿಪ್‌ಗಳಿಂದ ನಾನು Shorts ಅನ್ನು ರಚಿಸಬಹುದೇ?

ಹೌದು, ಕ್ಲಿಪ್‌ನ ಮೂಲ ವೀಡಿಯೊ ಸಹ ರೀಮಿಕ್ಸ್‌ಗೆ ಅರ್ಹವಾಗಿದ್ದರೆ ನೀವು ಕ್ಲಿಪ್ ಅನ್ನು ರೀಮಿಕ್ಸ್ ಮಾಡಬಹುದು. ವೀಡಿಯೊದಲ್ಲಿ ನಿಮಗೆ ಲಭ್ಯವಿರುವ ಎಲ್ಲಾ ರೀಮಿಕ್ಸ್ ಟೂಲ್‍ಗಳು ಆ ವೀಡಿಯೊದ ಯಾವುದೇ ಕ್ಲಿಪ್‌ನಲ್ಲಿಯೂ ಸಹ ಲಭ್ಯವಿರುತ್ತವೆ, ಇಲ್ಲಿ ಇನ್ನಷ್ಟು ತಿಳಿಯಿರಿ.

ಕ್ಲಿಪ್‌ನ ಮೂಲ ವೀಡಿಯೊವನ್ನು ಹೊಂದಿರುವ ರಚನೆಕಾರರು ಇಡೀ ಕ್ಲಿಪ್ ಅನ್ನು Short ಆಗಿ ಪರಿವರ್ತಿಸಬಹುದು, ಇಲ್ಲಿ ಇನ್ನಷ್ಟು ತಿಳಿಯಿರಿ.

ನನ್ನ ಕ್ಲಿಪ್‌ಗಳ ಪರ್ಫಾರ್ಮೆನ್ಸ್ ಅನ್ನು ನಾನು ಹೇಗೆ ನೋಡಬಹುದು?

YouTube Studio ದಲ್ಲಿನ ಕ್ಲಿಪ್‌ಗಳ ವಿಭಾಗದಲ್ಲಿ ನಿಮ್ಮ ವೀಡಿಯೊದಿಂದ ರಚಿಸಿದ ಕ್ಲಿಪ್‌ಗಳ ಸಂಖ್ಯೆ, ಪ್ರತಿ ಕ್ಲಿಪ್‌ಗಾಗಿ ವೀಕ್ಷಣೆಗಳ ಸಂಖ್ಯೆ, ಅದನ್ನು ರಚಿಸಿದವರು ಮತ್ತು ಇತರ ಮಾಹಿತಿಯನ್ನು ನೀವು ವೀಕ್ಷಿಸಬಹುದು. 

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9736170280652073841
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false