YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವದ ಕುರಿತು ರಚನೆಕಾರರಿಗೆ ಮಾಹಿತಿ

YouTube ನಲ್ಲಿಯ ಮೇಲ್ವಿಚಾರಣೆ ಮಾಡಿದ ಅನುಭವವು ಪೋಷಕರಿಗೆ ಹೊಸ ಆಯ್ಕೆ ಆಗಿದ್ದು, ಅದು ಅವರ ಮಕ್ಕಳು (13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಥವಾ ಪ್ರಸ್ತುತ ಅವರ ದೇಶ/ಪ್ರದೇಶಕ್ಕೆ ಸೂಕ್ತ ವಯಸ್ಸು) ಮೇಲ್ವಿಚಾರಣೆ ಮಾಡಿದ ಖಾತೆ ಮೂಲಕ YouTube ಅನ್ನು ಆ್ಯಕ್ಸೆಸ್ ಮಾಡಲು ಅನುಮತಿಸುತ್ತದೆ. ರಚನೆಕಾರರಾಗಿ, ನಿಮ್ಮ ವೀಡಿಯೊಗಳು ಈ ಅನುಭವದಲ್ಲಿ ಲಭ್ಯ ಇರಬಹುದು ಎಂದು ಇದರ ಅರ್ಥ.

YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವ ಎಂದರೇನು?

ಪೋಷಕರು YouTube ನಲ್ಲಿ 3 ವಿವಿಧ ಕಂಟೆಂಟ್ ಸೆಟ್ಟಿಂಗ್‌ಗಳಿಂದ ಆಯ್ಕೆ ಮಾಡಬಹುದು (ಎಕ್ಸ್‌ಪ್ಲೋರ್, ಎಕ್ಸ್‌ಪ್ಲೋರ್ ಮೋರ್ ಮತ್ತು ಮೋಸ್ಟ್ ಆಫ್ YouTube). ಪ್ರತಿ ಕಂಟೆಂಟ್ ಸೆಟ್ಟಿಂಗ್‌ನಲ್ಲಿ ಯಾವ ವೀಡಿಯೊಗಳನ್ನು ಸೇರಿಸಬೇಕು ಎಂದು ನಿರ್ಧರಿಸಲು ನಾವು ಬಳಕೆದಾರರ ಇನ್‌ಪುಟ್, ಮಷಿನ್ ಲರ್ನಿಂಗ್ ಮತ್ತು ಮಾನವ ಪರಿಶೀಲನೆಗಳನ್ನು ಒಟ್ಟುಗೂಡಿಸುತ್ತೇವೆ. ಈ ಕಂಟೆಂಟ್ ಸೆಟ್ಟಿಂಗ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಪೋಷಕರು YouTube ಗೆ ಆ್ಯಕ್ಸೆಸ್ ಅನ್ನು ಸಮ್ಮತಿಸಿದಾಗ, ಅವರ ಮಕ್ಕಳ ಅನುಭವವು ಸಾಮಾನ್ಯ YouTube ರೀತಿಯೇ ಭಾವಿಸುತ್ತಾರೆ, ಆದರೆ ಅವರು ಹುಡುಕಿ ನೋಡಬಹುದಾದ ವೀಡಿಯೊಗಳು, ಅವರು ಉಪಯೋಗಿಸಬಹುದಾದ ಫೀಚರ್‍ಗಳು, ಡಿಫಾಲ್ಟ್ ಖಾತೆ ಸೆಟ್ಟಿಂಗ್‌ಗಳು ಮತ್ತು ಜಾಹೀರಾತು ರಕ್ಷಣೆ ಗಳೊಂದಿಗೆ ಹೊಂದಾಣಿಕೆಗಳಿರುತ್ತವೆ.

ಮೇಲ್ವಿಚಾರಣೆ ಮಾಡಿದ ಅನುಭವಕ್ಕೆ YouTube ನಲ್ಲಿ ಪ್ರತಿಕ್ರಿಯೆ ನೀಡುವುದು

ನಿಮ್ಮ ವೀಡಿಯೊಗಳು ಯಾವುದೇ ಒಂದು ಕಂಟೆಂಟ್ ಸೆಟ್ಟಿಂಗ್‌ಗಳಲ್ಲಿ ಲಭ್ಯವಿಲ್ಲದಿದ್ದರೆ ಹಾಗೂ ಅವು ಇರಬೇಕೆಂದು ನಿಮ್ಮ ನಂಬಿಕೆ ಇದ್ದರೆ, ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ನಮಗೆ ಕಳುಹಿಸಿ.

ನಮ್ಮ ಸಿಸ್ಟಂಗಳು ಪರಿಪೂರ್ಣವಲ್ಲ ಮತ್ತು ಅವು ಕೆಲವು ತಪ್ಪುಗಳನ್ನು ಮಾಡುತ್ತವೆ, ನಿಮ್ಮ ಪ್ರತಿಕ್ರಿಯೆಯು ನಮಗೆ ಸುಧಾರಿಸಲು ಸಹಾಯ ಮಾಡುತ್ತದೆ. ಸಲ್ಲಿಸಿದ ವೀಡಿಯೊಗೆ ನೀವು ಪ್ರತಿಕ್ರಿಯೆಯನ್ನು ಪಡೆಯದಿದ್ದರೆ, ನೀವು ಸಲ್ಲಿಸಿದ ಪ್ರತಿ ವೀಡಿಯೊಗೆ ಅಭಿಪ್ರಾಯ ಕೊಡಲು ನಾವು ಅತ್ಯುತ್ತಮವಾಗಿ ಪ್ರಯತ್ನಿಸುತ್ತೇವೆ.

ನಿಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವುದಕ್ಕೂ ಮೊದಲು, ನೀವು ಮೇಲ್ವಿಚಾರಣೆ ಮಾಡಿದ ಅನುಭವವನ್ನು ಉಪಯೋಗಿಸುತ್ತಿರುವ ಕುಟುಂಬಗಳಿಗಾಗಿ ಇರುವ ಕಂಟೆಂಟ್ ಸೆಟ್ಟಿಂಗ್‌ಗಳ ಬಗ್ಗೆ ಓದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಮೇಲ್ವಿಚಾರಣೆ ಮಾಡಿದ ಖಾತೆಗಳಿಗೆ ಯಾವ ಫೀಚರ್‍‌ಗಳು ಲಭ್ಯವಿಲ್ಲ?

ವಿವಿಧ ಕಂಟೆಂಟ್ ಸೆಟ್ಟಿಂಗ್ ಆಯ್ಕೆಗಳಿಗೆ ಲಭ್ಯವಿರುವ ಕೆಲವು ಸಾಮಾನ್ಯವಾಗಿ ಫೀಚರ್‍ಗಳು ಆಫ್ ಆಗಿರುತ್ತವೆ. ಸಮಯ ಕಳೆದಂತೆ ಹೆಚ್ಚಿನ ಫೀಚರ್‌ಗಳನ್ನು ಪರಿಚಯಿಸಲು ನಾವು ಪೋಷಕರು ಮತ್ತು ಉದ್ಯಮ ತಜ್ಞರೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸುತ್ತೇವೆ. ಇಲ್ಲಿಫೀಚರ್‍‌ಗಳ ಪಟ್ಟಿಗೆ ಹೋಗಿ.

ರಚನೆಕಾರರು ಈ ಕಂಟೆಂಟ್ ಸೆಟ್ಟಿಂಗ್‌ಗಳಿಗೆ ಸಕ್ರಿಯಗೊಳಿಸುವಿಕೆ ಅಥವಾ ಹೊರಗುಳಿಯಿರಿ ಎಂದು ಆಯ್ಕೆ ಮಾಡಬಹುದೇ?

ಈ ಸಲಕ್ಕೆ ಅಲ್ಲ -- ನಾವು ಯಾವ ವೀಡಿಯೊಗಳನ್ನು ಸೇರಿಸಿಕೊಳ್ಳುತ್ತೇವೆ ಎಂದು ನಿರ್ಧರಿಸುವಾಗ, ಬಳಕೆದಾರರ ಇನ್‌ಪುಟ್, ಮಷಿನ್ ಲರ್ನಿಂಗ್ ಮತ್ತು ಮಾನವ ಅಭಿಪ್ರಾಯ ಇವುಗಳನ್ನು ಒಟ್ಟುಗೂಡಿಸುತ್ತೇವೆ.

ಮೇಲ್ವಿಚಾರಣೆ ಮಾಡಿದ ಖಾತೆಗಳು YouTube ನ ಎಲ್ಲಾ ವೀಕ್ಷಕರಿಗೆ ಪರಿಣಾಮ ಬೀರುತ್ತದೆಯೇ?

ಇಲ್ಲ, ಮೇಲ್ವಿಚಾರಣೆ ಮಾಡಿದ ಖಾತೆಗಳು, ಪೋಷಕರಿಗೆ ಹೊಸ ಮಾರ್ಗೋಪಾಯವಾಗಿದೆ ಹಾಗೂ YouTube ನಲ್ಲಿರುವ ಸಾಮಾನ್ಯ ಖಾತೆಗಳ (ಮೇಲ್ವಿಚಾರಣೆ ಅಲ್ಲದ) ನಿಮ್ಮ ಕಂಟೆಂಟ್‌ನ ಮಾನಿಟೈಸೇಶನ್ ಅಥವಾ ಅನ್ವೇಷಣೆ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2327730657614128164
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false