ನಿಮ್ಮ ಪ್ರೇಕ್ಷಕರ ಜೊತೆಗೆ ತೊಡಗಿಸಿಕೊಳ್ಳಲು YouTube Studio ದಲ್ಲಿ ನಿಮ್ಮ ಪ್ಲೇಪಟ್ಟಿಗಳನ್ನು ರಚಿಸುವುದು, ಎಡಿಟ್ ಮಾಡುವುದು, ನಿರ್ವಹಿಸುವುದು ಮತ್ತು ಫಿಲ್ಟರ್ ಮಾಡುವುದು ಹೇಗೆಂದು ತಿಳಿದುಕೊಳ್ಳಿ.
ಗಮನಿಸಿ: YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವಗಳೊಂದಿಗೆ ಈ ಫೀಚರ್ ಲಭ್ಯವಿಲ್ಲದಿರಬಹುದು. ಇನ್ನಷ್ಟು ತಿಳಿಯಿರಿ.
Android ಗಾಗಿ YouTube Studio ಆ್ಯಪ್
ಪ್ಲೇಪಟ್ಟಿಗೆ ವೀಡಿಯೊಗಳನ್ನು ಸೇರಿಸಿ
- YouTube Studio ಆ್ಯಪ್ ತೆರೆಯಿರಿ.
- ಕೆಳಗಿನ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಟ್ಯಾಪ್ ಮಾಡಿ.
- ನೀವು ಪ್ಲೇಪಟ್ಟಿಗೆ ಸೇರಿಸಲು ಬಯಸುವ ವೀಡಿಯೊವನ್ನು ಆಯ್ಕೆಮಾಡಿ.
- ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
- ಪ್ಲೇಪಟ್ಟಿಗೆ ಸೇರಿಸಿ ಟ್ಯಾಪ್ ಮಾಡಿ ಮತ್ತು ನೀವು ಸೇರಿಸಲು ಬಯಸುವ ಪ್ಲೇಪಟ್ಟಿಗಳನ್ನು ಆಯ್ಕೆಮಾಡಿ.
- ಮುಗಿದಿದೆ ಅನ್ನು ಟ್ಯಾಪ್ ಮಾಡಿ.
- ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ಪ್ಲೇಪಟ್ಟಿಯಿಂದ ವೀಡಿಯೊಗಳನ್ನು ತೆಗೆದುಹಾಕಿ
ಪ್ಲೇಪಟ್ಟಿಯಿಂದ ನಿರ್ದಿಷ್ಟ ವೀಡಿಯೊವನ್ನು ತೆಗೆದುಹಾಕಲು, ಈ ಹಂತಗಳನ್ನು ಅನುಸರಿಸಿ:
- YouTube Studio ಆ್ಯಪ್ ತೆರೆಯಿರಿ.
- ಕೆಳಗಿನ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಟ್ಯಾಪ್ ಮಾಡಿ.
- ನೀವು ಪ್ಲೇಪಟ್ಟಿಯಿಂದ ತೆಗೆದುಹಾಕಲು ಬಯಸುವ ವೀಡಿಯೊವನ್ನು ಆಯ್ಕೆಮಾಡಿ.
- ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
- ಪ್ಲೇಪಟ್ಟಿಯನ್ನು ಟ್ಯಾಪ್ ಮಾಡಿ ಮತ್ತು ಪ್ಲೇಪಟ್ಟಿಯ ಪಕ್ಕದಲ್ಲಿರುವ ಬಾಕ್ಸ್ ಗುರುತಿಸಿರುವುದನ್ನು ತೆಗೆಯಿರಿ.
- ಮುಗಿದಿದೆ ಅನ್ನು ಟ್ಯಾಪ್ ಮಾಡಿ.
- ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ಪ್ಲೇಪಟ್ಟಿಯ ಸೆಟ್ಟಿಂಗ್ಗಳನ್ನು ಎಡಿಟ್ ಮಾಡಿ (ಶೀರ್ಷಿಕೆ, ವಿವರಣೆ)
YouTube Studio ಆ್ಯಪ್ ಬಳಸಿಕೊಂಡು ನೀವು ಪ್ಲೇಪಟ್ಟಿಯ ಶೀರ್ಷಿಕೆ, ವಿವರಣೆ, ಗೌಪ್ಯತೆ, ವೀಡಿಯೊಗಳ ಕ್ರಮವನ್ನು ಪ್ಲೇಪಟ್ಟಿಯಲ್ಲಿ ಎಡಿಟ್ ಮಾಡಬಹುದು.
- YouTube Studio ಆ್ಯಪ್ ತೆರೆಯಿರಿ.
- ಕೆಳಗಿನ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಟ್ಯಾಪ್ ಮಾಡಿ.
- ಪ್ಲೇಪಟ್ಟಿಗಳು ಟ್ಯಾಬ್ನಲ್ಲಿ, ನೀವು ಎಡಿಟ್ ಮಾಡಲು ಬಯಸುವ ಪ್ಲೇಪಟ್ಟಿಯನ್ನು ಆಯ್ಕೆಮಾಡಿ.
- ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
- ಪ್ಲೇಪಟ್ಟಿಯ ಸೆಟ್ಟಿಂಗ್ಗಳನ್ನು ಎಡಿಟ್ ಮಾಡಿ ಮತ್ತು ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ಪ್ಲೇಪಟ್ಟಿಯನ್ನು ಅಳಿಸಿ
- YouTube Studio ಆ್ಯಪ್ ತೆರೆಯಿರಿ.
- ಕೆಳಗಿನ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಟ್ಯಾಪ್ ಮಾಡಿ.
- ಪ್ಲೇಪಟ್ಟಿಗಳು ಟ್ಯಾಬ್ನಲ್ಲಿ, ನೀವು ಅಳಿಸಲು ಬಯಸುವ ಪ್ಲೇಪಟ್ಟಿಯನ್ನು ಆಯ್ಕೆಮಾಡಿ.
- ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
- ಪ್ಲೇಪಟ್ಟಿಯನ್ನು ಅಳಿಸಿ ಟ್ಯಾಪ್ ಮಾಡಿ, ತದನಂತರ ಸರಿ ಎಂಬುದನ್ನು ಆಯ್ಕೆಮಾಡಿ.