ನಿಮ್ಮ ವೀಡಿಯೊಗಳಲ್ಲಿ ಅಮಾನ್ಯ ಟ್ರಾಫಿಕ್

ಅಮಾನ್ಯ ಟ್ರಾಫಿಕ್ ಎಂಬುದು ನಿಮ್ಮ ಚಾನಲ್‌ನಲ್ಲಿ ನೈಜ ಬಳಕೆದಾರರು ಅಥವಾ ನಿಜವಾದ ಆಸಕ್ತಿಯನ್ನು ಹೊಂದಿರುವ ಬಳಕೆದಾರರಿಂದ ಬಂದಿರದ ಯಾವುದೇ ಚಟುವಟಿಕೆಯಾಗಿದೆ. ಬೇರೆಯವರಿಗಿಂತ, ವೀಡಿಯೊಗಳಿಗೆ ಸಂಬಂಧಿಸಿದ ಜಾಹೀರಾತು ಆದಾಯವನ್ನು ಹೆಚ್ಚಿಸಲು ವಂಚನೆಯ, ಕೃತಕ ಅಥವಾ ಉದ್ದೇಶಪೂರ್ವಕವಲ್ಲದ ಮಾರ್ಗಗಳನ್ನು ಇದು ಒಳಗೊಂಡಿರಬಹುದು.

ವೀಡಿಯೊಗಳಲ್ಲಿ ಅಮಾನ್ಯ ಟ್ರಾಫಿಕ್ ಕುರಿತಾದ ಕೆಲವು ಉದಾಹರಣೆಗಳೆಂದರೆ:

  • "ಟ್ರಾಫಿಕ್ ಬೂಸ್ಟಿಂಗ್" ಸೇವೆಗಳು ಮತ್ತು ಇತರರು ಕಾನೂನುಬದ್ಧ ಜಾಹೀರಾತು ನೆಟ್‌ವರ್ಕ್‌ಗಳು ಎಂದು ಹೇಳಿಕೊಳ್ಳುವ ಇತರ ನೆಟ್‌ವರ್ಕ್‌ಗಳು ಒಳಗೊಂಡಂತೆ, ಥರ್ಡ್ ಪಾರ್ಟಿಗಳಿಂದ ನಿರ್ವಹಿಸಲ್ಪಡುವ ಸ್ವಯಂಚಾಲಿತ ಅಥವಾ ಪ್ರೋತ್ಸಾಹಿತ ಟ್ರಾಫಿಕ್.
  • ವೀಡಿಯೊಗಳಲ್ಲಿ ಆ್ಯಡ್‌ಗಳು ಪ್ಲೇ ಆಗುವುದರಿಂದ ಆ್ಯಡ್ ಟ್ರಾಫಿಕ್ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಸ್ನೇಹಿತರು ಅಥವಾ ಸಂಪರ್ಕಗಳು ನಿಮ್ಮ ವೀಡಿಯೊಗಳ ಪ್ಲೇಪಟ್ಟಿಗಳನ್ನು ದಿನವಿಡೀ ರನ್ ಮಾಡಲು ಅವಕಾಶ ಮಾಡಿಕೊಡುವುದು.
  • ಜಾಹೀರಾತು ಆದಾಯವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಆ್ಯಡ್ ಟ್ರಾಫಿಕ್ ಅನ್ನು ಹೆಚ್ಚಿಸಲು ಕೆಲವು ವೀಡಿಯೊಗಳಲ್ಲಿ ಜಾಹೀರಾತುಗಳನ್ನು ವೀಕ್ಷಿಸಬೇಕು ಅಥವಾ ಕ್ಲಿಕ್ ಮಾಡಬೇಕು ಎಂಬುದಾಗಿ ನಿಮ್ಮ ವೀಕ್ಷಕರಿಗೆ ತಿಳಿಸುವುದು.

ಟ್ರಾಫಿಕ್ ಎಲ್ಲಿ ಅಥವಾ ಹೇಗೆ ರಚನೆಯಾಯಿತು ಎಂಬುದನ್ನು ಲೆಕ್ಕಿಸದೆಯೇ, ಅದು ಮಾನ್ಯವಾಗಿದೆಯೇ ಅಥವಾ ಅಮಾನ್ಯವಾಗಿದೆಯೇ ಎಂಬುದನ್ನು ನಿರ್ಧರಿಸಲು ನಮ್ಮ ಸಿಸ್ಟಂಗಳು ನಿಮ್ಮ ವೀಡಿಯೊಗಳಲ್ಲಿ ಟ್ರಾಫಿಕ್ ಅನ್ನು ವಿಶ್ಲೇಷಿಸುತ್ತವೆ. ರಚನೆಕಾರರು, ಜಾಹೀರಾತುದಾರರು ಮತ್ತು ವೀಕ್ಷಕರಿಗಾಗಿ ಪ್ಲ್ಯಾಟ್‌ಫಾರ್ಮ್ ಕೆಲಸ ಮಾಡುತ್ತಿರಲು ನಾವು ಅಮಾನ್ಯ ಟ್ರಾಫಿಕ್ ಅನ್ನು ತ್ವರಿತವಾಗಿ ಪರಿಹರಿಸುವುದು ಮುಖ್ಯವಾಗಿದೆ. ಅಮಾನ್ಯ ಟ್ರಾಫಿಕ್‌ನ ವಿರುದ್ಧ ನಮ್ಮ ಜಾಹೀರಾತು ಸಿಸ್ಟಂಗಳನ್ನು ರಕ್ಷಿಸುವುದನ್ನು ಮುಂದುವರಿಸುವ ಮೂಲಕ, ಜಾಹೀರಾತುದಾರರು ಪ್ಲ್ಯಾಟ್‌ಫಾರ್ಮ್‌ನಲ್ಲಿ ಭರವಸೆಯ ಹೂಡಿಕೆ ಮಾಡುವುದನ್ನು ಮುಂದುವರಿಸಬಹುದು. ಇದು ರಚನೆಕಾರರಿಗೆ ಅವರು ರಚಿಸುವ ಅತ್ಯುತ್ತಮ ಕಂಟೆಂಟ್ ಮೂಲಕ ಹಣಗಳಿಸಲು ಸಹಾಯ ಮಾಡುತ್ತದೆ. 

ಕೆಲವೊಮ್ಮೆ, ರಚನೆಕಾರರು ತಮ್ಮ ಚಾನಲ್‌ಗಳನ್ನು ಉದ್ದೇಶಪೂರ್ವಕವಾಗಿ ನಿರ್ವಹಿಸದಿದ್ದರೂ ಸಹ ಅಮಾನ್ಯ ಟ್ರಾಫಿಕ್‌ನಿಂದ ಅದು ಪ್ರಭಾವಿತವಾಗಿರುವುದನ್ನು ಕಾಣಬಹುದು. ಇದರರ್ಥ, ರಚನೆಕಾರರು ತಾವು ಸ್ವೀಕರಿಸಿದ ಚಟುವಟಿಕೆಯು ಅಮಾನ್ಯ ಟ್ರಾಫಿಕ್‌ನ ಪರಿಣಾಮವಾಗಿದೆ ಎಂದು ತಿಳಿದಿರದ ಸಂದರ್ಭಗಳಿವೆ.

ಅದನ್ನು ತಡೆಯಲು ನಾವು ಅವಿರತ ಪ್ರಯತ್ನಿಸುತ್ತಿರುವಾಗ, ಕೆಲವು ರೀತಿಯ ಅಮಾನ್ಯ ಟ್ರಾಫಿಕ್ ಸಂಭವಿಸಿದ ನಂತರ ಮಾತ್ರ ನಮ್ಮ ಸಿಸ್ಟಂಗಳಿಂದ ಪತ್ತೆ ಮಾಡಬಹುದಾಗಿದೆ. ಪರಿಣಾಮವಾಗಿ, YouTube Analytics ಮತ್ತು YouTube ಗಾಗಿ AdSense ನಲ್ಲಿ ವೀಕ್ಷಣೆಗಳು ಮತ್ತು ಗಳಿಕೆಗಳಿಗೆ ಅಡ್ಜಸ್ಟ್‌ಮೆಂಟ್‌‌‌ಗಳನ್ನು ಮಾಡಲಾಗಿದೆ. ನೀವು ಈ ಅಡ್ಜಸ್ಟ್‌ಮೆಂಟ್‌‌‌ಗಳನ್ನು ನೋಡಿದಾಗ, ನೀವು ಆ ಟ್ರಾಫಿಕ್ ಅನ್ನು ಅಗತ್ಯವಾಗಿ ಜನರೇಟ್ ಮಾಡದಿದ್ದರೂ ಅಥವಾ ಡ್ರೈವ್ ಮಾಡದಿದ್ದರೂ ಸಹ ನಮ್ಮ ಅಮಾನ್ಯ ಟ್ರಾಫಿಕ್ ವಿರುದ್ಧದ ರಕ್ಷಣೆಗಳು ಪ್ಲ್ಯಾಟ್‌ಫಾರ್ಮ್ ಅನ್ನು ಸುರಕ್ಷಿತಗೊಳಿಸಲು ಕೆಲಸ ಮಾಡುತ್ತಿವೆ ಎಂದರ್ಥ.

ಅಮಾನ್ಯ ಟ್ರಾಫಿಕ್ ಕುರಿತು ಹೆಚ್ಚಿನ ಮಾಹಿತಿಗಾಗಿ, YouTube ಸಮುದಾಯದ ಸಹಾಯ ಫೋರಮ್ ಅನ್ನು ಪರಿಶೀಲಿಸಿ.

ಅಮಾನ್ಯ ಟ್ರಾಫಿಕ್‌ನಿಂದಾಗಿ ನಿಮ್ಮ ಗಳಿಕೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ

ನಿಮ್ಮ ಚಾನಲ್‌ನಲ್ಲಿ ಅಮಾನ್ಯ ಟ್ರಾಫಿಕ್ ಸಂಭವಿಸಿದರೆ, ಈ ಕೆಳಗಿನ ಬದಲಾವಣೆಗಳನ್ನು ನೀವು ಕಾಣಬಹುದು:

  • ವೀಕ್ಷಣೆಗಳು ಮತ್ತು ಗಳಿಕೆಗಳಲ್ಲಿ ಇಳಿಕೆ. ವೀಕ್ಷಣೆಗಳು ಮತ್ತು ಮೇಲಿನ ಕಾರಣಕ್ಕಾಗಿ, ಅಮಾನ್ಯ ಟ್ರಾಫಿಕ್‌ಗೆ ಸಂಬಂಧಿಸಿದ ಗಳಿಕೆಯನ್ನು ತೆಗೆದುಹಾಕಲು YouTube Analytics ನಲ್ಲಿ ಅಡ್ಜಸ್ಟ್‌ಮೆಂಟ್‌ಗಳನ್ನು ನೀವು ನೋಡಬಹುದು.  
  • ನಿಮ್ಮ ಚಾನಲ್‌ನಲ್ಲಿ ಕೆಲವೇ ಆ್ಯಡ್‌ಗಳು. ನಮ್ಮ ಸಿಸ್ಟಂಗಳು ಅಮಾನ್ಯ ಟ್ರಾಫಿಕ್‌ನ ಅಪಾಯವನ್ನು ಕಡಿಮೆ ಮಾಡುವವರೆಗೆ ನಾವು ಆ್ಯಡ್‌ ಸರ್ವಿಂಗ್ ಅನ್ನು ತಾತ್ಕಾಲಿಕವಾಗಿ ಮಿತಿಗೊಳಿಸಬಹುದು, ಇದು ವೀಕ್ಷಣೆಗಳು ಸ್ಥಿರವಾಗಿರುವಾಗಲೂ, ನೀವು ಗಳಿಸಬಹುದಾದ ಆದಾಯದ ಮೇಲೆ ಪರಿಣಾಮ ಬೀರಬಹುದು.
  • ನಿಮ್ಮ YouTube ಗಾಗಿ AdSense ಖಾತೆಯಲ್ಲಿ ಅಡ್ಜಸ್ಟ್‌ಮೆಂಟ್‌‌‌ಗಳು. ನಿಮ್ಮ ಪಾವತಿಯನ್ನು ಲೆಕ್ಕಹಾಕಿದ ಅಥವಾ ಪಾವತಿಸಿದ ನಂತರ ಅಮಾನ್ಯ ಟ್ರಾಫಿಕ್‌ನಿಂದ ಸಂಯೋಜಿತ ಗಳಿಕೆಗಳನ್ನು ನಾವು ಪತ್ತೆ ಮಾಡಿದರೆ, ಮೊತ್ತವನ್ನು ನಿಮ್ಮ ಪ್ರಸ್ತುತ ಅಥವಾ ಭವಿಷ್ಯದ YouTube ಗಾಗಿ AdSense ಬ್ಯಾಲೆನ್ಸ್ ಮೂಲಕ ಸರಿದೂಗಿಸಲಾಗುತ್ತದೆ.
  • ಪಾವತಿಯಲ್ಲಿ ವಿಳಂಬ. ನಿಮ್ಮ ಚಾನಲ್‌ನಲ್ಲಿ ಟ್ರಾಫಿಕ್ ಮತ್ತು ಸಂಯೋಜಿತ ಗಳಿಕೆಗಳನ್ನು ವಿಚಾರಣೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಸಮಯಾವಕಾಶವನ್ನು ನೀಡಲೆಂದು ಹಣಪಾವತಿಗಳನ್ನು 90 ದಿನಗಳವರೆಗೆ ವಿಳಂಬಗೊಳಿಸಬಹುದು. ಗಳಿಕೆಗಳನ್ನು ಅಮಾನ್ಯವೆಂದು ನಿರ್ಧರಿಸಿದರೆ ಅವುಗಳನ್ನು ತಡೆಹಿಡಿಯಬಹುದು, ಅಡ್ಜಸ್ಟ್ ಮಾಡಬಹುದು ಅಥವಾ ಸರಿದೂಗಿಸಬಹುದು.

YouTube Analytics ನಲ್ಲಿ ನಿಮ್ಮ ಅಂದಾಜು ಗಳಿಕೆಯ ಮೇಲೆ ಅಮಾನ್ಯ ಟ್ರಾಫಿಕ್ ಹೇಗೆ ಪರಿಣಾಮ ಬೀರಬಹುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಅಮಾನ್ಯ ಟ್ರಾಫಿಕ್ ಅನ್ನು ಪತ್ತೆ ಮಾಡಿದಾಗ, ಜಾಹೀರಾತುದಾರರಿಗೆ ಶುಲ್ಕ ವಿಧಿಸಲಾಗುವುದಿಲ್ಲ ಅಥವಾ ಸೂಕ್ತ ಮತ್ತು ಸಾಧ್ಯವಿರುವ ಕಡೆ ಮರುಪಾವತಿ ಮಾಡಲಾಗುತ್ತದೆ. 

ಅಮಾನ್ಯ ಟ್ರಾಫಿಕ್‌ನಿಂದ ಗಳಿಕೆಗಳನ್ನು ತೆಗೆದುಹಾಕುವ ಮೊದಲು ನಿಮ್ಮ YouTube ಗಾಗಿ AdSense ಗಳಿಕೆಗಳನ್ನು ಡೆಬಿಟ್ ಮಾಡಲಾಗುತ್ತದೆ. ಅಮಾನ್ಯ ಟ್ರಾಫಿಕ್‌ಗೆ ಸಂಬಂಧಿಸಿದ ಯಾವುದೇ ಡೆಬಿಟ್‌ಗಳು YouTube ಗಾಗಿ AdSense ನ ಪಾವತಿಗಳು ಪುಟದಲ್ಲಿ ಪ್ರತ್ಯೇಕ ಸಾಲಿನ ಐಟಂ ಆಗಿ ಕಾಣಿಸುತ್ತವೆ. 

ಚಾನಲ್‌ನಲ್ಲಿ ಗಮನಾರ್ಹ ಚಟುವಟಿಕೆಯು ಅಮಾನ್ಯವಾಗಿದೆ ಎಂಬುದು ಕಂಡುಬಂದರೆ, ಸಂಬಂಧಿಸಿದ YouTube ಗಾಗಿ AdSense ಖಾತೆಯನ್ನು ಅಮಾನತುಗೊಳಿಸಬಹುದು ಅಥವಾ ಶಾಶ್ವತವಾಗಿ ನಿಷ್ಕ್ರಿಯಗೊಳಿಸಬಹುದು. YouTube ಗಾಗಿ AdSense ಖಾತೆಯನ್ನು ನಿಷ್ಕ್ರಿಯಗೊಳಿಸಿದಾಗ, ರಚನೆಕಾರರಿಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿರುತ್ತದೆ. ಉಲ್ಲಂಘನೆಗಳು ನಮ್ಮ YouTube ಚಾನಲ್ ಮಾನಿಟೈಸೇಶನ್ ನೀತಿಗಳಿಗೆ ಅನುಗುಣವಾಗಿ ನಿಮ್ಮ ಯಾವುದೇ ಖಾತೆಗಳಲ್ಲಿ ಮಾನಿಟೈಸೇಶನ್ ಸ್ಥಿತಿಯನ್ನು ನಿಷ್ಕ್ರಿಯಗೊಳಿಸಬಹುದು. ನೀವು ಇದು ತಪ್ಪು ಎಂದು ಭಾವಿಸಿದರೆ, ನೀವು ಮೇಲ್ಮನವಿಯನ್ನು ಸಲ್ಲಿಸಬಹುದು. ಉಲ್ಲಂಘನೆಯನ್ನು ರದ್ದುಗೊಳಿಸಿದರೆ, ನೀವು YouTube Studio ದಲ್ಲಿ ಅರ್ಹತೆ ಪಡೆದ ನಂತರ ಮಾನಿಟೈಸೇಶನ್‌ಗಾಗಿ ಅರ್ಜಿ ಸಲ್ಲಿಸಬಹುದು.

ಅಮಾನ್ಯ ಟ್ರಾಫಿಕ್ ಅನ್ನು ತಡೆಯುವ ಕುರಿತು ಸಲಹೆಗಳು

ನಿಮ್ಮ ಚಾನಲ್‌ನಲ್ಲಿ ಅಮಾನ್ಯ ಟ್ರಾಫಿಕ್ ಸಂಭವಿಸಿದರೆ, ಅದನ್ನು ತಡೆಯಲು ನಿಮಗೆ ಸಹಾಯ ಮಾಡುವ ಸಾಮಾನ್ಯ ಮಾರ್ಗಗಳನ್ನು ಕಂಡುಕೊಳ್ಳಲು ಈ ಸಲಹೆಗಳನ್ನು ಪರಿಶೀಲಿಸಿ: 

  1. ವೀಡಿಯೊ ರಚನೆ ಮತ್ತು ನಿಮ್ಮ ಚಾನಲ್ ಅನ್ನು ನಿರ್ಮಿಸಲು ವಿಶ್ವಾಸಾರ್ಹವಲ್ಲದ ಪಾರ್ಟಿಗಳ ಜೊತೆಗೆ ಪಾಲುದಾರಿಕೆ ಹೊಂದುವುದನ್ನು ತಪ್ಪಿಸಿ. ಉದಾಹರಣೆಗೆ, ನಿಮ್ಮ ವೀಕ್ಷಣೆಗಳು, ಇಷ್ಟಗಳು ಅಥವಾ ಸಬ್‌ಸ್ಕ್ರಿಪ್ಶನ್‌ಗಳನ್ನು ಹೆಚ್ಚಿಸಲು ಕ್ಲೈಮ್ ಮಾಡುವಂತಹ ಸೇವೆಗಳನ್ನು ತಪ್ಪಿಸುವುದು ಉತ್ತಮ. ಥರ್ಡ್ ಪಾರ್ಟಿಗಳು ನಿಮ್ಮ ಚಾನಲ್‌ಗೆ ನಿಜವಾದ ಟ್ರಾಫಿಕ್ ಅನ್ನು ನಿರ್ವಹಿಸುವುದಾಗಿ ಹೇಳಿದಾಗ, ಅದು ಕೃತಕವಾಗಿರಬಹುದು, ಅಮಾನ್ಯ ಟ್ರಾಫಿಕ್‌ಗೆ ಕಾರಣವಾಗಬಹುದು. 
  2. ನಿಮ್ಮ ವೀಡಿಯೊಗಳಲ್ಲಿ ಜಾಹೀರಾತುಗಳನ್ನು ಕ್ಲಿಕ್ ಮಾಡುವುದು ಸರಿ ಎಂದು ನೀವು ಭಾವಿಸಿದರೂ ಹಾಗೆ ಮಾಡಬೇಡಿ. ರಚನೆಕಾರರು ತಮ್ಮ ಸ್ವಂತ ವೀಡಿಯೊಗಳಲ್ಲಿ ಜಾಹೀರಾತುಗಳನ್ನು ಕ್ಲಿಕ್ ಮಾಡಿದಾಗ ನಮ್ಮ ಸಿಸ್ಟಂಗಳು ಗುರುತಿಸುತ್ತವೆ. ಈ ನಡವಳಿಕೆಯು ಕಾಲಾನಂತರದಲ್ಲಿಯೂ ಸತತವಾಗಿ ನಡೆಯುತ್ತಲಿದ್ದರೆ, ಜಾಹೀರಾತುದಾರರು ಮತ್ತು ರಚನೆಕಾರರ ಪರಿಸರ ವ್ಯವಸ್ಥೆ ಎರಡನ್ನೂ ರಕ್ಷಿಸುವ ನಿಟ್ಟಿನಲ್ಲಿ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು.
  3. ನೀವು ಉತ್ತಮ ಸಾಮಾಜಿಕ ಕಾರ್ಯಗಳು ಅಥವಾ ದೇಣಿಗೆ ನೀಡುವ ಉದ್ದೇಶವನ್ನು ಹೊಂದಿದ್ದರೂ ಸಹ, ಹೆಚ್ಚು ಹಣವನ್ನು ಗಳಿಸುವುದಕ್ಕೆ ಸಹಾಯವಾಗಲೆಂದು ನಿಮ್ಮ ಜಾಹೀರಾತುಗಳನ್ನು ಕ್ಲಿಕ್ ಮಾಡುವಂತೆ ಯಾರನ್ನೂ ಪ್ರೋತ್ಸಾಹಿಸಬೇಡಿ.
ಅಮಾನ್ಯ ಟ್ರಾಫಿಕ್ ಅನ್ನು ತಡೆಗಟ್ಟುವ ಕುರಿತು ಇನ್ನಷ್ಟು ಸಲಹೆಗಳನ್ನು ನಮ್ಮ ಸಹಾಯ ಕೇಂದ್ರದಲ್ಲಿ ತಿಳಿಯಿರಿ.

ಮಾಹಿತಿಯ ಮೂಲಗಳು

ಗಮನಿಸಿ: ನಮ್ಮ ಜಾಹೀರಾತುದಾರ-ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳಿಗೆ ಅನುಸಾರವಾಗಿ, ವೀಡಿಯೊಗಳಿಗೆ ಹಳದಿ ಐಕಾನ್‌ಗಳನ್ನು ನಿಯೋಜಿಸಲಾಗಿದೆ. ಅಮಾನ್ಯ ಟ್ರಾಫಿಕ್ ಕುರಿತಾದ ಈ ನೀತಿಯನ್ನು ಆಧರಿಸಿ ಅವುಗಳನ್ನು ನಿಯೋಜಿಸಿರುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2430269017823523566
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false