YouTube Studio ದಲ್ಲಿ ಪ್ಲೇಪಟ್ಟಿಗಳನ್ನು ನಿರ್ವಹಿಸಿ

ನಿಮ್ಮ ಪ್ರೇಕ್ಷಕರ ಜೊತೆಗೆ ತೊಡಗಿಸಿಕೊಳ್ಳಲು YouTube Studio ದಲ್ಲಿ ನಿಮ್ಮ ಪ್ಲೇಪಟ್ಟಿಗಳನ್ನು ರಚಿಸುವುದು, ಎಡಿಟ್ ಮಾಡುವುದು, ನಿರ್ವಹಿಸುವುದು ಮತ್ತು ಫಿಲ್ಟರ್ ಮಾಡುವುದು ಹೇಗೆಂದು ತಿಳಿದುಕೊಳ್ಳಿ.

ಗಮನಿಸಿ: YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವಗಳೊಂದಿಗೆ ಈ ಫೀಚರ್ ಲಭ್ಯವಿಲ್ಲದಿರಬಹುದು. ಇನ್ನಷ್ಟು ತಿಳಿಯಿರಿ.

 

ಪ್ಲೇಪಟ್ಟಿಯನ್ನು ರಚಿಸಿ

ಹೊಸ ಪ್ಲೇ ಪಟ್ಟಿಯನ್ನು ರಚಿಸಲು,

  1. YouTube Studio ಗೆ ಸೈನ್-ಇನ್ ಮಾಡಿ.
  2. ಮೇಲಿನ ಬಲ ಮೂಲೆಯಲ್ಲಿ, ರಚಿಸಿ  ಮತ್ತು ನಂತರ ಹೊಸ ಪ್ಲೇಪಟ್ಟಿ ಎಂಬುದನ್ನು ಕ್ಲಿಕ್ ಮಾಡಿ.
  3. ಪ್ಲೇಪಟ್ಟಿ ಶೀರ್ಷಿಕೆಯನ್ನು ನಮೂದಿಸಿ.
  4. ನಿಮ್ಮ ಪ್ಲೇಪಟ್ಟಿಯ ಗೋಚರತೆಯ ಸೆಟ್ಟಿಂಗ್ ಅನ್ನು ಆಯ್ಕೆ ಮಾಡಲು ಡ್ರಾಪ್-ಡೌನ್ ಬಾಕ್ಸ್ ಅನ್ನು ಬಳಸಿ.
  5. ರಚಿಸಿ ಎಂಬುದನ್ನು ಕ್ಲಿಕ್ ಮಾಡಿ.

ಕೆಳಗೆ YouTube Studio ದಲ್ಲಿ ಪಾಡ್‌ಕಾಸ್ಟ್ ಅನ್ನು ರಚಿಸುವುದು ಹೇಗೆಂದು ತಿಳಿಯಿರಿ ಅಥವಾ ಈ ಸಹಾಯ ಕೇಂದ್ರದ ಲೇಖನವನ್ನು ಓದಿ.

ಪ್ಲೇಪಟ್ಟಿ ಶೀರ್ಷಿಕೆಯ ಸಲಹೆಗಳು:
  • ಪ್ಲೇಪಟ್ಟಿ ಶೀರ್ಷಿಕೆಗಳು 150 ಅಕ್ಷರಗಳ ಮಿತಿಯನ್ನು ಹೊಂದಿರುತ್ತವೆ
  • ಪ್ಲೇಪಟ್ಟಿ ಶೀರ್ಷಿಕೆಗಳು ಅಮಾನ್ಯ ಅಕ್ಷರಗಳನ್ನು ಒಳಗೊಂಡಿರಬಾರದು ("<", ">", ಮತ್ತು ಲೈನ್ ವಿಭಜಕ "\u2028")
ಪ್ಲೇಪಟ್ಟಿ ವಿವರಣೆಯ ಸಲಹೆಗಳು:
  • ಪ್ಲೇಪಟ್ಟಿ ವಿವರಣೆಗಳು 5,000 ಅಕ್ಷರಗಳ ಮಿತಿಯನ್ನು ಹೊಂದಿರುತ್ತವೆ
  • ಪ್ಲೇಪಟ್ಟಿ ವಿವರಣೆಗಳು ಅಮಾನ್ಯ ಅಕ್ಷರಗಳನ್ನು ಒಳಗೊಂಡಿರಬಾರದು ("<", ">", ಮತ್ತು ಲೈನ್ ವಿಭಜಕ "\u2028")

ಪ್ಲೇಪಟ್ಟಿಯನ್ನು ನಿರ್ವಹಿಸಿ

ನಿಮ್ಮ ಪ್ಲೇಪಟ್ಟಿಯನ್ನು ನಿರ್ವಹಿಸಲು,

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಅನ್ನು ಆಯ್ಕೆಮಾಡಿ.
  3.  ಪ್ಲೇಪಟ್ಟಿಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. ನೀವು ಅಪ್‌ಡೇಟ್ ಮಾಡಲು ಬಯಸುವ ಪ್ಲೇಪಟ್ಟಿಯ ಪಕ್ಕದಲ್ಲಿರುವ ಮೆನು ಅನ್ನು ಕ್ಲಿಕ್ ಮಾಡಿ.
  5. YouTube ನಲ್ಲಿ ಎಡಿಟ್ ಮಾಡಿ ಎಂಬುದನ್ನು ಆಯ್ಕೆಮಾಡಿ. ನಿಮ್ಮ ಪ್ಲೇಪಟ್ಟಿಯು ಹೊಸ ಟ್ಯಾಬ್‌ನಲ್ಲಿ ತೆರೆಯುತ್ತದೆ.
    • ಪ್ಲೇಪಟ್ಟಿಯಲ್ಲಿ ವೀಡಿಯೊಗಳನ್ನು ವಿಂಗಡಿಸಲು, ಮರುಕ್ರಮಗೊಳಿಸಲು ವೀಡಿಯೊವನ್ನು ಮೇಲಕ್ಕೆ ಮತ್ತು ಕೆಳಕ್ಕೆ ಎಳೆದು ಬಿಡಿ.
    • ಪ್ಲೇಪಟ್ಟಿಯೊಂದನ್ನು ಹಂಚಿಕೊಳ್ಳಲು, ನಿಮ್ಮ ಪ್ಲೇಪಟ್ಟಿಯ ವಿವರಗಳಿಗೆ ಹೋಗಿ ಮತ್ತು ಹಂಚಿಕೊಳ್ಳಿ  ಎಂಬುದನ್ನು ಆಯ್ಕೆಮಾಡಿ. ನಂತರ, ನೀವು ಪ್ಲೇಪಟ್ಟಿಯನ್ನು ಎಲ್ಲಿ ಹಂಚಿಕೊಳ್ಳಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ.
    • ಕೊಲಬೊರೇಟರ್‌ಗಳನ್ನು ಸೇರಿಸಲು, ನಿಮ್ಮ ಪ್ಲೇಪಟ್ಟಿ ವಿವರಗಳಿಗೆ ಹೋಗಿ ಮತ್ತು ಇನ್ನಷ್ಟು ಮತ್ತು ನಂತರ ಕೊಲಬೊರೇಟ್ ಮಾಡಿ  ಎಂಬುದನ್ನು ಕ್ಲಿಕ್ ಮಾಡಿ.
    • ಪ್ಲೇಪಟ್ಟಿಯೊಂದರಲ್ಲಿ ವೀಡಿಯೊಗಳನ್ನು ಸೇರಿಸಲು, ನಿಮ್ಮ ವೀಡಿಯೊ ವಿವರಗಳಿಗೆ ಹೋಗಿ ಮತ್ತು ಇನ್ನಷ್ಟು  ಮತ್ತು ನಂತರ ವೀಡಿಯೊಗಳನ್ನು ಸೇರಿಸಿ ಎಂಬುದನ್ನು ಆಯ್ಕೆಮಾಡಿ. ಹುಡುಕಾಟ, URL ಅಥವಾ ನಿಮ್ಮ ಲೈಬ್ರರಿಯಿಂದ ನೀವು ವೀಡಿಯೊವನ್ನು ಸೇರಿಸಬಹುದು.

ಪ್ಲೇಪಟ್ಟಿಯ ಶೀರ್ಷಿಕೆ ಅಥವಾ ವಿವರಣೆಯನ್ನು ಎಡಿಟ್ ಮಾಡಿ

ನಿಮ್ಮ ಪ್ಲೇಪಟ್ಟಿಯ ವಿವರಗಳನ್ನು ಅಪ್‌ಡೇಟ್ ಮಾಡಲು,

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಅನ್ನು ಆಯ್ಕೆಮಾಡಿ.
  3. ಪ್ಲೇಪಟ್ಟಿಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. ನಿಮ್ಮ ಪ್ಲೇಪಟ್ಟಿಯ ಶೀರ್ಷಿಕೆ ಅಥವಾ ವಿವರಣೆಯ ಪಕ್ಕದಲ್ಲಿರುವ  ವಿವರಗಳು ಎಂಬುದನ್ನು ಕ್ಲಿಕ್ ಮಾಡಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ವಿವರಗಳನ್ನು ಅಪ್‌ಡೇಟ್ ಮಾಡಿ.
  5. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

ಸಲಹೆ:

  • ಪ್ಲೇಪಟ್ಟಿ ಶೀರ್ಷಿಕೆಗಳು 150 ಅಕ್ಷರಗಳ ಮಿತಿಯನ್ನು ಹೊಂದಿರುತ್ತವೆ
  • ಪ್ಲೇಪಟ್ಟಿ ಶೀರ್ಷಿಕೆಗಳು ಅಮಾನ್ಯ ಅಕ್ಷರಗಳನ್ನು ಒಳಗೊಂಡಿರಬಾರದು ("<", ">", ಮತ್ತು ಲೈನ್ ವಿಭಜಕ "\u2028")
  • ಪ್ಲೇಪಟ್ಟಿ ವಿವರಣೆಗಳು 5,000 ಅಕ್ಷರಗಳ ಮಿತಿಯನ್ನು ಹೊಂದಿರುತ್ತವೆ
  • ಪ್ಲೇಪಟ್ಟಿ ವಿವರಣೆಗಳು ಅಮಾನ್ಯ ಅಕ್ಷರಗಳನ್ನು ಒಳಗೊಂಡಿರಬಾರದು ("<", ">", ಮತ್ತು ಲೈನ್ ವಿಭಜಕ "\u2028")

ಪ್ಲೇಪಟ್ಟಿಯನ್ನು ಫಿಲ್ಟರ್ ಮಾಡಿ

ಪ್ಲೇಪಟ್ಟಿಯೊಂದನ್ನು ಸುಲಭವಾಗಿ ಕಂಡುಕೊಳ್ಳಲು, ನಿಮ್ಮ ಹುಡುಕಾಟವನ್ನು ಕಿರಿದಾಗಿಸಲು ಫಿಲ್ಟರ್ ಒಂದನ್ನು ಬಳಸಿ:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಅನ್ನು ಆಯ್ಕೆಮಾಡಿ.
  3. ಪ್ಲೇಪಟ್ಟಿಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. ನಿಮ್ಮ ಪ್ಲೇಪಟ್ಟಿಗಳನ್ನು ಶೀರ್ಷಿಕೆಯ ಪ್ರಕಾರ ಹುಡುಕಲು ಮತ್ತು ಫಿಲ್ಟರ್ ಮಾಡಲು, ಫಿಲ್ಟರ್ ಬಾರ್  ಬಳಸಿ ಮತ್ತು ಕೀವರ್ಡ್‌ಗಳನ್ನು ನಮೂದಿಸಿ.

ಪ್ಲೇಪಟ್ಟಿಯನ್ನು ಪಾಡ್‌ಕಾಸ್ಟ್ ಆಗಿ ಪರಿವರ್ತಿಸಿ

ಅಸ್ತಿತ್ವದಲ್ಲಿರುವ ಪ್ಲೇಪಟ್ಟಿಯನ್ನು ಪಾಡ್‌ಕಾಸ್ಟ್ ಆಗಿ ಪರಿವರ್ತಿಸಲು,

  1. YouTube Studio ದಲ್ಲಿ, ಕಂಟೆಂಟ್  ಮತ್ತು ನಂತರ ಪ್ಲೇಪಟ್ಟಿಗಳುಎಂಬಲ್ಲಿಗೆ ಹೋಗಿ.
  2. ನೀವು ಪಾಡ್‌ಕಾಸ್ಟ್ ಎಂಬಂತೆ ಗೊತ್ತುಪಡಿಸಲು ಬಯಸುವ ಪ್ಲೇಪಟ್ಟಿಯ ಮೇಲೆ ಹೋವರ್ ಮಾಡಿ.
  3. ಮೆನು  ಮತ್ತು ನಂತರ ಪಾಡ್‌ಕಾಸ್ಟ್ ಆಗಿ ಸೆಟ್ ಮಾಡಿ ಅನ್ನು ಕ್ಲಿಕ್ ಮಾಡಿ.
  4. ನಿಮ್ಮ ಪಾಡ್‌ಕಾಸ್ಟ್‌ನ ವಿವರಗಳನ್ನು ಪರಿಶೀಲಿಸಿ ಮತ್ತು ಸ್ಕ್ವೇರ್ ಪಾಡ್‌ಕಾಸ್ಟ್ ಥಂಬ್‌ನೇಲ್ ಅನ್ನು ಸೇರಿಸಿ. ಪಾಡ್‌ಕಾಸ್ಟ್ ವಿವರಗಳು ಶೀರ್ಷಿಕೆ, ವಿವರಣೆ ಮತ್ತು YouTube ನಲ್ಲಿ ನಿಮ್ಮ ಪಾಡ್‌ಕಾಸ್ಟ್ ಅನ್ನು ಯಾರು ವೀಕ್ಷಿಸಬಹುದು ಎಂಬುದರ ಮಾಹಿತಿಯನ್ನು ಒಳಗೊಂಡಿರುತ್ತವೆ.
  5. ನಿಮ್ಮ ಬದಲಾವಣೆಗಳನ್ನು ದೃಢೀಕರಿಸಲು ಪೂರ್ಣಗೊಂಡಿದೆ ಎಂಬುದನ್ನು ಕ್ಲಿಕ್ ಮಾಡಿ.

YouTube ನಲ್ಲಿ ಪಾಡ್‌ಕಾಸ್ಟಿಂಗ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ಸಹಾಯ ಕೇಂದ್ರದ ಲೇಖನವನ್ನು ಓದಿ.

ಪ್ಲೇಪಟ್ಟಿಯಿಂದ ಪಾಡ್‌ಕಾಸ್ಟಿಂಗ್ ಫೀಚರ್‌ಗಳನ್ನು ತೆಗೆದುಹಾಕಿ

ನಿಮ್ಮ ಪ್ಲೇಪಟ್ಟಿಯಿಂದ ಪಾಡ್‌ಕಾಸ್ಟಿಂಗ್ ಫೀಚರ್‌ಗಳನ್ನು ತೆಗೆದುಹಾಕಲು,

  1. YouTube Studio ದಲ್ಲಿ, ಕಂಟೆಂಟ್ ನಂತರ ಪಾಡ್‌ಕಾಸ್ಟ್‌ಗಳು ಎಂಬಲ್ಲಿಗೆ ಹೋಗಿ.
  2. ನೀವು ಪಾಡ್‌ಕಾಸ್ಟ್‌ ಆಗಿ ಸೆಟ್ ಮಾಡದೇ ಇರಲು ಬಯಸುವ ಪ್ಲೇಪಟ್ಟಿಯ ಮೇಲೆ ಹೋವರ್ ಮಾಡಿ
  3. ನೀವು ಫೀಚರ್‌ಗಳನ್ನು ತೆಗೆದುಹಾಕಲು ಬಯಸುವ ಪಾಡ್‌ಕಾಸ್ಟ್‌ನ ಪಕ್ಕದಲ್ಲಿರುವ ಮೆನು ಅನ್ನು ಕ್ಲಿಕ್ ಮಾಡಿ.
  4. ಪ್ಲೇಪಟ್ಟಿ‌ಯಾಗಿ ಸೆಟ್ ಮಾಡಿ ಅನ್ನು ಆಯ್ಕೆಮಾಡಿ.
  5. ದೃಢೀಕರಿಸಲು ಹೌದು ಅನ್ನು ಕ್ಲಿಕ್ ಮಾಡಿ.

YouTube ನಲ್ಲಿ ಪಾಡ್‌ಕಾಸ್ಟಿಂಗ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ಸಹಾಯ ಕೇಂದ್ರದ ಲೇಖನವನ್ನು ಓದಿ.

ಪ್ಲೇಪಟ್ಟಿ ವಿಶ್ಲೇಷಣೆಗಳನ್ನು ವೀಕ್ಷಿಸಿ

ನಿಮ್ಮ ಪ್ರತಿಯೊಂದು ಪ್ಲೇಪಟ್ಟಿಗಾಗಿ, ಪ್ಲೇಪಟ್ಟಿಯಲ್ಲಿರುವ ನಿಮ್ಮ ಎಲ್ಲಾ ವೀಡಿಯೊಗಳಿಗಾಗಿ ಒಟ್ಟುಗೂಡಿಸಲಾದ ಒಳನೋಟಗಳನ್ನು ಕಂಡುಕೊಳ್ಳಲು ನೀವು ಅವಲೋಕನ, ಕಂಟೆಂಟ್, ಪ್ರೇಕ್ಷಕರು ಮತ್ತು ಆದಾಯ ಟ್ಯಾಬ್ ಅನ್ನು ಆ್ಯಕ್ಸೆಸ್ ಮಾಡಬಹುದು. ನಿಮ್ಮ ಪ್ಲೇಪಟ್ಟಿ ವಿಶ್ಲೇಷಣೆಗಳನ್ನು ಆ್ಯಕ್ಸೆಸ್ ಮಾಡುವುದು ಹೇಗೆಂದು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14291658989436370255
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false