YouTube ನಲ್ಲಿ HDR ವೀಡಿಯೊವನ್ನು ಸ್ಟ್ರೀಮ್ ಮಾಡಿ

ನೀವು YouTube ಲೈವ್‌ನಲ್ಲಿ ಹೈ ಡೈನಾಮಿಕ್ ರೇಂಜ್ (HDR) ವೀಡಿಯೊವನ್ನು ಸ್ಟ್ರೀಮ್ ಮಾಡಬಹುದು. HDR ಗೆ ಬೆಂಬಲಿಸುತ್ತಿರುವ ಇತ್ತೀಚಿನ ಬಹುತೇಕ ಸಾಧನಗಳಲ್ಲಿ ನಿಮ್ಮ ವೀಕ್ಷಕರಿಗೆ ಹೆಚ್ಚು ರೋಮಾಂಚನಕಾರಿ ಮತ್ತು ವಾಸ್ತವಿಕ ಬಣ್ಣಗಳನ್ನು ತೋರಿಸಲು HDR ನಿಮಗೆ ಅನುಮತಿಸುತ್ತದೆ.

YouTube ಲೈವ್‌ನಲ್ಲಿ HDR ವೀಡಿಯೊವನ್ನು ಸ್ಟ್ರೀಮ್ ಮಾಡಲು, ನೀವು ಕಂಪ್ಯಾಟಿಬಲ್ HDR ಕಂಟೆಂಟ್ ಅನ್ನು ರಚಿಸಬೇಕು ಮತ್ತು ಕಂಪ್ಯಾಟಿಬಲ್ ಎನ್‌ಕೋಡರ್ ಅನ್ನು ಬಳಸಬೇಕು. ಈ ಸಮಯದಲ್ಲಿ, YouTube ಗೆ HDR ಸ್ಟ್ರೀಮಿಂಗ್ H.265 (HEVC) ವೀಡಿಯೊ ಕೊಡೆಕ್‌ ಮೂಲಕ ಮಾತ್ರ ಬೆಂಬಲಿತವಾಗಿದೆ.

HDR ಗೇಮಿಂಗ್ ಕಂಟೆಂಟ್ ಅನ್ನು ಲೈವ್ ಸ್ಟ್ರೀಮ್ ಮಾಡಿ

HDR ಗೇಮಿಂಗ್ ಕಂಟೆಂಟ್ ಅನ್ನು ಲೈವ್ ಸ್ಟ್ರೀಮ್ ಮಾಡಲು, ನೀವು ಮಾಡಬೇಕಾಗಿರುವುದು:

  • HDR ಔಟ್‌ಪುಟ್ ಅನ್ನು ಬೆಂಬಲಿಸುವ ಗೇಮ್ ಅನ್ನು ಪ್ಲೇ ಮಾಡಿ.
  • ಗೇಮ್ ಸೆಟ್ಟಿಂಗ್‌ಗಳಲ್ಲಿ HDR ಆನ್ ಮಾಡಿ.
  • HDR ಬೆಂಬಲಿಸುವಂತಹ ಮಾನಿಟರ್ ಅಥವಾ ಟಿವಿಯನ್ನು ಬಳಸಿ.
  • ಕಂಪ್ಯಾಟಿಬಲ್ ಎನ್‌ಕೋಡರ್ ಬಳಸಿ.

ಇತರ HDR ವೀಡಿಯೊ ಕಂಟೆಂಟ್ ಅನ್ನು ಲೈವ್ ಸ್ಟ್ರೀಮ್ ಮಾಡಿ

ಇತರ HDR ವೀಡಿಯೊ ಕಂಟೆಂಟ್ ಅನ್ನು ಲೈವ್ ಸ್ಟ್ರೀಮ್ ಮಾಡಲು, ನೀವು ಮಾಡಬೇಕಾಗಿರುವುದು:

  • ಕಂಪ್ಯಾಟಿಬಲ್ ಎನ್‌ಕೋಡರ್ ಬಳಸಿ.
  • HDR ವೀಡಿಯೊವನ್ನು ಬೆಂಬಲಿಸುವ, PQ ಅಥವಾ HLG ಕಲರ್ ಸ್ಟ್ಯಾಂಡರ್ಡ್‌ಗಳನ್ನು ಹೊಂದಿರುವ ಕ್ಯಾಮರಾವನ್ನು ಬಳಸಿ. ಈ ಸ್ಟ್ಯಾಂಡರ್ಡ್‌ಗಳು ಬೆಂಬಲಿತವಾಗಿವೆಯೇ ಎಂಬುದನ್ನು ನೋಡಲು, ನಿಮ್ಮ ಕ್ಯಾಮರಾದ ಮ್ಯಾನುಯಲ್ ಅನ್ನು ಓದಿ.

HDR ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸುವುದು

ವೀಕ್ಷಕರು ಬೆಂಬಲಿತ ಸಾಧನಗಳಲ್ಲಿ ನಿಮ್ಮ ಸ್ಟ್ರೀಮ್ ಅನ್ನು HDR ನಲ್ಲಿ ಸ್ವಯಂಚಾಲಿತವಾಗಿ ನೋಡುತ್ತಾರೆ. ಇತರ ಸಾಧನಗಳಲ್ಲಿನ ವೀಕ್ಷಕರು ನಿಮ್ಮ ಸ್ಟ್ರೀಮ್ ಅನ್ನು ಸ್ಟ್ಯಾಂಡರ್ಡ್ ಡೈನಾಮಿಕ್ ರೇಂಜ್‌ನಲ್ಲಿ ನೋಡುತ್ತಾರೆ. ಬೆಂಬಲಿತ HDR ಸಾಧನಗಳೆಂದರೆ:

  • HDR ಟಿವಿಗಳಲ್ಲಿ YouTube ಆ್ಯಪ್.
  • HDR ಟಿವಿಗಳಿಗೆ ಕನೆಕ್ಟ್ ಆಗಿರುವ Chromecast Ultra ಸಾಧನಗಳಲ್ಲಿ ಬಿತ್ತರಿಸುವುದು.
  • HDR ಡಿಸ್‌ಪ್ಲೇ ಹೊಂದಿರುವ Android ಆಧಾರಿತ ಮೊಬೈಲ್ ಸಾಧನಗಳು.
  • HDR ಬೆಂಬಲ ಮತ್ತು HDR ಡಿಸ್‌ಪ್ಲೇ ಹೊಂದಿರುವ Windows ಮತ್ತು Mac PC ಗಳು. ವೀಕ್ಷಕರು ತಮ್ಮ ಕಂಪ್ಯೂಟರ್ ಸೆಟ್ಟಿಂಗ್‌ಗಳಲ್ಲಿ HDR ಸಕ್ರಿಯಗೊಳಿಸಿದ್ದರೆ, ನಿಮ್ಮ ಸ್ಟ್ರೀಮ್ ಅನ್ನು HDR ನಲ್ಲಿ ನೋಡುತ್ತಾರೆ.

ಸೂಚನೆ: ಲೈವ್ ನಿಯಂತ್ರಣ ಕೊಠಡಿಯಲ್ಲಿ ಪೂರ್ವವೀಕ್ಷಣೆಯು HDR ಬಣ್ಣಗಳಲ್ಲಿ ಕಾಣಿಸುವುದಿಲ್ಲ.

ನೀವು HDR ನಲ್ಲಿ ವೀಕ್ಷಿಸುತ್ತಿದ್ದೀರಾ ಎಂದು ತಿಳಿದುಕೊಳ್ಳುವುದು ಹೇಗೆ

HDR ಸ್ಟ್ರೀಮ್‌ಗಳನ್ನು ಮಾಡುವಾಗ, ವೀಡಿಯೊ ಗುಣಮಟ್ಟದ ಸೆಟ್ಟಿಂಗ್‌ಗಳು ಮೆನುವಿನಲ್ಲಿ “HDR” ಎಂದು ತೋರಿಸುತ್ತದೆ. ಸಾಮಾನ್ಯವಾಗಿ, ಇದನ್ನು ನಿಮ್ಮ ಸ್ಕ್ರೀನ್‌ನ ಕೆಳಗಿನ ಬಲಭಾಗದಲ್ಲಿ ಕಾಣಬಹುದು. ನಿಮ್ಮ ಸಾಧನವು HDR ಗೆ ಬೆಂಬಲಿಸದಿದ್ದರೆ, ನಿಮಗೆ HDR ಬ್ಯಾಡ್ಜ್ ಕಾಣಿಸುವುದಿಲ್ಲ ಮತ್ತು ಸ್ಟ್ರೀಮ್ ಅನ್ನು SDR ಗುಣಮಟ್ಟದಲ್ಲಿ ಪ್ರದರ್ಶಿಸಲಾಗುತ್ತದೆ.

YouTube ಲೈವ್ ನಿಯಂತ್ರಣ ಕೊಠಡಿಯಲ್ಲಿ HDR ಸ್ಟ್ರೀಮ್ ಅನ್ನು ಸೆಟಪ್ ಮಾಡಿ

HDR ನಲ್ಲಿ ಸ್ಟ್ರೀಮ್ ಮಾಡಲು ನೀವು RTMP(S) ಅಥವಾ HLS ಅನ್ನು ಬಳಸಬಹುದು. ನೀವು "ಹಸ್ತಚಾಲಿತ ರೆಸಲ್ಯೂಶನ್ ಆನ್ ಮಾಡಿ" ಸೆಟ್ಟಿಂಗ್ ಗುರುತಿಸಿರುವುದನ್ನು ತೆಗೆಯಬೇಕಾಗುತ್ತದೆ ಎಂಬುದನ್ನು ಗಮನಿಸಿ.

HLS ಮೂಲಕ HDR ಸ್ಟ್ರೀಮ್ ರಚಿಸಲು, ನಿಮ್ಮ ಸ್ಟ್ರೀಮ್ ಕೀ ಪ್ರೊಟೊಕಾಲ್‌ಗಳನ್ನು HLS ಗೆ ಸೆಟ್ ಮಾಡಬೇಕಾಗಬಹುದು. ಇನ್ನಷ್ಟು ತಿಳಿಯಿರಿ.

RTMP ನ ಕಂಪ್ಯಾಟಿಬಲ್ ಸಾಫ್ಟ್‌ವೇರ್ ಎನ್‌ಕೋಡರ್‌ಗಳು

OBS

OBS ನಲ್ಲಿ HDR ಅನ್ನು ಸಕ್ರಿಯಗೊಳಿಸಲು (ಕನಿಷ್ಠ ಆವೃತ್ತಿ 30.1)
  1. ನೀವು OBS ತೆರೆದಾಗ, ನಿಮ್ಮ ಕಂಪ್ಯೂಟರ್ ಕನಿಷ್ಠ ಒಂದು HDR ಮೂಲವನ್ನಾದರೂ ಹೊಂದಿರಬೇಕು. Windows 11 ನಲ್ಲಿ HDR ಮಾನಿಟರ್ ಜೊತೆಗೆ, ಮೂಲ ವೀಡಿಯೊವು HDR ಅಲ್ಲದಿದ್ದರೂ ನೀವು ಆಟೋ HDR ಮೂಲಕ HDR ಬೆಂಬಲವನ್ನು ಆನ್ ಮಾಡಬಹುದು.
  2. ಸೆಟ್ಟಿಂಗ್‌ಗಳಲ್ಲಿ, ಸ್ಟ್ರೀಮ್‌ಗೆ ಹೋಗಿ ಮತ್ತು YouTube RTMPS ಅನ್ನು ಆಯ್ಕೆಮಾಡಿ.
  3. ಸೆಟ್ಟಿಂಗ್‌ಗಳಲ್ಲಿ, 'ಔಟ್‌ಪುಟ್' ಎಂಬಲ್ಲಿಗೆ ಹೋಗಿ, ನಂತರ ಎನ್‌ಕೋಡರ್ ಕ್ಲಿಕ್ ಮಾಡಿ.
  4. ನಿಮ್ಮ ಹಾರ್ಡ್‌ವೇರ್‌ನ HEVC ಎನ್‌ಕೋಡರ್ ಅನ್ನು ಆಯ್ಕೆಮಾಡಿ. 
  5. ಎನ್‌ಕೋಡರ್ ಸೆಟ್ಟಿಂಗ್‌ಗಳು ಅಡಿಯಲ್ಲಿ, ಪ್ರೊಫೈಲ್ ಅನ್ನು Main 10 ಗೆ ಬದಲಾಯಿಸಿ (ಡೀಫಾಲ್ಟ್ ಪ್ರೊಫೈಲ್ Main ಆಗಿದೆ).
  6. ಸೆಟ್ಟಿಂಗ್‌ಗಳಲ್ಲಿ, 'ಸುಧಾರಿತ' ಕ್ಲಿಕ್ ಮಾಡಿ. HDR ಸಕ್ರಿಯಗೊಳಿಸಿ ಮತ್ತು ಬಣ್ಣದ ಫಾರ್ಮ್ಯಾಟ್ ಅನ್ನು P010 (4:2:0) ಗೆ ಬದಲಾಯಿಸಿ.
  7. ಕಲರ್ ಸ್ಪೇಸ್ ಅನ್ನು Rec 2100 PQ ಅಥವಾ HLG ಗೆ ಬದಲಾಯಿಸಿ (ನಾವು HLG ಶಿಫಾರಸು ಮಾಡುತ್ತೇವೆ).

 

HLS ನ ಕಂಪ್ಯಾಟಿಬಲ್ ಸಾಫ್ಟ್‌ವೇರ್ ಎನ್‌ಕೋಡರ್‌ಗಳು

Avermedia RECentral 4

AWS ಎಲಿಮೆಂಟಲ್ ಲೈವ್

Mirillis Action!

Mirillis Action! ಮೂಲಕ HDR ಎನ್‌ಕೋಡ್ ಮಾಡಲು, 4.12.2 ಅಥವಾ ನಂತರದ ಆವೃತ್ತಿಯನ್ನು ಅಥವಾ ಇವುಗಳಲ್ಲಿ ಯಾವುದಾದರೂ ಒಂದು ಕಂಪ್ಯಾಟಿಬಲ್ ಗ್ರಾಫಿಕ್ಸ್ ಕಾರ್ಡ್ ಅನ್ನು ಬಳಸಿ:

  • NVIDIA GeForce GTX 10-series ಅಥವಾ ನಂತರದ್ದು.
  • AMD Radeon RX 5700 ಅಥವಾ ನಂತರದ್ದು.
  • Intel 10ನೇ ಜನರೇಶನ್ ಗ್ರಾಫಿಕ್ಸ್ ಅಥವಾ ನಂತರದ್ದು.

YouTube ಲೈವ್ HDR ಜೊತೆಗೆ ಕಾರ್ಯನಿರ್ವಹಿಸುವಂತೆ Mirillis Action! ಅನ್ನು ಸೆಟಪ್ ಮಾಡಲು:

  1. Action! ನಿಂದ, ನಿಮ್ಮ YouTube ಖಾತೆಗೆ ಸೈನ್ ಇನ್ ಮಾಡಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ.
  2. Action! ವೀಡಿಯೊ ರೆಕಾರ್ಡಿಂಗ್ ಟ್ಯಾಬ್‌ಗೆ ಹೋಗಿ.
  3. ನಿಮ್ಮ ಸ್ಟ್ರೀಮ್ ಕೀ, HLS ಪ್ರೊಟೊಕಾಲ್ ಅನ್ನು ಬಳಸುತ್ತಿದೆ ಮತ್ತು “ಹಸ್ತಚಾಲಿತ ಸೆಟ್ಟಿಂಗ್‌ಗಳನ್ನು ಆನ್ ಮಾಡಿ” ಅನ್ನು ಗುರುತು ಹಾಕಲಾಗಿಲ್ಲ (ಡೀಫಾಲ್ಟ್) ಎಂದು ಖಚಿತಪಡಿಸಿಕೊಳ್ಳಿ.
  4. “ಲೈವ್ ಸ್ಟ್ರೀಮಿಂಗ್” ಟ್ಯಾಬ್‌ನಲ್ಲಿ, YouTube ಅನ್ನು ಸ್ಟ್ರೀಮಿಂಗ್ ಸೇವೆಯಾಗಿ ಆಯ್ಕೆಮಾಡಿ.
  5. ನೀವು ಸ್ಟ್ರೀಮಿಂಗ್ ಪ್ರಾರಂಭಿಸಿದಾಗ ಪ್ರಸಾರವನ್ನು Action! ಸ್ವಯಂಚಾಲಿತವಾಗಿ ರಚಿಸುತ್ತದೆ.

ಲೈವ್ ನಿಯಂತ್ರಣ ಕೊಠಡಿಯಲ್ಲಿ ನಿಮ್ಮ ಪ್ರಸಾರವನ್ನು ನೀವು ರಚಿಸಬಹುದು ಮತ್ತು ನಿರ್ವಹಿಸಬಹುದು.

  1. ಲೈವ್ ನಿಯಂತ್ರಣ ಕೊಠಡಿ ಗೆ ಹೋಗಿ.
  2. ಲೈವ್ ಸ್ಟ್ರೀಮ್ ರಚಿಸಿ ಅಥವಾ ನಿರ್ವಹಿಸಿ.
  3. ನಿಮ್ಮ ಸ್ಟ್ರೀಮ್ ಕೀಯನ್ನು HLS ಪ್ರೊಟೊಕಾಲ್ ಬಳಸಲು ಸೆಟ್ ಮಾಡಲಾಗಿದೆ ಮತ್ತು “ಹಸ್ತಚಾಲಿತ ಸೆಟ್ಟಿಂಗ್‌ಗಳನ್ನು ಆನ್ ಮಾಡಿ” ಅನ್ನು ಗುರುತು ಹಾಕಲಾಗಿಲ್ಲ (ಡೀಫಾಲ್ಟ್) ಎಂದು ಖಚಿತಪಡಿಸಿಕೊಳ್ಳಿ.
  4. ನಿಮ್ಮ ಸ್ಟ್ರೀಮ್ ಕೀಯನ್ನು ನಕಲಿಸಿ.
  5. Action! ನಲ್ಲಿ, ಕಸ್ಟಮ್ ಸ್ಟ್ರೀಮಿಂಗ್ ಸೇವೆಯನ್ನು ಆಯ್ಕೆಮಾಡಿ.
  6. “ಸರ್ವರ್ / URL” ಅಡಿಯಲ್ಲಿ, ಈ ಮುಂದಿನ URL ಅನ್ನು ನಮೂದಿಸಿ ಮತ್ತು STREAMKEY ಬದಲಿಗೆ ನಿಮ್ಮ YouTube ಸ್ಟ್ರೀಮ್ ಕೀ ಅನ್ನು ಬಳಸಿ:
    https://a.upload.youtube.com/http_upload_hls?cid=STREAMKEY&copy=0&file=
  7. ಪ್ರತ್ಯೇಕ “ಸ್ಟ್ರೀಮ್ ಕೀ” ಸೆಟ್ಟಿಂಗ್ ಅನ್ನು ಖಾಲಿ ಬಿಡಿ.

ಗಮನಿಸಿ: ಕೆಲವು ಹಳೆಯ HDR ಗೇಮ್‌ಗಳಲ್ಲಿ Action! ಕಂಪ್ಯಾಟಿಬಲ್ ಆಗದಿರಬಹುದು.

ಗಮನಿಸಿ: ನಿಮ್ಮ ಸಾಧನವು ಬೆಂಬಲಿಸುವಂತಹ ಫಾರ್ಮ್ಯಾಟ್‌ಗಳಲ್ಲಿ ಮಾತ್ರ ನೀವು ಎನ್‌ಕೋಡ್ ಮಾಡಬಹುದು.

OBS

OBS ನಲ್ಲಿ HDR ಸಕ್ರಿಯಗೊಳಿಸಲು

  1. ನೀವು OBS ತೆರೆದಾಗ, ನಿಮ್ಮ ಕಂಪ್ಯೂಟರ್ ಕನಿಷ್ಠ ಒಂದು HDR ಮೂಲವನ್ನಾದರೂ ಹೊಂದಿರಬೇಕು. Windows 11 ನಲ್ಲಿ HDR ಮಾನಿಟರ್ ಜೊತೆಗೆ, ಮೂಲ ವೀಡಿಯೊವು HDR ಅಲ್ಲದಿದ್ದರೂ ನೀವು ಆಟೋ HDR ಮೂಲಕ HDR ಬೆಂಬಲವನ್ನು ಆನ್ ಮಾಡಬಹುದು.
  2. ಸೆಟ್ಟಿಂಗ್‌ಗಳಲ್ಲಿ, 'ಸ್ಟ್ರೀಮ್' ಎಂಬಲ್ಲಿಗೆ ಹೋಗಿ ಮತ್ತು YouTube HLS ಆಯ್ಕೆಮಾಡಿ ( “ಎಲ್ಲಾ ತೋರಿಸಿ” ಮತ್ತು ಪಟ್ಟಿಯನ್ನು ಕೆಳಗೆ ಸ್ಕ್ರಾಲ್ ಮಾಡಿ).
  3. ಸೆಟ್ಟಿಂಗ್‌ಗಳಲ್ಲಿ, 'ಔಟ್‌ಪುಟ್' ಎಂಬಲ್ಲಿಗೆ ಹೋಗಿ, ನಂತರ 'ಎನ್‌ಕೋಡರ್' ಕ್ಲಿಕ್ ಮಾಡಿ.
  4. ನಿಮ್ಮ ಹಾರ್ಡ್‌ವೇರ್‌ನ HEVC ಎನ್‌ಕೋಡರ್ ಅನ್ನು ಆಯ್ಕೆಮಾಡಿ. 
  5. ಎನ್‌ಕೋಡರ್ ಸೆಟ್ಟಿಂಗ್‌ಗಳು ಅಡಿಯಲ್ಲಿ, ಪ್ರೊಫೈಲ್ ಅನ್ನು Main 10 ಗೆ ಬದಲಾಯಿಸಿ (ಡೀಫಾಲ್ಟ್ ಪ್ರೊಫೈಲ್ Main ಆಗಿದೆ).
  6. ಸೆಟ್ಟಿಂಗ್‌ಗಳಲ್ಲಿ, 'ಸುಧಾರಿತ' ಕ್ಲಿಕ್ ಮಾಡಿ. HDR ಸಕ್ರಿಯಗೊಳಿಸಿ ಮತ್ತು ಬಣ್ಣದ ಫಾರ್ಮ್ಯಾಟ್ ಅನ್ನು P010 ಗೆ ಬದಲಾಯಿಸಿ.
  7. ಕಲರ್ ಸ್ಪೇಸ್ ಅನ್ನು Rec 2100 PQ ಅಥವಾ HLG ಗೆ ಬದಲಾಯಿಸಿ (ನಾವು HLG ಶಿಫಾರಸು ಮಾಡುತ್ತೇವೆ).

ಕಂಪ್ಯಾಟಿಬಲ್ ಹಾರ್ಡ್‌ವೇರ್ ಎನ್‌ಕೋಡರ್‌ಗಳು

ಸಾಮಾನ್ಯ ಎನ್‌ಕೋಡರ್ ಕಾನ್ಫಿಗರೇಶನ್ ಅವಶ್ಯಕತೆಗಳು

YouTube ಲೈವ್ HDR ಗೆ HLS ಔಟ್‌ಪುಟ್ ಬಳಸುವ ಅಗತ್ಯವಿದೆ. ನಿಮ್ಮ ಸಾಧನದಲ್ಲಿ ಎನ್‌ಕೋಡರ್ ಸೆಟಪ್ ಮಾಡುವುದಕ್ಕೆ ಸಂಬಂಧಿಸಿದ ಸಾಮಾನ್ಯ ಅವಶ್ಯಕತೆಗಳು ಇಲ್ಲಿವೆ ನೋಡಿ:

HDR ಕಾನ್ಫಿಗರೇಶನ್‌ಗಳು:

  • ವೀಡಿಯೊ ಕೋಡೆಕ್: HEVC (ನಿಮ್ಮ ಸಾಧನವು ಬೆಂಬಲಿಸುವಂತಹ ಫಾರ್ಮ್ಯಾಟ್‌ಗಳಲ್ಲಿ ಮಾತ್ರ ನೀವು ಎನ್‌ಕೋಡ್ ಮಾಡಬಹುದು)
  • ಬಿಟ್ ಡೆಪ್ತ್: 10 ಬಿಟ್ಸ್
  • ಕಲರ್ ಪ್ರೈಮರಿಗಳು: BT.2020 (ನಿಮ್ಮ ಮೂಲ ಕಂಟೆಂಟ್ ಜೊತೆಗೆ ಕಂಪ್ಯಾಟಿಬಲ್ ಆಗಿರಬೇಕು)
  • ವರ್ಗಾವಣೆ ಗುಣಲಕ್ಷಣಗಳು: ನಿಮ್ಮ ಮೂಲ ಕಂಟೆಂಟ್ ಯಾವ ಗುಣಲಕ್ಷಣವನ್ನು ಪೂರೈಸುತ್ತದೆ ಎಂಬುದನ್ನು ಆಧರಿಸಿ, ST 2084 PQ ಅಥವಾ HLG ಆಯ್ಕೆಮಾಡಿ.
  • ಮ್ಯಾಟ್ರಿಕ್ಸ್ ಅಪವರ್ತನಗಳು: BT.2020 Non-Const Y (ನಿಮ್ಮ ಮೂಲ ಕಂಟೆಂಟ್ ಜೊತೆಗೆ ಕಂಪ್ಯಾಟಿಬಲ್ ಆಗಿರಬೇಕು)

HLS ಔಟ್‌ಪುಟ್:

  • ಸೆಗ್ಮೆಂಟ್ ಅವಧಿ: 1 - 4 ಸೆಕೆಂಡ್‌ಗಳ ನಡುವೆ.
  • ಸೆಗ್ಮೆಂಟ್ ಫಾರ್ಮ್ಯಾಟ್: TS (ಟ್ರಾನ್ಸ್‌ಪೋರ್ಟ್ ಸ್ಟ್ರೀಮ್) ಆಗಿರಬೇಕು.
  • ಬೈಟ್ ರೇಂಜ್‌ಗೆ ಬೆಂಬಲವಿಲ್ಲ.
  • 5 ಕ್ಕಿಂತ ಹೆಚ್ಚು ಬಾಕಿ ಸೆಗ್ಮೆಂಟ್‌ಗಳಿರದ ರೋಲಿಂಗ್ ಪ್ಲೇಪಟ್ಟಿಯನ್ನು ಬಳಸಲೇಬೇಕು.
  • HTTPS POST/PUT ಅನ್ನು ಬಳಸಲೇಬೇಕು.
  • HTTPS ಅನ್ನು ಬಳಸುವುದನ್ನು ಹೊರತುಪಡಿಸಿ ಎನ್‌ಕ್ರಿಪ್ಶನ್‌ಗೆ ಬೆಂಬಲವಿಲ್ಲ.
  • URL: ಈ ಮುಂದಿನ URL ಅನ್ನು ನಮೂದಿಸಿ ಮತ್ತು STREAMKEY ಬದಲಿಗೆ ನಿಮ್ಮ YouTube ಸ್ಟ್ರೀಮ್ ಕೀಯನ್ನು ಬಳಸಿ. HDR ಗಾಗಿ, HLS ಅನ್ನು ಸ್ಟ್ರೀಮಿಂಗ್ ಪ್ರೊಟೊಕಾಲ್ ಆಗಿ ಬಳಸುವಂತಹ ಸ್ಟ್ರೀಮ್ ಕೀಯನ್ನು ನೀವು ಬಳಸಬೇಕು ಮತ್ತು “ಹಸ್ತಚಾಲಿತ ಸೆಟ್ಟಿಂಗ್‌ಗಳನ್ನು ಆನ್ ಮಾಡಿ” ಸೆಟ್ಟಿಂಗ್ ಅನ್ನು ಗುರುತು ಹಾಕದೆಯೇ (ಡೀಫಾಲ್ಟ್) ಹಾಗೆಯೇ ಬಿಡಬೇಕು.
  • ಬ್ಯಾಕಪ್ ಇಂಜೆಷನ್ ಬಳಸುತ್ತಿದ್ದರೆ, URL ಇದಾಗಿದೆ: https://b.upload.youtube.com/http_upload_hls?cid=STREAMKEY&copy=1&file=
ಕೋಬಾಲ್ಟ್

HEVC HDR ಬೆಂಬಲಿಸುವಂತಹ ಕೋಬಾಲ್ಟ್ ಎನ್‌ಕೋಡರ್‌ಗಳು YouTube ಲೈವ್ HDR ಜೊತೆಗೆ ಕಂಪ್ಯಾಟಿಬಲ್ ಆಗಿರುತ್ತವೆ. ನಿಮ್ಮ ನಿರ್ದಿಷ್ಟ ಕೋಬಾಲ್ಟ್ ಮಾಡೆಲ್, HEVC HDR ಅನ್ನು ಬೆಂಬಲಿಸುತ್ತದೆಯೇ ಎಂದು ನೋಡಲು ಉತ್ಪನ್ನದ ಕೈಪಿಡಿಯ ಮೇಲೆ ಕಣ್ಣಾಡಿಸಿ.

HEVC HDR ಗಾಗಿ ಕೋಬಾಲ್ಟ್ ಸೆಟಪ್ ಮಾಡಿ

  1. ಈ ಕೆಳಕಂಡ ಸೆಟ್ಟಿಂಗ್‌ಗಳನ್ನು ಕೋಬಾಲ್ಟ್ ಎನ್‌ಕೋಡರ್‌ನಲ್ಲಿ ನಮೂದಿಸಿ:
    1. ಎನ್‌ಕೋಡರ್ ಮೋಡ್: HEVC (ನಿಮ್ಮ ಸಾಧನವು ಬೆಂಬಲಿಸುವಂತಹ ಫಾರ್ಮ್ಯಾಟ್‌ಗಳಲ್ಲಿ ಮಾತ್ರ ನೀವು ಎನ್‌ಕೋಡ್ ಮಾಡಬಹುದು)
    2. ಬಿಟ್ ಡೆಪ್ತ್: 10 ಬಿಟ್ಸ್
    3. ಕ್ರೋಮಾ ಮೋಡ್: 4:2:0

  1. “ಸುಧಾರಿತ” ಪುಟದಲ್ಲಿ, ನಿಮ್ಮ HDR ಕ್ಯಾಮರಾ ಅಥವಾ ಇತರ HDR ಕ್ಯಾಪ್ಚರ್ ಸಾಧನದ ರೀತಿಯ ಅದೇ HDR ಗೆ ವೀಡಿಯೊ ಸಿಗ್ನಲ್ ಪ್ರಕಾರದ ಆಯ್ಕೆಗಳನ್ನು ಸೆಟ್ ಮಾಡಿ. YouTube ಲೈವ್ HDR, ಕೆಳಗೆ ಪಟ್ಟಿ ಮಾಡಿರುವ ಸೆಟ್ಟಿಂಗ್‌ಗಳನ್ನು ಬೆಂಬಲಿಸುತ್ತದೆ. ನಿಮ್ಮ HDR ಕ್ಯಾಮರಾವು ಈ ಕೋಬಾಲ್ಟ್ ಸೆಟ್ಟಿಂಗ್‌ಗಳ ಜೊತೆಗೆ ಕಂಪ್ಯಾಟಿಬಲ್ ಆಗಿದೆಯೇ ಎಂಬುದನ್ನು ನೋಡಲು ಅದರ ಉತ್ಪನ್ನ ಕೈಪಿಡಿ ಅಥವಾ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ.
    1. ವೀಡಿಯೊ ಸಿಗ್ನಲ್ ಪ್ರಕಾರವನ್ನು ಸಕ್ರಿಯಗೊಳಿಸಿ: ಗುರುತಿಸಲಾಗಿದೆ
    2. ವೀಡಿಯೊ ಪೂರ್ಣ ವ್ಯಾಪ್ತಿ: ನಿಮ್ಮ ಮೂಲ ಕಂಟೆಂಟ್, ಪೂರ್ಣ-ಶ್ರೇಣಿಯ ವೀಡಿಯೊವನ್ನು ರಚಿಸುವುದಾದರೆ ಮಾತ್ರ ಸಕ್ರಿಯಗೊಳಿಸಿ.
    3. ಕಲರ್ ಪ್ರೈಮರಿಗಳು: BT.2020 ಗೆ ಸೆಟ್ ಮಾಡಿ (ನಿಮ್ಮ ಮೂಲ ಕಂಟೆಂಟ್ ಜೊತೆಗೆ ಕಂಪ್ಯಾಟಿಬಲ್ ಆಗಿರಬೇಕು).
    4. ವರ್ಗಾವಣೆ ಗುಣಲಕ್ಷಣಗಳು: ನಿಮ್ಮ ಮೂಲ ಕಂಟೆಂಟ್ ಯಾವ ಗುಣಲಕ್ಷಣವನ್ನು ಪೂರೈಸುತ್ತದೆ ಎಂಬುದನ್ನು ಆಧರಿಸಿ, ST 2084 PQ ಅಥವಾ HLG ಗೆ ಸೆಟ್ ಮಾಡಿ.
    5. ಮ್ಯಾಟ್ರಿಕ್ಸ್ ಅಪವರ್ತನಗಳು: BT.2020 Non-Const Y ಗೆ ಸೆಟ್ ಮಾಡಿ (ನಿಮ್ಮ ಮೂಲ ಕಂಟೆಂಟ್ ಜೊತೆಗೆ ಕಂಪ್ಯಾಟಿಬಲ್ ಆಗಿರಬೇಕು.

  1. ಮುಂದೆ, HLS ಔಟ್‌ಪುಟ್ ಅನ್ನು YouTube ಗೆ ಸೆಟಪ್ ಮಾಡಿ. “ಔಟ್‌ಪುಟ್” ಟ್ಯಾಬ್‌ಗೆ ಹೋಗಿ ಮತ್ತು ಈ ಸೆಟ್ಟಿಂಗ್‌ಗಳನ್ನು ನಮೂದಿಸಿ:
    1. ಔಟ್‌ಪುಟ್ ಪ್ರೊಟೊಕಾಲ್: “HLS”
    2. ಸರ್ವರ್ ಸ್ಥಳ: ರಿಮೋಟ್
    3. ವರ್ಗಾವಣೆ ಪ್ರೊಟೊಕಾಲ್: HTTP/S
    4. ಅಪ್‌ಲೋಡ್ URL: https://a.upload.youtube.com/http_upload_hls?cid=STREAMKEY&copy=0&file=

ಮೇಲಿನ URL ನಲ್ಲಿ, STREAMKEY ಬದಲಿಗೆ ನಿಮ್ಮ YouTube ಸ್ಟ್ರೀಮ್ ಕೀಯನ್ನು ಬಳಸಿ. HDR ಗಾಗಿ, HLS ಅನ್ನು ಸ್ಟ್ರೀಮಿಂಗ್ ಪ್ರೊಟೊಕಾಲ್ ಆಗಿ ಬಳಸುವಂತಹ ಸ್ಟ್ರೀಮ್ ಕೀಯನ್ನು ನೀವು ಬಳಸಬೇಕು ಮತ್ತು “ಹಸ್ತಚಾಲಿತ ಸೆಟ್ಟಿಂಗ್‌ಗಳನ್ನು ಆನ್ ಮಾಡಿ” ಸೆಟ್ಟಿಂಗ್ ಅನ್ನು ಗುರುತು ಹಾಕದೆಯೇ (ಡೀಫಾಲ್ಟ್) ಹಾಗೆಯೇ ಬಿಡಬೇಕು.

  1. ಹೋಸ್ಟ್ ಹೆಡರ್ ಸಕ್ರಿಯಗೊಳಿಸಿ: ಗುರುತಿಸಲಾಗಿಲ್ಲ
  2. ಬೇಸ್ ಫೈಲ್ ಹೆಸರು: “ಲೈವ್”
  3. ಸೆಗ್ಮೆಂಟ್ (ಸೆಕೆಂಡ್): 1 - 4 ರ ನಡುವೆ ಯಾವುದೇ ಸಂಖ್ಯೆ
  4. ಸೆಗ್ಮೆಂಟ್‌ಗಳ ಸಂಖ್ಯೆ: ಯಾವುದನ್ನಾದರೂ ಆಯ್ಕೆಮಾಡಿ
  5. ಪ್ರೋಗ್ರಾಂ ಹೆಸರು: ಹಾಗೆಯೇ ಬಿಡಿ

Telestream

Telestream ನ ಲೈಟ್‌ಸ್ಪೀಡ್ ಲೈವ್ ಸ್ಟ್ರೀಮ್ ಎನ್‌ಕೋಡರ್, ಇದು YouTube ಲೈವ್ HDR ಜೊತೆಗೆ ಕಂಪ್ಯಾಟಿಬಲ್ ಆಗಿದೆ.

ಈ ಕೆಳಕಂಡ ಕಾನ್ಫಿಗರೇಶನ್‌ಗಳನ್ನು ಬಳಸಿಕೊಂಡು HLS ಚಾನಲ್ ಅನ್ನು ಸೆಟಪ್ ಮಾಡಲು, ಎನ್‌ಕೋಡರ್ ಬಳಕೆದಾರ ಮಾರ್ಗಸೂಚಿಯಲ್ಲಿರುವ ಸೂಚನೆಗಳನ್ನು ಅನುಸರಿಸಿ:

  • ಸೆಗ್ಮೆಂಟ್ ಅವಧಿ: 1 ಮತ್ತು 4 ಸೆಕೆಂಡ್‌ಗಳ ನಡುವೆ
  • ಸೆಗ್ಮೆಂಟ್ ಫಾರ್ಮ್ಯಾಟ್: TS (ಟ್ರಾನ್ಸ್‌ಪೋರ್ಟ್ ಸ್ಟ್ರೀಮ್) ಆಗಿರಬೇಕು
  • ಬೈಟ್ ರೇಂಜ್ ಸಕ್ರಿಯಗೊಳಿಸಿ: ತಪ್ಪು
  • ಪ್ಲೇಪಟ್ಟಿ ಪ್ರಕಾರ: ರೋಲಿಂಗ್
  • ಎಲಿಮೆಂಟ್‌ಗಳು: 5
  • ಎನ್‌ಕ್ರಿಪ್ಶನ್: ಯಾವುದೂ ಇಲ್ಲ
  • ಔಟ್‌ಪುಟ್ ಸ್ಥಳ: CDN ಗೆ ಪುಶ್ ಮಾಡಿ
  • ಪ್ರಕಟಣೆ ಪಾಯಿಂಟ್: https://a.upload.youtube.com/http_upload_hls?cid=STREAMKEY&copy=0&file=

ಮೇಲಿನ URL ನಲ್ಲಿ, STREAMKEY ಬದಲಿಗೆ ನಿಮ್ಮ YouTube ಸ್ಟ್ರೀಮ್ ಕೀಯನ್ನು ಬಳಸಿ. HDR ಗಾಗಿ, HLS ಅನ್ನು ಸ್ಟ್ರೀಮಿಂಗ್ ಪ್ರೊಟೊಕಾಲ್ ಆಗಿ ಬಳಸುವಂತಹ ಸ್ಟ್ರೀಮ್ ಕೀಯನ್ನು ನೀವು ಬಳಸಬೇಕು ಮತ್ತು “ಹಸ್ತಚಾಲಿತ ಸೆಟ್ಟಿಂಗ್‌ಗಳನ್ನು ಆನ್ ಮಾಡಿ” ಸೆಟ್ಟಿಂಗ್ ಅನ್ನು ಗುರುತು ಹಾಕದೆಯೇ (ಡೀಫಾಲ್ಟ್) ಹಾಗೆಯೇ ಬಿಡಬೇಕು.

  • HTTP ವಿಧಾನ: HTTP ವಿಧಾನವನ್ನು ಸಕ್ರಿಯಗೊಳಿಸಿ ಮತ್ತು POST ಆಯ್ಕೆಮಾಡಿ

HDR ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡಲು, ನೀವು ಈ ಕೆಳಗಿನ ಕಾನ್ಫಿಗರೇಶನ್‌ಗಳನ್ನು ಬಳಸಿಕೊಂಡು ನಿಮ್ಮ ಸಾಧನದ ಎನ್‌ಕೋಡರ್ ವಿಭಾಗದಲ್ಲಿ HEVC ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡಬೇಕಾಗುತ್ತದೆ:

  1. 10 ಬಿಟ್ ಸಕ್ರಿಯಗೊಳಿಸಿ, ನಂತರ HDR ಮೆಟಾಡೇಟಾವನ್ನು ಸಕ್ರಿಯಗೊಳಿಸಿ.
  2. ಕಲರ್ ಪ್ರೈಮರಿಗಳು: BT2020 ಗೆ ಸೆಟ್ ಮಾಡಿ (ನಿಮ್ಮ ಮೂಲ ಕಂಟೆಂಟ್ ಜೊತೆಗೆ ಕಂಪ್ಯಾಟಿಬಲ್ ಆಗಿರಬೇಕು).
  3. ವರ್ಗಾವಣೆ ಗುಣಲಕ್ಷಣಗಳು: ನಿಮ್ಮ ಮೂಲ ಕಂಟೆಂಟ್ ಯಾವ ಗುಣಲಕ್ಷಣವನ್ನು ಪೂರೈಸುತ್ತದೆ ಎಂಬುದನ್ನು ಆಧರಿಸಿ, SMPTE-ST-2084 (PQ) ಅಥವಾ ARIB-STD-B67 (HLG) ಗೆ ಸೆಟ್ ಮಾಡಿ.
  4. ಮ್ಯಾಟ್ರಿಕ್ಸ್ ಅಪವರ್ತನಗಳು: BT2020NC ಗೆ ಸೆಟ್ ಮಾಡಿ (ನಿಮ್ಮ ಮೂಲ ಕಂಟೆಂಟ್ ಜೊತೆಗೆ ಕಂಪ್ಯಾಟಿಬಲ್ ಆಗಿರಬೇಕು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
399695442892936988
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false